ನಿಮ್ಮ ಮಗುವು ಪಿಸಿ ಆಧಾರಿತ ಕಲಿಕೆಯಿಂದ ಯಾವ ರೀತಿಯಲ್ಲಿ ಪ್ರಯೋಜನವನ್ನು ಪಡೆಯಬಹುದು

“ನಾವು ಶ್ರದ್ಧೆಯಿಂದ ಏನನ್ನು ಕಲಿಯುತ್ತೇವೆಯೋ ಅದನ್ನು ನಾವು ಮರೆಯುವುದಿಲ್ಲ.” – ಆಲ್ಫ್ರೆಡ್ ಮರ್ಸೀಯರ್

ಪರ್ಸನಲ್ ಕಂಪ್ಯೂಟರ್‌ಗಳು ನಾವು ಕೆಲಸ ಮಾಡುವ ವಿಧಾನವನ್ನೇ ಬದಲಾಯಿಸಿವೆ, ನಾವು ಏನು ಮಾಡುತ್ತೇವೆಯೋ ಅದನ್ನು ಮತ್ತು ನಮ್ಮ ಕಲಿಕೆಯ ವಿಧಾನವನ್ನು ಸಹ ಬದಲಾಯಿಸಿಕೊಂಡಿದ್ದೇವೆ. ಪ್ರತಿಯೊಂದು ಕಛೇರಿಗೂ ಸಹ ಭದ್ರವಾದ ಅಡಿಪಾಯವನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ, ಇಂದು ಶಾಲೆಗಳು ಕಂಪ್ಯೂಟರ್‌ಗಳನ್ನು ಶಿಕ್ಷಣದ ಆಂತರಿಕ ಸಾಧನವನ್ನಾಗಿ ಅಳವಡಿಸಿಕೊಂಡಿವೆ. ಕಲಿಕೆಯಲ್ಲಿ ಪಿಸಿಯನ್ನು ಬಳಸುವುದರಿಂದ ಸಾಂಪ್ರದಾಯಿಕ ಕಲಿಕಾ ವಿಧಾನಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತವೆ ಆ ಪ್ರಯೋಜನಗಳೆಂದರೆ ಆಂತರಿಕ ಸೃಜನಶೀಲತೆ, ಅನುಕರಣೆಗಳು, ಸಂಪನ್ಮೂಲಗಳ ವ್ಯಾಪಕ ಬಳಕೆ ಮತ್ತು ವಿಷಯ ವಸ್ತುವನ್ನು ಆಳವಾಗಿ ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಇದು ಕಲಿಕೆಯ ಸಾಧನವಾಗಿ ಅಳೆಯಲಾರದಷ್ಟು ಪ್ರಮಾಣದಲ್ಲಿ ಮೌಲ್ಯವನ್ನು ಒದಗಿಸುತ್ತದೆ, ಇದು ಕೇವಲ ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲಿಯೂ ಸಹ ಮೌಲ್ಯವನ್ನು ಒದಗಿಸುತ್ತದೆ.

1. ಸಂಪನ್ಮೂಲಗಳು

ಪಿಸಿ ಆಧಾರಿತ ಕಲಿಕೆಯಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳು ಒದಗಿಸುವ ಸೀಮಿತ ಕಲಿಕೆಯನ್ನು ಒದಗಿಸುತ್ತಿಲ್ಲ. ಶಾಲೆಯ ಕಂಪ್ಯೂಟರ್‌ಗಳು ಸುಲಭವಾದ ಕಲಿಕೆಗೆ ವ್ಯಾಪಕ ಶ್ರೇಣಿಯ ಶೈಕ್ಷಣಿಕ ಸಾಫ್ಟ್ ವೇರ್ ಮತ್ತು ಕಲಿಕೆಯ ಕಾರ್ಯಕ್ರಮಗಳನ್ನು ಒದಗಿಸುತ್ತವೆ. ಅದರ ಜೊತೆಯಲ್ಲಿ, ಇಂಟರ್‌ನೆಟ್ ಬಳಕೆಯು ವಿದ್ಯಾರ್ಥಿಗಳಿಗೆ ಕಲಿಕೆಯ ಸಾಧನಗಳ ಅಗಾಧ ನೆಟ್‌ವರ್ಕ್ ಅನ್ನು ಶಾಲೆಯಲ್ಲಿಯೂ ಅದೇ ರೀತಿಯಲ್ಲಿ ಮನೆಯಲ್ಲಿಯೂ ಕೂಡ ಉಪಯೋಗಿಸುವ ಸೌಲಭ್ಯವನ್ನು ಅವರಿಗೆ ಒದಗಿಸುತ್ತದೆ.

2. ಸರಳ ಪುನರಾವಲೋಕನ ಸಾಧ್ಯಗೊಳಿಸಿದೆ

ಕಲಿಕೆಯಲ್ಲಿ ಕಂಪ್ಯೂಟರ್‌ಗಳನ್ನು ಉಪಯೋಗಿಸುವಾಗ ವಿದ್ಯಾರ್ಥಿಗಳಿಗೆ ಪಾಠಗಳನ್ನು ಕಲಿಯಲು ಮತ್ತು ಪುನರಾವಲೋಕನ ಮಾಡಲು ಮಾತ್ರ ನಿರ್ಬಂಧ ವಿಧಿಸುವುದಿಲ್ಲ, ಆದರೆ ಪಾಠಗಳ ಪರಿಕಲ್ಪನೆಯನ್ನು ಅತ್ಯಂತ ಆಳವಾಗಿ ಅರ್ಥಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಡುತ್ತದೆ. ಇದರ ಅರ್ಥವೇನೆಂದರೆ ಕೇಂದ್ರೀಯ ಪರಿಕಲ್ಪನೆಗಳನ್ನು ಮತ್ತು ಪಾಠಗಳನ್ನು ಅತ್ಯಂತ ಸುಲಭವಾಗಿ ಪುನರಾವಲೋಕನ ಮಾಡಬಹುದು ಮತ್ತು ಪುನರ್-ಮನನ ಮಾಡಬಹುದು ಎಂದರ್ಥ.

3. ಸುರಕ್ಷತೆ

ಅನುಕರಿಸುವ ಕ್ರಮವು ವಿದ್ಯಾರ್ಥಿಗಳನ್ನು ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುವಾಗ ಅವರಿಗೆ ತಮ್ಮ ಕುರ್ಚಿಯಲ್ಲಿಯೇ ಸುರಕ್ಷಿತೆಯ ಆರಾಮವನ್ನು ಒದಗಿಸುತ್ತದೆ. ಉದಾಹರಣೆಗೆ, ಅವರು ನೈಜ ಪ್ರಯೋಗಗಳನ್ನು ನಡೆಸುತ್ತಾರೆ ಮತ್ತು ರಾಸಾಯನಿಕಗಳು ಪರಸ್ಪರ ಹೇಗೆ ವರ್ತಿಸುತ್ತವೆ ಎಂಬುದನ್ನು ನೋಡುತ್ತಾರೆ. ಇದಷ್ಟೇ ಅಲ್ಲ, ಅನುಕರಣೆಯು ವಿದ್ಯಾರ್ಥಿಗಳಿಗೆ ನೈಜ ಪ್ರಯೋಗಗಳನ್ನು ಪದೇ ಪದೇ ಮಾಡುವ ಮೂಲಕ ಅವರಿಗೆ ವಿಷಯವನ್ನು ಅರ್ಥಮಾದಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶವನ್ನು ಒದಗಿಸುತ್ತದೆ.

4. ಆಳವಾದ ಅಧ್ಯಯನ

ಸಂಶೋಧನೆಯ ಪ್ರಕಾರ ಪಿಸಿ ಆಧಾರಿತ ಕಲಿಕೆಯು ಆಳವಾದ ಅಧ್ಯಯನದ ಸೌಲಭ್ಯವನ್ನು ಒದಗಿಸುತ್ತದೆ ಆದುದರಿಂದ ಆ ವಿದ್ಯಾರ್ಥಿಗಳು ಪರಿಕಲ್ಪನೆ ಮತ್ತು ಯೋಜನೆಗಳಲ್ಲಿ ಪರಿಣತಿಯನ್ನು ಹೊಂದುತ್ತಾರೆ. ಅವರು ಈ ಪಾಠಗಳನ್ನು ಉಪಯೋಗಿಸಿಕೊಳ್ಳಬಹುದು ಮತ್ತು ಅಭಿಮುಖ ಮತ್ತು ವಿಮುಖ ಯೋಚನೆಯ ಕೌಶಲ್ಯಗಳೆರಡರಲ್ಲಿಯೂ ಪ್ರಾತ್ಯಕ್ಷತೆಯನ್ನು ಮಾಡುವ ಮೂಲಕ ತಮ್ಮ ಪರಿಸರದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬಹುದು.[1]

ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕಂಪ್ಯೂಟರ್‌ಗಳನ್ನು ಉಪಯೋಗಿಸುವುದು ಮಕ್ಕಳಿಗೆ ನೀಡಲಾಗುವ ಅತ್ಯುತ್ತಮವಾದ ಕಲಿಕೆಯ ಸಾಧನವಾಗಿದೆ. ಈ ಮೇಲ್ಕಂಡ ಎಲ್ಲಾ ಪ್ರಯೋಜನಗಳನ್ನು ಒದಗಿಸುವುದರ ಜೊತೆಯಲ್ಲಿ ಇವುಗಳು ಮಾಹಿತಿಯ ವಿಶ್ವದ ಆಗರವಾಗಿವೆ. ಇವುಗಳನ್ನು ಮಕ್ಕಳು ಕಲಿಯಲು ಸಹಾಯಕವಾಗುವಂತೆ ಸೃಜನಶೀಲತೆಯ ಕಲಿಕೆಯ ಸೌಲಭ್ಯವನ್ನು ಒದಗಿಸಲು ಕೂಡ ಉಪಯೋಗಿಸಲಾಗುತ್ತದೆ.[2]

ಇಂದೇ ಪಿಸಿಯನ್ನು ಮನೆಗೆ ತನ್ನಿರಿ ಮತ್ತು ಕಲಿಕೆಯ ಹೊಸ ಅಲೆಯಾದ ಆರಂಭ್ ಅನ್ನು ಅನುಸರಿಸಿ.