ಮೋಜಿನ ತಾಂತ್ರಿಕ-ಹವ್ಯಾಸಗಳನ್ನು ತೆರೆದಿಡಿ!

ಹವ್ಯಾಸಗಳನ್ನು ಕೇವಲ ಕ್ರೀಡೆಗಳು ಅಥವಾ ಕಲೆಗೆ ಮಾತ್ರ ಗುರುತಿಸುತ್ತಿದ್ದ ಕಾಲ ಎಂದೋ ಮುಗಿದುಹೋಗಿದೆ – ತಂತ್ರಜ್ಞಾನ ಆಧಾರಿತ ಹವ್ಯಾಸಗಳು ಈ ದಿನಗಳಲ್ಲಿ ಹೆಚ್ಚಾಗುತ್ತಿವೆ. ಹಲವಾರು ಕ್ರಿಯಾತ್ಮಕ ಹವ್ಯಾಸಗಳಿದ್ದು, ಅವು ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಬಿಡುವಿನ ವೇಳೆಯಲ್ಲಿ ಬಳಸಿಕೊಳ್ಳಬಹುದು. ಅವುಗಳು ನಿಮಗೆ ನಿಮ್ಮ ಸುತ್ತಲಿನ ವಿಶ್ವವನ್ನು ತೆರೆದಿಡುತ್ತವೆ ಮತ್ತು ಕಲೆಯ ಸುಂದರ ಕಾರ್ಯಗಳನ್ನು ರಚಿಸುತ್ತವೆ.

ಈ ಸರಳವಾದ ತಂತ್ರಜ್ಞಾನ ಆಧಾರಿತ ಹವ್ಯಾಸಗಳೊಂದಿಗೆ ಪ್ರಾರಂಭಿಸೋಣ!

1. ಬ್ಲಾಗಿಂಗ್

ಒಂದು ಬ್ಲಾಗ್ ಡೈರಿ ಶೈಲಿಯ ವೆಬ್‌ಸೈಟ್ ಆಗಿದ್ದು ಇದನ್ನು ಆನ್‌ಲೈನ್‌ನಲ್ಲಿ ಇರುವ ಶೋತೃಗಳೊಂದಿಗೆ ನಿಕಟವಾದ ಮಾಹಿತಿಯನ್ನು ನೀಡಲು ಬಳಸಲಾಗುತ್ತದೆ. ಬ್ಲಾಗಿಂಗ್ ಎನ್ನುವುದು ಆನ್‌ಲೈನ್ ಜರ್ನಲ್ ಅಥವಾ ನಿಮ್ಮ ನೈಪುಣ್ಯತೆಯ ಶೋಕೇಸ್ ಅನ್ನು ನಿರ್ವಹಿಸಲು ಇರುವ ಅತ್ಯುತ್ತಮ ಸಾಧನವಾಗಿದೆ! 

ಸಾಂಪ್ರದಾಯಿಕ ಬ್ಲಾಗ್‌ಗಳು ಪಠ್ಯ ಮತ್ತು ಚಿತ್ರಗಳನ್ನು ಉಪಯೋಗಿಸುತ್ತವೆ, ಬ್ಲಾಗಿಂಗ್ ಕಲೆಯು ಮಾಧ್ಯಮ ಮತ್ತು ಪ್ಲಾಟ್‌ಫಾರ್ಮ್‌ನಾಂದ್ಯಂತ ವಿಸ್ತಾರಗೊಂಡಿದೆ. ನೀವು ಈಗ ನಿಮ್ಮ ಧ್ವನಿಯನ್ನು ವಿಶ್ವಾದ್ಯಂತ ಹಂಚಿಕೊಳ್ಳಲು ಸೌಂಡ್‌ಕ್ಲೌಡ್‌ನಂತಹ ಪ್ಲಾಟ್‌ಫಾರ್ಮ್‌ಗಳಿಂದ ಪಾಡ್‌ಕ್ಯಾಸ್ಟ್ ಗಳನ್ನು ಪಡೆದುಕೊಳ್ಳಬಹುದು. ಅಥವಾ 140 ಅಥವಾ ಕಡಿಮೆ ಅಕ್ಷರಗಳಲ್ಲಿ “ಮೈಕ್ರೋಬ್ಲಾಗ್” ಆದ ಟ್ವೀಟರ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಹೋಗಬಹುದು. ನೀವು ಯಾವ ಪ್ಲಾಟ್‌ಫಾರ್ಮ್ ಮತ್ತು ಮಾಧ್ಯಮದಲ್ಲಿ ಯಾವುದಕ್ಕೂ ಆದ್ಯತೆಯನ್ನು ಕೊಟ್ಟರೂ ಸಹ ಬ್ಲಾಗಿಂಗ್ ಎನ್ನುವುದು ಪ್ರಪಂಚದಲ್ಲಿಯೇ ಅತ್ಯುತ್ತಮ ಸಂಪರ್ಕ ಮಾಧ್ಯಮವಾಗಿದೆ.

2. ಕೋಡಿಂಗ್

ಕಂಪ್ಯೂಟರ್ ಸಾಫ್ಟ್ ವೇರ್, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ರಚಿಸಲು ಏನು ಮಾಡಲಾಗುತ್ತದೆ ಎಂದು ಅಚ್ಚರಿಯೇ? ಇದಕ್ಕೆ ಉತ್ತರ ಕೋಡ್ ಆಗಿದೆ. ನಿಮ್ಮ ಬ್ರೌಸರ್, ನಿಮ್ಮ ಒಎಸ್, ನಿಮ್ಮ ಫೋನಿನಲ್ಲಿರುವ ಅಪ್ಲಿಕೇಶನ್‌ಗಳು, ಫೇಸ್‌ಬುಕ್ ಮತ್ತು ಈ ವೆಬ್‌ಸೈಟ್- ಎಲ್ಲವುಗಳನ್ನು ಕೋಡ್‌‌ಗಳಿಂದಲೇ ಮಾಡಲ್ಪಟ್ಟಿವೆ. ಕೋಡಿಂಗ್ ಎಂಬುದು ಒಂದು ಆಕರ್ಷಕ ಮತ್ತು ಆಸಕ್ತಿದಾಯಕ ಹವ್ಯಾಸವಾಗಿದ್ದು ಇದನ್ನು ಅತ್ಯಂತ ಸಂಪೂರ್ಣಗೊಳಿಸುವ ವೃತ್ತಿಯನ್ನಾಗಿ ಪರಿವರ್ತಿಸಬಹುದು. ಮತ್ತು ಯಾರಿಗೆ ಗೊತ್ತು, ನೀವು ಮುಂದಿನ ಫೇಸ್‌ಬುಕ್ ರಚಿಸುವ ಹಾದಿಯಲ್ಲಿ ಇದ್ದಿರಲೂಬಹುದು! ಇಲ್ಲಿ ನೀವು ಹುಡುಕ ಬಯಸುವ ಕೆಲವು ಸಂಪನ್ಮೂಲಗಳೊಂದಿಗೆ ಕೋಡಿಂಗ್‌ನ ಮೂಲ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಮಾರ್ಗದರ್ಶನವನ್ನು ನೀಡಲಾಗಿದೆ.

3. ವ್ಲೋಗಿಂಗ್

ವ್ಲಾಗ್ (ಅಥವಾ ವಿಡಿಯೋ ಬ್ಲಾಗ್) ಎಂಬುದು ಒಂದು ಬ್ಲಾಗ್ ಆಗಿದ್ದು, ಇದು ವಿಡಿಯೋ ವಿಷಯವನ್ನು ಒಳಗೊಂಡಿರುತ್ತದೆ. ನೀವು ನಿಮ್ಮ ವ್ಲಾಗ್ ಅನ್ನು ಸರಳವಾಗಿ ಪ್ರಾರಂಭಿಸಬಹುದು ಮತ್ತು ನೀವು ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿಮ್ಮ ವೀಕ್ಷಕರಿಗೆ ತೋರಿಸಬಹುದು ಅಥವಾ ಅವರು ಪ್ರಯತ್ನಿಸುವಂತೆ ಮಾಡಲು ಡಿಯ್ ಚಟುವಟಿಕೆಯನ್ನು ರಚಿಸಬಹುದು.

ಬಹಳಷ್ಟು ಜನ ವೃತ್ತಿಪರ ಬ್ಲಾಗರ್‌ಗಳು ತಮ್ಮ ವ್ಲಾಗ್‌ಗಳನ್ನು ಇದೇ ರೀತಿಯಲ್ಲಿ ಪ್ರಾರಂಭಿಸಿದ್ದಾರೆ. ತಮ್ಮ ಸ್ವಂತ ಮನೆಯಲ್ಲಿಯೇ ವಿಡಿಯೋಗಳನ್ನು ಮಾಡಲು ಶೂಟ್ ಮಾಡುವ ವ್ಲಾಗರ್‌ಗಳಲ್ಲಿ ಕೆಲವರೆಂದರೆ ಲಿಲ್ಲಿ ಸಿಂಗ್ ಎ.ಕೆ.ಎ ಸೂಪರ್ ಮಹಿಳೆ, ಶ್ರದ್ಧಾ ಶರ್ಮಾ, ತನ್ಮಯ್ ಭಟ್ ಆಗಿದ್ದಾರೆ. ಸುಪ್ರಸಿದ್ಧ ಯೂಟ್ಯೂಬ್ ಟ್ರಾವೆಲ್ ಮತ್ತು ಬ್ಯೂಟಿ ವ್ಲಾಗರ್ ಆಗಿರುವ ಶೆರೇಜಾಡೆ ಶ್ರಾಫ್ ವ್ಲಾಗಿಂಗ್ ಮೇಕಪ್ ಸಲಹೆಗಳ ಮೂಲಕ ಜನಪ್ರಿಯರಾಗಿದ್ದಾರೆ. ಆಕೆ ಡೆಲ್ ಫ್ಯೂಚರಿಸ್ಟ್ ಭಾಗವೂ ಆಗಿದ್ದಾರೆ; ಈ ಘಟನೆಯು ನಿಮ್ಮ ಹವ್ಯಾಸಗಳು ವೃತ್ತಿಯಾಗಿ ಮಾರ್ಪಟ್ಟಿರುವ ಕಥನವೇ ಆಗಿದೆ.

ಅವರ ವ್ಲಾಗ್‌ಗಳನ್ನು ವೀಕ್ಷಿಸುವುದು ನಿಮಗೆ ಪ್ರಾರಂಭಿಸಲು ಮತ್ತು ನಿಮ್ಮ ಸ್ವಂತ ಶೈಲಿಯನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ. ಎಲ್ಲಾ ಜನರ ಗುಂಪಿನಲ್ಲಿ ಸದಾ ಮುಂದಿರಲು ಉತ್ತಮ ಗುಣಮಟ್ಟದ ವ್ಲಾಗ್‌ಗಳನ್ನು ಉತ್ಪಾದಿಸಲು ಈ ಲೇಖನವು ಸಹಾಯಕವಾಗಲಿದೆ.

 4. ಛಾಯಾಗ್ರಹಣ

ಅನಲಾಗ್ ಮತ್ತು ಡಿಜಿಟಲ್ ನಡುವಿನ ಸಂಬಂಧವನ್ನು ವಿಸ್ತರಿಸಲು ನೀವು ಎದುರು ನೊಡುತ್ತಿದ್ದರೆ ಈ ಹವ್ಯಾಸವು ನಿಮಗೆ ಸೂಕ್ತವಾದುದಾಗಿದೆ! ಛಾಯಾಗ್ರಹಣಾವು ನಿಮ್ಮ ಕಂಗಳ ವೈಶಾಲ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಜೀವನದ ಅದ್ಭುತ ನೆನಪುಗಳಾನ್ನು ಸೆರೆಹಿಡಿಯುವುದು ಹೇಗೆ ಎಂಬುದನ್ನು ಕಲಿಸುತ್ತದೆ. ನೀವು ಒಮ್ಮೆ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಪರಿಣಿತರಾದರೆ ನೀವು ಈ ಮಾರ್ಗದರ್ಶನವನ್ನು ಫೋಟೊ-ಎಡಿಟಿಂಗ್ ಮಾಹಿತಿ ಎಂದು ಪರಿಗಣಿಸಿ ಮತ್ತು ನಿಮ್ಮದೇ ಆದ ಸ್ವಂತ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿ.

ಈ ಹೊಸ-ಯುಗದ ಹವ್ಯಾಸಗಳು ಅಗಾಧ ಸಾಧ್ಯತೆಗಳ ದ್ವಾರವನ್ನು ತೆರೆದಿವೆ. ನಿಮ್ಮ ಜೀವನ ಶೈಲಿ ಯಾವುದೇ ಇರಲಿ ನಿಮಗೆ ಜೀವನದಲ್ಲಿ ನಿಮ್ಮ ಯೋಜನೆಗಳಿಗಾಗಿ ಕಂಪ್ಯೂಟರ್ ಒಂದರ ಅಗತ್ಯವಿದೆ ಮತ್ತು ವಿಶ್ವಕ್ಕೆ ತೋರಿಸಲು ಅವುಗಳನ್ನು ಪ್ರದರ್ಶನ ಮಾಡಿರಿ.

ಹಾಗಾದರೆ ನೀವು ಯಾವುದನ್ನು ಆಯ್ಕೆ ಮಾಡಿಕೊಂಡಿರುವಿರಿ?