ಹೆಚ್ಚಿನ ಜನರು ಪದೇ ಪದೇ ಒಂದು ವಿಷಯವನ್ನು ಪುನರಾವರ್ತಿಸಿದಲ್ಲಿ ಅವರು ಅದನ್ನು ನೆನಪಿಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚಿರುತ್ತದೆ ಎಂದು ಭಾವಿಸುತ್ತಾರೆ. ಈ ರೀತಿಯ ಕಲಿಕೆಯನ್ನು “ಮನನ ಮಾಡಿಕೊಳ್ಳುವ ಕಲಿಕೆ” ಎನ್ನುತ್ತಾರೆ. ಹ್ಯಾಮಿಲ್ಟನ್ನ ಮ್ಯಾಕ್ಮಾಸ್ಟರ್ ಯುನಿವರ್ಸಿಟಿಯ ಮಾಸ್ಟರ್ ಆಫ್ ಹೆಲ್ತ್ ಸೈನ್ಸ್ ಎಜುಕೇಶನ್ ನ ಸ್ನಾತಕೋತ್ತರ ಪದವಿಧರೆಯಾಗಿರುವ ಅನಿತಾ ಅಕೈ ಅವರು “ಮನನ ಮಾಡಿಕೊಳ್ಳುವುದು ನಿಮಗೆ ಕಲಿಕೆಯಲ್ಲಿ ಉತ್ತಮವಾಗಲು ಸಹಾಯ ಮಾಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಇದು ಕಲಿಕೆಯ ತ್ವರಿತ ಸರಿಪಡಿಸುವಿಕೆ ವಿಧಾನವಾಗಿದೆ ಅಷ್ಟೇ” ಎಂದು ಹೇಳುತ್ತಾರೆ.[1]
ಇದೇ ವಿಧಾನದ ಎದುರಿಗಿರುವುದು ಇಂಟರಾಕ್ಟೀವ್ ಕಲಿಕೆ, ಈ ಕಲಿಕಾ ವಿಧಾನವು ವಿದ್ಯಾರ್ಥಿಗೆ ಪಾಠದಲ್ಲಿ ತೊಡಗಿಕೊಳ್ಳಲು, ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ದೈನಂದಿನ ಜೀವನಕ್ಕೆ ಅನ್ವಯಿಸಲು ಪ್ರೋತ್ಸಾಹಿಸುತ್ತದೆ.ಕಲಿಕೆಯ ಎರಡೂ ವಿಧಾನಗಳು ಅವುಗಳ ಅನುಕೂಲತೆಗಳನ್ನು ಹೊಂದಿರುವುದರಿಂದ, ಈ ಲೇಖನವು ಮನನ ಮಾಡಿಕೊಳ್ಳುವಿಕೆಯ ಕಲಿಕೆಯ ವಿಧಾನವನ್ನು ಶೋಧಿಸುತ್ತದೆ ಮತ್ತು ಇದು ಸೃಜನಾತ್ಮಕ ಆಲೋಚನೆಯ ಕೌಶಲಗಳ ಪ್ರಭಾವವಾಗಿರುತ್ತದೆ.
ಹಾಗಾದರೆ ಮಗುವಿನ ಸೃಜನಾತ್ಮಕ ಆಲೋಚನೆಯ ಕೌಶಲ್ಯಗಳನ್ನು ಮನನ ಮಾಡಿಕೊಳ್ಳುವಿಕೆಯ ಕಲಿಕೆಯು ಹೇಗೆ ಪ್ರಭಾವಿಸುತ್ತದೆ.
ಸೃಜನಶೀಲತೆಯು ಹೊಸ, ಮೂಲ, ವಿಶಿಷ್ಟ ಪರಿಹಾರಗಳನ್ನು ಅಥವಾ ಉಪಾಯಗಳನ್ನು ಕಂಡುಕೊಳ್ಳುವ ಸಾಮರ್ಥ್ಯವಾಗಿದೆ. ಇದು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಭಿನ್ನ ಆಲೋಚನೆಯನ್ನು ಬಳಸುವುದನ್ನು ಒಳಗೊಂಡಿದೆ ಹಾಗೂ ಒಂದೇ, ಸರಿಯಾದ ಉತ್ತರದೊಂದಿಗೆ ಸಾಂಪ್ರದಾಯಿಕ ಆಲೋಚನೆಯನ್ನು ಹೊಂದಿರುವುದಿಲ್ಲ. ವಾಸ್ತವಿಕವಾಗಿ ಮನನ ಮಾಡುವ ಕಲಿಕೆಯನ್ನು ಸಾಂಪ್ರದಾಯಿಕ ಆಲೋಚನೆಯನ್ನು ಉತ್ತೇಜಿಸುವ ವಿಧಾನವಾಗಿ ಬಳಸಲಾಗುತ್ತದೆ. ಏಕೈಕ ಕಲಿಕಾ ವಿಧಾನವಾಗಿ ಬಳಸಿದಾಗ ಇದು ಮಗುವಿನ ಸೃಜನಾತ್ಮಕ ಆಲೋಚನೆಯ ಕೌಶಲ್ಯಗಳನ್ನು ನಿರ್ಲಕ್ಷಿಸುತ್ತದೆ, ಇದರಿಂದಾಗಿ ಸೃಜನಶೀಲವಾಗಿ ಆಲೋಚಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ.
ಶಾಲೆಯಲ್ಲಿ ಹೆಚ್ಚಿನ ಪ್ರಾಜೆಕ್ಟುಗಳು ಹಾಗೂ ಅಸೈನ್ಮೆಂಟುಗಳು ಮಗುವಿನ ಸಮಸ್ಯೆಯನ್ನು ಪರಿಹರಿಸುವ ವೇಗವನ್ನು ಹೆಚ್ಚಿಸುವ ಕುರಿತು ಗಮನ ಕೇಂದ್ರೀಕರಿಸುತ್ತವೆ. ಅವು ಸಮಸ್ಯೆಯ ಪರಿಹಾರಕ್ಕೆ ಪರ್ಯಾಯ (ಮತ್ತು ಪ್ರಾಯಶಃ ಇನ್ನಷ್ಟು ಸೃಜನಶೀಲ) ವಿಧಾನಗಳನ್ನು ಕಂಡುಕೊಳ್ಳುವ ಬದಲು ಸಾಧ್ಯವಿರುವಷ್ಟು ಬೇಗನೇ ಪರಿಹಾರವನ್ನು ಕಂಡುಕೊಳ್ಳಲು ಗಮನ ಕೇಂದ್ರೀಕರಿಸುತ್ತವೆ.
ಈ ರೀತಿಯಲ್ಲಿ ಮನನ ಮಾಡುವ ಕಲಿಕೆಯು ಪ್ರತಿಯೊಂದು ಸಮಸ್ಯೆಗೆ ಒಂದೇ ಪರಿಹಾರವನ್ನು ಒಳಗೊಂಡಿರುತ್ತದೆ ಮತ್ತು ಗಮನವು ಯಾವಾಗಲೂ ಎಷ್ಟು ಸಾಧ್ಯವೋ ಅಷ್ಟು ಬೇಗನೇ ಪರಿಹಾರವನ್ನು ಕಂಡುಕೊಳ್ಳುವುದರ ಬಗ್ಗೆ ಆಗಿರುತ್ತದೆ. ದೀರ್ಘಕಾಲಿಕವಾಗಿ ಇದು ವಿದ್ಯಾರ್ಥಿಗಳು ಸಾಧ್ಯತೆಗಳ ಎಲ್ಲೆಗಳನ್ನು ಶೋಧಿಸುವುದನ್ನು ನಿರುತ್ತೇಜಿಸುತ್ತದೆ ಮತ್ತು ಪ್ರತಿಯೊಂದು ಸಮಸ್ಯೆ ಹಾಗೂ ಸನ್ನಿವೇಶವನ್ನು ಸೃಜನಶೀಲತೆಯಿಂದ ಪರಿಹರಿಸುವ ಅವರ ಸಾಮರ್ಥ್ಯವನ್ನು ತಗ್ಗಿಸುತ್ತದೆ.
ಈ ರೀತಿ ಮನನ ಮಾಡಿಕೊಳ್ಳುವ ಕಲಿಕೆಯ ವಿಧಾನವು ವಿದ್ಯಾರ್ಥಿಗೆ ವಿಷಯದಲ್ಲಿರುವ ಆಸಕ್ತಿಯನ್ನು ಹಾಳುಗೆಡವುತ್ತದೆ. ವಿಷಯಗಳಲ್ಲಿ ನಿಪುಣರಾಗುವಂತೆ ಮಾಡುವ ಕಲಿಕೆಯ ಹಾಗೂ ಬೋಧನೆಯನ್ನು ವಿವರಿಸುವುದಕ್ಕೆ ಶಿಕ್ಷಣ ತಜ್ಞರು ಡ್ರಿಲ್ ಎಂಡ್ ಕಿಲ್ (ಶಿಸ್ತು ಮತ್ತು ಸಾವು) ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ.
1.ದೇಹದಲ್ಲಿರುವ ಸ್ನಾಯುಗಳು ಅಥವಾ ಮೂಳೆಗಳ ಪಟ್ಟಿ
2.ಮಗ್ಗಿ ಕೋಷ್ಠಕ
3.ಮೂಲವಸ್ತುಗಳ ಕೋಷ್ಠಕ
ಶಿಕ್ಷಣ ತಜ್ಞರು ಡ್ರಿಲ್ ಎಂಡ್ ಕಿಲ್ ವಿಧಾನವನ್ನು ಪ್ರೋತ್ಸಾಹಿಸುವುದಿಲ್ಲ ಏಕೆಂದರೆ ಇದು ಸ್ಮರಣೆಯನ್ನು ಅಥವಾ ಮನನ ಮಾಡಿಕೊಳ್ಳುವುದನ್ನು ಹೆಚ್ಚಿಸುತ್ತದೆಯಾದರೂ ಆಳ, ವಿಚಾರಕ್ಕೆ ಸಂಬಂಧಿಸಿದ ಕಲಿಕೆಯನ್ನು ಒದಗಿಸುವುದಿಲ್ಲ. ಹೆಚ್ಚಿನದಾಗಿ ವಿದ್ಯಾರ್ಥಿಗಳನ್ನು ವಿಷಯಗಳ ಗ್ರಾಹಕರನ್ನಾಗಿಸಿ, ಕಲಿಕೆಯನ್ನು ಬೇಸರ ಪ್ರಕ್ರಿಯೆಯಾಗಿಸುತ್ತದೆ ಮತ್ತು ಮುಖ್ಯವಾಗಿ ಅವರ ಕಲಿಕೆಯ ಇಚ್ಛೆಯನ್ನೇ ಇಲ್ಲದಂತೆ ಮಾಡುತ್ತದೆ.[3]
ಈ ಲೇಖನವು ಸೃಜನಶೀಲತೆಯ ಮೇಲೆ ಮನನ ಮಾಡಿಕೊಳ್ಳುವ ಕಲಿಕಾ ವಿಧಾನವು ಉಂಟುಮಾಡುವುದರ ಪ್ರಭಾವಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಆದರೆ ಇದು ಕೇವಲ ಮೇಲ್ನೋಟದ ವಿವರಣೆಯಷ್ಟೇ ಆಗಿದೆ. ಮನನ ಮಾಡಿಕೊಳ್ಳುವ ಕಲಿಕೆಯು ಮಕ್ಕಳ ಸೃಜನಾತ್ಮಕ ಆಲೋಚನೆಯನ್ನು ಪ್ರಭಾವಿಸುತ್ತದೆ ಏಕೆಂದರೆ ಕೆಳಗಿನ ವೀಡಿಯೋದಲ್ಲಿ ನೀಡಿರುವಂತೆಯೇ ಇದು “ಅರ್ಥಮಾಡಿಕೊಳ್ಳುವುದರ” ಬದಲು “ತಿಳಿದಿರುವುದಕ್ಕೆ” ಹೆಚ್ಚಿನ ಮಹತ್ವ ನೀಡುತ್ತದೆ.
ಒಂದು ಸಮೀಕ್ಷೆಯು ಕಲಿಕೆಯ ಗುಣಮಟ್ಟ ಚೆನ್ನಾಗಿಲ್ಲದೇ ಇರುವುದಕ್ಕೆ 80% ಶಾಲಾ ಪ್ರಾಂಶುಪಾಲರುಗಳು ಈ ರೀತಿ ಮನನ ಮಾಡಿಕೊಳ್ಳುವ ಕಲಿಕೆಯನ್ನೇ ಹೊಣೆಯಾಗಿಸುತ್ತಾರೆ. ಹೆತ್ತವರಾಗಿ ಮಗುವಿಗೆ ಚರ್ಚೆಗಳಲ್ಲಿ ತೊಡಗಿಕೊಳ್ಳಲು, ಆನ್ಲೈನ್ ಪಾಠಗಳನ್ನು ತಿಳಿಯಲು ಹಾಗೂ ಇಂಟರಾಕ್ಟೀವ್ ಸಾಧನಗಳ ಮೂಲಕ ಕಲಿಯಲು ಪ್ರೋತ್ಸಾಹಿಸುವುದು ಮುಖ್ಯವಾಗಿರುತ್ತದೆ, ಏಕೆಂದರೆ ಅವು ಮನನ ಮಾಡಿಕೊಳ್ಳುವ ವಿಧಾನಕ್ಕಿಂತ ಉತ್ತಮವಾದ ಪರ್ಯಾಯವಾಗಿ ಸಾಬೀತಾಗಿರುತ್ತವೆ.
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.
ನಿಮ್ಮ ಮಗುವಿಗೆ ಹೈಬ್ರಿಡ್ ಶಿಕ್ಷಣ ಉಪಯೋಗಿಯಾಗುವಂತೆ ಮಾಡುವುದು ಹೇಗೆ ಎಂಬುದರ ಕುರಿತು ಸಲಹೆಗಳು.
ದೂರಸ್ಥ ಕಲಿಕೆ (ರಿಮೋಟ್ ಲರ್ನಿಂಗ್) ಸ್ಮಯದಲಿಿಮಕಕಳು ವಿಕಸ್ನಗೊಳಳಲು ಕಾರಣ
ತಂತ್ರಜ್ಞಾನವು ಆಧುನಿಕ ಪೋಷಕರನ್ನು ಹೇಗೆ ಬದಲಾಯಿಸಿದೆ
ನಿಮ್ಮ ಮಕ್ಕಳಿಗೆ ಕಲಿಸುವಾಗ ಸಹಾನುಭೂತಿ ಮತ್ತು ದಯೆಯ ಪ್ರಾಮುಖ್ಯತೆ
ಸಾಮಾನ್ಯ ಸ್ಥಿತಿಗೆ ಮರಳಿದಾಗ ನಿಮ್ಮ ಮಗುವಿಗೆ ಹೈಬ್ರಿಡ್ ಮಾದರಿಯ ಶಿಕ್ಷಣಕ್ಕೆ ಹೊಂದಿಕೊಳ್ಳಲು ನೀವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯಿರಿ