ಪ್ರತಿಯೊಬ್ಬ ವಿದ್ಯಾರ್ಥಿಗೆ ಒಬ್ಬ ಮೆಂಟಾರ್ನ ಆವಶ್ಯಕತೆ ಏಕೆ ಇರುತ್ತದೆ ಎನ್ನುವುದು ಇಲ್ಲಿದೆ

 

’’ನಿಮಗೆ ಹಾಲ್ ನಲ್ಲಿ ಎದುರಾಗುವ ಪ್ರತಿ ಮಗು ಕೇಳಿಸಿಕೊಳ್ಳಬೇಕಾಗಿರುವ ಕಥೆಯೊಂದನ್ನು ಹೊಂದಿರುತ್ತದೆ...ಪ್ರಾಯಶ: ಅದನ್ನು ಕೇಳಬೇಕಾದ ವ್ಯಕ್ತಿ ನೀವೇ ಅಗಿರಬಹುದು.’’

- ಬೆಥಾನಿ ಹಿಲ್

 

ಮೆಂಟಾರಿಂಗ್ ಎಂದರೆ ವೃತ್ತಿಪರ ಮತ್ತು ವೈಯಕ್ತಿಕ ವಿಕಾಸದ ಲಕ್ಷ್ಯವನ್ನು ಹೊಂದಿರುವ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವಾಗಿದೆ. ’’ಮೆಂಟಾರ್ ’’ ಸಾಮಾನ್ಯವಾಗಿ ತನ್ನ ತಿಳಿವಳಿಕೆ, ಅನುಭವ, ಮತ್ತು ಸಲಹೆಯನ್ನು ತನಗಿಂತ ಕಡಿಮೆ ಅನುಭವ ಹೊಂದಿರುವ ವ್ಯಕ್ತಿ ಅಥವಾ ’’ಮೆಂಟೀ‘‘ ಯೊಂದಿಗೆ ಹಂಚಿಕೊಳ್ಳುವ ಒಬ್ಬ ಅನುಭವೀ ವ್ಯಕ್ತಿಯಾಗಿರುತ್ತಾನೆ/ಳೆ.

ನೀವು ಒಬ್ಬ ಮೆಂಟಾರ್ ರನ್ನು ಪಡೆಯುವುದನ್ನು ಯಾಕೆ ಪರಿಗಣಿಸಬೇಕುಎನ್ನುವುದಕ್ಕೆ ಮೂರು ಕಾರಣಗಳು:

 

1. ಮೆಂಟರ್ ರು ಪ್ರೋತ್ಸಾಹ ನೀಡುತ್ತಾರೆ ಮತ್ತು ನಮಗೆ ಮುಂದೆ ಸಾಗುವುದಕ್ಕೆ ಸಹಾಯ ಮಾಡುತ್ತಾರೆ

’’ಮೆಂಟಾರಿಂಗ್ ಎನ್ನುವುದು ಗ್ರಹಿಸಿಕೊಳ್ಳಲು ಮೆದುಳು, ಆಲಿಸಲು ಕಿವಿ ಮತ್ತು ಸರಿಯಾದ ದಿಕ್ಕಿನತ್ತ ಒಂದು ಪ್ರೇರಣೆ.’’

- ಜಾನ್ ಕ್ರಾಸ್ಬಿ

ಒಬ್ಬ ಉತ್ತಮ ಮೆಂಟಾರ್ ನಿಮ್ಮ ಸಾಮರ್ಥ್ಯಗಳ ಆಧಾರದ ಮೇಲೆ ಕೌಶಲಗಳನ್ನು ಬಲಪಡಿಸಲು ಪ್ರೋತ್ಸಾಹಿಸಿ ನಿಮ್ಮನ್ನು ನಿಮ್ಮ ಆರಾಮ ವಲಯದಿಂದ ಹೊರತೆಗೆಯುತ್ತಾರೆ, ನಿಮ್ಮ ದೌರ್ಬಲ್ಯಗಳ ನಿವಾರಣೋಪಾಯದತ್ತ ಲಕ್ಷ್ಯ ಹರಿಸುತ್ತಾರೆ ಮತ್ತು ನೀವು ನಿಮ್ಮ ಸ್ವಂತ ವ್ಯಕ್ತಿತ್ವದ ಅತ್ಯುನ್ನತ ಆವೃತ್ತಿಯ ಎತ್ತರಕ್ಕೆ ಏರುವುದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುವಂತೆ ಮಾಡುತ್ತಾರೆ.

 

2. ಮೆಂಟಾರ್ ರು ಅನುಭವಗಳನ್ನು ಹೊಂದಿರುತ್ತಾರೆ , ಅವೇ ತಪ್ಪುಗಳನ್ನು ಮಾಡುವುದನ್ನು ತಡೆಯುವ ಸಲುವಾಗಿ ನೀವು ಅವುಗಳಿಂದ ಕಲಿತುಕೊಳ್ಳಬಹುದು

‘‘ಓರ್ವ ಮೆಂಟಾರ್ ನೀವು ನಿಮ್ಮೊಳಗೆ ಕಾಣುವುದಕ್ಕಿಂತಲೂ ಅಧಿಕ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನೋಡಬಲ್ಲ ಮತ್ತು ಅವುಗಳನ್ನು ನಿಮ್ಮಿಂದ ಹೊರಗೆ ತರಲು ಸಹಾಯ ಮಾಡುವ ವ್ಯಕ್ತಿಯಾಗಿರುತ್ತಾರೆ.‘‘

- ಬಾಬ್ ಪ್ರೊಕ್ಟರ್

ಒಬ್ಬ ಮೆಂಟಾರ್ ನಿಮ್ಮೊಂದಿಗೆ ಇದ್ದಿರುತ್ತಾರೆ ,ತನ್ನ ಕೆಲಸವನ್ನು ಮುಗಿಸಿಯೂ ಬಿಟ್ಟರುತ್ತಾರೆ.. ಇನ್ನೀಗ ನಿಮ್ಮ ಮೆಂಟಾರ್ ಮುಂದಕ್ಕೆ ನಿಮಗೆ ರಚನಾತ್ಮಕ ಮರುವಾಹಿತಿಯನ್ನು ನೀಡಬಹುದು ಮತ್ತು ನಿಮ್ಮನ್ನು ಯಶಸ್ಸಿನ ಮುನ್ನಡೆಯತ್ತ ತೊಡಗಿಸಿಕೊಳ್ಳಲು ಒಂದು ಕ್ರಿಯಾಯೋಜನೆಯನ್ನು ರೂಪಿಸಲು ನಿಮಗೆ ಸಹಾಯ ಮಾಡಬಹುದು.ಉದಾಹರಣೆಗಾಗಿ , ನೀವು ಒಂದು ಇಂಗ್ಲಿಷ್ ಪ್ರಬಂಧಕ್ಕಾಗಿ ಗ್ರಾಮರ್ ನ ಸಮಸ್ಯೆಯಲ್ಲಿ ಸಿಲುಕಿಕೊಂಡು ಪ್ರಯಾಸ ಪಡುತ್ತಿದ್ದರೆ ನಿಮ್ಮ ಮೆಂಟರ್ ನಿಮಗೆ ಆವಶ್ಯಕವಿರುವ ಸಹಾಯ ಸಿಗುಅವ ಸಲುವಾಗಿ ಗ್ರಾಮರ್ ಲೀ ಅಥವಾ ಗ್ರಾಮರಿಕ್ಸ್ ನಂತಹ ಪಿಸಿ ಟೂಲ್ ಅನ್ನು ಶಿಫಾರಸು ಮಾಡುತ್ತಾರೆ.

 

3. ಮೆಂಟಾರ್ ರು ವ್ಯಕ್ತೀಕೃತ ಗುರಿ ನಿರ್ಧರಿಸುವಿಕೆಗಳನ್ನು ಒದಗಿಸುತ್ತಾರೆ

’’ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುತ್ತದೆ , ಹಾಗೆಯೇ ಒಬ್ಬ ವ್ಯಕ್ತಿ ಇನೊಬ್ಬನನ್ನು.‘‘

- ಬೈಬಲ್

ಹೆಜ್ಜೆ 1 - ನಿಮಗಾಗಿ ಗುರಿ ನಿರ್ಧಾರ

ಹೆಜ್ಜೆ 2 - ಒಂದು ಕ್ರಿಯಾ ಯೋಜನೆಯ ರಚನೆ

ಹೆಜ್ಜೆ 3 - ಕಾರ್ಯವನ್ನು ಪ್ರಾರಂಭಿಸುವುದು

ಹೆಜ್ಜೆ 4 - ಉದ್ದಕ್ಕೂ ಸರಿಹೊಂದಿಸಿರಿ

ಹೆಜ್ಜೆ 5 - ನಿಮ್ಮ ತಪ್ಪುಗಳಿಂದ ಕಲಿತುಕೊಳ್ಳಿರಿ

ಹೆಜ್ಜೆ 6 - ಪುನರಾವರ್ತಿಸಿರಿ.

ಗುರಿ ನಿರ್ಧಾರವು ಯಶಸ್ವೀ ಮೆಂಟಾರಿಂಗ್ ನ ಬುನಾದಿಯಾಗಿದೆ. ಅದನ್ನೊಮ್ಮೆ ಸರಿಯಾಗಿ ಕಂಡುಕೊಂಡಿರೆಂದರೆ, ನೀವು ನಿಮ್ಮ ಮೆಂಟಾರ್ ಗಿರಿಯನ್ನು ಅತ್ಯುತ್ತಮವಾಗಿ ನಿಭಾಯಿಸುವ ಮಾರ್ಗದಲ್ಲೀದ್ದೀರಿ ಎಂದು ಅರ್ಥ.

ಮೆಂಟಾರ್ ರ ಮಾರ್ಗದರ್ಶನಕ್ಕೆ ಒಳಪಡುವುದರಿಂದ, ಉತ್ಪಾದಕತೆಯು ಕೇವಲ ಪರೀಕ್ಷೆಯ ಮೊದಲು ಒಂದು ದಿನಕ್ಕಷ್ಟೇ ಸೀಮಿತವಾಗುವುದಿಲ್ಲ- ಅದು ನಿಮಗೆ ಸ್ವಾಭಾವಿಕವಾಗಿ ಬರುವ ಒಂದು ಅಭ್ಯಾಸದ ರೂಪದಲ್ಲಿ ನಿಮ್ಮ ಒಂದು ಭಾಗವೇ ಆಗಿಬಿಡುತ್ತದೆ. ಅಂತಿಮವಾಗಿ, ಶಾಲೆಯ ಕ್ಷೇತ್ರದಲ್ಲಿ ಶ್ರೇಷ್ಠ ಸ್ಥಾನ ಹೊಂದುವುದನ್ನು ಯಾರು ಬಯಸುವುದಿಲ್ಲ!