ನಿಮ್ಮ ರಜಾದಿನಗಳ ಬಹುಪಾಲು ಉಪಯೋಗವನ್ನು ತೆಗೆದುಕೊಳ್ಳುವುದು ಹೇಗೆ

 

 

ರಜಾದಿನಗಳು ಮೋಜುಭರಿತ ಮತ್ತು ಸ್ವಾತಂತ್ರ್ಯಪೂರ್ಣ ದಿನಗಳಾಗಿರುತ್ತವೆ – ಆದರೆ ನಿಮ್ಮನ್ನು ನೀವು ಆಟದ ಮೈದಾನ ಅಥವಾ ಪ್ಲೇಸ್ಟೇಷನ್ನಿಗಷ್ಟೇ ನಿರ್ಬಂಧಿತಗೊಳಿಸಬೇಕಿರುವುದಿಲ್ಲ! ಬಹಳಷ್ಟು ಮೋಜುಮಜಾವನ್ನು ಅನುಭವಿಸುತ್ತಿರುವಂತೆಯೇ ಆಟದಲ್ಲಿ ಮುಂದೆ ಇರಲೂ ಸಹ ನಿಮಗೆ ನೆರವಾಗುವ ನಿಮ್ಮ PC ಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಹುಪಾಲು ಉಪಯೋಗವನ್ನು ಪಡೆದುಕೊಳ್ಳುವ ಮೂಲಕ ಉತ್ಪಾದಕತೆಯಿಂದಲೂ ಇರಿ!

1. ಯೂಟ್ಯೂಬ್ನ ಸಾಮರ್ಥ್ಯವನ್ನು ಅನಾವರಣಗೊಳಿಸಿ

ಚಾನಲ್ ಒಂದನ್ನು ಸೆಟ್ ಅಪ್ ಮಾಡುವ ಮೂಲಕ ವಿಶ್ವಕ್ಕೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದುಕೊಳ್ಳಿ ಹಾಗೂ ಹೊಸ ಕೌಶಲ್ಯಗಳನ್ನು ಗ್ರಹಿಸಲು ಇತರ ಯೂಟ್ಯೂಬರ್ಗಳನ್ನು ಫಾಲೋ ಮಾಡಿ. ನೀವು ಚಿಕ್ಕ (ಮತ್ತು ಸುರಕ್ಷಿತವಾದ!) ವೈಜ್ಞಾನಿಕ ಪ್ರಯೋಗಗಳನ್ನೂ ಸಹ ಮನೆಯಲ್ಲಿ ನಡೆಸಿ, SciShow ನಂತಹ ಚಾನಲ್ಗಳಿಗೆ ನೆರವಾಗಬಹುದು. ಮನೆಯಲ್ಲಿ ಐಸ್ಕ್ರೀಂ ಅನ್ನು ಅಥವಾ ಆಟವಾಡುವುದಕ್ಕಾಗಿ ಉಬ್ಬಿದ ಗೊಣ್ಣೆಯಂತಹ ಪದಾರ್ಥವನ್ನು ಹೇಗೆ ತಯಾರಿಸಬಹುದು ಎಂಬುದನ್ನು ತೋರಿಸುವ ಮಜದಿಂದ ಕೂಡಿದ ವಿಡಿಯೋಗಳನ್ನು ಅವುಗಳು ಹೊಂದಿರುತ್ತವೆ!

2. ಹೊಸ ಕೌಶಲ್ಯವೊಂದನ್ನು ಕಲಿಯಿರಿ

ನಿಮ್ಮ PC ಯಲ್ಲಿ ಅಡೋಬ್ ಫೋಟೊಶಾಪ್, ಪವರ್ಪಾಯಿಂಟ್, ಎಕ್ಸೆಲ್ನಂತಹ ಸಾಫ್ಟ್ವೇರ್ಗಳನ್ನು ಅನ್ವೇಷಿಸಿ ಅಥವಾ Codeacademy ಯಂತಹ ವೆಬ್ಸೈಟುಗಳಲ್ಲಿ ಕೋಡ್ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ, ಇದು ಜಾವಾಸ್ಕ್ರಿಪ್ಟ್, ವೆಬ್ ಡೆವಲಪ್ಮೆಂಟ್ ಮತ್ತು ಇನ್ನೂ ಹಲವಾರು ವಿಷಯಗಳ ಮೇಲೆ ಆರಂಭಿಕ ವ್ಯಕ್ತಿ-ಸ್ನೇಹಿ ಕೋರ್ಸುಗಳನ್ನು ಹೊಂದಿರುತ್ತದೆ. ಈ ಕೌಶಲ್ಯಗಳನ್ನು ಕಲಿಯುವುದು ಮೋಜಿನಿಂದ ಕೂಡಿರುವುದಲ್ಲದೇ, ನಿಮ್ಮ ಕರೀಯರ್ನಲ್ಲಿ ನಂತರ ಅಮೂಲ್ಯವೂ ಆಗಿರುತ್ತದೆ.

3. ಓದಿ, ಸಂಶೋಧನೆ ಮಾಡಿ

ನಿಮಗೆ ಆಸಕ್ತಿಕರವೆನ್ನಿಸುವ ವಿಷಯಗಳ ಮೇಲೆ ಇನ್ನೂ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕಿದೆಯೇ? ನಿಮ್ಮ ರಜಾದಿನದ ಬಹುಪಾಲು ಉಪಯೋಗವನ್ನು ಮಾಡಿಕೊಳ್ಳಲು ವೈಕಿಪೀಡಿಯಾ, ನ್ಯಾಷನಲ್ ಜಿಯೊಗ್ರಾಫಿಕ್ ಕಿಡ್ಸ್ ಮತ್ತು ಹೌ ಸ್ಟಫ್ ವರ್ಕ್ಸ್ಗಳಂಥ ವೇದಿಕೆಗಳನ್ನು ಅನ್ವೇಷಿಸಿ. ಈ ವೆಬ್ಸೈಟುಗಳು ವಿಜ್ಞಾನ, ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಇನ್ನೂ ಹತ್ತು ಹಲವಾರು ವಿಷಯಗಳ ಮೇಲೆ ಅಗಾಧ ಪ್ರಮಾಣದ ಮಾಹಿತಿಯನ್ನು ಹೊಂದಿರುತ್ತವೆ.

4. ನಿಮ್ಮ “ಭಾಷೆ” ಯ ಮೇಲೆ ಕೆಲಸ ಮಾಡಿ

www.vocabulary.com ಮೂಲಕ ನಿಮ್ಮ ಶಬ್ದಭಾಂಡಾರವನ್ನು ವಿಸ್ತರಿಸಿಕೊಳ್ಳುವುದು ಅಥವಾ ಹೊಸ ಭಾಷೆಯೊಂದನ್ನು ಕಲಿಯುವುದು ನಿಮಗೆ ದೀರ್ಘಾವಧಿ ಪ್ರಯೋಜನಗಳನ್ನು ಒದಗಿಸುತ್ತದೆ. ಹೊಸ ಭಾಷೆಯೊಂದನ್ನು ಕಲಿಯುವಿಕೆಯು ಹೆಚ್ಚು ಉತ್ತಮ ಅರಿವಿನ ಕೌಶಲ್ಯಗಳಿಗೆ ಕಾರಣವಾಗುತ್ತದೆ, ಒಟ್ಟಾರೆ ಶೈಕ್ಷಣಿಕ ಕಾರ್ಯಪ್ರದರ್ಶನವನ್ನು ಸುಧಾರಿಸುತ್ತದೆ ಹಾಗೂ ಮಿದುಳನ್ನು ಚುರುಕಾಗಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇಂಟರಾಕ್ಟಿವ್ ನಮೂನೆಯಲ್ಲಿ ಕಲಿಯಲು www.duolingo.com ವೆಬ್ಸೈಟನ್ನು ಪರಿಶೀಲಿಸಿ.

5. ಇ-ಲರ್ನಿಂಗ್ ಪ್ರಯತ್ನಿಸಿ ನೋಡಿ

ಬೇಸಿಗೆ ರಜಾದಿನಗಳಲ್ಲಿ ಬಿಡುವನ್ನು ಆನಂದಿಸುವುದು ನಿಮ್ಮ ಪ್ರಥಮ ಆದ್ಯತೆಯಾಗಿರಬೇಕು! ಆದರೆ ನಿಮ್ಮ PC ಯಲ್ಲಿ ಇ-ಲರ್ನಿಂಗ್ ಕೋರ್ಸ್ ಒಂದನ್ನು ಮಾಡುತ್ತಾ ದಿನದಲ್ಲಿ ಒಂದು ಗಂಟೆ ವ್ಯಯಿಸುವುದು, ನಿಮ್ಮ ತರಗತಿಯಲ್ಲಿ ಉಳಿದೆಲ್ಲರಿಗಿಂತ ನೀವು ಮುಂದೆ ಇರುವಂತೆ ಮಾಡುತ್ತದೆ. ಮೂಲವಿಷಯಗಳೊಂದಿಗೆ ನಿಮ್ಮನ್ನು ನೀವು ಪರಿಚಿತಗೊಳಿಸಿಕೊಳ್ಳುವಿಕೆಯು ತರಗತಿಯಲ್ಲಿನ ಸಂಕೀರ್ಣ ಪರಿಕಲ್ಪನೆಗಳನ್ನು ಸುಲಭವಾಗಿ ಗ್ರಹಿಸಲು ನಿಮಗೆ ನೆರವಾಗುತ್ತದೆ – ವ್ಯತ್ಯಾಸವನ್ನು ನೋಡಲು ಅದನ್ನು ಪ್ರಯತ್ನಿಸಿ ನೋಡಿ.

ಹೊಸ ಕೌಶಲ್ಯಗಳನ್ನು ನಿಮ್ಮದೇ ಆದ ಗತಿಯಲ್ಲಿ ರೂಢಿಸಿಕೊಳ್ಳಲು ಹಾಗೂ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಲು ರಜಾದಿನಗಳು ಅತ್ಯುತ್ತಮವಾಗಿರುತ್ತವೆ. ಶಾಲೆಯು ಮರಳಿ ಪ್ರಾರಂಭವಾದ ನಂತರ, ಶಾಲಾ ನಂತರದ ಕ್ಲಬ್ಗಳನ್ನು ಸೇರಿಕೊಳ್ಳುವ ಮೂಲಕ ನಿಮ್ಮ ಕೌಶಲ್ಯಗಳನ್ನು ನಿರ್ಮಿಸಿಕೊಳ್ಳುವುದನ್ನು ನೀವು ಮುಂದುವರೆಸಬಹುದು.