ಓರ್ವ ಶಿಕ್ಷಕರಾಗಿ ಲಿಂಕ್ಡ್‌ಇನ್ ಅನ್ನು ಆಪ್ಟಿಮೈಜ್ ಮಾಡಿಕೊಳ್ಳುವುದು ಹೇಗೆ?

 

ವಿಶ್ವದಾದ್ಯಂತದ ಜನರೊಂದಿಗೆ ಸಂಪರ್ಕವನ್ನು ಹೊಂದಲು ಲಿಂಕ್ಡ್ ಇನ್ ನಿಮಗೆ ನೆರವಾಗುವುದರಿಂದ, ನೆಟ್ ವರ್ಕ್ ಮಾಡಲು ಲಿಂಕ್ಡ್ ಇನ್ ನಿಮಗೆ ಒಂದು ಅವಶ್ಯಕ ಟೂಲ್ ಆಗಿರುತ್ತದೆ. ಆದರೆ ಲಿಂಕ್ಡ್ ಇನ್ ಅನ್ನು ಬಳಸಲಾರಂಭಿಸಲು, ಸೂಕ್ತವಾದ ದಾರಿಯಲ್ಲಿ ನೀವು ಸಾಗುತ್ತೀದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಮೊದಲು ನಿಮ್ಮ ಪ್ರೊಫೈಲ್ ಅನ್ನು ಆಪ್ಟಿಮೈಜ್ ಮಾಡಬೇಕಾಗುತ್ತದೆ – ನಿಮ್ಮ ಮಾರ್ಗದರ್ಶನಕ್ಕಾಗಿ ಕೆಲವು ಸಂಗತಿಗಳನ್ನು ಇಲ್ಲಿ ಒದಗಿಸಲಾಗಿದೆ:

 

1. ನಿಮ್ಮ ಹೆಡ್ ಶಾಟ್ ಅನ್ನು ಅಪ್ ಲೋಡ್ ಮಾಡಿ

ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ಗಾಗಿ, ನಿಮ್ಮ ಪ್ರೊಫೆಶನಲ್ ಹೆಡ್ ಶಾಟ್ ಒಂದನ್ನು ಬಳಸಿ. ಫೋಟೊಗಳನ್ನು ಹೊಂದಿಲ್ಲದ ಅಥವಾ ಗ್ರುಪ್ ಫೋಟೊಗಳನ್ನು ಹೊಂದಿರುವ ಪ್ರೊಫೈಲ್ ನ ಸದಸ್ಯರಿಗಿಂತ ಪ್ರೊಫೈಲ್ ಫೋಟೊಗಳನ್ನು ಹೊಂದಿರುವ ಸದಸ್ಯರು ನೋಡಲ್ಪಡುವ ಸಾಧ್ಯತೆಯು 14 ಪಟ್ಟು ಹೆಚ್ಚಾಗಿರುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

 

2. ಹೆಡ್ ಲೈನ್

ಹೌದು, ನಿಮ್ಮ ಹೆಡ್ ಲೈನ್ ಬಹಳ ವ್ಯತ್ಯಾಸವನ್ನುಂಟು ಮಾಡುತ್ತದೆ! ನಿಮ್ಮ ಪ್ರೊಫೈಲ್ ನಂಥಹದ್ದೇ ಪ್ರೊಫೈಲ್ ಅನ್ನು ಹೊಂದಿರುವ ಬೇರಾವುದೇ ವ್ಯಕ್ತಿಯ ಬಗ್ಗೆ ಯಾರಾದರೂ ಸರ್ಚ್ ಮಾಡಿದಾಗ, ಕಣ್ಸೆಳೆಯುವಂಥ ಒಂದು ಹೆಡ್ ಲೈನ್ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಲಿಂಕ್ಡ್ ಇನ್ ನಲ್ಲಿನ ನಿಮ್ಮ ಹೆಸರಿನ ಪಕ್ಕದಲ್ಲೇ ಅದು ಕಾಣಿಸಿಕೊಳ್ಳುತ್ತದೆ ಹಾಗೂ ಸೂಕ್ತ ಜನರ ಗಮನವನ್ನು ಸೆಳೆದುಕೊಳ್ಳಲು ಇದು ಒಂದು ಶ್ರೇಷ್ಠವಾದ ಮಾರ್ಗವಾಗಿರುತ್ತದೆ.

 

3. ಸಾರಾಂಶ

ನಿಮ್ಮ ಹೆಡ್ ಲೈನ್, ಸೂಕ್ತ ಜನರ ಗಮನವನ್ನು ಈಗ ಸೆಳೆದುಕೊಂಡಿರುವುದರಿಂದ, ಅವರು ಓದುವುದನ್ನು ಮುಂದುವರೆಸುವಂತೆ ನೀವು ಮಾಡಬೇಕಾಗುತ್ತದೆ. ನಿಮ್ಮ ಕತೆಯನ್ನು ರಚಿಸಿ, ಯಾವುದು ಪ್ರಮುಖವಾಗಿದೆಯೋ ಅದನ್ನು ಅದರಲ್ಲಿ ತೋರಿಸಿ. ಜನರಿಗೆ ನಿಮ್ಮನ್ನು ನಿಜವಾಗಿ ಹಾಗೂ ನಿಖರವಾಗಿ ತೋರಿಸುವ ನಿಮ್ಮ ಸಾಧನೆಗಳು ಹಾಗೂ ಪ್ರಮುಖ ಕೌಶಲ್ಯಗಳನ್ನು ಮುಖ್ಯಾಂಶೀಕರಿಸಿ.

 

4. ಅನುಭವ

ಕೆಲಸವನ್ನು ನೀವು ಹುಡುಕುತ್ತಿದ್ದಲ್ಲಿ, ನೀವು ಅಲಂಕರಿಸಿದ ಹಿಂದಿನ ಕನಿಷ್ಟ ಎರಡು ಸ್ಥಾನಗಳನ್ನು ಸೇರ್ಪಡೆ ಮಾಡುವುದು ಪ್ರಮುಖವಾಗಿರುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ನೀವು ಹುಡುಕುತ್ತಿರುವ ಕೆಲಸದ ಹೊಸ ವಿಧವನ್ನು ನೀವು ಮುಖ್ಯಾಂಶೀಕರಿಸಬೇಕು, ಏಕೆಂದರೆ ಭವಿಷ್ಯದಲ್ಲಿ ನೀವು ಸಾಗಲಿರುವ ದಿಶೆಯನ್ನು ಅದು ತೋರಿಸುತ್ತದೆ.

 

5. ಶಿಫಾರಸ್ಸುಗಳು

ನಿಮ್ಮ ಪ್ರೊಫೈಲಿಗೆ ಮೌಲ್ಯವನ್ನು ಒದಗಿಸುವಂತೆ, ನಿಮ್ಮನ್ನು ಶಿಫಾರಸ್ಸು ಮಾಡುವುದಕ್ಕಾಗಿ ಒಬ್ಬರು ಅಥವಾ ಇಬ್ಬರು ಸದಸ್ಯರನ್ನು ಆಹ್ವಾನಿಸಿ. ಶಿಫಾರಸ್ಸುಗಳು ನಿಮ್ಮ ಪ್ರೊಫೈಲ್ ನಲ್ಲಿ ಒಂದು ರೀತಿಯ ವಿಶ್ವಾಸದ ಸಂವೇದನೆಯನ್ನು ತೋರಿಸುತ್ತವೆ, ಹಾಗಾಗಿ ನೀವು ತೋರಿಸಬಯಸುವ ನಿರ್ದಿಷ್ಟ ಕೌಶಲ್ಯಗಳನ್ನು ಉದ್ದೇಶಿಸುವುದು ಪ್ರಮುಖವಾಗಿರುತ್ತದೆ.

 

6. ಬೋನಸ್ – ರೆಗ್ಯುಲರ್ ಆಗಿ ಅಪ್ ಡೇಟ್ ಮಾಡಿ!

ಲಿಂಕ್ಡ್ ಇನ್ ನಿಮಗೆ ಯಾವುದೇ ರೀತಿಯಲ್ಲಿ ಉಪಯುಕ್ತವಾಗಬೇಕಿದ್ದಲ್ಲಿ, ಇತರ ಯಾವುದೇ ಸಾಮಾಜಿಕ ಮಾಧ್ಯಮ ವಾಹಿನಿಯಂತೆಯೇ, ಅದನ್ನೂ ಸಹ ನೀವು ನಿಗದಿತವಾಗಿ ಬಳಸಬೇಕಾಗುತ್ತದೆ. ಶೈಕ್ಷಣಿಕ ಪೋಸ್ಟ್ ಗಳನ್ನು ಶೇರ್ ಮಾಡಿ, ಲೇಖನಗಳ ಮೇಲೆ ಕಮೆಂಟ್ ಮಾಡಿ, ಸಹೋದ್ಯೋಗಿಗಳು ಮತ್ತು ತಂಡದ ಮಾಜಿ ಸದಸ್ಯರಿಗೆ ಅಭಿನಂದನೆಗಳನ್ನು ಕಳುಹಿಸಿ, ನೀವು ಏನನ್ನಾದರೂ ಸಾಧಿಸಿದಾಗ ನಿಮ್ಮ ಪ್ರೊಫೈಲ್ ಅನ್ನು ಅಪ್ ಡೇಟ್ ಮಾಡಿ ಹಾಗೂ ಮೆಸೇಜ್ ಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ. ಶಿಕ್ಷಣದ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಮೇಲೆ ಕಣ್ಣಿಡುವುದು ಇಲ್ಲಿನ ಪ್ರಮುಖವಾದ ಅಂಶವಾಗಿರುತ್ತದೆ.

 

ಹಾಗಾಗಿ, ನಿಮ್ಮ ಕಲಿಸುವಿಕೆಯ ಕೌಶಲ್ಯಗಳನ್ನು ನೀವು ಸುಧಾರಣೆ ಮಾಡಿಕೊಳ್ಳುತ್ತಿರುವಂತೆಯೇ, ಮುಂದೆ ಸಾಗಿ ಹಾಗೂ ಲಿಂಕ್ಡ್ ಇನ್ ನ ಅತ್ಯುತ್ತಮ ಸದ್ಬಳಕೆಯನ್ನು ಮಾಡಿಕೊಳ್ಳಿ!