ನಿಮ್ಮ ಮಗುವಿನಲ್ಲಿರುವ ವಿಜ್ಞಾನಿಯನ್ನು ಹೊರತರುವುದು ಹೇಗೆ

 

ವಿದ್ಯಾರ್ಥಿಗಳಲ್ಲಿ ಎರಡು ಪ್ರಕಾರದವರಿರುತ್ತಾರೆ – ವಿಜ್ಞಾನದ ತರಗತಿಯೆಂದರೆ ಕುಣಿದು ಕುಪ್ಪಳಿಸುವವರು ಮತ್ತು ಆ ವಿಷಯದ ಕಡೆಗೆ ಅಷ್ಟೇನೂ ಒಲವಿಲ್ಲದವರು. ವಿಜ್ಞಾನದ ವಿಷಯಕ್ಕಷ್ಟೇ ಅಲ್ಲದೇ ಇತರ ವಿಷಯಗಳಿಗೂ ಸಹ ನಿಮ್ಮ ಮಗುವಿನ ಆಂತರಿಕ ಕುತೂಹಲವನ್ನು ಬಡಿದೆಬ್ಬಿಸಲು PC ನೆರವಾಗುತ್ತದೆ. ನಿಮ್ಮ ಮಗುವಿನಲ್ಲಿರುವ ವಿಜ್ಞಾನಿಯನ್ನು ಹೊರತರಲು ಮಾಹಿತಿಗೆ ತಕ್ಷಣದ ಪ್ರವೇಶಾವಕಾಶ ಮತ್ತು PC ಯ ಇಂಟರಾಕ್ಟಿವ್ ಸ್ವರೂಪವು ನೆರವಾಗುತ್ತದೆ.

1. ನಾಸಾ ಕಿಡ್ಸ್ ಕ್ಲಬ್ನೊಂದಿಗೆ ಬಾಹ್ಯಾಕಾಶ ಸಾಹಸ ಯಾತ್ರೆಯಲ್ಲಿ ತೊಡಗಿಸಿ

ಬಾಹ್ಯಾಕಾಶ ಅನ್ವೇಷಣೆಯ ಬಗ್ಗೆ ಯೋಚಿಸಿದ ತಕ್ಷಣ ಮನಸ್ಸಿಗೆ ಹೊಳೆಯುವ ಮೊದಲನೇ ವಿಷಯವೆಂದರೆ ನಾಸಾ. ಎಲ್ಲ ವಿಷಯಗಳನ್ನು ನಾಸಾ ಕಿಡ್ಸ್ ಕ್ಲಬ್ ಒದಗಿಸುತ್ತದೆ. ಇಂಟರಾಕ್ಟಿವ್ ಮತ್ತು ಶೈಕ್ಷಣಿಕವಾಗಿರುವ ಆಟಗಳು, ಅದ್ಭುತವಾದ ಪಿಕ್ಚರ್ ಗ್ಯಾಲರಿಗಳು, ನಡೆಯುತ್ತಿರುವ ಪ್ರಾಜೆಕ್ಟ್ಗಳ ಮೇಲಿನ ಮಾಹಿತಿಯೊಂದಿಗೆ ಹೊಸ ಪರಿಭ್ರಮಣಕ್ಕೆ ಅವಕಾಶ ಮಾಡಿಕೊಡಿ. [1] ಇದರಲ್ಲಿ ಬಳಸಲಾದ ಭಾಷೆಯು ಅರ್ಥ ಮಾಡಿಕೊಳ್ಳಲು ಸರಳವಾಗಿದ್ದು, ಮಕ್ಕಳಿಗೆ ಬೇಸರವಾಗದೇ, ಅನ್ವೇಷಣೆಯನ್ನು ಮುಂದುವರೆಸುವುದನ್ನು ಖಚಿತಪಡಿಸಿಕೊಳ್ಳುತ್ತಾ ಬಹುಪಾಲು ಕಲ್ಪನೆಗಳನ್ನು ಕಾರ್ಟೂನೀಕರಿಸಲಾಗಿದೆ.

2. ಸೆಲ್ ಕ್ರಾಫ್ಟ್ನೊಂದಿಗೆ ಅದನ್ನು ಒಂದು ಆಟವನ್ನಾಗಿಸಿ

ಕೆಲವೊಮ್ಮೆ, ತರಗತಿಯಲ್ಲಿ ಕಲಿಸಲಾದ ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ವೈಜ್ಞಾನಿಕ ಪರಿಕಲ್ಪನೆಗಳಲ್ಲಿ ವಿಶೇಷತೆಯನ್ನು ಹೊಂದಿರುವ ಆಟಗಳನ್ನು ಆಡುವ ಮೂಲಕ, ವಿಷಯವನ್ನು ಹೆಚ್ಚು ಆಳವಾಗಿ ಅಗೆಯುವುದು ನಿಮ್ಮ ಮಗುವಿಗೆ ಹೆಚ್ಚು ಸುಲಭವಾಗುತ್ತದೆ. ಸೆಲ್ ಕ್ರಾಫ್ಟ್ ಇಂಥ ಒಂದು ಆಟವಾಗಿದ್ದು, ಜೀವಕೋಶದ ಕಾರ್ಯಗಳಿಗೆ ಜೀವವನ್ನು ನೀಡುವ ಒಂದು ಅತ್ಯಾಧುನಿಕ ಮತ್ತು ಇಂಟರಾಕ್ಟಿವ್ ಆಟವಾಗಿದೆ. [2] ಆಟಗಾರನು ಜೀವಕೋಶವೊಂದರ ಪಾತ್ರ ವಹಿಸುತ್ತಾ, ವೈರಸ್ ಒಂದು ಜೀವಕೋಶವನ್ನು ಅಂದರೆ ನಿಮ್ಮನ್ನು ಸೋಲಿಸುವ ಮೊದಲು ಅದನ್ನು ಸೋಲಿಸಲು ಪ್ರಯತ್ನಿಸುತ್ತಾನೆ! ನಿಮ್ಮ ಮಕ್ಕಳಿಗೆ ಆಟವಾಡುತ್ತಲೇ ಇರಬೇಕೆಂದು ಮಾಡುವಂಥದ್ದು ಮತ್ತು ಜೀವಕೋಶಗಳ ವಿಶ್ವದ ಆಳಕ್ಕೆ ಇಳಿಯಬೇಕು ಎಂದೆನಿಸಲು ನೆರವಾಗುವಂಥದ್ದು ಈ ರೀತಿಯ ಮೋಜುಭರಿತ ಪಾತ್ರ-ವಹಿಸುವಿಕೆಯೇ ಆಗಿರುತ್ತದೆ.

3. ಸೈನ್ಸ್ ಕಿಡ್ಸ್ನೊಂದಿಗೆ ವಿಜ್ಞಾನದ ಪ್ರಯೋಗಗಳನ್ನು ವರ್ಚುವಲ್ ಆಗಿ ಅನ್ವೇಷಿಸಿ

ಪ್ರಯೋಗಗಳನ್ನು ವೀಕ್ಷಿಸುವುದು ಮತ್ತು ನಿರ್ವಹಿಸುವುದು ವಿಜ್ಞಾನದ ಕಲಿಕೆಯ ಪ್ರಮುಖ ಭಾಗವಾಗಿದೆ. ಸಂಪನ್ಮೂಲಗಳು ಲಭ್ಯವಿಲ್ಲದಿದ್ದಾಗಲೂ ಸೈನ್ಸ್ ಕಿಡ್ಸ್ನ ನೆರವಿನೊಂದಿಗೆ, ಪ್ರಯೋಗಗಳನ್ನು PC ಯಲ್ಲಿ ಲೈವ್ ಆಗಿ ವೀಕ್ಷಿಸುವುದು ಸಾಧ್ಯವಾಗುತ್ತದೆ. ವಿಷಯವನ್ನು ಹುಡುಕುವುದು, ಅರ್ಥ ಮಾಡಿಕೊಳ್ಳಲು ವಿಡಿಯೋವನ್ನು ಎಷ್ಟು ಬೇಕೋ ಅಷ್ಟು ಬಾರಿ ವೀಕ್ಷಿಸುವುದು ಮತ್ತು ಹೊಸದಾಗಿ ಕಲಿತ ಪರಿಕಲ್ಪನೆಯನ್ನು ವಾಸ್ತವಿಕ-ಜೀವನದೊಂದಿಗೆ ಸಂಪರ್ಕಿಸಲು ಮುಂದುವರೆದು ಹೆಚ್ಚಿನ ವಿಷಯವನ್ನು ಓದುವುದು ಮಾತ್ರವಷ್ಟೇ ನಿಮ್ಮ ಮಗುವು ಮಾಡಬೇಕಿರುವ ಕೆಲಸವಾಗಿರುತ್ತದೆ – ಈ ರೀತಿಯಾಗಿ ಪರೀಕ್ಷಾ ಸಮಯಕ್ಕೆ ನಿಮ್ಮ ಮಗು ಹೆಚ್ಚು ಕಾಲ ನೆನಪಿಟ್ಟುಕೊಳ್ಳಲು ನೆರವಾಗುತ್ತದೆ. [3]

ಮಗುವಿನ ಅಂತರಂಗದ ವಿಜ್ಞಾನಿಯನ್ನು ಒಂದು ಮಾರ್ಗದ ಮೂಲಕ ಪ್ರವಹಿಸಲು ಬಿಡುವ ವಿಷಯಕ್ಕೆ ಬಂದಾಗ, ಪ್ರಾಯೋಗಿಕವಾಗಿರುವುದು ನೆರವಾಗುತ್ತದೆ ಹಾಗೂ Makerspace projects ಅದನ್ನೇ ಮಾಡುತ್ತವೆ. ವೈಜ್ಞಾನಿಕ ಪ್ರಪಂಚದಲ್ಲಿ ನಿಮ್ಮ ಮಗು ತುತ್ತ ತುದಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುತ್ತಾ, PC ಯೊಂದು ವಿಭಿನ್ನ ಆಸಕ್ತಿಗಳು ಮತ್ತು ಎಲ್ಲ ವಯೋಮಾನದವರಿಗಾಗಿ ಬಹಳಷ್ಟು ಸಂಖ್ಯೆಯ ವಿಚಾರಗಳಿಗೆ ತಕ್ಷಣದ ಪ್ರವೇಶಾವಕಾಶವನ್ನು ಒದಗಿಸುತ್ತದೆ.