ಪಿಸಿ ಸಹಿತವಾದ ಕಲಿಕೆಯು ಮಕ್ಕಳ ಭವಿಷ್ಯಕ್ಕೆ ಹೇಗೆ ನೆರವಾಗುತ್ತದೆ

 

ತಂತ್ರಜ್ಞಾನವು ಭವಿಷ್ಯದಲ್ಲಿ ಮಗುವಿಗೆ ಯಶಸ್ಸನ್ನು ಒದಗಿಸುತ್ತದೆ. ಪಿಸಿ ಸಹಿತವಾದ ಶಿಕ್ಷಣವು ಪ್ರಾರಂಭಿಕ ಹಂತದಲ್ಲಿ ಮಗುವಿನ ಬೆಳವಣಿಗೆಗೆ ಭವಿಷ್ಯದ ಅಭಿವೃದ್ಧಿಯಲ್ಲಿ ಮಹತ್ತರವಾದ ಅಡಿಪಾಯವನ್ನು ಹಾಕುತ್ತದೆ. ಪಠ್ಯಕ್ರಮದ ಹೊರಗಿನಿಂದ ಇದು ಅವರಿಗೆ ಅಗತ್ಯವಿರುವ ಕೌಶಲ್ಯಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ ಇದು ಯಾವಾಗಲೂ ಅವರನ್ನು ಸರಿಯಾದ ಮಾರ್ಗದಲ್ಲಿ ಕಳುಹಿಸುತ್ತದೆ.[1] 

1. ಸ್ವಂತಂತ್ರವಾದ ಕಲಿಕೆಯ ಪ್ರಾರಂಭ

ಸಂಶೋಧನೆ ಮಾಡುವಾಗುತ್ತಿರುವಾಗಲೀ, ಮಾಹಿತಿಯನ್ನು ಸಂಗ್ರಹಿಸುವಾಗ ಅಥವಾ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವಾಗಲೀ, ಪಿಸಿ ಸಹಿತವಾದ ಕಲಿಕೆಯು ಮಕ್ಕಳಿಗೆ ಅವರ ಕಲಿಕೆಯಲ್ಲಿ ನಿಯಂತ್ರಣವನ್ನು ಒದಗಿಸುತ್ತದೆ. ನೀವೇ ಸ್ವತಃ ಕಲಿಯಲು ಪ್ರಾರಂಭಿಸುವುದು ಕೇವಲ ಶಾಲೆಯಲ್ಲಿ ಉತ್ತಮ ಸಾಧನೆಯನ್ನು ಮಾಡಲು ಅಲ್ಲದೇ ಕಾರ್ಯಸ್ಥಳದಲ್ಲೂ ಉತ್ತಮ ಕೆಲಸ ಮಾಡಲೂ ಸಹ ಅತ್ಯಗತ್ಯವಾಗಿದೆ, ಏಕೆಂದರೆ ಇದು ’ನಾನು ಮಾಡುತ್ತೇನೆ’ ಎಂಬ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುತ್ತದೆ.

2. ತ್ವರಿತವಾಗಿ ಬದಲಾಗುವ ತಂತ್ರಜ್ಞಾನದೊಂದಿಗೆ ಆತ್ಮವಿಶ್ವಾಸ

ನಿಮ್ಮ ಮಗುವು ಯಾವುದೇ ವೃತ್ತಿಯನ್ನು ಆಯ್ದುಕೊಂಡರೂ ಸರಿ, ಕಂಪ್ಯೂಟರ್ ಜ್ಞಾನ ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ನಡವಳಿಕೆಯ ಸಾಮರ್ಥ್ಯವು ಅತ್ಯಗತ್ಯವಾಗಿರುತ್ತದೆ. ಶಾಲೆ ಮತ್ತು ಮನೆ ಎರಡರಲ್ಲಿಯೂ ಕಂಪ್ಯೂಟರ್‌ಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಅಭ್ಯಾಸ ಮಾಡುವ ಮಕ್ಕಳು ಮೂಲಭೂತವಾಗಿಯೇ ತಮ್ಮ ಭವಿಷ್ಯದ ಕಾರ್ಯಕ್ಷೇತ್ರಕ್ಕಾಗಿ ಅಭ್ಯಾಸ ಮಾಡುತ್ತಿರುತ್ತಾರೆ. ಹಿರಿಯರು ಹೇಳುವಂತೆ ’ಅಭ್ಯಾಸವು ಪರಿಪೂರ್ಣತೆಯನ್ನು ತರುತ್ತದೆ’ ಎನ್ನುವಂತೆ ಪಿಸಿ ಬಳಕೆಯಲ್ಲಿ ಮತ್ತು ತಾಂತ್ರಿಕವಾಗಿ ಹೇಗೆ ನಿರ್ಮಾಣವಾಗಿದೆ ಎಂಬ ಎರಡೂ ವಿಚಾರಗಳಲ್ಲಿ ಆತ್ಮವಿಶ್ವಾಸವನ್ನು ಒದಗಿಸುತ್ತದೆ. 

3. ತಾರ್ಕಿಕ ಆಲೋಚನಾ ಕೌಶಲ್ಯಗಳನ್ನು ಚುರುಕುಗೊಳಿಸುತ್ತದೆ

ಪಿಸಿ ಸಹಿತವಾದ ಕಲಿಕೆಯು ವಿವಿಧ ತಂತ್ರಗಳನ್ನು ಮತ್ತು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ ಇದು ಪರಿಣಾಮಕಾರಿ ಕಲಿಕೆಯನ್ನು ಸುಧಾರಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ತಾರ್ಕಿಕ ಆಲೋಚನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಡಿಜಿಟಲ್ ಬಳಕೆಯ ಪ್ರಮುಖವಾಗಿ ಅವಲೋಕಿಸುವ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಬದಲಿ ವಿಚಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಆನ್‌ಲೈನ್ ಚರ್ಚೆಗಳ ಗುಂಪುಗಳಲ್ಲಿ ಇನ್ನೊಂದು ಕಡೆಯಲ್ಲಿ ಅವರ ತಾರ್ಕಿಕ ಕೌಶಲ್ಯಗಳಿಗೆ ಗೌರವ ದೊರೆಯುತ್ತದೆ ಮತ್ತು ಅವುಗಳ ಬಗ್ಗೆ ತಮ್ಮದೇ ಆದ ವಿಚಾರಗಲನ್ನು ಮಂಡಿಸಲು ಅವರಿಗೆ ಅವಕಾಶವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ತರಗತಿಯ ಕೋಣೆಗಳಲ್ಲಿ ಡಿಜಿಟಲ್ ಕಥೆಗಳನ್ನು ಹೇಳುವ ಮೂಲಕ ಅವರನ್ನು ಕೋರ್ಸ್‌ನ ವಿಷಯಗಳಲ್ಲಿ ಅತ್ಯಂತ ಆಸಕ್ತಿಯುತವಾಗಿ ತಲ್ಲೀನವಾಗಿರುವಂತೆ ಮಾಡುತ್ತದೆ, ಅವರಿಗೆ ಪರ್ಯಾವಲೋಕನ ಪರಿಣಾಮವನ್ನು ಕಲಿಸಲಾಗುತ್ತದೆ ಮತ್ತು ಅವರು ಕಲಿತಿರುವುದನ್ನು ಪುನರ್-ಮನನ ಮಾಡುವ ಅವಕಾಶವನ್ನು ಒದಗಿಸುತ್ತದೆ.

4. ಯಶಸ್ವಿಯಾಗಿ ಸಂಯೋಜಿಸುತ್ತದೆ

ಗುಂಪು ಚಟುವಟಿಕೆಯು ಯಾವಾಗಲೂ ತರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಪಿಸಿ ಸಹಿತವಾದ ಕಲಿಕೆಯೊಂದಿಗೆ ಸಂಪನ್ಮೂಲಗಳ ಮತ್ತು ಟೂಲ್‌ಗಳನ್ನು ತಕ್ಷಣವೇ ಆಕ್ಸೆಸ್ ಮಾಡಬಹುದಾದ್ದರಿಂದ ಸಂಯೋಜನೆಯು ಸುಲಭ ಮತ್ತು ತ್ವರಿತವಾಗಿರುತ್ತದೆ. ಉದಾಹರಣೆಗೆ, ವಿದ್ಯಾರ್ಥಿಗಳು ಡ್ರೈವ್‌ನಲ್ಲಿ Wikispaces ತರಗತಿ, ಸಂಶೋಧನೆ ಮತ್ತು ಸಂಯೋಜಿತ ಮಾಹಿತಿಯನ್ನು ಉಪಯೋಗಿಸಿ ಪರಸ್ಪರರ ಕೆಲಸಗಳನ್ನು ಅಭ್ಯಾಸ ಮಾಡಿಕೊಳ್ಳಬಹುದು ಮತ್ತು ಅವರ ಯೋಜನೆಗಳನ್ನು ಜಾರಿಗೊಳಿಸಲೂಬಹುದು ಹಾಗೂ Makerspace ನಲ್ಲಿ ಜೀವಿಸಬಹುದು. ಈ ಚಟುವಟಿಕೆಗಳು ಅವರಿಗೆ ಸಂಘಟನೆಯಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿಸುತ್ತದೆ, ಅವರು ಬೆಳೆಯುವಲ್ಲಿ ಈ ಕೌಶಲ್ಯವು ಅತ್ಯಂತ ಉಪಯುಕ್ತವಾಗಿದೆ.

ಪಿಸಿ ಸಕ್ರಿಯವಾಗಿರುವ ಕಲಿಕೆಯು ಮಕ್ಕಳಿಗೆ ವಿಫುಲವಾದ ಅವಕಾಶಗಳನ್ನು ತೆರೆದಿಡುತ್ತದೆ ಮತ್ತು ಅವರಿಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ ಇದು ಅಗಾಧವಾದ ತಂತಜ್ಞಾನಕ್ಕೆ ಸಂಬಂದ ಪಟ್ಟಿರುತ್ತದೆ.

ಹಾಗಾದರೆ ನೀವು ನಾಳೆಯ ಆಧುನಿಕತೆಯ ಸ್ಪರ್ಶವುಳ್ಳ ಜಗತ್ತಿನಲ್ಲಿ ಯಶಸ್ವಿಯಾಗುವಂತೆ ನಿಮ್ಮ ಮಕ್ಕಳನ್ನು ಹೇಗೆ ಸಿದ್ಧಪಡಿಸುವಿರಿ?