ನಿಮ್ಮ PC ಯ ಸ್ಟೋರೇಜ್ ಅನ್ನು ಪರಿಣಾಮಕಾರಿಯಾಗಿ ಆಯೋಜಿಸುವುದು ಹೇಗೆ

 

ನಿಮ್ಮ PC ಯಲ್ಲಿ ಲಭ್ಯವಿರುವ ಸ್ಥಳಾವಕಾಶದ ಅತ್ಯುತ್ತಮ ಉಪಯೋಗವನ್ನು ಪಡೆದುಕೊಳ್ಳುವುದರ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದೀರಾ ಅಥವಾ ಶಾಲೆಯ ಕೆಲಸಕ್ಕೆ ನಿಮಗೆ ಇನ್ನೂ ಹೆಚ್ಚು ಸ್ಥಳಾವಕಾಶ ಬೇಕು ಎಂಬ ಭಾವನೆಯನ್ನು ಹೊಂದಿದ್ದೀರಾ? ನಿಮ್ಮ PC ಯ ಸ್ಟೋರೇಜ್ ಅನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಈ ಐದು ವಿಷಯಗಳನ್ನು ಅನುಸರಿಸಿ, ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

1) ಧೂಳನ್ನು ಸ್ವಚ್ಛಗೊಳಿಸಿ

ನಿಮ್ಮ PC ಮೇಲಿನ ಭೌತಿಕ ಧೂಳು ನೀವಂದುಕೊಂಡದ್ದಕ್ಕಿಂತ ಹೆಚ್ಚಿನ ಹಾನಿಯನ್ನುಂಟು ಮಾಡಬಲ್ಲದು. ನಿಮ್ಮ PC ಯನ್ನು ಒಂದು ಮಾಲ್ವೇರ್ ಹಾಳುಗೆಡವಬಹುದಾದಂತೆ, ಒಳಗೆ ಸಿಲುಕಿಕೊಂಡಿರುವ ಭೌತಿಕ ಧೂಳು, ಹಾರ್ಡ್ವೇರ್ನ ದೀರ್ಘ ಬಾಳಿಕೆಯನ್ನು ಕಡಿಮೆ ಮಾಡಬಹುದು. ಒಂದು ಬಟ್ಟೆ ಮತ್ತು ಕ್ಲೀನಿಂಗ್ ಸೊಲ್ಯುಶನ್ನಿಂದ ನೀವು ಆರಂಭಿಸಬಹುದು ಅಥವಾ ಕೀಬೋರ್ಡ್, ಮೌಸ್, ಮಾನಿಟರ್ ಮತ್ತು ಆಕ್ಸಸರೀಗಳನ್ನು ಸ್ವಚ್ಛಗೊಳಿಸಲು ಫೇಲ್-ಸೇಫ್ ಸ್ಟಿಕಿ ನೋಟ್ ತೆಗೆದುಕೊಳ್ಳಬಹುದು. ಸ್ವಚ್ಛಗೊಳಿಸುವಿಕೆಯನ್ನು ಆರಂಭಿಸುವ ಮೊದಲು ಪ್ರತಿಯೊಂದನ್ನು ಸ್ವಿಚ್ ಆಫ್ ಮಾಡುವುದನ್ನು ಮಾತ್ರ ಮರೆಯಬೇಡಿ.

2) ನಿಮ್ಮ ಹಾರ್ಡ್ ಡ್ರೈವ್ಗಳನ್ನು ಕ್ಲೀಯರ್ ಮಾಡಿ

ಪ್ರತಿನಿತ್ಯ ನಾವು ಅನೇಕ ಸಂಖ್ಯೆಯ ಫೈಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತೇವೆ. ಆದರೆ ಅವುಗಳು ನಮಗೆ ಇನ್ನೂ ಬೇಕಾಗಿವೆಯೇ? ಅವುಗಳನ್ನು ವಿಂಗಡಿಸಿ ಸ್ವಚ್ಛಗೊಳಿಸಲು, ನಿಮ್ಮ ಫೋಲ್ಡರ್ಗಳಿಗೆ ಹೋಗಿ ಡ್ಯುಪ್ಲಿಕೇಟ್ ಇರುವ, ಇನ್ನು ಮುಂದೆ ಸಂಬಂಧಿಸಿರದ ಅಥವಾ ಸ್ಪಾಮ್ ಸ್ವರೂಪದ ಎಲ್ಲಾ ಫೈಲ್ಗಳನ್ನು ಡಿಲೀಟ್ ಮಾಡಿಬಿಡಿ. ನೀವು ಎಷ್ಟು ಸ್ಟೋರೇಜ್ ಅನ್ನು ಹಿಡಿದುಕೊಂಡಿದ್ದಿರಿ ಎಂಬುದನ್ನು ಕಂಡು ನಿಮಗೇ ಆಶ್ಚರ್ಯವಾಗುತ್ತದೆ.

3) ನಿಮ್ಮ ಫೈಲ್ಗಳನ್ನು ಮರುಹೊಂದಾಣಿಕೆ ಮಾಡಿ

ನೀವು ಡಿಸ್ಕ್ ಫ್ರ್ಯಾಗ್ಮೆಂಟೇಶನ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಅದು ಒಂದು ಕಠಿಣ ಪದವಾಗಿ ತೋರಬಹುದಾದರೂ ನಿಮ್ಮ ಹಾರ್ಡ್ ಡಿಸ್ಕ್ ಅನ್ನು ಆಪ್ಟಿಮೈಜ್ ಮಾಡಲು, ಚದುರಿಹೋಗಿರುವ ನಿಮ್ಮ ಫೈಲ್ಗಳನ್ನು ಸಂಗ್ರಹಿಸುವ ಮೂಲಕ ಅದು ನಿಮ್ಮ ಸ್ಟೋರೇಜ್ನಲ್ಲಿನ ಎಲ್ಲ ಫೈಲ್ಗಳನ್ನು ಚೊಕ್ಕವಾದ ಮತ್ತು ಕ್ರಮಬದ್ಧವಾದ ಶೈಲಿಯಲ್ಲಿ ವಿಂಗಡಿಸುವ ಒಂದು ಸರಳವಾದ ಪ್ರಕ್ರಿಯೆಯಾಗಿದ್ದು, ಈ ಮೂಲಕ ನಿಮ್ಮ PC ಯನ್ನು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮತ್ತು ಅದರಿಂದಾಗಿ ವೇಗವಾಗಿ ಕೆಲಸ ಮಾಡುವಂತೆ ಮಾಡುತ್ತದೆ.

4) ನಿಮ್ಮ ಇನ್ಬಾಕ್ಸ್ ಅನ್ನು ಚೊಕ್ಕಟವಾಗಿ ಇರಿಸಿ

ನಿಮ್ಮ PC ಯ ಸ್ಟೋರೇಜ್ ಬಗ್ಗೆ ಮಾತ್ರ ನೀವು ಗಮನ ಹರಿಸಿದರೆ ಸಾಲದು. ಸ್ಪಾಮ್ ಅಥವಾ ಇನ್ನು ಮುಂದೆ ನಿಮಗೆ ಉಪಯುಕ್ತವಲ್ಲದ ಇ-ಮೇಲ್ಗಳನ್ನು ಕ್ಲೀನ್ ಮಾಡಲು ನಿಮ್ಮ ಇನ್ಬಾಕ್ಸ್ ಅನ್ನು[ಗಳನ್ನು] ಪರಿಶೀಲಿಸಿ. ಹಾಗೂ, ಸ್ಪಾಮ್ ಫೋಲ್ಡರ್ಗೆ ಹೋಗಿರದ, ಇತರ ಫೋಲ್ಡರ್ಗಳಲ್ಲಿರುವ ಪ್ರಮುಖವಲ್ಲದ ಇ-ಮೇಲ್ಗಳನ್ನೂ ಸಹ ಪರಿಶೀಲಿಸುವುದನ್ನು ಮರೆಯಬೇಡಿ, ಇದರಿಂದ ನಿಮ್ಮ ಇನ್ಬಾಕ್ಸ್ ಸಂಪೂರ್ಣವಾಗಿ ಆರ್ಗನೈಜ್ಡ್ ಆಗಿ ಇರುತ್ತದೆ ಮತ್ತು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುತ್ತದೆ.

5) ಬಳಸದಿರುವ ಪ್ರೋಗ್ರಾಂಗಳನ್ನು ತೆಗೆದುಹಾಕಿ

ನಿಮಗೆ ನಿಜವಾಗಿಯೂ ಅವಶ್ಯವಿರದಂಥವುಗಳನ್ನು ಅನ್ಇನ್ಸ್ಟಾಲ್ ಮಾಡಲು ಕಂಟ್ರೋಲ್ ಪ್ಯಾನಲ್ನ ಬಳಕೆಯು ತುಂಬ ಸುಲಭವಾದ ವಿಧಾನವಾಗಿದೆ. ‘ಆ್ಯಡ್ ಆರ್ ರಿಮೂವ್ ಪ್ರೋಗ್ರಾಮ್ಸ್’ ವಿಭಾಗಕ್ಕೆ ಹೋಗಿ, ನಿಮಗೆ ಅವಶ್ಯವಿರದ ಸಾಫ್ಟ್ವೇರ್ ಅನ್ನು[ಗಳನ್ನು] ಗುರುತಿಸಿ ಹಾಗೂ ನಿಮ್ಮ PC ಯಲ್ಲಿನ ಬಹಳ ಅಗತ್ಯವಾಗಿರುವ ಸ್ಪೇಸ್ ಅನ್ನು ಖಾಲಿ ಮಾಡಿ.

ಈಗ ನಿಮ್ಮ ಸ್ಟೋರೇಜ್ ಸಮಸ್ಯೆ ಪರಿಹಾರವಾಗಿರುವುದರಿಂದ, ನಿಮ್ಮ ಕಂಪ್ಯೂಟರ್ನೊಳಗೆ ಏನೇನಿದೆ ಎಂಬುದನ್ನು ಈಗ ತಿಳಿದುಕೊಳ್ಳುವ ಸಮಯವಾಗಿದೆ!