ಸಾಮಾಜಿಕ ಜಾಲತಾಣಗಳು ಹೇಗೆ ಒಂದು ಕಲಿಕಾ ಸಾಧನ ತಾಣವಾಗಬಲ್ಲದುx

ಕಳೆದ ಎರಡು ದಶಕಗಳ ಸಾಮಾಜಿಕ ಮಾಧ್ಯಮ ಬೆಳವಣಿಗೆಯ ಅವಧಿಯಲ್ಲಿ, ಅಪ್ಲಿಕೇಶನ್ ಗಳ ಬಗ್ಗೆ  ಒಂದು ನಕಾರಾತ್ಮಕ ಚಿತ್ರಣವನ್ನು ಜನರ ಮನಸ್ಸಿನಲ್ಲಿ ಬೆಳೆಸಲಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲಾಯಿತು. ಆದರೆ, ವೇದಿಕೆಗಳು ಮಕ್ಕಳು ಮತ್ತು ಹದಿಹರೆಯದವರಿಗೆ ನಿಜವಾಗಿಯೂ ಹೇಗೆ ಪ್ರಯೋಜನಕಾರಿಯಾಗಿವೆ ಎಂಬುದನ್ನು ತೋರಿಸುವ ಅಂಶಗಳು ಬಹಿರಂಗವಾಗದೇ ಉಳಿದಿವೆ. ಆದ್ದರಿಂದ, ಎಲ್ಲರಿಗೂ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಪ್ರಯೋಜನಕಾರಿಯಾಗಬಲ್ಲ ಸಾಮಾಜಿಕ ಮಾಧ್ಯಮದ ಅಂಶಗಳನ್ನು ನಾವು ಎತ್ತಿ ತೋರಿಸುವುದು ಅಗತ್ಯವಾಗುತ್ತದೆ.

1. ಕಲಿಕೆಯ ಸಾಧನವಾಗಿ:  ರೆಡ್ಡಿಟ್, ಕ್ವೋರಾ ಮತ್ತು ವಿಕಿಪೀಡಿಯಾದಂತಹ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕಲಿಕೆಯ ಸಾಧನವಾಗಿ ಬಳಸಬಹುದಾಗಿದೆ ಮತ್ತು  ಇವು ಮುಕ್ತ ವೇದಿಕೆಗಳಾಗಿವೆ. ನಿರ್ದಿಷ್ಟ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಜನರ ತಂಡಗಳು ಈ ಚಾನಲ್ ಗಳನ್ನು ಸೃಷ್ಟಿಸುತ್ತವೆ, ಅಲ್ಲಿ ಅವರು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಉತ್ತರಿಸುತ್ತಾರೆ. ಈ ಜನರು ಪ್ರಪಂಚದಾದ್ಯಂತದಿಂದ ಬಂದವರು, ಹಾಗಾಗಿ ಇಲ್ಲಿ ವಿಶಾಲ ವ್ಯಾಪ್ತಿಯ ದೃಷ್ಟಿಕೋನಗಳಿರುತ್ತವೆ. ಇದು ನಿಮ್ಮ ಮಗುವಿಗೆ ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುವುದಲ್ಲದೆ, ಜಾಗತಿಕವಾಗಿ ಜನರ ಅಭಿಪ್ರಾಯಗಳನ್ನು ವಿಶ್ಲೇಷಿಸಲು ಸಹ ಅನುಕೂಲ ಮಾಡಿಕೊಡುತ್ತದೆ.

2. ತರಗತಿಗಾಗಿ ಫೇಸ್ ಬುಕ್ ಗುಂಪುಗಳು: ಇದು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ನಿಮ್ಮ ತರಗತಿಯ ಫೇಸ್ ಬುಕ್ ಗುಂಪಿನಲ್ಲಿ ನೀವು ಅಧ್ಯಯನ ಸಾಮಗ್ರಿ, ನಿಮ್ಮ ಅಭಿಪ್ರಾಯಗಳು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಹಂಚಿಕೊಳ್ಳಬಹುದು. ಇದು ಕೇವಲ ಪರಿಣಾಮಕಾರಿ ಮಾತ್ರವಲ್ಲದೆ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ಒಂದೇ ಸ್ಥಳದಲ್ಲಿ ಶೇಖರಿಸಲು ಕೂಡಾ ಒಂದು ಉತ್ತಮ ಮಾರ್ಗವಾಗಿದೆ. ಈ ಗುಂಪುಗಳಲ್ಲಿ ನೀವು ಆರೋಗ್ಯಕರ ಚರ್ಚೆಗಳನ್ನು ಅಥವಾ ಪಾಠದುದ್ದಕ್ಕೂ ನೀವು ಕಲಿತ ಎಲ್ಲವನ್ನೂ ಪರೀಕ್ಷಿಸಲು ರಸಪ್ರಶ್ನೆಗಳನ್ನು ಆಯೋಜಿಸಬಹುದು.

3. ಶೈಕ್ಷಣಿಕ ಸಂಪನ್ಮೂಲಗಳನ್ನು ಪಿನ್ ಮಾಡಲು Pinterest: Pinterest ತನ್ನ ಬಳಕೆದಾರರಿಗೆ ಅವರ ಅಸೈನ್ಮೆಂಟ್ ಗಳಿಗೆ ಶೈಕ್ಷಣಿಕ ಸಂಪನ್ಮೂಲಗಳೂ ಸೇರಿದಂತೆ ಆಸಕ್ತಿದಾಯಕ ವಿಷಯಗಳನ್ನು ಸುಲಭವಾಗಿ ಪಿನ್ ಮಾಡಲು ಅನುಮತಿಸುತ್ತದೆ. ನೀವು ಅವುಗಳನ್ನು ವಿಷಯಗಳ ಪ್ರಕಾರ ವರ್ಗೀಕರಿಸಬಹುದು ಕೂಡಾ. ಈ ರೀತಿಯಾಗಿ ನಿಮ್ಮ ಮಗು ವ್ಯವಸ್ಥಿತವಾಗಿರುವುದು ಮಾತ್ರವಲ್ಲದೆ ಅವರು ಗಂಟೆಗಟ್ಟಲೆ ವ್ಯಯಿಸಿ ಹುಡುಕಿದ ಎಲ್ಲಾ  ಡೇಟಾವನ್ನು ನೋಡಲು ಸಾಧ್ಯವಾಗುತ್ತದೆ.

ಈ ರೀತಿಯಾಗಿ ಸಾಮಾಜಿಕ ಮಾಧ್ಯಮವು ಚಿಕ್ಕ ಮಕ್ಕಳಿಗೆ ಒಂದು ಉತ್ತಮ ಕಲಿಕೆಯ ವೇದಿಕೆಯಾಗಬಲ್ಲದು.