ನಿಮ್ಮ ಮಗುವಿನ ಹೋಮ್ವರ್ಕ್ ಮಾಡುವಲ್ಲಿ ಪಿಸಿ ಹೇಗೆ ನೆರವಾಗಬಲ್ಲದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ

 

 

ನಮ್ಮ ಸುತ್ತಲಿನ ಪ್ರಪಂಚವು ಡಿಜಿಟಲ್ ಆಗುತ್ತಲಿರುವಾಗ, ಪೇರೆಂಟಿಂಗ್ ಸಹ ಆಗುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಅದು ಸರಿ, 2018, ವಿಶೇಷವಾಗಿ ಶಿಕ್ಷಣದ ವಿಷಯಕ್ಕೆ ಬಂದಾಗ ಟೆಕ್-ಸ್ಯಾವ್ವಿ ಡಿಜಿಟಲ್ ಪೇರೆಂಟ್ ಆಗಿರುವುದರ ಅವಶ್ಯಕತೆಯನ್ನು ತನ್ನೊಂದಿಗೆ ತೆಗೆದುಕೊಂಡು ಬಂದಿದೆ.

1. ಪಿಸಿಗಳು ಸಂಶೋಧನೆಯನ್ನು ಚುರುಕಾಗಿಸುತ್ತವೆ

ಗುಣಮಟ್ಟದ ಅಸೈನ್ಮೆಂಟುಗಳ ಹಿಂದೆ ಗುಣಮಟ್ಟದ ಸಂಶೋಧನೆಯ ಬೆಂಬಲವಿರುತ್ತದೆ! Google Search, Google Scholar ಮತ್ತು Kiddle ಗಳಂಥ ಪಿಸಿ ಟೂಲ್ಗಳೊಂದಿಗೆ, ಸಂಶೋಧಿಸುವಿಕೆಯು ಹೆಚ್ಚು ವೇಗವನ್ನು ಪಡೆದುಕೊಂಡಿರುವುದಷ್ಟೇ ಅಲ್ಲದೇ ಹೆಚ್ಚು ಸುಲಭವೂ ಆಗಿದೆ! ಪ್ರತಿಯೊಂದು ವಿಷಯದ ಮೇಲೆ ಸಂಶೋಧನಾ ಲೇಖನಗಳು, ವರದಿಗಳು, ಹಾಗೂ ವಿದ್ವತ್ಪೂರ್ಣ ಲೇಖನಗಳ ರೂಪದಲ್ಲಿ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವುದರಿಂದ ಗೂಗಲ್ ಸ್ಕಾಲರ್ ನಿರ್ದಿಷ್ಟವಾಗಿ ಉಪಯುಕ್ತವಾಗಿದೆ.

2. ಪಿಸಿಗಳು ನಿಮ್ಮ ಮಗುವನ್ನು ಆರಂಭಿಸಲು ಉತ್ತೇಜಿಸುತ್ತವೆ

ಸಾಮಾನ್ಯವಾಗಿ ಮಕ್ಕಳು ಹೋಮ್ವರ್ಕ್ ಮಾಡಲು ಆರಂಭಿಸುವುದನ್ನು ಮುಂದೂಡುತ್ತಾರೆ ಹಾಗೂ ಸಮಯವನ್ನು ವ್ಯರ್ಥ ಮಾಡುತ್ತಾರೆ. ನಿರ್ದೇಶಿಸುವಿಕೆಯ ಕೊರತೆಯೇ ಈ ವಿಳಂಬದ ಮುಖ್ಯ ಕಾರಣವಾಗಿರುತ್ತದೆ. Templatelab ಗಳಂಥ ವೆಬ್ಸೈಟ್ಗಳು ಪ್ರಬಂಧಗಳಿಗಾಗಿ ಸಿದ್ಧವಾಗಿ ಲಭ್ಯವಿರುವ ಟೆಂಪ್ಲೇಟ್ಗಳನ್ನು ಒದಗಿಸುತ್ತವೆ ಹಾಗೂ ಈ ರೀತಿಯಲ್ಲಿ ನಿಮ್ಮ ಮಕ್ಕಳಿಗೆ ಒಂದು ವಿಶ್ವಾಸಾರ್ಹ ಆರಂಭಿಕ ಬಿಂದುವನ್ನು ಒದಗಿಸುತ್ತವೆ.

3. ಪಿಸಿಗಳು ವಿಷಯಗಳನ್ನು ಸಮ್ಮಿಳಿತಗೊಳಿಸಲು ನೆರವಾಗುತ್ತವೆ

ಪಿಸಿಯಲ್ಲಿ ವರ್ಡ್, ಪಿಪಿಟಿ, ಎಕ್ಸೆಲ್, ವಿಡಿಯೋ ಮುಂತಾಗಿ ಹಲವಾರು ನಮೂನೆಗಳು ಲಭ್ಯವಿರುತ್ತವೆ, ಹಾಗಾಗಿ ಬೇರೆ ಬೇರೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶವನ್ನು ನಿಮ್ಮ ಮಗುವು ಹೊಂದಿರುತ್ತದೆ. ಪ್ರಬಂಧಗಳಿಗೆ ವರ್ಡ್ ಹಾಗೂ ಲೆಕ್ಕಾಚಾರಗಳಿಗೆ ಎಕ್ಸೆಲ್ ಅತ್ಯುತ್ತಮವಾಗಿರುವಂತೆಯೇ, ನಿಮ್ಮ ಮಗುವಿನ ಪ್ರಸ್ತುತಪಡಿಸುವಿಕೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಪಿಪಿಟಿ ನೆರವಾಗುತ್ತದೆ.

4. ಪಿಸಿಗಳು ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಇರಿಸುತ್ತವೆ

ಪಿಸಿಯು ಪ್ರತಿಯೊಂದನ್ನೂ ಒಂದು ಸ್ಥಳದಲ್ಲಿ ಸಂಗ್ರಹಿಸಿಡಲು ನಿಮ್ಮ ಮಗುವನ್ನು ಸಶಕ್ತಗೊಳಿಸುತ್ತದೆ, ಇದರಲ್ಲಿ ಹುಡುಕಾಟವು ಶೀಘ್ರ ಹಾಗೂ ಸರಳವಾಗಿರುತ್ತದೆ. ದಾಖಲೆಗಳು, ವೆಬ್ಸೈಟ್ಗಳು, ಚಾರ್ಟ್ಗಳು ಮುಂತಾದವುಗಳಿಂದ ಪ್ರತಿಯೊಂದನ್ನೂ ಸಂಗ್ರಹಿಸಲು Calendar, Evernote ಮತ್ತು One Note ಗಳಂಥ ಸಂಪನ್ಮೂಲಗಳು ನೆರವಾಗುತ್ತವೆ – ಹಾಗಾಗಿ ಪರೀಕ್ಷಾ ಸಮಯದಲ್ಲಿ ನೀವು ಹುಡುಕುವುದರಲ್ಲಿಯೇ ಸಮಯವನ್ನು ವ್ಯರ್ಥ ಮಾಡಬೇಕಾಗುವುದಿಲ್ಲ.

5. ಪಿಸಿಗಳು ವಿಷಯ-ನಿರ್ದಿಷ್ಟ ಮಾರ್ಗದರ್ಶಿಗಳನ್ನು ಒದಗಿಸುತ್ತವೆ

ಪ್ರತಿಯೊಂದೂ ವಿಷಯಕ್ಕೆ ಸಂಬಂಧಿಸಿದಂತೆ, ಪದಗಳ ಉಚ್ಛಾರದಿಂದ ಹಿಡಿದು ಸಂಕೀರ್ಣ ವೈಜ್ಞಾನಿಕ ಸಿದ್ಧಾಂತಗಳವರೆಗೆ ಏನಾದರೂ ಒಂದು ಇದ್ದೇ ಇರುತ್ತದೆ – ಸರಿಯಾದ ಪಿಸಿ ಸಂಪನ್ಮೂಲಗಳಿಗಾಗಿ ನೀವು ಮತ್ತು ನಿಮ್ಮ ಮಗು ಹುಡುಕಬೇಕು ಅಷ್ಟೇ. ತಿಳಿದುಕೊಳ್ಳಲು ಸುಲಭವಾದ ನಮೂನೆಯಲ್ಲಿ ಶೈಕ್ಷಣಿಕ ವಿಡಿಯೋಗಳಿಗಾಗಿ ಹುಡುಕಲು YouTube ಒಂದು ಅತ್ಯುತ್ತಮ ಸ್ಥಳವಾಗಿದೆ.

6. ಪಿಸಿಗಳು ಹೆಚ್ಚು ಉತ್ತಮವಾಗಿ ಮಾಡಲು ನಿಮ್ಮ ಮಗುವನ್ನು ಪ್ರೇರೇಪಿಸುತ್ತವೆ

ಆ ದಿನದ ತಮ್ಮ ಹೋಮ್ವರ್ಕ್ ಅನ್ನು ಪೂರ್ಣಗೊಳಿಸುವಂತೆ ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸುವಲ್ಲಿಯೂ ಸಹ ಪಿಸಿಗಳು ಉಪಯುಕ್ತವಾಗಿರುತ್ತವೆ. ಆಟಗಳನ್ನು ಆಡಲು ಹೆಚ್ಚುವರಿ 15 ನಿಮಿಷಗಳೊಂದಿಗೆ ಪಿಸಿಯಲ್ಲಿ ಒಂದು ಗಂಟೆ ಅಧ್ಯಯನ ಮಾಡಲು ನಿಮ್ಮ ಮಗುವನ್ನು ಅನುಮತಿಸುವಿಕೆಯು ತನ್ನ ಎಲ್ಲ ಹೋಮ್ವರ್ಕ್ ಅನ್ನು ಆ ಒಂದು ಗಂಟೆಯಲ್ಲಿ ಭಂಗಗೊಳ್ಳದೇ ಮಾಡಲು ನಿಮ್ಮ ಮಗುವು ಅತ್ಯಂತ ಉತ್ತೇಜಿಸಲ್ಪಡುವುದನ್ನು ಖಚಿತಪಡಿಸುತ್ತದೆ.

ಸೂಕ್ತ ಸಾಧನಗಳು ಹಾಗೂ ಸಂಪನ್ಮೂಲಗಳು, ಹೋಮ್ವರ್ಕ್ ಅನ್ನು ಚಿಕ್ಕ ವಯಸ್ಸಿನಿಂದಲೇ ನಿಮ್ಮ ಮಗುವಿನ ಕಲಿಕಾ ಸಾಮರ್ಥ್ಯವನ್ನು ಅನಾವರಣಗೊಳಿಸುವಂಥ ಒಂದು ಚಟುವಟಿಕೆಯನ್ನಾಗಿ ಮಾಡುತ್ತವೆ. ಹ್ಯಾಪಿ ಹೋಮ್ವರ್ಕ್!