ತಂತ್ರಜ್ಞಾನವು ಆಧುನಿಕ ಪೋಷಕರನ್ನು ಹೇಗೆ ಬದಲಾಯಿಸಿದೆ

ಸಾಂಕ್ರಾಮಿಕದಿಂದ ಪ್ರಚೋದಿತ ಆಧುನಿಕ ಶಿಕ್ಷಣದ ವಿಧಾನಗಳಿಗೂ ಹಿಂದಿನ ವರ್ಷಗಳ ವಾಸ್ತವಕ್ಕೂ ತುಂಬಾ ಅಂತರವಿದೆ. ಅನೇಕ ವಿಷಯಗಳ ಕುರಿತು ನೀತಿ ನಿಯಮಗಳನ್ನು ಪರಿಷ್ಕರಿಸಿರುವ ಈ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಯ ವಿಷಯದಲ್ಲಿ ಅನೇಕ ವಿಷಯಗಳನ್ನು ಚಾಣಾಕ್ಷತೆಯಿಂದ ನಿಭಾಯಿಸಬೇಕಾಗುತ್ತದೆ.

ಹಿಂದಿನ ದಿನಗಳಿಗಿಂತ ಭಿನ್ನವಾಗಿ, ಈ ದಿನಗಳಲ್ಲಿ ಆಧುನಿಕ ಪೋಷಕರು ಶಾಲಾ ಶಿಕ್ಷಕರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾರೆ, ಈ ಸಮಯದಲ್ಲಿ ತಂತ್ರಜ್ಞಾನವು ಬೆಂಬಲ ನೀಡುತ್ತದೆ ಮತ್ತು ಅಂತರವನ್ನು ಕಡಿಮೆ ಮಾಡುತ್ತದೆ.

1. ಅಪ್ಲಿಕೇಶನ್ ಗಳ ಮೂಲಕ ಶಿಕ್ಷಣವನ್ನು ಸಕ್ರಿಯಗೊಳಿಸುವುದು: ಆಫ್ ಲೈನ್ ನಿಂದ ಆನ್ ಲೈನ್ ತರಗತಿ ಕೊಠಡಿಗಳಿಗೆ ಪರಿವರ್ತನೆಯನ್ನು ಸುಗಮವಾಗಿಸಲು, ಕಷ್ಟಕರವಾದ ಹೋಮ್ ವರ್ಕ್ ಪ್ರಶ್ನೆಗಳನ್ನು ನಿಭಾಯಿಸಲು, ಪೋಷಕರು ವಿಭಿನ್ನ ಅಪ್ಲಿಕೇಶನ್ ಗಳು ಮತ್ತು  ಶೈಕ್ಷಣಿಕ ಸಾಧನಗಳೊಂದಿಗೆ ಅನನ್ಯ ಕಲಿಕೆಯ ಕಾರ್ಯಕ್ರಮಗಳುಳ್ಳ ಖಾನ್ ಅಕಾಡೆಮಿ ಕಿಡ್ಸ್ ಮತ್ತು ಬ್ರೈನ್ ಲಿಗಳನ್ನು ಪ್ರಯತ್ನಿಸುತ್ತಿದ್ದಾರೆ.

2. ಕಲಿಕೆಯನ್ನು ವಿನೋದಮಯವಾಗಿಸುವುದು: ಗುಣಮಟ್ಟದ ಆಡಿಯೊ ವಿಷಯದ ಬಗೆಗಿನ ಅದರ ಬೃಹತ್ ಭಂಡಾರಕ್ಕಾಗಿ ಕಿಂಡರ್ಲಿಂಗ್ ಕಿಡ್ಸ್ ರೇಡಿಯೊದಂತಹ ಅಪ್ಲಿಕೇಶನ್ ಗಳು ಲಭ್ಯವಿವೆ. ಚಿಕ್ಕ ಮಕ್ಕಳಿಗೆ ಸ್ಪ್ಯಾನಿಷ್ ಅನ್ನು ಪರಿಚಯಿಸಲು ಫ್ಯಾಬ್ಲಿಂಗುವಾ, ಮುಂತಾದುವುಗಳ ಜೊತೆಗೆ ಥಿಂಕ್ರೋಲ್ಸ್ ಪ್ಲೇ ಮತ್ತು ಕೋಡ್ ಸಣ್ಣ ಮಕ್ಕಳಲ್ಲಿ ಸಮಸ್ಯೆ ಪರಿಹಾರದ ಕಲಿಕೆಯನ್ನು ಪೋಷಿಸುತ್ತದೆ ಮತ್ತು ಇವು ಕಲಿಕೆಯ ಅವಧಿಯಲ್ಲಿ ಪೋಷಕರು ಮತ್ತು ಮಕ್ಕಳು ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

3. ಪೋಷಕರ ನಿಯಂತ್ರಣಗಳ ಬಳಕೆ/ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ: ಮಕ್ಕಳು ತಮ್ಮ ಗೆಳೆಯರೊಂದಿಗೆ ಸಂವಹನ ನಡೆಸುವ ವಿಧಾನವನ್ನು ತಂತ್ರಜ್ಞಾನವು ಬದಲಾಯಿಸಿದೆ. ಕುಸ್ಟೋಡಿಯೋ, ಕ್ಯಾಸ್ಪರ್ ಸ್ಕೈ ಸೇಫ್ ಕಿಡ್ಸ್ ಇತ್ಯಾದಿ ಪೋಷಕ ನಿಯಂತ್ರಣಗಳನ್ನು ಬಳಸಿಕೊಂಡು ಸುರಕ್ಷಿತ ಬ್ರೌಸಿಂಗ್ ನಡವಳಿಕೆಯ ಪ್ರಾಮುಖ್ಯತೆಯನ್ನು ಹುಟ್ಟುಹಾಕುವುದು ಪೋಷಕರಿಗೆ ಈಗ ಅತ್ಯಗತ್ಯವಾಗಿದೆ. ಆನ್ ಲೈನ್ ರಕ್ಷಣೆ ಮತ್ತು ಗೌಪ್ಯತೆಯ ಮಹತ್ವವನ್ನು ಅವರಿಗೆ ಕಲಿಸುವುದು ಮತ್ತು ಡಿಜಿಟಲ್ ಪೌರತ್ವ ಎಂದರೇನು ಎಂದು ಅವರಿಗೆ ಅರ್ಥಮಾಡಿಸುವುದರಿಂದ ಅವರಿಗೆ ಇಂಟರ್ನೆಟ್ ನ ನಿಜವಾದ ಶಕ್ತಿಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಬಹುದು.

ಶಿಕ್ಷಣದಲ್ಲಿ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವುದು ಇಂದಿನ ಪಾಲಕರ ಅಗತ್ಯವಾಗಿದೆ. ಸೂಕ್ತವಾದ ತಂತ್ರಗಳೊಂದಿಗೆ ಸುಸಜ್ಜಿತವಾಗಿ, ಪೋಷಕರು ತಮ್ಮ ಮಗುವಿನ ಕಲಿಕೆಯ ವಾತಾವರಣವನ್ನು ವಿನೋದಮಯ, ಸುರಕ್ಷಿತ ಮತ್ತು ಉತ್ಪಾದಕವಾಗಿಸಬಹುದು. ಹೆಚ್ಚಿನ ಕಲಿಕೆಯ ಸಾಧ್ಯತೆಗಳೊಂದಿಗೆ ಮಕ್ಕಳನ್ನು ಸಶಕ್ತಗೊಳಿಸಲು ಡೆಲ್ ಪಿಸಿ ಸಾಕ್ಷರತೆಯನ್ನು ಪ್ರೋತ್ಸಾಹಿಸುತ್ತದೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.