ನಿಮ್ಮ ಕಲಿಸುವ ಕೌಶಲ್ಯಗಳನ್ನು ಸುಧಾರಿಸಲು ನೀವು ಮಾಡಬೇಕಾದ ನಾಲ್ಕು ಸಂಗತಿಗಳು

 

ತಂತ್ರಜ್ಞಾನವು ನಮ್ಮ ಸುತ್ತಲಿನ ವಿಶ್ವದಲ್ಲಿ ಎಂದೆಂದಿಗೂ – ಹೆಚ್ಚುತ್ತಿರುವ ಜನಪ್ರಿಯತೆಯನ್ನು ನೋಡುತ್ತದೆ – ನಮ್ಮ ತರಗತಿಗಳಲ್ಲಿಯೂ ಸಹ ಸ್ಥಾನವನ್ನು ಕಂಡುಕೊಳ್ಳುವುದನ್ನು ಅದು ಎದುರು ನೋಡುತ್ತದೆ. ಲಭ್ಯವಿರುವ ಜ್ಞಾನ ಹಾಗೂ ಸಂಪನ್ಮೂಲಗಳ ವಿಸ್ತಾರವಾದ ಹರಹು ಅದನ್ನು ತರಗತಿಯಲ್ಲಿ ನಿಮಗೆ ನೆರವಾಗಬಹುದಾದ ಒಂದು ಮಹಾನ್ ಸಾಧನವನ್ನಾಗಿಸುತ್ತದೆ.

ನಿಮ್ಮ ಕಲಿಕಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ನೀವು ಮಾಡಬಹುದಾದ ನಾಲ್ಕು ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ:

1) ಮೊದಲು ಮಾಡಬೇಕಾದ ಕೆಲಸಗಳನ್ನು ಮೊದಲು ಮಾಡಿ - ಫೀಡ್ಬ್ಯಾಕ್ ಪಡೆದುಕೊಳ್ಳಿ

ನಿಮ್ಮ ಸಹ-ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಫೀಡ್ಬ್ಯಾಕ್ ಪಡೆದುಕೊಳ್ಳುವಿಕೆಯು ನಿಮ್ಮ ವೃತ್ತಿಪರ ಬೆಳವಣಿಗೆಗೆ ಒಂದು ಅತ್ಯಮೂಲ್ಯವಾದ ವಿಷಯವಾಗಿದೆ. ನಿಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ಕಂಡುಕೊಳ್ಳಲು ನೀವು ತರಗತಿಯ ಮುಕ್ತಾಯದ ನಂತರವಾದರೂ ಕೇಳಬಹುದು ಅಥವಾ ವಿವರವಾದ ಪ್ರಶ್ನೆಗಳೊಂದಿಗೆ ಕ್ವೆಶ್ಚನ್ ಪ್ರೊ ಸಮೀಕ್ಷೆಯೊಂದನ್ನಾದರೂ ಕಳುಹಿಸಬಹುದು. ನಿಮ್ಮ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಲು ಹಾಗೂ ಸುಧಾರಣೆಯ ಅಗತ್ಯತೆ ಇರುವ ಪ್ರದೇಶಗಳನ್ನು ಗುರುತಿಸಲು ಆ ಒಳನೋಟಗಳನ್ನು ಬಳಸಿಕೊಳ್ಳಿ.

2) ಓದನ್ನು ಒಂದು ಹವ್ಯಾಸವನ್ನಾಗಿಸಿಕೊಳ್ಳಿ

ಪಠ್ಯ ಯೋಜನೆಯನ್ನು ಹಾಕಿಕೊಳ್ಳುವುದು, ಒಂದೇ ಸಮನೇ ಬಹುಸಂಖ್ಯೆಯ ತರಗತಿಗಳನ್ನು ತೆಗೆದುಕೊಳ್ಳುವುದು ಹಾಗೂ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು ಇವೆಲ್ಲವುಗಳನ್ನೂ ನಿರ್ವಹಿಸುವುದು ಕಠಿಣವಾದ ಕೆಲಸವೇ ಆಗಿರುತ್ತದೆ, ಆದರೂ ಗೂಗಲ್ ಸ್ಕಾಲರ್ನಲ್ಲಿ ಸಂಬಂಧಿತ ಸಂಶೋಧನೆ ಮತ್ತು ಲೇಖನಗಳನ್ನು ಓದಲು ಒಂದು ದಿನದಲ್ಲಿ 15 ನಿಮಿಷಗಳನ್ನು ತೆಗೆದಿರಿಸುವುದು ನಿಮ್ಮನ್ನು ಸಿದ್ಧರನ್ನಾಗಿರಿಸುತ್ತದೆ! ನೀವು ಓದುವ ಪ್ರತಿಯೊಂದು ಲೇಖನವೂ ತರಗತಿಯಲ್ಲಿ ನೀವು ಹೆಚ್ಚಿನ ಮಟ್ಟಿಗಿನ ಪ್ರಯೋಗವನ್ನು ಮಾಡಲು ನಿಮ್ಮನ್ನು ಪ್ರೇರೇಪಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಜ್ಞಾನವನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಷ್ಟೇ ಅಲ್ಲದೇ, ಓದುವ ಹವ್ಯಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಬರವಣಿಗೆ ಹಾಗೂ ವಿಶ್ಲೇಷಣಾ ಸಾಮರ್ಥ್ಯಗಳನ್ನೂ ಸಹ ಸುಧಾರಿಸುತ್ತದೆ.

3) ಶಿಕ್ಷಕರಲ್ಲದ ನಿಮ್ಮ ಸ್ನೇಹಿತರೊಂದಿಗೆ ಸಂಭಾಷಿಸಿ

ನಿಮ್ಮ ಕಲಿಕಾ ವಿಧಾನಗಳ ಮೇಲಿನ ಒಂದು ಸಂಪೂರ್ಣವಾಗಿ ಭಿನ್ನವಾದ ದೃಷ್ಟಿಕೋನಕ್ಕಾಗಿ, ಕಲಿಸದಿರುವ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ. ನೀವು ಗಮನಿಸದೇ ಇದ್ದ ವಿಷಯಗಳನ್ನು ಅವರು ಗಮನಿಸಬಹುದಾದ್ದರಿಂದ ಕಲಿಸದಿರುವ ಜನರು ತಮ್ಮ ಉತ್ತರಗಳಿಂದ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸಬಹುದು! ಇದು ಕೆಲಸ ಸಂಬಂಧೀ ಸಂಭಾಷಣೆಗಳಿಂದ ಒಂದು ವಿರಾಮವನ್ನು ಒದಗಿಸುವ ಕೆಲಸವನ್ನೂ ಮಾಡುತ್ತದೆ ಹಾಗೂ ನಿಮ್ಮ ಮನಸ್ಸು ನಿಜವಾಗಿಯೂ ಬಿಚ್ಚಿಕೊಳ್ಳುವಂತೆ ಮಾಡುತ್ತದೆ.

4) ಕಲಿಯುವುದನ್ನು ನಿಲ್ಲಿಸಬೇಡಿ

ಶಿಕ್ಷಕರು ಕಲಿಸುತ್ತಾ ಇರಬೇಕು, ಆದರೆ ಅವರು ಕಲಿಯುತ್ತಲೂ ಇರಬೇಕು. ಅದು ಒಂದು ಆನ್ಲೈನ್ ಕೋರ್ಸ್ ಅನ್ನು ತೆಗೆದುಕೊಳ್ಳುವುದಾಗಿರಬಹುದು ಅಥವಾ ವಾರಾಂತ್ಯದ ಡಿಪ್ಲೋಮಾ ಕೋರ್ಸಿಗೆ ನೋಂದಾಯಿಸುವುದಾಗಿರಬಹುದು, ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂದೆ ಇರಲು ಹಾಗೂ ನಿಮ್ಮ ಪರಿಣಿತಿಯ ಕ್ಷೇತ್ರದಲ್ಲಿ ನೀವು ಅಪ್-ಟು-ಡೇಟ್ ಆಗಿರಲು ಕಲಿಕೆಯು ನೆರವಾಗುತ್ತದೆ. ನಿಮ್ಮ ಕುತೂಹಲವೇ ನಿಮ್ಮ ದಾರಿದೀಪವಾಗಲಿ!

ನೀವು ಸರಿಯಾದ ಮಾರ್ಗದಲ್ಲಿ ಆರಂಭಿಸಬಯಸುತ್ತಿರುವ ಮೊದಲ-ಬಾರಿಯ ಶಿಕ್ಷಕರಾಗಿದ್ದಲ್ಲಿ, PC ಯೊಂದನ್ನು ಬಳಸುವಿಕೆಯು ನಿಮ್ಮ ಕಲಿಕಾ ಕೌಶಲ್ಯಗಳನ್ನು ಉತ್ತಮದಿಂದ ಅತ್ಯುತ್ತಮ ಎನ್ನಿಸುವಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ! ಅದು ಪಠ್ಯಗಳನ್ನು ಯೋಜಿಸುವುದಾಗಿರಲಿ ಅಥವಾ ವಿದ್ಯಾರ್ಥಿಗಳು ನಿಜವಾಗಿಯೂ ಆನಂದಿಸುವ ಹೋಮ್ವರ್ಕ್ ಅನ್ನು ಅಸೈನ್ ಮಾಡುವುದಾಗಿರಲಿ, ನೀವು ಆರಂಭಿಸಲು ಅವಶ್ಯವಾಗಿ ಬೇಕಿರುವ ಕೆಲವು ಅಂಶಗಳನ್ನು ನಾವು ಸಿದ್ಧಪಡಿಸಿದ್ದೇವೆ.