ಕಲಿಸುವಾಗ ಶಿಕ್ಷಕರು ಅನುಸರಿಸಬೇಕಾದ ನಾಲ್ಕು ವಿಷಯಗಳು

 

“ಪಿಸಿಯು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ  ಶಿಕ್ಷಕರಿಗೂ ಕೂಡ ಸೃಜನಶೀಲತೆ ಮತ್ತು ಸಂಶೋಧನೆಯನ್ನು ನಡೆಸಲು ವೇದಿಕೆಯನ್ನು ಕಲ್ಪಿಸುತ್ತದೆ; ಅವರಿಗೆ ಕಲಿಕೆಯನ್ನು ಉತ್ತೇಜಿಸಲು ಹೊಸ ವಿಧಾನಗಳ ಅನುಭವಗಳೊಂದಿಗೆ ಸಹಾಯ ಮಾಡುತ್ತದೆ.”

- ಕುಮಾರಿ ಆಕಾಂಕ್ಷಭಕ್ಷಿ – ಸೀಡಿಂಗ್ ಇಂಟರ್ ನ್ಯಾಶನಲ್ ಅಕಾಡೆಮಿಯ ಜಂಟಿ ನಿರ್ದೇಶಕರು

ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಸ್ಥಿರವಾಗಿ ಉಳಿದಿರುತ್ತದೆ. ಸಂಶೋಧನೆಯ ಫಲಶೃತಿಯ ಪ್ರಕಾರ ಶಿಕ್ಷಕರು ವಿದ್ಯಾರ್ಥಿಯ ಶೈಕ್ಷಣಿಕ ಸಾಮರ್ಥ್ಯದಲ್ಲಿ ಮಾತ್ರವಲ್ಲದೇ ಅವರ ಜೀವನದ ಯಶಸ್ಸಿನಲ್ಲಿಯೂ ಪ್ರಭಾವವನ್ನು ಬೀರುತ್ತಾರೆ. ಕಲಿಕೆಯ ಹಂಬಲವಿರುವ, ಪ್ರಭಾವಿ ಮತ್ತು ಪರಿಣಾಮಕಾರಿ ಶಿಕ್ಷಕರು ಗುಣಮಟ್ಟದ ಶಿಕ್ಷಣದ ಅಸ್ತಿವಾರವಾನ್ನು ಹಾಕುತ್ತಾರೆ.[1] 

ಸರಿಯಾದ ದಿಕ್ಕಿನಲ್ಲಿ ಕೆಲವು ಹೆಜ್ಜೆಗಳನ್ನು ಹಾಕುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆಯೊಂದಿಗಿನ ಸಂಬಂಧವನ್ನು ಹೆಚ್ಚಿಸುವಂತೆ ಮಾಡುತ್ತಾರೆ.

1. ಪರಿಣಾಮಕಾರಿ ಚಟುವಟಿಕೆ ಮೂಲಕ ಕಲಿಸುವುದು

ಹೊಸ UChicago-led ಅಧ್ಯಯನದ ಪ್ರಕಾರ, ವಿದ್ಯಾರ್ಥಿಗಳು ಥಿಯರಿಯಿಂದ ಕೂಡಿದ ಅಧ್ಯಯನಕ್ಕಿಂತಲೂ ಪರಿಣಾಮಕಾರಿ ಚಟುವಟಿಕೆಯಿಂದ ಹೆಚ್ಚು ಆಳವಾದ ಅಧ್ಯಯನವನ್ನು ಮಾಡಲು ಮತ್ತು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಸಾಧಿಸಬಹುದೆಂದು ತಿಳಿಸುತ್ತದೆ. ಈ ಕಲಿಕೆಯ ವಿಧಾನವು ಕ್ಷೇತ್ರ ಪ್ರವಾಸ, ಆಕರ್ಷಕ ಚಟುವಟಿಕೆಗಳು, ಪ್ರಯೋಗಾಲಯದ ಭೇಟಿಗಳು ಮತ್ತು ಗುಂಪು ಚಟುವಟಿಕೆಗಳ ಮೂಲಕ ತಕ್ಷಣವೇ ವಿಷಯದ ಪ್ರಾಯೋಗಿಕ ಬಳಕೆಯನ್ನು ಉಪಯೋಗಿಸಿಕೊಳ್ಳುತ್ತದೆ. [2] 

2. ಕಲಿಕೆಯ ಭಾಗವನ್ನು ಸಂಯೋಜಿಸುತ್ತದೆ

ಸಂಯೋಜಿತ ಯೋಜನೆಗಳು ವಿದ್ಯಾರ್ಥಿಯ ಅಂತರ್-ವ್ಯಕ್ತಿತ್ವ, ಸಮಯ ನಿರ್ವಹಣೆ ಮತ್ತು ಸಂಘಟನೆಯ ಕೌಶಲ್ಯಗಳ ಬೆಳವಣಿಗೆಗೆ ಅತ್ಯುತ್ತಮವಾದ ಮಾರ್ಗವಾಗಿವೆ. ಗುಂಪು ಚಟುವಟಿಕೆಗಳಲ್ಲಿ ವಾದ ಮಂಡನೆ, ಸಮರ್ಪಣೆ, ವರದಿಗಳು ಮತ್ತು ಮೆದುಳಿಗೆ ಅಪಾಯ ತರಬಲ್ಲ ಅವಧಿಗಳು ಬಹು ವೈವಿಧ್ಯಮಯವಾಗಿರುತ್ತವೆ ಇದು ವಿದ್ಯಾರ್ಥಿಗಳಿಗೆ ಅವರು ಯಾವುದರಲ್ಲಿ ಉತ್ತಮರಾಗಿದ್ದಾರೆ ಮತ್ತು ಯಾವುದರಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

3. ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದು

ಒಬ್ಬ ವಿದ್ಯಾರ್ಥಿಯು ಪ್ರದರ್ಶಿಸುವ ಭಾಷಾ ಪಾಂಡಿತ್ಯವನ್ನು, ಚರ್ಚೆ ಮತ್ತು ವಾದ ಮಂಡನೆಯಂತಹ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ಕೊಡಲೇಬೇಕಾಗುತ್ತದೆ. ಇನ್ನೊಂದು ಕಡೆಯಲ್ಲಿ ಒಬ್ಬ ವಿದ್ಯಾರ್ಥಿಯು ಬೀಜ ಗಣಿತದಂತಹ ಒಂದು ವಿಷಯದಲ್ಲಿ ಕಷ್ಟ ಪಡುತ್ತಿದ್ದರೆ, ವಿದ್ಯಾರ್ಥಿಗೆ ವಿಕಿಸ್ಪೇಸ್ ಕ್ಲಾಸ್‌ರೂಮ್ (Wikispace classroom) ಮೂಲಕ ಹೆಚ್ಚುವರಿ ಕಲಿಕೆಯ ಸಂಪನ್ಮೂಲಗಳನ್ನು ಒದಗಿಸಬಹುದಾಗಿದೆ. ಜೊತೆಗೆ, ವಿದ್ಯಾರ್ಥಿಗಳು ಗುಂಪು ಚಟುವಟಿಕೆ ಯೋಜನೆಗಳಂತಹ ಸಮರ್ಪಕವಾದ ಅವಕಾಶವನ್ನು ಒಬ್ಬರು ಮತ್ತೊಬ್ಬರಿಂದ ಕಲಿಯಬಹುದಾಗಿದೆ. [3]

4. ಪಿಸಿ ಸಹಿತ ಕಲಿಯುವಿಕೆಯನ್ನು ಒಂದು ಹವ್ಯಾಸವನ್ನಾಗಿ ಪರಿವರ್ತಿಸಿ

ಪಿಸಿ ಸಹಿತವಾದ ಕಲಿಕೆಯು ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ವಿಷಯದಲ್ಲಿ ಅಂಶಗಳನ್ನು ಆಳವಾಗಿ ಕಲಿಯುವ ಅವಕಾಶವನ್ನು ಒದಗಿಸುತ್ತದೆ. ಒಂದು ಚಿಕ್ಕ ಚಟುವಟಿಕೆಯಿಂದ ಹಿಡಿದು ಆನ್‌ಲೈನ್ ಸಂಪನ್ಮೂಲಗಳ ವರೆಗೂ ಸಹ ಪಿಸಿಗಳು ವ್ಯಾಪಕ ಶ್ರೇಣಿಯ ಕಲಿಕೆಯ ಸಂಪನ್ಮೂಲಗಳನ್ನು ಒದಗಿಸುತ್ತದೆ. ಕಂಠಪಾಟದ ಮೂಲಕ ಕಲಿಯುವುದನ್ನು ವಿರೋಧಿಸುವ ಮೂಲಕ ವಿದ್ಯಾರ್ಥಿಗಳು ವಿಷಯವನ್ನು ಅತ್ಯಂತ ಆಳವಾಗಿ ಕಲಿಯಲು, ಮಾಹಿತಿಯನ್ನು ವೇಗವಾಗಿ ಮತ್ತು ದೀರ್ಘಕಾಲದವರೆಗೂ ನೆನಪಿನಲ್ಲಿ ಇಟ್ಟುಕೊಳ್ಳುವ ಮೂಲಕ ಇದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಬ್ಬರಿಗೂ ಪ್ರಯೋಜನಕಾರಿಯಾಗಿರುತ್ತದೆ.[4]

ಶಿಕ್ಷಕರು ಪ್ರತಿದಿನ ಹೊಸದಾದ ಕಲಿಕೆಯ ಅನುಭವಗಳನ್ನು ಹೊಂದುತ್ತಾರೆ ಮತ್ತು ಚಿಕ್ಕ ಹೆಜ್ಜೆಗಳು ಬಹುದೂರಕ್ಕೆ ಸಾಗುವಂತೆ ಮಾಡುತ್ತವೆ. ಈ ತಂತ್ರಗಳನ್ನು ಅಳವಾಡಿಸಿಕೊಳ್ಳುವುದರಿಂದ ತರಗತಿ ಕೋಣೆಯ ಅನುಭವವನ್ನು ಸುಧಾರಿಸಬಹುದು ಮತ್ತು ವಿದ್ಯಾರ್ಥಿಗಳಲ್ಲಿ ನಿಜವಾದ ಕಲಿಕೆಯ ಪ್ರೀತಿಯನ್ನು ಮೂಡಿಸಬಹುದಾಗಿದೆ.

ಆದುದರಿಂದ, ನೀವು ಪ್ರತಿದಿನ ನಿಮ್ಮ ತರಗತಿ ಕೋಣೆಯ ಅನುಭವವನ್ನು ಹೇಗೆ ಸುಧಾರಿಸುತ್ತೀರಿ? #DellAarambh ಉಪಯೋಗಿಸಿ ನಮಗೆ Tweet ಮಾಡಿರಿ.