ಉತ್ತಮ ಶಾಲಾ ಪ್ರಸ್ತುತಿಗಳನ್ನು ಮಾಡುವುದು ಹೇಗೆ

 

ವರ್ಗದಲ್ಲಿ ತಮ್ಮ ಕೆಲಸವನ್ನು ಪ್ರಸ್ತುತಪಡಿಸುವುದು ಭಯಪಡಿಸುವಂಥದ್ದಾಗಿರಬಹುದು, ಆದರೆ ಅದು ಹಾಗೆನೂ ಇರಬೇಕಾಗಿಲ್ಲ. ಉತ್ತಮವಾದ ಹಾಗೂ ಧೃಢವಾದ ಪಿಸಿಯೊಂದಿಗಿನ ಸರಿಯಾದ ಯೋಜನೆ ಮತ್ತು ಸಿದ್ಧತೆ, ಬಹಳಷ್ಟು ವ್ಯತ್ಯಾಸವನ್ನು ಮಾಡಬಲ್ಲದು. ಮುಂಬರುವ ದಿನಗಳಲ್ಲಿ ಶಾಲೆಯಲ್ಲಿ ನೀವು ಪ್ರಸ್ತುತಿಯನ್ನು ಮಾಡಬೇಕಿದ್ದಲ್ಲಿ, ನಿಮಗೆ ನೆರವಾಗಲು ನಾವಿದ್ದೇವೆ.
ಈ ಕೆಲವು ಸರಳ ಸಲಹೆಗಳೊಂದಿಗೆ, ಸಂಪೂರ್ಣ ವರ್ಗವು ಆನಂದಿಸುವಂತಹ ಪ್ರಸ್ತುತಿಯನ್ನು ನೀವು ಮಾಡಬಲ್ಲಿರಿ!

1. ಯಾವಾಗಲೂ ನಿರ್ದಿಷ್ಟರಾಗಿ ಇರಿ

ನಿಮ್ಮ ಪ್ರಸ್ತುತಿಯನ್ನು ಪ್ರಾರಂಭಿಸುವ ಮೊದಲು ನಿಮ್ಮನ್ನು ನೀವು ಈ ರೀತಿ ಕೇಳಿಕೊಳ್ಳಿ, 'ನಾನು ಕೇವಲ ಮೂರು ವಿಷಯಗಳನ್ನು ಮಾತ್ರ ನೆನಪಿಸಿಕೊಳ್ಳಬಹುದಾದರೆ, ನಾನು ಏನನ್ನು ನೆನಪಿಸಿಕೊಳ್ಳಬೇಕು?'.

ಉದ್ದೇಶವನ್ನು ಪೂರೈಸದ ವಿಷಯವನ್ನು ತೆಗೆದುಹಾಕುವ ಮೂಲಕ ಬೇಕಾದಷ್ಟೇ ಪಠ್ಯವನ್ನು ಇರಿಸಲು ಇದು ಸಹಾಯ ಮಾಡುತ್ತದೆ. ನೀವು ಒಳಗೊಳ್ಳಬೇಕೆಂದು ಶಿಕ್ಷಕರು ಬಯಸುತ್ತಿರುವ ಎಲ್ಲ ವಿಷಯಗಳ ಒಂದು ಚೆಕ್ಲಿಸ್ಟ್ ತಯಾರಿಸಿ, ಹಾಗೂ ಅದರಲ್ಲಿರದಿರುವ ವಿಷಯಗಳನ್ನು ತೆಗೆದು ಹಾಕಿ.

2. ಅದನ್ನು ಚಿತ್ರಗಳ ಜೊತೆಯಲ್ಲಿ ಹೇಳಿ

ನಾವು ತೆಗೆದುಕೊಳ್ಳುವ 90% ಮಾಹಿತಿಯು ದೃಶ್ಯಾತ್ಮಕವಾಗಿರುತ್ತದೆ. ಛಾಯಾಚಿತ್ರಗಳು, ರೇಖಾಚಿತ್ರಗಳು, ಚಾರ್ಟ್ಗಳು, ನಕ್ಷೆಗಳು, ಡ್ರಾಯಿಂಗ್ಗಳು ಮುಂತಾದ ದೃಶ್ಯಾವಳಿಗಳು - ಎಲ್ಲವೂ ಒಂದು ಅಂಶವನ್ನು ಮುಂದಿಡುವುದರಲ್ಲಿ ಮತ್ತು ನೀವು ಪ್ರಸ್ತುತಪಡಿಸುವಾಗ ಇತರರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ನೆರವಾಗುತ್ತವೆ. ನೀವು ಬಳಸುತ್ತಿರುವ ದೃಶ್ಯಾವಳಿಗಳು ನೀವು ಮುಂದಿರಿಸುತ್ತಿರುವ ಅಂಶವನ್ನು ಬೆಂಬಲಿಸುತ್ತವೆ ಎಂಬುದನ್ನು ಮತ್ತು ನಿಮ್ಮ ಸ್ಲೈಡ್ಗಳನ್ನು ಚೊಕ್ಕವಾಗಿ ಮತ್ತು ಸಂಕ್ಷಿಪ್ತವಾಗಿರಿಸಲು ಪ್ರತಿ ಸ್ಲೈಡ್ನಲ್ಲಿ ಒಂದಕ್ಕಿಂತ ಹೆಚ್ಚು ವಿಷಯವನ್ನು ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

3. ಟೆಂಪ್ಲೇಟ್ಗಳೊಂದಿಗೆ ಪ್ರಯೋಗ ಮಾಡಿ ನೋಡಿ

ಮೈಕ್ರೊಸಾಫ್ಟ್ ಪವರ್ ಪಾಯಿಂಟ್, ಗೂಗಲ್ ಸ್ಲೈಡ್ಗಳು, ಪ್ರೆಜಿ ಮತ್ತು ಇತರ ಪಿಸಿ ಪ್ರಸ್ತುತಿ ಸಾಧನಗಳು ನೀವು ಆಯ್ಕೆ ಮಾಡಬಹುದಾದ, ಕಸ್ಟಮೈಸ್ ಮಾಡಬಹುದಾದ ತರಹೇವಾರಿ ಟೆಂಪ್ಲೇಟ್ಗಳನ್ನು ಹೊಂದಿವೆ. ಉಳಿದವರ ಪ್ರಸ್ತುತಿಗಳಿಗಿಂತ ನಿಮ್ಮ ಪ್ರಸ್ತುತಿಗಳನ್ನು ಎದ್ದು ಕಾಣುವಂತೆ ಮಾಡಲು ಫಾಂಟ್ಗಳು, ಸ್ಲೈಡ್ ಟ್ರಾನ್ಸಿಷನ್ಗಳು, ಆನಿಮೇಷನ್ ಸೌಂಡ್ಗಳು ಮತ್ತು ಸೆಕ್ಷನ್ ಹೆಡ್ಡರ್ಗಳಿಂದ ಹಿಡಿದು ಸಂಪೂರ್ಣ ಬ್ಯಾಕ್ಡ್ರಾಪ್ವರೆಗೆ ಎಲ್ಲವನ್ನೂ ಬದಲಾಯಿಸಬಹುದು.

4. ಅಭ್ಯಾಸ ಮಾಡುವಿಕೆಯು ಪರಿಪೂರ್ಣತೆಯನ್ನು ಸಾಧ್ಯವಾಗಿಸುತ್ತದೆ

ಅತ್ಯುತ್ತಮ ಪ್ರಸ್ತುತಿಗಳೆಂದರೆ ಸಂಭಾಷಣೆಗಳು. ದ್ವಿಮುಖ ಮಾರ್ಗದ ಸಂವಾದವು ನಿಮ್ಮನ್ನು (ಅಥವಾ ನಿಮ್ಮ ಗುಂಪನ್ನು) ಹೆಚ್ಚು ಸ್ಮರಣೀಯವಾಗಿ ಮಾಡುತ್ತದೆ ಮತ್ತು ವೇದಿಕೆಯನ್ನು ಚರ್ಚೆಗೆ ಮುಕ್ತವನ್ನಾಗಿಸುತ್ತದೆ. ಇದು ನಿಮ್ಮ ಶಿಕ್ಷಕರು ಪ್ರಶಂಸಿಸುವಂಥ ಒಂದು ಪ್ರಯತ್ನವಾಗಿರುತ್ತದೆ. ಸಾರ್ವಜನಿಕವಾಗಿ ಮಾತನಾಡುವ ನಿಮ್ಮ ಆತ್ಮವಿಶ್ವಾಸವನ್ನು ನಿರ್ಮಿಸಿಕೊಳ್ಳಲು ನಿಮ್ಮ ಪ್ರಸ್ತುತಿಗಳನ್ನು ನಿಮ್ಮ ಪೋಷಕರು ಮತ್ತು ಸ್ನೇಹಿತರ ಮುಂದೆ ಅಭ್ಯಾಸ ಮಾಡಿ ಹಾಗೂ ನಿಮ್ಮ ಪ್ರಸ್ತುತಿಯು ನಿಮಗೆ ನಿರೀಕ್ಷಿತ ಫಲಿತಾಂಶವನ್ನು ತಂದುಕೊಡುವಂತೆ ಮಾಡಲು ಅವರ ಫೀಡ್ಬ್ಯಾಕ್ ಅನ್ನು ಬಳಸಿಕೊಳ್ಳಿ. ನೆನಪಿಡಿ, ಪ್ರತಿಬಾರಿಯ ಅಭ್ಯಾಸದೊಂದಿಗೆ, ನೀವು ಮುಂದಿರಿಸುತ್ತಿರುವ ಅಂಶವನ್ನು ನೀವು ಹೆಚ್ಚು ಸ್ಪಷ್ಟವಾಗಿ ಮತ್ತು ಹೆಚ್ಚು ವೇಗವಾಗಿ ಪ್ರಸ್ತುತಪಡಿಸುವಲ್ಲಿ ಸಮರ್ಥರಾಗುತ್ತೀರಿ.
ಎಲ್ಲವನ್ನೂ ಒಟ್ಟಿಗೆ ಸೇರಿಸಿ ಹೇಳುವುದಾರೆ, ಪ್ರಸ್ತುತಪಡಿಸುವಿಕೆಯ ಸ್ವಲ್ಪ ಅಭ್ಯಾಸದೊಂದಿಗೆ ಸರಿಯಾದ ಮಾಹಿತಿ ಮತ್ತು ವಿನ್ಯಾಸವು ಶಾಲೆಗೆ ಉತ್ತಮ ಪ್ರಸ್ತುತಿಗಳನ್ನು ನೀಡುವಲ್ಲಿ ನಿಮಗೆ ನೆರವಾಗುತ್ತದೆ.
ನಿಮಗೆ ಈ ಲೇಖನ ಉಪಯುಕ್ತವೆನಿಸುತ್ತದೆಯೇ? ಶಾಲೆಗೆ ಹೆಚ್ಚು ಉಪಯುಕ್ತವಾದ ಸಲಹೆಗಳಿಗಾಗಿ, ನಿಮ್ಮ ಪ್ರಾಜೆಕ್ಟ್ಗಳಲ್ಲಿ 10/10 ಪಡೆಯುವುದು ಹೇಗೆ ಎಂಬುದನ್ನು ನೀವು ಓದಬಹುದು!