ಪರ್ಸನಲ್ ಕಂಪ್ಯೂಟರ್ಗಳು ಕಲಿಕೆಯನ್ನು ಮೋಜುಭರಿತವನ್ನಾಗಿಸುವ ನಾಲ್ಕು ಮಾರ್ಗಗಳು!

 

“ಕಲಿಕೆಯತ್ತ ಜನರನ್ನು ತರುವುದಕ್ಕಿಂತ ಕಲಿಕೆಯನ್ನು ಜನರತ್ತ ನಾವು ತರಬೇಕಾಗಿರುತ್ತದೆ.”

- ಎಲಿಯಟ್ ಮೇಸೀ

 

ಪ್ರತಿಯೊಬ್ಬರಿಗೂ ಪ್ರತಿಯೊಂದು ವಿಷಯವೂ ಬೋರಿಂಗ್ ಆಗಿರುವುದಿಲ್ಲ. ಅದೇ ರೀತಿಯಾಗಿ, ಪ್ರತಿಯೊಂದು ವಿಷಯವೂ ಪ್ರತಿಯೊಬ್ಬರಿಗೂ ಸಹಜವಾಗಿ ಇಂಟರೆಸ್ಟಿಂಗ್ ಆಗಿರುವುದಿಲ್ಲ. ಏಕತಾನತೆಯ ವಿಷಯವೊಂದನ್ನು ವಿದ್ಯಾರ್ಥಿಗಳಿಗಾಗಿ ತೊಡಗಿಕೊಳ್ಳುವಂತೆ ಮಾಡುವುದು ಓರ್ವ ಶಿಕ್ಷಕರ ಪ್ರಮುಖವಾದ ಕಾರ್ಯವಾಗಿದ್ದು, ಸೂಕ್ತ ಮಾರ್ಗದಲ್ಲಿ ಕ್ರಮಿಸದಿದ್ದಲ್ಲಿ, ಅದು ಕಷ್ಟಕರವಾಗಬಲ್ಲದು. ಶೈಕ್ಞಣಿಕ ಉದ್ದೇಶಗಳಿಗಾಗಿ ಪರ್ಸನಲ್ ಕಂಪ್ಯೂಟರ್ ಗಳ ಬಳಕೆಯು ಉಪಯುಕ್ತವಾಗುವುದು ಇಲ್ಲಿಯೇ. ನಿಮ್ಮ ವಿದ್ಯಾರ್ಥಿಗಳ ತೊಡಗಿಕೊಳ್ಳುವಿಕೆಯನ್ನು ಸುಧಾರಿಸಲು ನೀವು ಕೈಗೊಳ್ಳಬಹುದಾದ ತರಹೇವಾರಿ ಅವಕಾಶಗಳು ಲಭ್ಯವಿವೆ. ಪರ್ಸನಲ್ ಕಂಪ್ಯೂಟರ್ ಗಳ ಕೃಪೆಯಿಂದಾಗಿ, ಬೋರಿಂಗ್ ವಿಷಯಗಳು ಬೋರಿಂಗ್ ಆಗಿಯೇ ಇರಬೇಕಾಗಿಲ್ಲ!

 

ಇತಿಹಾಸ

ಪೊಕಾಹೊಂಟಾಸ್ ಅಥವಾ ನೈಟ್ ಅಟ್ ದಿ ಮ್ಯೂಜಿಯಮ್ ಗಳಂಥ ಕೆಲವು ಅತ್ಯಂತ ಪ್ರಸಿದ್ಧ ಚಲನಚಿತ್ರಗಳ ಎಲ್ಲ ಅಂಶಗಳನ್ನೂ ಇತಿಹಾಸವು ಹೊಂದಿದೆ, ಹಾಗಾಗಿ ಮಕ್ಕಳು ಕಲಿಯಲು ಉತ್ಸುಕರಾಗಿರುವಂಥ ವಿಷಯವು ಅದಾಗಿರಬೇಕು. ನಿಮ್ಮ ಕಲಿಸುವಿಕೆಗೆ ನೆರವಾಗಲು ದೃಶ್ಯ ಮಾಧ್ಯಮಗಳನ್ನು ಬಳಸಿಕೊಳ್ಳುವಿಕೆಯು, ಸಪ್ಪೆ ಮುಖಗಳಿಂದ ಕೂಡಿರುವ ತರಗತಿಯಲ್ಲಿ ಜೀವಕಳೆಯನ್ನು ತುಂಬುವಂತೆ ಮಾಡಬಲ್ಲದು. ಚಲನಚಿತ್ರ ತಯಾರಕರು ಆ ವಿಷಯದೆಡೆಗೆ ನಿಸ್ಸಂಕೋಚ ಪ್ರೀತಿಯನ್ನು ಹೊಂದಿರುತ್ತಾರೆ. ಉದಾಹರಣೆಗೆ, ಹಾಲೊಕಾಸ್ಟ್ ಎಷ್ಟು ಗಂಭೀರವಾಗಿತ್ತು ಎನ್ನುವುದನ್ನು ನಿಮ್ಮ ಮಕ್ಕಳು ತಿಳಿದುಕೊಳ್ಳಬೇಕು ಎಂದು ನೀವು ಬಯಸುವುದಾದಲ್ಲಿ, ನೀವು ಸಂಭಾವ್ಯವಾಗಿ ಅವರಿಗೆ ದಿ ಪಿಯಾನಿಸ್ಟ್, ಶಿಂಡ್ಲರ್ಸ್’ ಲಿಸ್ಟ್ ಅಥವಾ ದಿ ಡೈರಿ ಆಫ್ ಆ್ಯನ್ ಫ್ರ್ಯಾಂಕ್ ಚಲನಚಿತ್ರಗಳನ್ನು ತೋರಿಸಬಹುದು. ಚಿತ್ರಗಳನ್ನು ವೀಕ್ಷಿಸಿದ ನಂತರ, ಆ ಚಿತ್ರದ ಐತಿಹಾಸಿಕ ನಿಖರತೆಯನ್ನು ಹಾಗೂ ಅವುಗಳೊಂದಿಗೆ ಪ್ರತಿಫಲಿಸಿದ ಭಾಗಗಳನ್ನು ನೀವು ಚರ್ಚಿಸಬಹುದು. ಅಲ್ಲದೇ, ಪಿಸಿ ಸಂಪನ್ಮೂಲಗಳನ್ನು ಬಳಸುವಿಕೆಯು ಗಣನೀಯ ಪ್ರಮಾಣದ ಸಾಮಗ್ರಿಯನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಅನುಮತಿಸುತ್ತದೆ.

 

ವಿಜ್ಞಾನ

ನೆಚ್ಚಿನ ಪ್ರಶ್ನೆಯೊಂದನ್ನು ಮಕ್ಕಳು ಹೊಂದಿದ್ದಲ್ಲಿ ಅದು ಬಹುಶಃ “ಏಕೆ?” ಎಂಬುದಾಗಿರುತ್ತದೆ. ಜಗತ್ತಿನ ಬಗೆಗಿನ ಅವರ ನೈಸರ್ಗಿಕ ಕುತೂಹಲವನ್ನು ಪ್ರೋತ್ಸಾಹಿಸುವ ಮೂಲಕ ಹಾಗೂ ಉತ್ತರಗಳನ್ನು ತಮ್ಮಷ್ಟಕ್ಕೆ ತಾವೇ ಹೇಗೆ ಕಂಡುಕೊಳ್ಳಬೇಕು ಎಂಬುದನ್ನು ಅವರಿಗೆ ಕಲಿಸುವ ಮೂಲಕ. ವಿದ್ಯಾರ್ಥಿಗಳನ್ನು ಪುಸ್ತಕಗಳಿಂದ ಹೊರಗೆ ತಂದು, ವಿಜ್ಞಾನದ ಪ್ರಾಯೋಗಿಕ ಅನ್ವಕತೆಯನ್ನು ಅವರಿಗೆ ತೋರಿಸುವುದು ಇಲ್ಲಿ ಪ್ರಮುಖವಾಗಿರುತ್ತದೆ. ಆ ಪ್ರಕ್ರಿಯೆಯಲ್ಲಿ ಅವರು ತೊಡಗಿಕೊಳ್ಳುವುದಕ್ಕಾಗಿ, ಚರ್ಚಿಸುವ ಸಾಧ್ಯತೆಯನ್ನು ನೀವು ಅವರಿಗೆ ಒದಗಿಸುವುದು ಮಹತ್ವದ್ದಾಗಿರುತ್ತದೆ. ನಂತರ, ಈಗಷ್ಟೇ ಕಲಿತ ಸಿದ್ದಾಂತವನ್ನು ತಾವು ಹೇಗೆ ಅನ್ವಯಿಸಬಹುದು ಎಂಬುದನ್ನು ತೋರಿಸುವ ಪ್ರಯೋಗಗಳಿಗೆ ಸಾಗುವ ಮೂಲಕ, ವಿಜ್ಞಾನವನ್ನು ಹೆಚ್ಚು ಮೋಜನ್ನು ನೀಡುವ ವಿಷಯವಾಗಿ ವಿದ್ಯಾರ್ಥಿಗಳು ಕಂಡುಕೊಳ್ಳುತ್ತಾರೆ. 

 

ಗಣಿತ

ಅನೇಕ ವಿದ್ಯಾರ್ಥಿಗಳಿಗೆ, ಗಣಿತ ಎಂಬುದು ಪ್ರವಾಹದ ವಿರುದ್ಧ ಈಜುವ ಅನುಭವವನ್ನು ನೀಡುತ್ತದೆ. ಸಂಖ್ಯೆಗಳು ಹೇಗೆ ಜೊತೆಗೂಡುತ್ತವೆ ಎಂಬುದು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ ಹಾಗೂ ಬಹಳ ಸವಾಲಿನ ಕೆಲಸವಾಗಿ ತೋರಬಹುದು. ಅದೃಷ್ಟಾವಶಾತ್, ಗಣಿತದ ಬಗ್ಗೆ ವಿದ್ಯಾರ್ಥಿಗಳನ್ನು ಅತ್ಯುತ್ಸಾಹಿತರನ್ನಾಗಿಸುವುದನ್ನು ತಂತ್ರಜ್ಞಾನವು ಸುಲಭವಾಗಿಸಿದೆ. ಈ ವೆಬ್ ಸೈಟ್ ಗಳು ವಿದ್ಯಾರ್ಥಿಗಳನ್ನು ತೊಡಗಿಸಿ ಇರಿಸುವಂತೆ ಮಾಡುವ ಇಂಟರ&zwj್ಯಾಕ್ಟಿವ್ ಚಟುವಟಿಕೆಗಳನ್ನು ಹಾಗೂ ದೃಶ್ಯಾತ್ಮಕ ಪ್ರಾತಿನಿಧ್ಯಗಳನ್ನು ಒದಗಿಸುತ್ತವೆ. ತರಗತಿಯಲ್ಲಿ ತಾವು ಕಲಿಯುವ ಪರಿಕಲ್ಪನೆಗಳನ್ನು ವಾಸ್ತವಿಕ ಜಗತ್ತಿಗೆ ಸಂಬಂಧಿಸಲು ವಿದ್ಯಾರ್ಥಿಗಳು ಸಮರ್ಥರಾದಾಗ, ತಾವು ಕಲಿಯುತ್ತಿರುವುದನ್ನು ತಿಳಿದುಕೊಳ್ಳಲು ಅದು ಅವರಿಗೆ ನೆರವಾಗುತ್ತದೆ.

 

ಭೂಗೋಳಶಾಸ್ತ್ರ

ಭೂಗೋಳಶಾಸ್ತ್ರದ ಸೂಕ್ತ ಪಾಠದೊಂದಿಗೆ, ತರಗತಿಯಿಂದ ಹೊರಹೋಗದೆಯೇ ವಿದ್ಯಾರ್ಥಿಗಳು ವಿಶ್ವದಾದ್ಯಂತ ಪ್ರಯಾಣಿಸಬಹುದು. ನಕಾಶೆಯಲ್ಲಿ ಬೇರೆ ಬೇರೆ ದೇಶಗಳನ್ನು ಹುಡುಕುವುದನ್ನು ಕಲಿಯುವುದರಿಂದ ಹಿಡಿದು ಸಮಯ ವಲಯಗಳನ್ನು ತಿಳಿದುಕೊಳ್ಳುವವರೆಗೆ ಎಲ್ಲವನ್ನೂ ಮಾಡಬಹುದು. ಪಿಸಿಯೊಂದನ್ನು ಬಳಸಿಕೊಂಡು, ಗೂಗಲ್ ಅರ್ಥ್ ನೊಂದಿಗೆ ವಿದ್ಯಾರ್ಥಿಗಳು ವಿಶ್ವವನ್ನು ಗ್ರಹಿಸಬಹುದು. ತಮ್ಮ ವೈಯಕ್ತಿಕ ಭೂಗೋಳಗಳಾಚೆಗೆ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಹೆಚ್ಚಿನ ದತ್ತಾಂಶವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಾ, ತಾವು ವಾಸಿಸುವ ಪ್ರಪಂಚದ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲು ಇದು ಒಂದು ಐಕಾನಿಕ್ ಅಪ್ರೋಚ್ ಆಗಿರುತ್ತದೆ.

 

ನಿಮ್ಮ ಪರಿಕಲ್ಪನೆಗಳು ಸೂಕ್ತ ಮತ್ತು ಸಂಬಂಧಿಸಬಹುದವುಗಳಾಗಿದ್ದಲ್ಲಿ, ಪ್ರಪಂಚದಲ್ಲಿನ ಅತ್ಯಂತ ಬೇಸರಯುಕ್ತ ವಿಷಯಗಳನ್ನೂ ಸಹ ಕಲಿಯಲು ವಿದ್ಯಾರ್ಥಿಗಳು ಪ್ರೇರೇಪಿಸಲ್ಪಡುತ್ತಾರೆ.