ನಿಮ್ಮ ಮಗುವಿನ ಅಧ್ಯಯನಕ್ಕೆ ನೆರವಾಗುವ ವೆಬ್‌ಸೈಟ್ ಅನ್ನು ಆಯ್ಕೆ ಮಾಡುವ ಮೊದಲು ಕೇಳಬೇಕಾದ ನಾಲ್ಕು ಪ್ರಶ್ನೆಗಳು

 

ನಿಮ್ಮ ಮಗುವಿಗೆ ಕಲಿಕೆಗೆ ಸ್ಕ್ರೀನ್ ಟೈಮ್ ಪರಿಣಾಮಕಾರಿಯಾದ ಮಾರ್ಗವಾಗಬಹುದಾಗಿದೆ. ಆದರೆ ಅದಕ್ಕಾಗಿ ನಿಮ್ಮ ಮಗು ಸರಿಯಾದ ವೆಬ್ಸೈಟ್ಗಳನ್ನು ಬಳಸುವುದು ಪ್ರಮುಖವಾಗುತ್ತದೆ. ಶಿಕ್ಷಣ ಮತ್ತು ಮನರಂಜನೆಗಳ ನಡುವೆ ಸಮತೋಲನವನ್ನು ನಿರ್ವಹಿಸುವ ವೆಬ್ಸೈಟ್ಗಳು ಮಕ್ಕಳ ಆಸಕ್ತಿಯನ್ನು ಹಿಡಿದಿಟ್ಟುಕೊಂಡು, ಅವರು ಹೆಚ್ಚು ಉತ್ತಮವಾಗಿ ಅಧ್ಯಯನ ಮಾಡುವಲ್ಲಿ ನೆರವಾಗುತ್ತವೆ.
ಸೂಕ್ತವಾದ ವೆಬ್ಸೈಟ್ ಅನ್ನು ಹುಡುಕುವುದು ಒಂದು ಸವಾಲಿನ ಕೆಲಸವೇ ಸರಿ. ನಿಮ್ಮ ಮಗುವನ್ನು ಅದರಲ್ಲಿ ತೊಡಗಿಸುವಾಗ, ನಿಮ್ಮ ಮಗುವಿಗಾಗಿ ಸರಿಯಾದ ಮಾಹಿತಿಯನ್ನು ಹೊಂದಿರುವ ವೆಬ್ಸೈಟ್ ಅನ್ನು ಹುಡುಕುವುದು ತುಂಬಾ ಪ್ರಮುಖವಾಗಿರುತ್ತದೆ.
ನಿಮ್ಮ ಮಗು ಹೆಚ್ಚು ಉತ್ತಮವಾಗಿ ಕಲಿಯುವಂತೆ ಮಾಡುವ ಸೂಕ್ತವಾದ ವೆಬ್ಸೈಟ್ ಅನ್ನು ಆಯ್ದುಕೊಳ್ಳುವಲ್ಲಿ ನಿಮಗೆ ನೆರವಾಗಲು ಒಂದು ಚೆಕ್ಲಿಸ್ಟ್ ಅನ್ನು ಇಲ್ಲಿ ನೀಡಲಾಗಿದೆ.

1. ಅದು ನಿಮ್ಮ ಮಗುವಿನ ಕಲಿಕಾ ಅವಶ್ಯಕತೆಗಳನ್ನು ಪೂರೈಸುತ್ತದೆಯೇ?

ನೀವು ಆಯ್ಕೆ ಮಾಡುವ ವೆಬ್ಸೈಟ್ ನಿಮ್ಮ ಮಗುವಿನ ಕಲಿಕಾ ಹಂತಕ್ಕೆ ಸಮನಾಗಿರಬೇಕು. ನಿಮ್ಮ ಮಗುವಿನ ವಯಸ್ಸು ಮತ್ತು ಗ್ರೇಡ್ಗಳು ನೀವು ಪರಿಗಣಿಸಬೇಕಿರುವ ಅತ್ಯಂತ ದೊಡ್ಡ ನಿರ್ಣಾಯಕ ಅಂಶಗಳು. ಈ ಎರಡು ಅಂಶಗಳನ್ನಲ್ಲದೆ, ಸುಧಾರಣೆಗೆ ಅವಕಾಶವಿರುವ ವಿಷಯ ಮತ್ತು ಕೌಶಲ್ಯಗಳನ್ನೂ ಸಹ ಪೋಷಕರು ಪರಿಗಣಿಸಬೇಕು. ನಿಮ್ಮ ಮಗುವಿ ನ ಬುದ್ದಿಮತ್ತೆಗೆ ಸವಾಲೆಸೆಯುವ ಇಂಟರಾಕ್ಟಿವ್ ವೆಬ್ಸೈಟ್ಗಳನ್ನು ಹುಡುಕಿ.

2. ಇದರ ಬಳಕೆ ಉಚಿತವಾಗಿದೆಯೇ?

ಅನೇಕ ವೆಬ್ಸೈಟ್ಗಳು, ಬಳಸಬಹುದಾದ ಮಾಹಿತಿಯ ಪ್ರಮಾಣದ ಮೇಲೆ ಮಿತಿಯನ್ನು ಹೊಂದಿರುವಂಥ 'ಫ್ರೀಮಿಯಂ' ಮಾದರಿಯನ್ನು ಹೊಂದಿರುತ್ತವೆ. ನಿಮ್ಮ ಮಗುವಿನ ಕಲಿಕೆಯನ್ನು ಅಡ್ಡಿಪಡಿಸುವಂತಹ, ನಂತರದಲ್ಲಿ ತಿಳಿದುಬರುವ ಗುಪ್ತ ವೆಚ್ಚಗಳಂತಹ ಯಾವುದೇ ಆಶ್ಚರ್ಯವನ್ನು ತಪ್ಪಿಸಲು ಬೆಲೆಯನ್ನು ಮೊದಲೇ ಪರೀಕ್ಷಿಸುವುದು ಉತ್ತಮ. ವೆಬ್ಸೈಟ್ ಪ್ರವೇಶಿಸಲು ಹಣ ಪಾವತಿಸುವುದೇ ಅಥವಾ ಇನ್ನೊಂದು ಆಯ್ಕೆಯನ್ನು ಕಂಡುಕೊಳ್ಳುವುದೇ ಎಂದು ನಿರ್ಧರಿಸಲು ಯೂಜರ್ ರೇಟಿಂಗ್ಗಳು, ವಿಮರ್ಶೆಗಳು ಮತ್ತು ಶಿಕ್ಷಕರ ಶಿಫಾರಸುಗಳು ನಿಮಗೆ ಸಹಾಯ ಮಾಡುತ್ತದೆ.

3. ಮಾಹಿತಿಯು ಸೂಕ್ತವಾಗಿ ಸಂಬಂಧಪಡುತ್ತದೆಯೇ?

ಮಗುವಿನ ಕಲಿಕಾ ರೇಖೆಯ ದಿಕ್ಕನ್ನು ನಿರ್ಧರಿಸುವಲ್ಲಿ ಸರಿಯಾದ ಮಾಹಿತಿ ಮತ್ತು ಸಂಪನ್ಮೂಲಗಳು ಬಹಳಷ್ಟು ವ್ಯತ್ಯಾಸವನ್ನುಂಟು ಮಾಡಬಲ್ಲವು. ಆಯಾ ಕ್ಷೇತ್ರದಲ್ಲಿನ ಸಮಾನವ್ಯಕ್ತಿಗಳು ಮತ್ತು ಪರಿಣಿತರ ವಲಯದಲ್ಲಿ ಒಂದು ವೆಬ್ಸೈಟಿನ ಜನಪ್ರಿಯತೆ ಅದರ ಸೂಕ್ತತೆಯ ಬಗ್ಗೆ ಹೇಳಬಲ್ಲ ಉತ್ತಮ ಮಾರ್ಕರ್ ಆಗಿದೆ. ಹಲವಾರು ಮೂಲಗಳಿಂದ ಆನ್ಲೈನ್ ವಿಮರ್ಶೆಗಳನ್ನು ಓದುವ ಮೂಲಕ ಹಾಗೂ ಶಿಕ್ಷಕರು ಮತ್ತವರ ಸ್ನೇಹಿತರ ಬಳಿ ಅವರ ಅಭಿಪ್ರಾಯಗಳನ್ನು ಕೇಳುವ ಮೂಲಕ ವೆಬ್ಸೈಟಿನಲ್ಲಿರುವ ವಿಷಯ ನಿಮ್ಮ ಮಗುವಿಗೆ ಸೂಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

4. ಇದು ಬಳಸಲು ಸುರಕ್ಷಿತವೇ?

ಎಲ್ಲರಿಗೂ ತಿಳಿದಿರುವಂತೆಯೇ, ಆನ್ಲೈನ್ ಸುರಕ್ಷತೆ ಎಂಬುದು ಪೋಷಕರ ಒಂದು ದೊಡ್ಡ ಕಳಕಳಿಯಾಗಿದೆ. ವೆಬ್ಸೈಟಿನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಪೋಷಕರು ವೆಬ್ಸೈಟ್ ಅನ್ನು ಮಾಲ್ವೇರ್, ಪಾಪ್ ಅಪ್ಗಳು, ಆಕ್ರಮಣಶೀಲ ಜಾಹೀರಾತು ಮತ್ತು ದೋಷಯುಕ್ತ ಲಿಂಕ್ಗಳಿಗಾಗಿ ಸಂಪೂರ್ಣವಾಗಿ ಬ್ರೌಸ್ ಮಾಡಬೇಕು. ಹೆಚ್ಚು ಸುರಕ್ಷಿತವಾಗಿರಲು, ಪೋಷಕರು ಗೂಗಲ್ ಟ್ರಾನ್ಸ್ಪರೆನ್ಸಿ ರಿಪೋರ್ಟ್ ಟೂಲ್ ಅನ್ನು ಬಳಸಿಕೊಂಡು ಮಕ್ಕಳು ಭೇಟಿ ನೀಡಲು ಸುರಕ್ಷಿತವಾಗಿಲ್ಲದ ವೆಬ್ಸೈಟ್ಗಳನ್ನು ಗುರುತಿಸಬಹುದು.

ಹಂತ 1: ನೀವು ಪರಿಶೀಲಿಸಲು ಬಯಸುವ ವೆಬ್ಸೈಟ್ ಲಿಂಕ್ ಅನ್ನು ಕಾಪಿ ಪೇಸ್ಟ್ ಮಾಡಿ.

ಹಂತ 2: ಎಂಟರ್ ಒತ್ತಿರಿ

 

ಹಂತ 3: ಫಲಿತಾಂಶವನ್ನು ವೀಕ್ಷಿಸಿ
ಸಂಭಾಷಿಸುವುದೂ ಸಹ ಫಲಿತಾಂಶಗಳನ್ನು ನೀಡುತ್ತದೆ. ವೆಬ್ಸೈಟಿನ ಬಗ್ಗೆ ಒಳನೋಟಗಳಿಗಾಗಿ ಹಿರಿಯ ಮಕ್ಕಳ ಪೋಷಕರು ಮತ್ತು ನಿಮ್ಮ ಮಗುವಿನ ಸಹಪಾಠಿಗಳ ಪೋಷಕರು, ಇಬ್ಬರೊಂದಿಗೂ ಚರ್ಚಿಸಿ. ನೀವು ಆಯ್ಕೆ ಮಾಡುವ ಪಿಸಿ ಸಹ ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ: https://www.dellaarambh.com/kannada/pick-right-school-pc/