ಭವಿಷ್ಯದಲ್ಲಿ ಅಸ್ತಿತ್ವದಲ್ಲಿ ಇರಬಹುದಾದ ನಾಲ್ಕು ವೃತ್ತಿಗಳು

 

“ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಇವೆರಡೂ ಪರಸ್ಪರ ಒಂದಕ್ಕೊಂದು ಬೆರೆತುಹೋಗಿವೆ. ಯಾರೂ ಕೂಡ ಒಂದನ್ನು ಬಿಟ್ಟು ಇನ್ನೊಂದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ನನಗೆ ಅನ್ನಿಸುತ್ತಿದೆ.” -  ಬಿಲ್ ಗೇಟ್ಸ್

ಇಂದು ಶಾಲೆಗೆ ಹೋಗುತ್ತಿರುವ 65% ಮಕ್ಕಳು ನಗೆ ಅರಿವೇ ಇಲ್ಲದ ಹೊಸ ಉದ್ಯೋಗದ ಪ್ರಕಾರಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸುತ್ತಾರೆ. ಹಾಗಾದರೆ ಆ ಉದ್ಯೋಗಗಳು ಯಾವುವು?  [1]

3D ವಿನ್ಯಾಸ ಪರಿಣಿ

3D ವಿನ್ಯಾಸ ಪರಿಣಿತ ಎಂದರೆ 3D ಟೂಲ್‌ಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿನ್ಯಾಸಗಳ ಅಪ್ಲಿಕೇಶನ್ ಅನ್ನು ಉತ್ತಮವಾಗಿ ಅರ್ಥ ಮಾಡಿಕೊಂಡಿರುವ ವ್ಯಕ್ತಿ ಎಂದರ್ಥ.  ಈ ವೃತಿಯಲ್ಲಿ ಮುಂದುವರೆಯಲು ಅಗತ್ಯವಿರುವ ಕೌಶಲ್ಯಗಳು ಯಾವುವೆಂದರೆ ವಿನ್ಯಾಸ, ಯೋಜನೆಯ ನಿರ್ವಹಣೆ ಮತ್ತು ಉದ್ಯಮದ ನಿರ್ದಿಷ್ಟ ಸಾಫ್ಟ್ ವೇರ್‌(ಗಳ)ಲ್ಲಿ ಪರಿಣಿತಿಯನ್ನು ಹೊಂದುವುದಾಗಿದೆ. ಪೀಠೋಪಕರಣಗಳಿಂದ ಹಿಡಿದು ದೊಡ್ಡ ಸರಕಿನವರೆಗೆ ಉತ್ತಮ ವಿನ್ಯಾಸವನ್ನು ರೂಪಿಸುವ ವಿನ್ಯಾಸಕರಿಗೆ ಭಾರಿ ಬೇಡಿಕೆ ಇದೆ.

ವಾಸ್ತವಿಕ ನೈಜತೆಯ ಅನುಭವವುಳ್ಳ ವಿನ್ಯಾಸಕ

ವಾಸ್ತವಿಕ ನೈಜತೆಯು ಕಂಪ್ಯೂಟರ್ ಮೂಲಕ ಉಂಟಾಗಿರುವ ಪರಿಸರವಾಗಿದ್ದು ಇದು ನಿಮಗೆ ವಿವಿಧ ರೀತಿಯ ಮನೋಧರ್ಮಗಳ ವೈಶಿಷ್ಟ್ಯತೆಯ ಹೆಡ್‌ಸೆಟ್‌ನೊಂದಿಗೆ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ವಿನ್ಯಾಸಕರು ಸಂಶೋಧನೆ, ರಣತಂತ್ರ, ವಿನ್ಯಾಸವನ್ನು ಕಂಡು ಹಿಡಿಯುತ್ತಾರೆ ಮತ್ತು ಬಾಹ್ಯ ಪ್ರಪಂಚದಲ್ಲಿ ’ನಂಬಿಕಾರ್ಹ’ ನಿಜವಾದ ವಾಸ್ತವಿಕ ಅನುಭವವನ್ನು ಗಳಿಸಿಕೊಳ್ಳುತ್ತಾರೆ. ಗ್ರಾಹಕರ ವರ್ತನೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿಗಳು ಈ ಪಾತ್ರಕ್ಕೆ ಅತ್ಯಂತ ಹೆಚ್ಚಿನ ಬೇಡಿಕೆ ಇದೆ ಇದರ ಜೊತೆಗೆ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವವರಿಗೆ ಬೇಡಿಕೆ ಇದೆ. ವಾಸ್ತವಿಕ ನೈಜತೆಯು ವಾಸ್ತವಿಕತೆ ತರಬೇತಿ ಕಾರ್ಯಾಗಾರಗಳನ್ನು, ತಂಡದ ಸಭೆಗಳನ್ನು ನಡೆಸಲು, ನಿರ್ಜನ ಪ್ರದೇಶಗಳಲ್ಲಿ ರಜಾದಿನಗಳನ್ನು ಕಳೆಯಲು, ಫ್ಯಾಂಟಸಿ ರನ್ನಿಂಗ್ ಟ್ರಯಲ್ಸ್ ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ.[2]

ಡಿಜಿಟಲ್ ಕರೆನ್ಸಿ ಸಲಹೆಗಾರ

ಬಿಟ್‌ಕಾಯಿನ್‌‍ನಂತಹ ಡಿಜಿಟಲ್ ಕರೆನ್ಸಿಗಳು ವಿನಿಯೋಜನೆಗಳನ್ನು ನಿರ್ವಹಿಸಲು ಪರಿಣಿತರು ಉಪಯೋಗಿಸುತ್ತಿದ್ದಾರೆ ಮತ್ತು ಇವು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಡಿಜಿಟಲ್ ಕರೆನ್ಸಿ ಸಲಹೆಗಾರರು ಜನರಿಗೆ ಹೊಸ ವ್ಯವಹಾರಿಕ ಈಕೊಸಿಸ್ಟಮ್‌ನಲ್ಲಿ ತಮ್ಮ ಆಸ್ತಿಯನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಡುತ್ತಾರೆ. ಸಲಹೆಗಾರರು ವ್ಯಾಪಾರ ನಿರ್ವಹಣೆ, ಅಕೌಂಟಿಂಗ್, ಕಂಪ್ಯೂಟರ್ ಸೆಕ್ಯೂರಿಟಿ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ನೈಪುಣ್ಯತೆಯನ್ನು ಹೊಂದಿರಬೇಕು.[3] 

ಮಾನವ-ತಂತ್ರಜ್ಞಾನ ಸಂಯೋಜನೆಯ ತಜ್ಞರು

ಮಾನವ ತಂತ್ರಜ್ಞಾನ ಸಂಯೋಜನೆಯ ತಜ್ಞರು ತಂತ್ರಜ್ಞಾನದ ದೈನಂದಿನ ಬಳಕೆಯ ಬಗ್ಗೆ ಐತಿಹಾಸಿಕವಾದಂತಹ ಪ್ರಭಾವವನ್ನು ಬೀರುತ್ತಿದ್ದಾರೆ. ತಂತ್ರಜ್ಞಾನವು ಈಗಾಗಲೇ ದೈನಂದಿನ ಜೀವನದ ಭಾಗವಾಗಿದೆ ಅದು ಕೆಲಸದಲ್ಲಿ ಇರಬಹುದು ಅಥವಾ ಮನೆಯಲ್ಲಿ ಆಗಿರಬಹುದು. ಹೀಗೆ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ತಂತ್ರಜ್ಞಾನದ ಬಳಕೆಯು ನಿಜವಾಗಿಯೂ ಅಗತ್ಯವಿರುತ್ತದೆ. ಅಂತರ್-ವ್ಯಕ್ತಿಗತವಾದ ಕೌಶಲ್ಯಗಳು ಮತ್ತು ಐಟಿಯು ಉದ್ಯೋಗದಲ್ಲಿ ಹೇಗೆ ಪ್ರಮುಖವಾಗಿದೆ ಎಂದು ತಿಳಿಯಬಹುದಾಗಿದೆ ಇದರಿಂದ ಗ್ರಾಹಕರು ಅನಿಯಮಿತವಾಗಿ ಬಹು ಸಾಧನಗಳನ್ನು ಮತ್ತು ಸಾಫ್ಟ್ ವೇರ್ ಅನ್ನು ಅವರಿಗೆ ಅತ್ಯುತ್ತಮವಾಗುವಂತೆ ಪಡೆದುಕೊಳ್ಳಬಹುದಾಗಿದೆ.

ಈ ಎಲ್ಲಾ ವೃತ್ತಿಗಳಲ್ಲಿ ಇರುವ ಸಾಮಾನ್ಯವಾದ ವಿಚಾರ ತಂತ್ರಜ್ಞಾನವಾಗಿದೆ. ಇಂದಿನ ಮಕ್ಕಳು ತಂತಜ್ಞಾನದ ಬಳಕೆಯನ್ನು ಮಾಡುವ ಅಗತ್ಯವಿದೆ ಮತ್ತು ಇದರಿಂದ ನಾಳಿನ ಉತ್ತಮ ಪ್ರಜೆಗಳಾಗಬಹುದಾಗಿದೆ. ಸರಿಯಾದ ಪಿಸಿ ಆಯ್ಕೆ ಮಾಡಿ ಮತ್ತು ಇಲ್ಲಿಂದಲೇ ಪ್ರಾರಂಭಿಸಿ http://www.dellaarambh.com/pick-right-school-pc/