ವಿದ್ಯಾರ್ಥಿಗಳಿಗೆ ಅತ್ಯುತ್ತಮ ಲ್ಯಾಪ್‌ಟಾಪ್ ಅನ್ನು ಆಯ್ಕೆ ಮಾಡುವುದು ಹೇಗೆ

ನೀವು ನಿಮ್ಮ ಮಗುವಿಗೆ ಲ್ಯಾಪ್‌ಟಾಪ್ ಅನ್ನು ಆಯ್ಕೆ ಮಾಡುವಾಗ ನಿಮಗೋಸ್ಕರ ಆಯ್ಕೆ ಮಾಡುವ ಲ್ಯಾಪ್‌ಟ್ಯಾಪ್‌ಗಿಂತಲೂ ಸ್ವಲ್ಪ ಭಿನ್ನವಾಗಿರಬೇಕು. ನಿಮ್ಮ ಮಗುವಿಗೆ ಸರಿಯಾದ ಆಯ್ಕೆ ಮಾಡುವಾಗ ವಿವಿಧ ವರ್ಗಗಳ ಅಗತ್ಯತೆಗಳನ್ನು ಪೂರೈಸುವಂತಿರಬೇಕು. ನಿಮ್ಮ ಹೊಸ ಖರೀದಿಯನ್ನು ಮೌಲ್ಯಯುತಗೊಳಿಸಲು ಜಾಗರೂಕತೆಯಿಂದ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕು.

ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಲ್ಯಾಪ್‌ಟಾಪ್ ಆಯ್ಕೆ ಮಾಡಲು ಮಾರ್ಗದರ್ಶಿ.[1]

1. ದಕ್ಷತಾಶಾಸ್ತ್ರವನ್ನು ಪರಿಗಣಿಸಿ

ಲ್ಯಾಪ್‌ಟಾಪ್ ಅನ್ನು ಆಯ್ಕೆ ಮಾಡುವ ಮೊದಲು ಪರಿಗಣಿಸಬೇಕಾದ ಅತ್ಯಂತ ಪ್ರಮುಖವಾದ ಅಂಶ ಇದಾಗಿದೆ. ಇದು ಎಷ್ಟು ದೊಡ್ದದಾಗಿದೆ ಮತ್ತು ಇದನ್ನು ಉಪಯೋಗಿಸುವುದರಿಂದ ನಿಮ್ಮ ಮಗು ಎಷ್ಟರಮಟ್ಟಿಗೆ ಆನಂದಿಸುತ್ತದೆ ಎಂಬುದಾಗಿದೆ. ನೀವು ನಿಮ್ಮ ಮಗುವಿಗೆ ಸರಿಯಾದ ಆಯ್ಕೆ ಮಾಡಲು ಪ್ರಯತ್ನಿಸುವಾಗ ಮೊದಲು ಕೆಲವು ಆಯ್ದ ಮಾಡೆಲ್‌ಗಳ ಪಟ್ಟಿ ಸಿದ್ಧಪಡಿಸಿಕೊಳ್ಳಿ. ನಿಮ್ಮ ಮಗುವು ತನ್ನ ಹೊಸ ಸಾಧನದಿಂದ ಬಹಳಷ್ಟು ಆನಂದಿಸಲಿ.

2. ವೈಶಿಷ್ಟ್ಯಗಳು

ನಿಮ್ಮ ಮಗುವು ಲ್ಯಾಪ್‌ಟಾಪ್‌ನಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಬಹುದು ಎಂಬುದನ್ನು ಪರಿಗಣಿಸಿ. ಅದು ಗ್ರಾಫಿಕ್ಸ್ ಮತ್ತು ವಿನ್ಯಾಸಗಳಿಂದ ತುಂಬಿರಬೇಕೇ ಅಥವಾ ಪ್ರಾಥಮಿಕವಾಗಿ ಕೆಲವು ಕಸ್ಟಮ್ ಸಲಕರಣೆಗಳೊಂದಿಗೆ ಮಿಶ್ರಣವಾಗಿರುವ ವರ್ಡ್ ಪ್ರೊಸೆಸಿಂಗ್ ಆಗಿರಬೇಕೆ. ನಿಮ್ಮ ಮಗುವಿನ ಶಾಲೆಯು ಉಪಯೋಗಿಸಲು ಎದುರು ನೋಡುತ್ತಿರುವ ಸಾಫ್ಟ್ ವೇರ್ ಪ್ರೋಗ್ರಾಮ್‌ಗಳ ಮತ್ತು ಸಮರ್ಪಕವಾದ ಕಾನ್ಫಿಗರೇಶನ್ ಪ್ರಕಾರ ಆಯ್ಕೆ ಮಾಡಿ.

3. ನಿಮಗೆ ಟಚ್ ಸ್ಕ್ರೀನ್ ಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿ

ನಿಮ್ಮ ಮಗುವಿನ ಲ್ಯಾಪ್‌ಟಾಪ್ ಬಳಕೆಯನ್ನು ಅರ್ಥಮಾಡಿಕೊಳ್ಳುವುದು ಕೂಡ ನಿಮಗೆ ಟಚ್ ಸ್ಕ್ರೀನ್ ಬೇಕೆ ಅಥವಾ ಬೇಡವೇ ಎಂದು ತಿಳಿದುಕೊಳ್ಳಲು ಸಹಯ ಮಾಡುತ್ತದೆ. ಟಚ್ ಸ್ಕ್ರೀನ್ ಬಹಳಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುಕ್ಕೆ ಯಾವುದೇ ಕಡ್ಡಾಯ ಅಗತ್ಯವಿಲ್ಲ. ಇದು ಶಿಕ್ಷಣದ ಜೊತೆಗೆ ಕುಟುಂಬದ ಮನರಂಜನೆಗೆ ಅಗತ್ಯವಿರುವ ಸಾಧನವನ್ನು ಬಯಸುತ್ತಿದ್ದರೆ ಅದಕ್ಕೂ ಅತ್ಯಂತ ಸೂಕ್ತವಾಗಿರುತ್ತದೆ.

4. ಬಾಳಿಕೆ

ಮಗುವು ಉಪಯೋಗಿಸುವಾಗ ಕೈಜಾರುವ ಮತ್ತು ಬೀಳಿಸುವ ಯಾವುದೇ ಸಾಧ್ಯತೆ ಇರುವುದರಿಂದ ಕಠಿಣವಾದ ಮತ್ತು ಬಾಳಿಕೆ ಬರುವಂತಹ ಲ್ಯಾಪ್‌ಟಾಪ್ ಆಯ್ಕೆ ಮಾಡಿರಿ. ಡೆಲ್ ಅತ್ಯುತ್ತಮ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ ಅವುಗಳನ್ನು ಬಾಳಿಕೆ ಬರುವಂತೆ ಮತ್ತು ಯಾವುದೇ ರೀತಿಯ ಅತ್ಯುತ್ತಮ ಪರಿಸ್ಥಿತಿಗಳ ವೈವಿಧ್ಯತೆಯಲ್ಲಿ ಬಾಳಿಕೆ ಬರುವಂತೆ ಮಾಡಿದೆ.

5. ಪೋರ್ಟಬಲಿಟಿ

ನಿಮ್ಮ ಮಗುವು ಲ್ಯಾಪ್‌ಟಾಪ್ ಅನ್ನು ಶಾಲೆಯಲ್ಲಿ ಬಳಸುವುದಾದರೆ ಆಗ ನೀವು ಪೋರ್ಟಬಲಿಟಿ ಮತ್ತು ಬ್ಯಾಟರಿ ಬಾಳಿಕೆಯಂತಹ ಪ್ರಮುಖ ಅಂಶಗಳನ್ನು ಪರಿಗಣಿಸಬೇಕು. ಸಾಧನವನ್ನು ಚಾರ್ಜ್ ಮಾಡಿದಾಗ ಅದು ದೀರ್ಘಕಾಲದ ಬಾಳಿಕೆ ಬರುವಂತಿರಬೇಕು ಆದುದರಿಂದ ಅದು ತರಗತಿಯ ಮಧ್ಯದಲ್ಲಿ ಅಥವಾ ಪ್ರಮುಖ ಅಸೈನ್‌ಮೆಂಟ್ ಸಮಯದಲ್ಲಿ ಅದು ಕೈಕೊಡಬಾರದು. ಹಾಗೆಯೇ ನಿಮ್ಮ ಮಗುವು ಮಶೀನ್ ಅನ್ನು ಕೇವಲ ಮನೆಯಲ್ಲಿ ಮಾತ್ರ ಉಪಯೋಗಿಸಲು ಬಯಸಿದರೆ, ಆಗ ನೀವು ಹೆಚ್ಚಿನ ತಾಂತ್ರಿಕ ವೈಶಿಷ್ಟ್ಯಗಳಿಗೆ ಬ್ಯಾಟರಿ ಬಾಳಿಕೆ ಬರುವಂತಹ ಸಾಧನವನ್ನು ಆಯ್ಕೆ ಮಾಡಿಕೊಳ್ಳಬೇಕು.

ನೀವು ನಿಮ್ಮ ಮಗುವಿಗಾಗಿ ಕಂಪ್ಯೂಟರ್ ಅನ್ನು ಖರೀದಿಸಲು ನೋಡುತ್ತಿದ್ದರೆ ಮತ್ತು ನೀವಿನ್ನೂ ನಿರ್ಧರಿಸದೇ ಇದ್ದಲ್ಲಿ ನಮ್ಮ ಪ್ರಶ್ನಾವಳಿಯನ್ನು ಉಪಯೋಗಿಸಿ ಅತ್ಯುತ್ತಮ ಪಿಸಿಯನ್ನು ಕಂಡುಕೊಳ್ಳಿ[2]