ಕಂಪ್ಯೂಟರ್ ಲ್ಯಾಬ್‌ನಲ್ಲಿ ಮಕ್ಕಳಿಗೆ ಇಂಟರ್‌ನೆಟ್ ಅನ್ನು ಸುರಕ್ಷಿತ ಪ್ರದೇಶವನ್ನಾಗಿ ಹೇಗೆ ಮಾಡುವುದು

ಇಂಟರ್‌ನೆಟ್ ಒಂದು ಪರಿಣಾಮಕಾರಿಯಾಗಿರುವ ಸಲಕರಣೆಯಾಗಿದ್ದು, ಇದನ್ನು ಶಿಕ್ಷಣ ಮತ್ತು ಮಾಹಿತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಡೇಟಾ ಮತ್ತು ಮಾಹಿತಿಯ ಭರಪೂರ ಖಜಾನೆಯಾಗಿದ್ದು, ಇಲ್ಲಿ ಪ್ರತಿಯೊಂದು ವಿಷಯಗಳ ಪರಿಕಲ್ಪನೆಯೂ ಕೂಡ ಲಭ್ಯವಿರುತ್ತದೆ, ಇದನ್ನು ವಿದ್ಯಾರ್ಥಿಗಳು ಸುಲಭವಾಗಿ ಉಪಯೋಗಿಸುತ್ತಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಇಂತಹ ಮಾಹಿತಿಯನ್ನು ಉಪಯೋಗಿಸಿಕೊಳ್ಳುವಂತೆ ಮಾಡಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. [1]

ನೀವು ಇದನ್ನು ಹೇಗೆ ಮಾಡಬಹುದೆಂದರೆ:

1. ವಯಸ್ಕರ ವಿಚಾರಗಳುಳ್ಳ ವೆಬ್‌ಸೈಟ್‌ಗಳ ಪ್ರವೇಶವನ್ನು ನಿರ್ಬಂಧಿಸುವುದು

ಇಂಟರ್‌ನೆಟ್‌ನಲ್ಲಿ ಅತ್ಯಧಿಕವಾದ ಗ್ಯಾಂಬ್ಲಿಂಗ್ ಸೈಟ್‌ಗಳು ಮತ್ತು ಗ್ರಾಫಿಕ್ ವಿಷಯಗಳನ್ನು ಒಳಗೊಂಡ ವೆಬ್‌ಸೈಟ್‌ಗಳಿವೆ, ಇವು ಮಾದಕ ಪದಾರ್ಥಗಳು, ಶಸ್ತ್ರಾಸ್ತ್ರಗಳು ಮತ್ತು ಮಕ್ಕಳು ವೀಕ್ಷಿಸಲೇಬಾರದಂತಹ ಯಾವುದೇ ಅಹಿತಕರವಾದ ವಿಷಯಗಳನ್ನು ಪ್ರೋತ್ಸಾಹಿಸುತ್ತವೆ. ಚಿಕ್ಕ ಮಕ್ಕಳು ಆಕಸ್ಮಿಕವಾಗಿ (ಸಾಮಾನ್ಯವಾಗಿ ತಾವು ಏನು ಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳದೆಯೇ ಫೋಟೊಗಳನ್ನು ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ) ವಯಸ್ಕರ ವೆಬ್‌ಸೈಟ್ ಪ್ರವೇಶಿಸಬಹುದು, ಆದರೆ ದೊಡ್ಡ ಮಕ್ಕಳು ಸಕ್ರಿಯವಾಗಿ ಇಂತಹ ವಿಷಯಗಳತ್ತ ಗಮನಹರಿಸುತ್ತಾರೆ. ಈ ಕಾರಣಕ್ಕಾಗಿ ವಯಸ್ಕರ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದುದನ್ನು ಶಾಲೆಗಳಲ್ಲಿನ ಕಂಪ್ಯೂಟರ್‌ಗಳಲ್ಲಿ ಕಡ್ಡಾಯವಾಗಿ ನಿರ್ಬಂಧಿಸಬೇಕು.
 

2. VPN ಗಳನ್ನು ನಿರ್ಬಂಧಿಸುವ ಮೂಲಕ ಡೌನ್‌ಲೋಡ್‌ಗಳನ್ನು ತಪ್ಪಿಸಿ – ಮೂರನೇ ವ್ಯಕ್ತಿಯ ಫೈಲ್ ಹಂಚಿಕೆ

ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಇದು ಜನರಿಗೆ ಟನ್ನೆಲ್ ರಚಿಸುವ ಮೂಲಕ ಭದ್ರತೆಯ ನಿರ್ಬಂಧಗಳನ್ನು ಹೇರುವ ಅವಕಾಶವನ್ನು ಒದಗಿಸಿದೆ. ವಿದ್ಯಾರ್ಥಿಗಳು ಇಂಟರ್‌ನೆಟ್‌ನ ಆಕ್ಷೇಪಾರ್ಹ ವಿಭಾಗಗಳು ಅಥವಾ ಅಹಿತಕರ ವಿಷಯಗಳನ್ನು ಡೌನ್‌ಲೋಡ್ ಮಾಡುವುದನ್ನು ತಡೆಯಲು ನೆಟ್ ನ್ಯಾನಿ, ನಾರ್ಟನ್ ಫ್ಯಾಮಿಲಿ ಅಥವಾ ಕೆ9 ವೆಬ್ ಪ್ರೊಟೆಕ್ಷನ್ ಸಾಫ್ಟ್ ವೇರ್‌ ಬಳಸಬಹುದು.

3. ಫೈಲ್ ಪ್ರವೇಶವನ್ನು ನಿಯಂತ್ರಿಸಲು ಆಕ್ಸೆಸ್ ಫಿಲ್ಟರ್‌ಗಳ ಬಳಕೆ

ಆಕ್ಸೆಸ್ ಕಂಟ್ರೋಲ್ ಲಿಸ್ಟ್ (ಎಸಿಎಲ್) ಸಿಸ್ಟಮ್‌ನಲ್ಲಿ ಬಳಾಕೆದಾರರು ಏನನ್ನು ಮಾಡಬಹುದು ಅಥವಾ ಏನನ್ನು ಮಾಡಬಾರದು ಎಂಬುದನ್ನು ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಇಂಟರ್‌ನೆಟ್‌ನಿಂದ ವಿಷಯಗಳನ್ನು ಡೌನ್‌ಲೋಡ್ ಮಾಡುವುದನ್ನು ತಡೆಯಲು ಅವರು ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದರಿಂದ ನಿರ್ಬಂಧಿಸಲು ಎಸಿಎಲ್‌ಗೆ ಮಾರ್ಪಾಡು ಮಾಡುವ ಅಗತ್ಯವಿದೆ. ಇದನ್ನು ವಿವಿಧ ಆನ್‌ಲೈನ್ ಸೇವೆಗಳನ್ನು ಬಳಸಿಕೊಂಡು ಸಾಧಿಸಬಹುದಾಗಿದೆ, ಅವುಗಳು ಫೈಲ್ ಪ್ರವೇಶದ ಫಿಲ್ಟರ್‌ಗಳನ್ನು ಒಳಗೊಂಡಿದೆ. ಇತರೆ ಫೈಲುಗಳು ಲಭ್ಯವಾಗುವಂತೆ ಮಾಡುವ ಮೂಲಕ ನೀವು ಬಯಸುವ ಫೈಲ್‌ಗಳಿಗೆ ಈ ಫಿಲ್ಟರ್‌ಗಳನ್ನು ಅಳವಡಿಸಿಕೊಳ್ಳಬಹುದು. [3]

ಶಿಕ್ಷಕರು ಮತ್ತು ಶಾಲೆಯ ಆಡಳಿತ ವರ್ಗದವರು ಶಾಲೆಯ ಪರಿಮಿತಿಗಳಲ್ಲಿ ವಿದ್ಯಾರ್ಥಿಗಳು ಯಾವ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಯೋಗ್ಯ ಎಂಬುದನ್ನು ನಿರ್ಧರಿಸಲೇಬೇಕು ಮತ್ತು ಅದಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಳ್ಳಬೇಕು. ಇಂಟರ್‌ನೆಟ್ ಪ್ರವೇಶವನ್ನು ಫಿಲ್ಟರ್ ಮಾಡುವಾಗ ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಬೇಕು, ವಿದ್ಯಾರ್ಥಿಗಳು ಇನ್ನೂ ಸಂಬಂಧಿಸಿದ ಅಥವಾ ವೈಚಾರಿಕತೆಯ ಮಾಹಿತಿಯನ್ನು ಪ್ರವೇಶಿಸುವ ಅವಕಾಶ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಉದ್ದೇಶವನ್ನು ಈಡೇರಿಸಿಕೊಳ್ಳಲು ಹಲವಾರು ಎಐಒ ಡೆಸ್ಕ್‌ ಟಾಪ್‌ಗಳು McAfee ಇಂಟೆಗ್ರೆಟೆಡ್ ಸೇಫ್ಟಿ ಸರ್ವೀಸಸ್‌ನೊಂದಿಗೆ ಬರುತ್ತವೆ, ಇವು ಸಮರ್ಪಕವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದನ್ನು ಖಚಿತಪಡಿಸುತ್ತವೆ. ಈ ಚೌಕಟ್ಟನ್ನು ಬಳಸುವ ಮೂಲಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸುರಕ್ಷಿತ ತಾಣವನ್ನಾಗಿ ಮಾಡೋಣ.