PC ಯ ನೆರವಿನೊಂದಿಗೆ ಅಧ್ಯಯನ ಮಾಡಲು ನಿಮ್ಮ ಮಕ್ಕಳನ್ನು ಪ್ರೇರೇಪಿಸುವುದು ಹೇಗೆ

 

ಪರೀಕ್ಷಾ ಅವಧಿಯು ಇನ್ನೂ ಒಂದು ತಿಂಗಳು ಮಾತ್ರ ದೂರವಿದೆ. ಪರೀಕ್ಷೆಯ ವೇಳಾಪಟ್ಟಿ ಸಹ ಬಂದಿದ್ದು, ಅಧ್ಯಯನ ಮಾಡಲು ನಿಮ್ಮ ಮಗುವನ್ನು ಒಂದು ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆ. ಅಧ್ಯಯನ ಮಾಡುವಲ್ಲಿ ನೆರವಾಗಲು PC ಏನೋ ಇಲ್ಲಿದೆ, ಆದರೆ ಅಧ್ಯಯನ ಮಾಡಲು ಮಕ್ಕಳನ್ನು ಅದು ಪ್ರೇರೇಪಿಸಲೂಬಲ್ಲದೇ?

1. ಒಂದು ನಿರ್ದಿಷ್ಟ ವಿಷಯವನ್ನು ಹೇಗೆ ಅಧ್ಯಯನ ಮಾಡುವುದು ಎಂಬುದನ್ನು ಆಯ್ದುಕೊಳ್ಳಿ

ಅಧ್ಯಯನ ಮಾಡುವ ವಿಧಾನವನ್ನು ಆಯ್ದುಕೊಳ್ಳುವ ಅವಕಾಶ ಸಿಕ್ಕಾಗ ಅಧ್ಯಯನ ಮಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. [1] ನಿಯಂತ್ರಣದ ಈ ಸಂವೇದನೆಯು ತಮ್ಮದೇ ಆದ ಗತಿಯಲ್ಲಿ ಕಲಿಯಲು ಮಕ್ಕಳನ್ನು ಸಶಕ್ತಗೊಳಿಸುತ್ತದೆ ಹಾಗೂ ತಮ್ಮ ಶಿಕ್ಷಣಕ್ಕೆ ತಾವೇ ವೈಯಕ್ತಿಕವಾಗಿ ಜವಾಬ್ದಾರರಾಗಿರುವ ಭಾವನೆಯನ್ನು ಅವರಲ್ಲಿ ಮೂಡಿಸುತ್ತದೆ. ವಿಡಿಯೋಗಳು, ಗೇಮ್ಗಳು, ಇಂಟರಾಕ್ಟಿವ್ ಕ್ವಿಜ್ಗಳು, PC ಯ ನೆರವಿನೊಂದಿಗೆ ಮೈಂಡ್ ಮ್ಯಾಪಿಂಗ್, ಇವೆಲ್ಲವುಗಳೂ ಅನ್ವೇಷಣೆ ಮಾಡಲು ನಿಮ್ಮ ಮಗುವಿನ ಕೈಗೆ ಎಟುಕುವಂತಿರುತ್ತವೆ.

2. ತಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ಅವರು ತಿಳಿದುಕೊಳ್ಳಲಿ

ಚೆನ್ನಾಗಿ ಮಾಡುವುದರ ರುಜುವಾತಿಗಿಂತಲೂ ಮಿಗಿಲಾದ ಪ್ರೇರೇಪಣೆ ಮತ್ತೊಂದಿಲ್ಲ. [2]  ಅಭ್ಯಾಸಕ್ಕಾಗಿ ನೀಡಲಾದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ವರ್ಕ್ಶೀಟ್ಗಳನ್ನು ಭರ್ತಿ ಮಾಡುವುದು, ರಸಪ್ರಶ್ನೆಗಳನ್ನು ಮತ್ತು ಆನ್ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳುವಿಕೆಗಳ ಮಿಶ್ರ ಕೆಲಸವು ತಮ್ಮ ನಿಖರವಾದ ಸ್ಥಾನವೇನು ಎಂಬುದನ್ನು ತಿಳಿದುಕೊಳ್ಳಲು ಮಕ್ಕಳಿಗೆ ನೆರವಾಗುತ್ತದೆ. ಈ ಮೌಲ್ಯಮಾಪನವು ನಿಜವಾದ ಪರೀಕ್ಷೆಗಾಗಿ ನಿಮ್ಮ ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ತಮ್ಮ ಜ್ಞಾನದಲ್ಲಿ ಇರಬಹುದಾದ ಯಾವುದೇ ಅಂತರಗಳನ್ನು ಕಂಡುಕೊಳ್ಳಲು ಅವರಿಗೆ ನೆರವಾಗುತ್ತದೆ.

3. PC ವಿರಾಮ ತೆಗೆದುಕೊಳ್ಳಿ!

ಅಭ್ಯಾಸ ಮಾಡಬೇಕಿರುವ ಭಾಗ ಎಷ್ಟೇ ಅಗಾಧವಾಗಿರಲಿ, ನಿಮ್ಮ ಮಗುವಿನ ಏಕಾಗ್ರತೆಯ ಮಟ್ಟವನ್ನು ಸುಧಾರಿಸಲು ವಿರಾಮ ತೆಗೆದುಕೊಳ್ಳುವುದು ಅತ್ಯಾವಶ್ಯಕವಾಗಿರುತ್ತದೆ. [3] ಮನರಂಜನಾತ್ಮಕ ಹಾಗೂ ಶೈಕ್ಷಣಿಕವಾಗಿರುವುದರ ನಡುವೆ ಸೂಕ್ಷ್ಮ ಸಮತೋಲನವನ್ನು ನಿರ್ವಹಿಸುವ ಗೇಮ್ಗಳಲ್ಲಿ ಅವರನ್ನು ತೊಡಗಿಸುವ ಮೂಲಕ ನೀವು ಅದನ್ನು ಪುರಸ್ಕರಣೀಯವಾಗಿಸಬಹುದು. ಒಂದು ಅಧ್ಯಾಯ ಮತ್ತು ಪ್ರವಚನ, ಕ್ರೀಡೆ ಮುಂತಾದವುಗಳನ್ನು ಸಂಪೂರ್ಣಗೊಳಿಸಲು ಅದು ತೆಗೆದುಕೊಳ್ಳುವ ಸಮಯವನ್ನು ಗಮನದಲ್ಲಿರಿಸಿಕೊಳ್ಳುತ್ತಾ ಅಧ್ಯಯನ ವೇಳಾಪಟ್ಟಿಯಲ್ಲಿ ಅದು ಸೇರಿಸಲ್ಪಟ್ಟಿರುವಂತೆ ನೋಡಿಕೊಳ್ಳಿ.

4. ಅವರ ಕನಸಿನ ಮೇಜು

ಅವರ ಕನಸಿನ ಮೇಜನ್ನು ಸೃಷ್ಟಿಸಲು ನಿಮ್ಮ ಮಗುವಿನ ಸಲಹೆಗಳನ್ನು ಪಡೆದುಕೊಳ್ಳಿ. ಶಾಲೆ ಎನ್ನಿಸುವುದಕ್ಕಿಂತ ಹೆಚ್ಚು ವೈಯಕ್ತಿಕವಾದ ಅನುಭವವನ್ನು ಅವರ ಮೇಜು ನೀಡಬಹುದಾದ್ದರಿಂದ, ಅವರ ನೆಚ್ಚಿನ ಗೊಂಬೆ, ಸುಪರ್ಹೀರೋಗಳು, ಪೋಸ್ಟರ್ಗಳು ಅಥವಾ PC ಮೇಲೆ ಅವರ ಆಯ್ಕೆಯ ಸ್ಕ್ರೀನ್ಸೇವರ್ಗಳಂಥ ಸರಳ ವಿಷಯಗಳು ಬಹಳ ವ್ಯತ್ಯಾಸವನ್ನುಂಟು ಮಾಡಬಲ್ಲವು. ನಿಮ್ಮ ಮಗುವಿನ ಮೇಜನ್ನು ಗೊಂದಲ-ಮುಕ್ತವಾಗಿರಿಸಲು ನೀವು AIO (ಆಲ್ ಇನ್ ಒನ್) PC ಯನ್ನೂ ಸಹ ಪರಿಗಣಿಸಬಹುದು.

ಅಂತಿಮವಾಗಿ, ಅಭ್ಯಾಸ ಮಾಡುವುದರಲ್ಲಿ ಮುಂದಿರುವ ಬಗೆಗಿನ ಏಕೈಕ ಮಾರ್ಗವೆಂದರೆ ಆರಂಭಿಸುವುದು. ತಮ್ಮ ಮಕ್ಕಳನ್ನು ಯಾವುದು ಪ್ರೇರೇಪಿಸುತ್ತದೆ ಎಂಬುದು ಅವರ ಪೋಷಕರಿಗೆ ಮಾತ್ರ ಗೊತ್ತಿರುತ್ತದೆ. ಅದು, ಪೂರ್ಣ ಅಂಕಗಳು, ತರಗತಿಯಲ್ಲಿ ಉಚ್ಛ ಶ್ರೇಯಾಂಕ, ಅವರು ದೊಡ್ಡವರಾದ ಮೇಲೆ ಅವರು ಏನಾಗಬಯಸುತ್ತಾರೆ, ಒಂದು ವಿಷಯದ ಕಡೆಗಿನ ನಿಜವಾದ ಪ್ರೀತಿ, ಪಠ್ಯೇತರ ಚಟುವಟಿಕೆಗಳು, ಮುಂತಾದವುಗಳಲ್ಲಿ ಯಾವುದಾದರೂ ಆಗಿರಬಹುದು.

ನಿಮ್ಮ ಮಗುವಿನ ಯಶಸ್ಸಿನ ಮಾರ್ಗದಲ್ಲಿ ಒಂದು ಉತ್ತೇಜನೀಯ ಸಾಧನವಾಗಿ PC ಸದಾ ಮುಂದೆ ಇರಲಿ.