ಡಿಜಿಟಲ್ ಪೋಷಕರಾಗುವುದು ಹೇಗೆ

ಡಿಜಿಟಲ್ ಯುಗದ ಪ್ರಾರಂಭದಲ್ಲಿ ಇರುವಾಗ ಪೋಷಕರು ನಿಮ್ಮ ಮಗು ತನ್ನ ಸರ್ವಾಂಗೀಣ ಅಭಿವೃದ್ಧಿಗೆ ಡಿಜಿಟಲ್ ಸ್ಪರ್ಷವನ್ನು ಕೊಡುವುದು ಅತ್ಯಂತ ಪ್ರಮುಖವಾಗಿದೆ. ಅವರ ಜೀವನದ ಬಹು ದೊಡ್ಡ ಭಾಗವನ್ನು ಅವರು ಒಂದಲ್ಲ ಒಂದು ರೂಪದಲ್ಲಿ ತಂತ್ರಜ್ಞಾನವನ್ನು ಉಪಯೋಗಿಸುವುದರಲ್ಲಿ ಕಳೆಯುತ್ತಾರೆ. ಈ ಆಲೋಚನೆಯ ಪರಿಕಲ್ಪನೆಯ ಫಲಶ್ರುತಿಯೇ “ಡಿಜಿಟಲ್ ಪೋಷಕ” – ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಯುಗದಲ್ಲಿ ಅವರ ಮಗುವಿಗೆ ಜೀವನದಲ್ಲಿ ಸಿದ್ಧರಾಗಿರುವಂತೆ ತರಬೇತಿ ನೀಡುವವರಾಗಿದ್ದಾರೆ. ಇದು ಮಕ್ಕಳು ತಮ್ಮ ಇಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಆರಾಮವಾಗಿ ಮತ್ತು ಆಸಕ್ತಿಯುತವಾಗಿ ಬಳಸುವುದನ್ನು ಖಚಿತಪಡಿಸುತ್ತದೆ.


ಈಗ ನಿಮಗೆ ಡಿಜಿಟಲ್ ಪೋಷಕರು ಯಾರೆಂಬುದು ತಿಳಿಯಿತು, ನೀವು ಯಾವ ರೀತಿಯಲ್ಲಿ ಹಾಗೆ ಆಗಬಹುದು ಎಂಬುದು ಇಲ್ಲಿದೆ.

 1. ಡಿಜಿಟಲ್ ಪ್ರಭಾವದ ಬಗ್ಗೆ ತಿಳಿದುಕೊಳ್ಳಿ

ಡಿಜಿಟಲ್ ಪೋಷಕರಾಗುವ ಮೊದಲ ಹೆಜ್ಜೆ ಎಂದರೆ ನೀವು ಸ್ವತಃ ಶಿಕ್ಷಿತರಾಗಿರಿ ಮತ್ತು ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಿರಿ, ಇದರಿಂದ ನೀವು ನಿಮ್ಮ ಮಗು ಡಿಜಿಟಲ್ ಪ್ರದೇಶದಲ್ಲಿ ಹೇಗೆ ಸಂಚರಿಸಬೇಕು ಎನ್ನುವುದನ್ನು ನೀವು ಕಲಿಸಬಹುದಾಗಿದೆ. ದಿ ಹಿಂದು ನಲ್ಲಿ ಡಿಜಿಟಲ್ ಪೋಷಕರಾಗುವುದು ಎಂಬ ಬಗ್ಗೆ ಲೇಖನವೊಂದು ಬಂದಿತ್ತು. ವರದಿಯ ಪ್ರಕಾರ ಸಾಕಷ್ಟು ಸಂಖ್ಯೆಯ ಪೋಷಕರಿಗೆ ಆನ್‌ಲೈನ್ ಅಥವಾ ಕಂಪ್ಯೂಟರ್ ಬಗ್ಗೆ ಸೀಮಿತವಾದ ಪರಿಜ್ಞಾನವನ್ನು ಹೊಂದಿರುವುದರಿಂದ ಅವರಿಗೆ ತಮ್ಮ ಮಕ್ಕಳನ್ನು ನಿರ್ವಹಿಸುವುದು ಸವಾಲು ಎಂದು ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ನೀವು ಶಿಕ್ಷಿತರನ್ನಾಗಿಸಿರಿ, ತಂತ್ರಜ್ಞಾನದ ತಿರುವಿನಲ್ಲಿ ಸದಾ ಮುನ್ನಡೆಯಲ್ಲಿರಿ ಇದು ಅತ್ಯಂತ ಪ್ರಮುಖವಾದ ವಿಚಾರವಾಗಿದೆ.

2. ನಿಮ್ಮ ಮಗುವಿನಲ್ಲಿ ಆಫ್‌ಲೈನ್‌ನಲ್ಲಿ ಹಾಗೆಯೇ ಆನ್‌ಲೈನ್‌ನಲ್ಲಿ ಅನ್ವಯವಾಗುವ ಬೋಧನೆಯ ಮೌಲ್ಯಗಳು

ಇಂಟರ್‌ನೆಟ್ ಮಕ್ಕಳಿಗೆ ಕಲಿಯುವುದಕ್ಕಾಗಿ ಒಂದು ಸಂಪೂರ್ಣವಾದ ಹೊಸ ಆಟದ ಮೈದಾನವೊಂದನ್ನು ರಚಿಸಿದೆ. ಅದರಲ್ಲಿ ಅತ್ಯಂತ ಅಪಾಯಕಾರಿಯಾಗಿರುವುದೆಂದರೆ ಸೈಬರ್ ಬೆದರಿಕೆಯಾಗಿದೆ. ಮೀಡಿಯ ಲಿಟ್ರಸಿ ಕೌನ್ಸಿಲ್ ಆಫ್ ಸಿಂಗಾಪುರ್ ಪ್ರಕಾರ ಪೋಷಕರು “ಮೌಲ್ಯಯುತ ಕೋಚ್” ಪಾತ್ರವನ್ನು ವಹಿಸುವ ಮಹತ್ವವನ್ನು ಪ್ರತಿಪಾದಿಸಿದ್ದು ಇದು ಮಗುವು ಸೈಬರ್ ಬೆದರಿಕೆ ಅಥವಾ ಅಂತಹ ಇತರೆ ಆನ್‌ಲೈನ್ ವರ್ತನೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

3. ಅವರ ಖಾಸಗೀತನಕ್ಕೆ ಧಕ್ಕೆಯಾಗದಂತೆ ಎಲ್ಲಾ ಸಮಯದಲ್ಲಿಯೂ ಕಂಪ್ಯೂಟರ್ ಪ್ರವೇಶವನ್ನು ಮೇಲ್ವಿಚಾರಣೆ ಮಾಡಿ

ಎಲ್ಲಾ ಪ್ರವೇಶಗಳನ್ನು ನಿಮಗೆ ಸರಿ ಎನಿಸಿದ ರೀತಿಯಲ್ಲಿ ಮೇಲ್ವಿಚಾರಣೆ ಮಾಡಬೇಕು ಅಥವಾ ನಿಯಂತ್ರಿಸಬೇಕು . ಇದಕ್ಕಾಗಿ ಸಾಫ್ಟ್ ವೇರ್‌ನ ಪರಿಹಾರವಿದ್ದು ಅದು ನಿಮ್ಮ ಸಾಧನಗಳಲ್ಲಿ ಪೋಷಕರ ಪ್ರವೇಶ ನಿಯಂತ್ರಣವನ್ನು ಸೆಟ್ ಮಾಡಬಹುದು, ಇದರ ಅರ್ಥ ಮಕ್ಕಳು ಅವುಗಳನ್ನು ಯಾವಾಗ ಮತ್ತು ಹೇಗೆ ಉಪಯೋಗಿಸಿದ್ದಾರೆ ಎಂಬುದು ಸರಿಯಾಗಿ ತಿಳಿದು ಬಿಡುತ್ತದೆ. ನಿಮ್ಮ ವೈ-ಫೈ ಮತ್ತು ಕಂಪ್ಯೂಟರ್ ಪಾಸ್‌ವರ್ಡ್ ಸಂರಕ್ಷಿಸುವುದನ್ನು ಮರೆಯಬೇಡಿ, ಇದು ಕೂಡ ಅವರು ಪ್ರವೇಶಿಸುವುದನ್ನು ನಿಯಂತ್ರಿಸುತ್ತದೆ. ಪಿಸಿಯನ್ನು ಮನೆಯ ಸಾಮಾನ್ಯ ಪ್ರದೇಶದಲ್ಲಿ ಇಡಿ ಇದರಿಂದ ನಿಮ್ಮ ಮಗುವು ನಿಮಗೆ ತಿಳಿಯದಂತೆ ಸಾಧನವನ್ನು ಪ್ರವೇಶಿಸಲು ಆಗುವುದಿಲ್ಲ.

ಡಿಜಿಟಲ್ ಸ್ಪೇಸ್ ಪೋಷಕರಿಗೆ ಮಕ್ಕಳೊಂದಿಗೆ ಅತ್ಯುತ್ತಮವಾಗಿ ಕಲಿಯುವಿಕೆ, ಆಟ ಮತ್ತು ಸಂಬಂಧವನ್ನು ಹೊಂದುವ ಅವಕಾಶವನ್ನು ಒದಗಿಸುತ್ತದೆ. ನೀವು ಕಂಪ್ಯೂಟರ್ ನಿಮ್ಮ ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿಯಾದ ಸಲಕರಣೆ ಎಂದು ತಿಳಿದುಕೊಳ್ಳುವಂತಹ ಸಮಯವಾಗಿದೆ. ಡಿಜಿಟಲ್ ಪೋಷಕತ್ವವು ಪೋಷಕತ್ವ ವ್ಯವಸ್ಥೆಯ ಹೃದಯವಾಗಿದ್ದು ಇದು ನಿಮ್ಮ ಮಗುವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲಿಯೂ ಜವಾಬ್ದಾರಿಯುತ ವ್ಯಕ್ತಿಯಾಗುವುದನ್ನು ಖಚಿತಪಡಿಸುತ್ತದೆ.