PC ಯನ್ನು ಬಳಸಿಕೊಂಡು ಹೊಸ ಭಾಷೆಯೊಂದನ್ನು ಕಲಿಯಲು ನಿಮ್ಮ ಮಗುವಿಗೆ ನೆರವಾಗುವುದು ಹೇಗೆ

 

ಅದು ಶಾಲೆಯ ಅಧ್ಯಾದೇಶವಾಗಿದ್ದಿರಬಹುದು, ಆದರೆ ಎರಡನೇ ಭಾಷೆಯೊಂದನ್ನು ಕಲಿಯುವುದು ಕೆಲಸದ ಪ್ರಪಂಚದ ಜವಾಬ್ದಾರಿಯನ್ನು ಹೊರಲು ನಿಮ್ಮ ಮಗುವನ್ನು ತಯಾರಾಗಿಸುತ್ತದೆ. ಏಕೆಂದರೆ ಮನೆಯಲ್ಲಿ ಮಾತನಾಡದ ಭಾಷೆಯೊಂದನ್ನು ಕಲಿಯುವುದನ್ನೂ ಒಳಗೊಂಡಂತೆ, ನಿಮ್ಮ ಮಗುವು ಸವಾಲೊಂದನ್ನು ನೇರಾನೇರವಾಗಿ ನಿಭಾಯಿಸಬಲ್ಲದು ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಮನೆಯಲ್ಲಿನ ಒಂದು PC ಯೊಂದಿಗೆ, ಭಾಷೆಯೊಂದನ್ನು ಕಲಿಯುವುದು ನಿಮ್ಮ ಮಗುವಿಗೆ ಬಹಳ ಸುಲಭವಾಗುತ್ತದೆ. ವಾಸ್ತವದಲ್ಲಿ, ಸ್ವಲ್ಪ ಮಟ್ಟಿಗೆ ಅದು ತುಂಬಾ ವೇಗವಾಗಿಯೂ ಇರುತ್ತದೆ. ಕಲಿಕಾ ಸಂಪನ್ಮೂಲಗಳು 24/7 ಲಭ್ಯವಿರುವುದರಿಂದ, ಎಲ್ಲಿಯಾದರೂ ಆಗಲಿ, ಯಾವಾಗಲಾದರೂ ಆಗಲಿ, ತಮ್ಮದೇ ಆದ ಗತಿಯಲ್ಲಿ ಮೂಲಭೂತ ವಿಷಯಗಳಲ್ಲಿ ಪರಿಣತಿಯನ್ನು ಸಾಧಿಸಲು ನಿಮ್ಮ ಮಗು ಆಯ್ಕೆ ಮಾಡಬಹುದು – ಇಂಟರಾಕ್ಟಿವ್ ಆದ ಮತ್ತು ಆನಂದಿಸಬಹುದಾದ ವಿಧಾನದಲ್ಲಿ ಹೊಸದೇನನ್ನೋ ಕಲಿಯುವುದರ ಉತ್ಸಾಹದಿಂದಾಗಿ ಇದು ಬಹುಪಾಲು ಸಮಯ ಕೇವಲ ಶಾಲೆ ಮತ್ತು ಟ್ಯೂಷನ್ಗಳಲ್ಲಿನ ಕಲಿಕೆಗಿಂತ ಹೆಚ್ಚು ವೇಗದಿಂದ ಕೂಡಿರುತ್ತದೆ.

PC ಹೇಗೆ ನೆರವಾಗುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ:

 

1) ವ್ಯಾಕರಣವನ್ನು ಕಲಿತುಕೊಳ್ಳಿ 

ವ್ಯಾಕರಣವೆಂಬುದು ನಿಮ್ಮ ಮಗುವಿನ ಭಾಷಾ-ಕಲಿಕೆ ಪ್ರಯಾಣದ ಮೊದಲನೇ ಹೆಜ್ಜೆಯಾಗಿರುತ್ತದೆ. ನಮ್ಮ ದೇಶದಲ್ಲಿ ಕಲಿಸಲಾಗುವ ಈ ಕೆಳಗಿನ ಪ್ರಾದೇಶಿಕ ಭಾಷೆಗಳಿಗಾಗಿ ದೃಶ್ಯ ಹಾಗೂ ಶ್ರವಣ, ಎರಡೂ ಸಂಪನ್ಮೂಲಗಳ ಒದಗಿಸುವಿಕೆಯನ್ನು ಆರಂಭಿಸಲು ಮೈ ಲಾಂಗ್ವೇಜ್ ಎಂಬುದು ಒಂದು ಉಪಯುಕ್ತ ತಾಣವಾಗಿದೆ:

1. ಗುಜರಾತಿ
2. ಕನ್ನಡ
3. ತೆಲುಗು
4. ಬಂಗಾಳಿ
5. ಹಿಂದಿ
6. ಮಲಯಾಳಂ
7. ಮರಾಠಿ
8. ಪಂಜಾಬಿ
9. ತಮಿಳು

ಮೌಖಿಕ ಅಥವಾ ಮಾತನಾಡುವ ಪರೀಕ್ಷೆಗಳನ್ನೂ ಸಹ ಅನೇಕ ಪರೀಕ್ಷಾ ಮಂಡಳಿಗಳು ಒಳಗೊಳ್ಳುತ್ತವೆ. ನಿಮ್ಮ ಮಗುವಿಗೆ ಒಂದು ಬಾರಿ ವ್ಯಾಕರಣದ ಮೇಲಿನ ಹಿಡಿತ ದೊರೆತಲ್ಲಿ ಹಾಗೂ ಮೂಲ ಶಬ್ದಗಳು ಮತ್ತು ಪದಪುಂಜಗಳ ಬಗ್ಗೆ ತಿಳಿದುಕೊಂಡಲ್ಲಿ, ಅಭ್ಯಾಸ ಮಾಡುವಿಕೆಯೊಂದಿಗೆ ಸಂಭಾಷಣೆ ಮಾಡುವುದು ಸರಳವಾಗಿರುತ್ತದೆ.

 

2) ಭಾಷೆಯು ಜೀವಂತವಾಗಿ ಬರುವುದನ್ನು ವೀಕ್ಷಿಸಿ

ಭಾಷೆಯೊಂದಿಗೆ ಹೆಚ್ಚು ವೈಯಕ್ತಿಕ ಸಂಪರ್ಕವನ್ನು ನಿರ್ಮಿಸಿಕೊಳ್ಳುತ್ತಾ, ಆ ಭಾಷೆಯನ್ನು ಮಾತನಾಡುವುದೆಂದರೆ ಅರ್ಧ ಕೆಲಸ ಮುಗಿದಂತೆಯೇ. ನಿಮ್ಮ ಮಗುವಿಗೆ ಮನರಂಜನೆ ಹಾಗೂ ಶಿಕ್ಷಣ ಎರಡನ್ನೂ ಒಂದೇ ಬಾರಿಗೆ ಒದಗಿಸುತ್ತಾ, ಯೂ ಟ್ಯೂಬ್, ವೂಟ್, ಹಾಟ್ಸ್ಟಾರ್, ನೆಟ್ಫ್ಲಿಕ್ಸ್ ಮತ್ತು ಇತರ ಸ್ಟ್ರೀಮಿಂಗ್ ಪ್ಲ್ಯಾಟ್ಫಾರ್ಮ್ಗಳು ನಿಮ್ಮ ಮಗು ವೀಕ್ಷಿಸಬಹುದಾದ, ವಯೋಮಾನಕ್ಕೆ-ಸೂಕ್ತವಾದ, ಉಚ್ಛಾರ, ಭಾಷಾ-ನಿರ್ದಿಷ್ಟ ಛಾಯೆಗಳು ಮತ್ತು ಹೊಸ ಹೊಸ ಪದಗಳನ್ನು ಗ್ರಹಿಸುವುದಕ್ಕಾಗಿ ಸಬ್ಟೈಟಲ್ಗಳನ್ನು ಹೊಂದಿರುವ ಮೂವಿಗಳು ಮತ್ತು ಟಿವಿ ಶೋಗಳನ್ನು ಹೊಂದಿವೆ! ಈ “ಪರಿಚಿತತೆ” ಅಂಶವು ದೀರ್ಘಕಾಲದ ನೆನಪಿಗಾಗಿಯೂ ಸಹ ಖಂಡಿತವಾಗಿ ನೆರವಾಗುತ್ತದೆ.

 

3) ಫ್ಲ್ಯಾಶ್ಕಾರ್ಡ್ಗಳೊಂದಿಗೆ ಅತ್ಯುತ್ತಮ ಸ್ನೇಹಿತರಾಗಿರಿ 

ಶಬ್ದಭಾಂಡಾರವನ್ನು ಕಲಿಯುವ ಒಂದು ಸಾಬೀತಾದ ಮಾರ್ಗವಾಗಿರುವ ಫ್ಲ್ಯಾಶ್ಕಾರ್ಡ್ಗಳು, ಭಾಷೆಯೊಂದರಲ್ಲಿ ಪರಿಣತಿಯನ್ನು ಸಾಧಿಸುವ ಒಂದು ಮೋಜುಭರಿತ ಹಾಗೂ ಸ್ಪರ್ಧಾತ್ಮಕ ವಿಧಾನವಾಗಿದೆ. 101 ಲಾಂಗ್ವೇಜಸ್ ಎಂಬುದು ನಮ್ಮ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವ ಶ್ರೇಷ್ಠವಾದ PC ಸಂಪನ್ಮೂಲವಾಗಿದೆ.

1. ಹಿಂದಿ
2. ಬಂಗಾಳಿ
3. ತೆಲುಗು
4. ತಮಿಳು
5. ಮರಾಠಿ
6. ಗುಜರಾತಿ

ಅದು ದ್ವಿತೀಯ ಭಾಷೆಯಾಗಿರಲಿ, ತೃತೀಯ ಭಾಷೆಯಾಗಿರಲಿ, ಎಲ್ಲ ಪರೀಕ್ಷಾ ಮಂಡಳಿಗಳಾದ್ಯಂತ, ಎಲ್ಲ ಅವಶ್ಯಕತೆಗಳಿಗೆ ಈ ವೆಬ್ಸೈಟ್ ಬಹಳ ಉಪಯುಕ್ತವಾಗಿದೆ.

ಮುಂಬರುವ ಹಲವಾರು ವರ್ಷಗಳಿಗೆ ನಿಮ್ಮ ಮಗುವಿನ ಶೈಕ್ಷಣಿಕ ಯಶಸ್ಸಿಗಾಗಿನ ಮಾರ್ಗವನ್ನು ನೀವು ಸಿದ್ಧಪಡಿಸುತ್ತಿರುವುದು ಒಬ್ಬ ಡಿಜಿಟಲ್ ಪೇರೆಂಟ್ ಆಗಿರುವುದರ ಅತ್ಯುತ್ತಮ ಭಾಗವಾಗಿದೆ!