PC ಯನ್ನು ಬಳಸಿಕೊಂಡು ಸಮೂಹ ಕಾರ್ಯವನ್ನು ಸಂಪೂರ್ಣವಾಗಿ ಬದಲಾಯಿಸುವುದು ಹೇಗೆ

 

ವಿದ್ಯಾರ್ಥಿಗಳಿಗಾಗಿ ಸಮೂಹ ಕಾರ್ಯವು ಕೆಲಸ ಮಾಡುವಂತೆ ಮಾಡಲು ಸ್ವಲ್ಪ ಪ್ರಮಾಣದ ಪ್ರಯತ್ನದ ಅವಶ್ಯಕತೆ ಇರುತ್ತದೆ. ಈ ಮಿಶ್ರಣಕ್ಕೆ PC ಯನ್ನೂ ಸೇರಿಸಿದಲ್ಲಿ, ಶಿಕ್ಷಕ ಮತ್ತು ವಿದ್ಯಾರ್ಥಿ, ಇಬ್ಬರ ಕೆಲಸವೂ ತುಂಬಾ ಸುಗಮವಾಗುತ್ತದೆ. PC ಯನ್ನು ಬಳಸಿಕೊಂಡು ಸಮೂಹ ಕಾರ್ಯವನ್ನು ಸಂಪೂರ್ಣವಾಗಿ ನೀವು ಹೇಗೆ ಬದಲಾಯಿಸಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

1) ಬೇಕಾಗಿರುವ ಪ್ರತಿಯೊಂದನ್ನೂ ನೀವು ಒಂದೇ ಸ್ಥಳದಲ್ಲಿ ಇರಿಸಬಹುದು

ಮನೆಗೆಲಸ, ಉಪಯುಕ್ತ ವೆಬ್ಸೈಟ್ಗಳು, ಓದುವ ಸಾಮಗ್ರಿಗಳಿಂದ ಹಿಡಿದು ವಿದ್ಯಾರ್ಥಿಗಳ ರೆಫರನ್ಸ್ಗಾಗಿ ಹಿಂದಿನ ಪ್ರಾಜೆಕ್ಟ್ಗಳವರೆಗೆ – ಅಗತ್ಯವಾಗುವ ಎಲ್ಲ ದತ್ತಾಂಶ / ಮಾಹಿತಿಯನ್ನು PC ಯಲ್ಲಿ ನೀವು ಒಂದು ಸ್ಥಳದಲ್ಲಿ ಇರಿಸಬಹುದು. ಅದನ್ನು ವಿದ್ಯಾರ್ಥಿಗಳಿಗೆ ಇ-ಮೇಲ್ ಮಾಡಬಹುದು, ತಮಗೆ ಬೇಕಾಗುವ ಪ್ರತಿಯೊಂದನ್ನೂ ಒಂದು ಸ್ಥಳದಲ್ಲಿ ಹುಡುಕಿ ತಲುಪಲು ನಿಮ್ಮ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಅದನ್ನು Google Drive [1] ಅಥವಾ ನಿಮ್ಮದೇ ಸ್ವಂತದ WikiSpaces Classroom ಗಳಲ್ಲಿ ಅಪ್ಲೋಡ್ ಮಾಡಬಹುದು. ಬೇರೆ ಬೇರೆ ವಿಷಯಗಳನ್ನು ಹುಡುಕುತ್ತಾ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗಿ ವ್ಯಯವಾಗುವುದಿಲ್ಲ ಹಾಗೂ ಪ್ರಾಜೆಕ್ಟ್ ಅನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದರ ಕಡೆಗೆ ನಿಜವಾದ ಗಮನವನ್ನು ಕೇಂದ್ರೀಕರಿಸುತ್ತಾ ಉತ್ತಮ ಆರಂಭವನ್ನು ಸಾಧಿಸುತ್ತಾರಾದ್ದರಿಂದ ಇದು ಪ್ರಯೋಜನಕಾರಿಯಾಗಿರುತ್ತದೆ.

2) ಚಿಕ್ಕ ಚಿಕ್ಕ ವಿಷಯಗಳ ಜಾಡು ಇರಿಸುವುದು ಸಾಧ್ಯವಾಗುತ್ತದೆ

ಸಾಮಾನ್ಯವಾಗಿ, ಕೆಲಸಗಳು ಒಂದಕ್ಕೊಂದು ಉಳಿದುಬಿಟ್ಟು ವಿದ್ಯಾರ್ಥಿಗಳಿಗೆ ಕೊನೆಯ ಘಳಿಗೆಯ ಒತ್ತಡವನ್ನು ಸೃಷ್ಟಿಸುತ್ತವೆ. ಕೆಲಸಗಳನ್ನು, ಮಾಡಬಹುದಾದ ಚಿಕ್ಕ ಚಿಕ್ಕ ಗಾತ್ರಗಳಲ್ಲಿ ವಿಭಜಿಸುವ ಮೂಲಕ, ಮತ್ತು ಹಂತಗಳನ್ನು ನಿಗದಿತವಾಗಿ ಟ್ರ್ಯಾಕ್ ಮಾಡುವ ಮೂಲಕ (ಅವುಗಳು ಎಷ್ಟೇ ಚಿಕ್ಕವಾಗಿರಲಿ), ಸಮೂಹ ಕಾರ್ಯಗಳು ಕೆಲಸ ಮಾಡುವಂತೆ ನೀವು ಮಾಡಬಹುದು.
ಈ ಕೆಳಗಿನವುಗಳನ್ನು ಮಾಡುವ ಮೂಲಕ ನೀವು ಪ್ರಗತಿಯ ಜಾಡನ್ನು ಇರಿಸಬಹುದು:
1. ತರಗತಿ ನಡೆಯುವ ಸಮಯದಲ್ಲಿ ಪ್ರತಿಯೊಂದು ಸಮೂಹದೊಂದಿಗೆ ಆಳವಾದ ಸಂಭಾಷಣೆಯಲ್ಲಿ ತೊಡಗಿಕೊಳ್ಳುವುದು.
2. ಸಭೆಗಳಿಗಾಗಿ ತರಗತಿಯ ಸ್ವಲ್ಪ ಸಮಯವನ್ನು ಒದಗಿಸುವ ಮೂಲಕ ಸಮೂಹ ಚರ್ಚೆಯನ್ನು ಸೇರಿಕೊಳ್ಳುವುದು.
3. ನೀವು ಬಳಸುತ್ತಿರುವ ಕ್ಲೌಡ್ ಸರ್ವೀಸ್ನಲ್ಲಿ ಏನಾಗುತ್ತಿದೆ ಎಂದು ನಿಗದಿತವಾಗಿ ಪರಿಶೀಲಿಸುತ್ತಿರುವುದು
4. ಸಮೂಹದ ಪ್ರತಿಯೊಬ್ಬ ಸದಸ್ಯರಿಂದ ಸಾಧಿಸಿದ ಪ್ರಗತಿಯ ಮೇಲಿನ ನಿಗದಿತ ಅಪ್ಡೇಟ್ಗಳೊಂದಿಗೆ ಕೆಲಸವು ಸಂಪೂರ್ಣಗೊಂಡ ನಂತರ ನಿಮಗೆ ಇ-ಮೇಲ್ ಮಾಡುವಂತೆ ನಿಮ್ಮ ವಿದ್ಯಾರ್ಥಿಗಳನ್ನು ಕೇಳುವುದು

3) ತಮ್ಮನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಕೇಳುವುದು

ಇದು ಮೊದಲಿಗೆ ಸ್ವಲ್ಪ ಅಪಾಯಕಾರಿ ಎನ್ನಿಸಿದರೂ ಸಹ, ಸಮೂಹದಲ್ಲಿ ಯಾರು ಗರಿಷ್ಠ ಅಥವಾ ಕನಿಷ್ಟ ಮಟ್ಟದ ಕೊಡುಗೆಯನ್ನು ನೀಡಿದ್ದಾರೆ ಎಂಬುದನ್ನು ನಿರ್ಧರಿಸಲು ನೀವು ಸಮರ್ಥರಾಗುವುದರಿಂದ, ಈ ದಿಶೆಯಲ್ಲಿ ಮುಂದುವರೆಯುವುದು ಯೋಗ್ಯವಾಗಿರುತ್ತದೆ. ಅಂತಿಮ ಪ್ರಾಜೆಕ್ಟ್ನ ಕಡೆಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಕೊಡುಗೆಯ ವಿವರವಾದ ಮೇಲ್ನೋಟವನ್ನು ನಿಮಗೆ ಒದಗಿಸಲು ನೇರವಾದ ಹಾಗೂ ಅನಿಯಮಿತ ಪ್ರಶ್ನೆಗಳನ್ನು ಕೇಳಲು Survey Monkey [2] ಅಥವಾ Google Form [3] ಗಳಂಥ ಸಂಪನ್ಮೂಲಗಳು ನಿಮಗೆ ನೆರವಾಗಬಲ್ಲವು.

ಇತರರ ಜೊತೆಗೂಡಿ ಕೆಲಸ ಮಾಡುವುದು ಬೆಳೆದು ದೊಡ್ಡವರಾದವರು ಮತ್ತು ವಿದ್ಯಾರ್ಥಿಗಳಂಥವರು ನಿರ್ಲಕ್ಷಿಸಬಾರದಂಥ ಒಂದು ವಿಷಯವಾಗಿದೆ, ಸಮೂಹ ಕಾರ್ಯವೆಂಬುದು ಕಲಿಸಬಹುದಾದಂಥ ಹಾಗೂ ಕಲಿಯಬಹುದಾದಂಥ ವಿಷಯವಾಗಿರುವುದು ಅದೃಷ್ಟವೇ ಸರಿ. ವಿಷಯ-ನಿರ್ದಿಷ್ಟ PC ಕಲಿಕಾ ಸಂಪನ್ಮೂಲಗಳ ಜೊತೆಯಲ್ಲಿ ಹೆಚ್ಚು ಹೆಚ್ಚು ಪ್ರಾಜೆಕ್ಟ್ಗಳನ್ನು ನೀವು ನೀಡಿದಂತೆ, ಇತರರ ಜೊತೆಗೂಡಿ ಕೆಲಸ ಮಾಡುವುದಕ್ಕೆ ಮತ್ತು PC ಯನ್ನು ಬಳಸುವುದಕ್ಕೆ ನಿಮ್ಮ ವಿದ್ಯಾರ್ಥಿಗಳು ಹೆಚ್ಚು ಉತ್ತಮವಾಗಿ ಹೊಂದಿಕೊಳ್ಳುತ್ತಾರೆ!