ನಿಮ್ಮ ಮಗುವಿಗೆ ಸರಿಯಾದ ಶಾಲೆಯನ್ನು ಆಯ್ಕೆ ಮಾಡುವುದು ಹೇಗೆ

 

ಮಗುವು ತನ್ನ ರಚನಾತ್ಮಕ ವರ್ಷಗಳನ್ನು ಕಳೆಯಲಿರುವ ಶಾಲೆಯನ್ನೂ ಒಳಗೊಂಡು, ತಮ್ಮ ಮಗುವಿಗಾಗಿ ಪ್ರತಿಯೊಂದರಲ್ಲಿಯೂ ಅತ್ಯುತ್ತಮವಾದದ್ದನ್ನೇ ಪ್ರತಿಯೊಬ್ಬ ಪಾಲಕರೂ ಬಯಸುತ್ತಾರೆ. ವಾಸ್ತವದಲ್ಲಿ, ಒಬ್ಬ ಪಾಲಕರಾಗಿ ನೀವು ಕೈಗೊಳ್ಳಬೇಕಾದ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳಲ್ಲಿ ಇದೂ ಸಹ ಒಂದಾಗಿದೆ.

ಈ ಚೆಕ್ ಲಿಸ್ಟ್ ನೊಂದಿಗೆ, ನಿಮ್ಮ ಮಗುವಿನ ಭವಿಷ್ಯವನ್ನು ತಯಾರು ಮಾಡಲಿರುವ ಶಾಲೆಗಾಗಿ ನೀವು ಒಂದು ಉತ್ತಮವಾದ ಮಾಹಿತಿಯುಕ್ತ ಆಯ್ಕೆಯನ್ನು ಮಾಡುವ ದಾರಿಯಲ್ಲಿ ಸಾಗುತ್ತೀರಿ.

1) ಸ್ಥಳವನ್ನು ನಿರ್ಧರಿಸಿ

ನಿಮ್ಮ ಮಗುವು ಪ್ರಯಾಣಿಸುವುದರಲ್ಲಿಯೇ ಗಂಟೆಗಟ್ಟಲೇ ಸಮಯ ವ್ಯಯಿಸುವುದನ್ನು ಮತ್ತು ಅಧ್ಯಯನ ಮಾಡಲು ಅಥವಾ ಆಟವಾಡಲು ಸಾಧ್ಯವಾಗದಿರುವಂತೆ ಮನೆಗೆ ತುಂಬಾ ದಣಿದು ಬರುವುದನ್ನು ನೀವು ಬಯಸುವುದಿಲ್ಲ. ಅದಕ್ಕಾಗಿಯೇ ಶಾಲೆಯು ನಿಮ್ಮ ಮನೆಯಿಂದ ಒಂದು ಗಂಟೆಯ ಪ್ರಯಾಣಕ್ಕಿಂತ ಕಡಿಮೆ ಅಂತರದಲ್ಲಿರುವುದು ಮತ್ತು ಒಂದು ಸುರಕ್ಷಿತವಾದ ಸ್ಥಳದಲ್ಲಿಯೂ ಸಹ ಸ್ಥಾಪಿತವಾಗಿರುವುದು ಪ್ರಮುಖವಾಗುತ್ತದೆ.

2) ಅದರ ಖ್ಯಾತಿಯನ್ನು ಪುನರಾವಲೋಕಿಸಿ

ನೀವು ಹುಡುಕುತ್ತಿರುವ ಶಾಲೆಗಳ ಬಗ್ಗೆ ಒಂದು ಉತ್ತಮ ಮಾಹಿತಿಯುಕ್ತ ನಿರ್ಧಾರಕ್ಕೆ ಬರಲು ನಿಮ್ಮ ಸಂಬಂಧಿಗಳು, ಇತರ ಪಾಲಕರು, ಸಹೋದ್ಯೋಗಿಗಳು, ನೆರೆಯವರು ಮತ್ತು ಕೋರಾದಲ್ಲಿಯೂ ಸಹ - ನಿಮಗೆ ಪರಿಚಿತರಿರುವ ಎಲ್ಲರೊಂದಿಗೂ ಸಂಭಾಷಿಸಿ. ಹಾಗೂ ಗೂಗಲ್ ರಿವ್ಯೂಗಳ ಬಗ್ಗೆಯೂ ಸಹ ಮರೆಯಬೇಡಿ!

3) ಪಠ್ಯಕ್ರಮದ ವಿಷಯಕ್ಕೆ ಬಂದಾಗ ನಿಮ್ಮ ಆಯ್ಕೆಯನ್ನು ಮಾಡಿ

ಇದೆಲ್ಲವೂ, ಆ ಮಂಡಳಿಯು ನಿಮ್ಮ ಪ್ರದೇಶದಲ್ಲಿ ಲಭ್ಯವಿದೆಯೇ ಎನ್ನುವುದರ ಮೇಲೆ ಹಾಗೂ ನಿಮ್ಮ ಮಗುವು ತನ್ನ ಶಾಲಾ ಅವಧಿಯುದ್ದಕ್ಕೂ ಒಂದೇ ಮಂಡಳಿಯಲ್ಲಿ ಅಧ್ಯಯನ ಮಾಡುವಂತೆ 12ನೇ ತರಗತಿಯವರೆಗೆ ಲಭ್ಯವಿದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮಗುವನ್ನು ಶಾಲೆಯಲ್ಲಿ ನೋಂದಾಯಿಸುವ ಮೊದಲು ಪ್ರತಿ ಬೋರ್ಡಿನ ಬಗ್ಗೆ ನಿಮಗೆ ಸಾಧ್ಯವಿರುವಷ್ಟನ್ನು ಓದುವುದನ್ನು ಖಚಿತಪಡಿಸಿಕೊಳ್ಳಿ.

4) ನನ್ನ PC ಇಲ್ಲದೇ ಮಾಡಲಾಗುವುದಿಲ್ಲ

ಇದೇ ನಿಮ್ಮ ಮಗುವಿನ ಬೇಡಿಕೆಯಾಗಿರುತ್ತದೆ! ಹಾಗಾಗಿ, ಸುಸಜ್ಜಿತ ಕಂಪ್ಯೂಟರ್ ರೂಮನ್ನು ಹೊಂದಿರುವ ಅಥವಾ ಕನಿಷ್ಟ ಪಕ್ಷ ತಮ್ಮದೇ ಆದ PC ಗಳನ್ನು ತರಲು ವಿದ್ಯಾರ್ಥಿಗಳನ್ನು ಅನುಮತಿಸುವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಿ. ಶಿಕ್ಷಕರಿಗೂ ಸಹ ಇದು ಅನ್ವಯವಾಗುತ್ತದೆ, ಅವರು ಹೆಚ್ಚು ತಂತ್ರಜ್ಞಾನ ನಿಪುಣರಿದ್ದಷ್ಟು ಹೆಚ್ಚು ಉತ್ತಮವಾಗಿರುತ್ತದೆ. ಏನೇ ಆದರೂ, ನಿಮ್ಮ ಮಗುವು ಕೆಲಸದ ಪ್ರಪಂಚದೊಳಕ್ಕೆ ಕಾಲಿಡುವ ಮೊದಲು PC ಯನ್ನು ಬಳಸುವ ಮೂಲಭೂತ ಜ್ಞಾನವನ್ನಾದರೂ ಹೊಂದಿರಲಿ ಎಂಬುದು ನಿಮ್ಮ ಆಶಯವಾಗಿರುತ್ತದೆ.

5) ಪಠ್ಯೇತರ ಚಟುವಟಿಕೆಗಳೂ ಸಹ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ

ಒಬ್ಬ ವಯಸ್ಕ ವ್ಯಕ್ತಿಗೆ ಕೆಲಸವನ್ನು ಹೊರತುಪಡಿಸಿ ಬೇರೆಯದನ್ನು ಮಾಡುವುದೂ ಸಹ ಉತ್ತಮವಾಗಿರುವ ರೀತಿಯಲ್ಲಿಯೇ, ನಿಮ್ಮ ಮಗುವೂ ಸಹ ಅಧ್ಯಯನವನ್ನು ಹೊರತುಪಡಿಸಿದ ವಾತಾವರಣದಲ್ಲಿ ಉಸಿರಾಡಿಸಬಯಸುತ್ತದೆ. ನಿಮ್ಮ ಮಗುವು ಅಧ್ಯಯನದಿಂದ ಒಂದು ಉತ್ಪಾದಕ ವಿರಾಮವನ್ನು ತೆಗೆದುಕೊಳ್ಳಲು ಹಾಗೂ ಸಾಮಾಜಿಕ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಶಾಲಾ ನಂತರದ ಚಟುವಟಿಕೆಗಳು ಒಂದು ಅದ್ಭುತವಾದ ಅವಕಾಶವಾಗಿರುತ್ತವೆ, ವಾಸ್ತವದಲ್ಲಿ, ಶಾಲೆಯು ಹೆಚ್ಚು ಹೆಚ್ಚು ವಿಧಗಳ ಚಟುವಟಿಕೆಗಳನ್ನು ಒದಗಿಸಿದಷ್ಟೂ ನಿಮ್ಮ ಮಗುವಿಗೆ ಹೆಚ್ಚು ಉತ್ತಮವಾಗಿರುತ್ತದೆ.

ಒಂದು ಸರಿಯಾದ ಶಾಲೆಯು ಎಲ್ಲ ವ್ಯತ್ಯಾಸವನ್ನೂ ಮಾಡುತ್ತದೆ.