ಮನೆಗೆಲಸವನ್ನಂತೂ ನೀವು ಮಾಡಲೇಬೇಕು, ಇದಕ್ಕಾಗಿ ನಿಮಗೆ ನೆರವಾಗುವ 7 PC ಸಂಪನ್ಮೂಲಗಳು ಇಲ್ಲಿವೆ

 

ಮನೆಗೆಲಸಗಳಲ್ಲಿ ಎರಡು ಪ್ರಕಾರಗಳಿವೆ – ನೀವು ಮಾಡಬೇಕಾದಂಥವು ಮತ್ತು ನೀವು ಮಾಡಲುಬಯಸುವಂಥವು. ಈ ಚಿತ್ರಣಕ್ಕೆ ನೀವು ಒಂದು PC ಯನ್ನು ಸೇರಿಸಿದಲ್ಲಿ, ಮನೆಗೆಲಸವು ನೀವು ಮಾಡಲುಬಯಸುವಂಥ ಕೆಲಸವಾಗಿಬಿಡುತ್ತದೆ. ಈ PC ಸಂಪನ್ಮೂಲಗಳೊಂದಿಗೆ, ಅಧ್ಯಯನ ಮಾಡುವುದು ಸಾಮಾನ್ಯಕ್ಕಿಂತ ಹೆಚ್ಚು ಆಸಕ್ತಿಕರವಾಗುತ್ತದೆ.

1. ಸರಿಯಾದ ವಾಸ್ತವಾಂಶಗಳನ್ನು ತಿಳಿದುಕೊಳ್ಳಿ

ವಿಜ್ಞಾನದ ವಿಷಯಗಳಿಂದ ಹಿಡಿದು ಸಾಮಾಜಿಕ ಅಧ್ಯಯನಗಳವರೆಗಿನ ಕ್ಷಿಪ್ರ ವಾಸ್ತವಾಂಶ – ಪರಿಶೀಲನೆಗಾಗಿನ ತಕ್ಷಣದ ನೆರವಿಗಾಗಿ ಫ್ಯಾಕ್ಟ್ ಮಾನ್ಸ್ಟರ್ನ ಬಳಸಲು ಸುಲಭವಾದ ಸರ್ಚ್ ಬಾಕ್ಸ್ ಅನ್ನು ಉಲ್ಲೇಖಿಸಿ.

2. ಡಿಜಿಟಲ್ ಪಠ್ಯಪುಸ್ತಕಗಳೊಂದಿಗೆ ಹುಡುಕಾಟದ ವೇಗವನ್ನು ವರ್ಧಿಸಿ

ನಿಮ್ಮ ಪಠ್ಯಪುಸ್ತಕವನ್ನು ಶಾಲೆಯಲ್ಲಿ ಬಿಟ್ಟುಬಂದಿದ್ದೀರಾ ಅಥವಾ ತಾತ್ಕಾಲಿಕವಾಗಿ ಒಂದು ಪಠ್ಯಪುಸ್ತಕ ಬೇಕಾಗಿದೆಯೇ? Ck12 ಇದು ಹಲವಾರು ವಿಷಯಗಳ ಮೇಲಿನ ಸಾವಿರಾರು ಪಠ್ಯಪುಸ್ತಕಗಳಿಗೆ ಉಚಿತ ಪ್ರವೇಶಾವಕಾಶ ನೀಡುವ ಏಕೈಕ ಸಂಪನ್ಮೂಲವಾಗಿದೆ.

3. ಒಂದೇ ಸ್ಥಳದಿಂದ ವೀಕ್ಷಿಸಿ ಮತ್ತು ಕಲಿತುಕೊಳ್ಳಿ

ಒಂದು ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲವೇ? ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಸಂಪನ್ಮೂಲಗಳನ್ನು ಕಂಡುಕೊಳ್ಳಲು ಯೂಟ್ಯೂಬ್ ಒಂದು ಶ್ರೇಷ್ಠವಾದ ಆರಂಭಿಕ ತಾಣವಾಗಿದೆ.

4. ನೀವು ಓದುತ್ತಿರುವ ವಿಷಯವನ್ನು ವರ್ಚುವಲ್ ಆಗಿ ಅನ್ವೇಷಿಸಿ

ಗೂಗಲ್ ಆರ್ಟ್ಸ್ & ಕಲ್ಚರ್ ಎಂಬುದು ಈ ಹಿಂದೆ ನಡೆದವುಗಳಲ್ಲಿಯೇ ತುಂಬಾ ಗಮನಾರ್ಹವಾದ ಸಂಗತಿಯಾಗಿದ್ದು ವರ್ಚುವಲ್ ಅನ್ವೇಷಣೆಯೊಂದಿಗೆ ದೃಶ್ಯೀಕರಿಸಿಕೊಳ್ಳಬಹುದಾದ ಅವಕಾಶದೊಂದಿಗೆ ಕತೆಗಳಿಂದ ಸರಳೀಕರಿಸಲ್ಪಟ್ಟಿದೆ.

5. ಸರಳೀಕರಿಸಿದ ಇಂಗ್ಲೀಷ್ ಸಾಹಿತ್ಯ

ಶೇಕ್ಸ್ಪೀಯರ್ನ ಸಾಹಿತ್ಯವನ್ನು ಇಂದಿನ ದಿನದ ಇಂಗ್ಲೀಷ್ ಭಾಷೆಯಲ್ಲಿ ಓದಲು, ಶ್ರೇಷ್ಠ ಗ್ರಂಥಗಳ ಗೂಢಾರ್ಥಗಳನ್ನು ತಿಳಿದುಕೊಳ್ಳಲು ಮತ್ತು ವ್ಯಾಕರಣದ ನಿಯಮಗಳನ್ನು ಪುನರ್ಮನನ ಮಾಡಿಕೊಳ್ಳಲು Shmoop ಎಂಬುದು ನೀವು ಭೇಟಿ ಮಾಡಬೇಕಾದ ತಾಣವಾಗಿದೆ.

6. ನಿಮಗೆ ಬೇಕಾಗುವ ಗಣಿತವನ್ನು ಪ್ರ್ಯಾಕ್ಟೀಸ್ ಮಾಡಿ

ಹಂತಹಂತದ ಮಾರ್ಗದರ್ಶನದೊಂದಿಗೆ, ಸಮಸ್ಯೆಗಳನ್ನು ಬಿಡಿಸುವುದನ್ನು ಪ್ರ್ಯಾಕ್ಟೀಸ್ ಮಾಡಿ, ನಿಮ್ಮ ತಿಳುವಳಿಕೆಯಲ್ಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು Scmoop’s Math Shack ಒಂದು ದೊಡ್ಡ ಸಂಪನ್ಮೂಲವಾಗಿದೆ.

7. ಆವರ್ತಕ ಕೋಷ್ಟಕದಲ್ಲಿ ವೃತ್ತಿಪರರಾಗಿಬಿಡಿ

ಸುಲಭ ಉಲ್ಲೇಖಕ್ಕಾಗಿ ಆವರ್ತಕ ಕೋಷ್ಟಕದ ಎಲ್ಲ ರಸಾಯನಿಕಗಳ ಅನ್ವೇಷಣೆಯ ಕತೆಗಳನ್ನೂ ಒಳಗೊಂಡಂತೆ ಚಿಹ್ನೆಗಳು, ಪರಮಾಣು ಸಂಖ್ಯೆಗಳು ಹಾಗೂ ವಾಸ್ತವಿಕ ಜೀವನದ ಬಳಕೆಗಳನ್ನು Ptable ಹೊಂದಿದೆ.

ನಿಮ್ಮ PC ಯಿಂದ ಅತ್ಯುತ್ತಮ ಉಪಯೋಗವನ್ನು ತೆಗೆದುಕೊಳ್ಳುವಂತೆ ಸಂಪನ್ಮೂಲಗಳನ್ನು ಸಂಶೋಧಿಸಿ, ಅವುಗಳನ್ನು ಪ್ರಯತ್ನಿಸಿ ನೋಡಿ, ಸಲಹೆ ಸೂಚನೆಗಳಿಗಾಗಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಕೇಳುವುದಕ್ಕಾಗಿ ಸ್ವಲ್ಪ ಸಮಯವನ್ನು ಕಳೆಯುವುದು ಯಾವಾಗಲೂ ಉಪಯುಕ್ತವಾಗಿರುತ್ತದೆ. ಏನಿಲ್ಲವೆಂದರೂ, ಒಬ್ಬ ವಿದ್ಯಾರ್ಥಿಯಾಗಿ ನಿಮ್ಮ ಗುರಿಯು ಹೆಚ್ಚು ಉತ್ತಮವಾಗುವುದಾಗಿರುತ್ತದೆ ಹಾಗೂ ಈ ಪ್ರಯತ್ನಿಸಲ್ಪಟ್ಟ ಹಾಗೂ ಪರೀಕ್ಷಿಸಲ್ಪಟ್ಟ ಸಲಹೆಗಳನ್ನು ಗಮನದಲ್ಲಿರಿಸಿಕೊಳ್ಳುವ ಮೂಲಕ, ನೀವು ಯಶಸ್ಸನ್ನು ಸಾಧಿಸುವುದು ಖಂಡಿತ!