ಶಾಲೆಯಲ್ಲಿ ನಾವೀನ್ಯತಾ ದಿನವನ್ನು (ಇನ್ನೋವೇಟಿವ್ ಡೇ) ಆಯೋಜಿಸುವುದು

ನಾವೀನ್ಯತೆ ಎಂಬುದನ್ನು ಬಹಳ ಸರಳವಾಗಿ ಹೇಳಬೇಕೆಂದರೆ, ಒಂದು ಸಮಸ್ಯೆಯನ್ನು ಒಂದು ದೊಡ್ಡ ವಿಚಾರದೊಂದಿಗೆ ಪರಿಹರಿಸುವುದು. ಇದು, ಶಾಲೆಯಲ್ಲಿನ ಕ್ಲಾಸ್ ರೂಮ್ ಗಳು, ಕ್ಯಾಂಟೀನ್ ಅಥವಾ ಆಟದ ಮೈದಾನಗಳಿಗಾಗಿ ಒಂದು ಪ್ರತ್ಯೇಕ ವೆಟ್ ಮತ್ತು ಡ್ರೈ ಡಸ್ಟ್ ಬಿನ್ ಅನ್ನು ಹೊಂದುವಷ್ಟು ಚಿಕ್ಕದರಿಂದ ಹಿಡಿದು ಕಲಿಕೆಯ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ತಮ್ಮ ಸ್ವಂತದ PC ಯನ್ನು ಶಾಲೆಗೆ ಪ್ರತಿನಿತ್ಯ ತರುವಂತೆ ರೂಪಾಂತರಗೊಳಿಸುವಷ್ಟರ ಮಟ್ಟಿಗಿನ ವ್ಯಾಪ್ತಿಯನ್ನು ಹೊಂದಿರಬಹುದು!

ಫೆಬ್ರುವರಿ 16 ನಾವೀನ್ಯತಾ ದಿನವಾಗಿದ್ದು, ಕೆಲಸಗಳನ್ನು ಮಾಡುವ ಹೊಸ ಹಾಗೂ ಹೆಚ್ಚು ಉತ್ತಮವಾದ ಮಾರ್ಗಗಳನ್ನು ಕಲ್ಪಿಸಿಕೊಳ್ಳುವುದಕ್ಕೆ ಸಂಬಂಧಿಸಿದೆ. ಹಾಗಾಗಿ, ಇಂದು ನೀವು ಹೇಗೆ ನಾವೀನ್ಯತಾಪೂರ್ಣರಾಗುವವರಿದ್ದೀರಿ? ಈ ಸ್ಟೆಪ್ ಬೈ ಸ್ಟೆಪ್ ಗೈಡ್ ಬಳಸಿಕೊಂಡು ನಿಮ್ಮ ವಿದ್ಯಾರ್ಥಿಗಳಿಗಾಗಿ ಒಂದು ಸ್ಮರಣೀಯವಾದ ಶೈಕ್ಷಣಿಕ ದಿನವನ್ನು ಆಯೋಜಿಸಿದರೆ ಹೇಗಿರುತ್ತದೆ?

ಹಂತ 1 – ಒಂದು ಸಮಸ್ಯೆಯನ್ನು ಗುರುತಿಸಿ

ಮೊದಲು ಮಾಡಬೇಕಾದ ಕೆಲಸಗಳನ್ನು ಮೊದಲು ಮಾಡೋಣ, ಪರಿಹರಿಸಬಹುದಾದ ಹಾಗೂ ನಿಮ್ಮ ಶಾಲೆಗೇ ವಿಶಿಷ್ಟವಾದಂಥ ಸಮಸ್ಯೆಯೊಂದನ್ನು ಗುರುತಿಸಿ. ನಿಮ್ಮ ವಿದ್ಯಾರ್ಥಿಗಳ ವಯಸ್ಸನ್ನು ಹಾಗೂ ಸಂಪನ್ಮೂಲಗಳಿಗೆ ಅವರ ಪ್ರವೇಶಾವಕಾಶವನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಬಯಸಿದಲ್ಲಿ, ಪರಿಹರಿಸಲು ತಮ್ಮದೇ ಆದ ಸಮಸ್ಯೆಯೊಂದನ್ನು ಆಯ್ದುಕೊಳ್ಳಲೂ ಸಹ ನಿಮ್ಮ ವಿದ್ಯಾರ್ಥಿಗಳನ್ನು ನೀವು ಅನುಮತಿಸಬಹುದು.

ಹಂತ 2 – ತಂಡಗಳನ್ನು ರಚಿಸಿ

ತಮ್ಮ ಸಾಮಾಜಿಕ ಕೌಶಲ್ಯಗಳನ್ನು ನಿರ್ಮಿಸಿಕೊಳ್ಳಲು ಹಾಗೂ ಪರಿಣಾಮಕಾರಿಯಾಗಿ ಸಹಯೋಗ ಮಾಡುವುದನ್ನು ಕಲಿಯಲು ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗಲು, ಆನ್ ಲೈನ್ ಟೀಮ್ ಜನರೇಟರ್ Keamk[1] ಅನ್ನು ಬಳಸಿಕೊಂಡು ಬೇರೆ ಬೇರೆ ಕೌಶಲ್ಯಗಳು ಹಾಗೂ ಸಾಮರ್ಥ್ಯಗಳನ್ನು ಹೊಂದಿರುವ ಆದರೆ ಪರಸ್ಪರ ಪರಿಚಯವಿಲ್ಲದ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ.

ಹಂತ 3 – ಸೂಕ್ತ ಸಾಧನಗಳನ್ನು ಒದಗಿಸಿ

ನೀವು ಅಥವಾ ನಿಮ್ಮ ವಿದ್ಯಾರ್ಥಿಗಳು ಗುರುತಿಸಿದ ಸಮಸ್ಯೆಗೆ ಪರಿಹಾರದೊಂದಿಗೆ ಹೊರಬರಲು ಪ್ರತಿ ವಿದ್ಯಾರ್ಥಿ ತಂಡಕ್ಕೆ ಒಂದು PC, ವೈಫೈಗೆ ಪ್ರವೇಶಾವಕಾಶ, ಅವಶ್ಯಕ ಸ್ಟೇಶನರಿ ಸಾಮಗ್ರಿಗಳು ಮತ್ತು ಒಂದಿಡೀ ಮದ್ಯಾಹ್ನದ ಕಾಲಾವಕಾಶವನ್ನು ನೀಡಿ. ನಿಮ್ಮ ವಿದ್ಯಾರ್ಥಿಗಳು ಯಾವುದಾದರೂ ಪ್ರಶ್ನೆಗಳನ್ನು ಹೊಂದಿದ್ದಲ್ಲಿ, ಅವರಿಗಾಗಿ ಅಲ್ಲಿ ಇರಿ, ಆದರೆ, ಸಂಶೋಧನೆ ಹಾಗೂ ಸಮಸ್ಯೆಯನ್ನು ಪರಿಹರಿಸುವ ತಮ್ಮ ಸಾಮರ್ಥ್ಯಗಳನ್ನು ಫೈನ್ ಟ್ಯೂನ್ ಮಾಡುವಿಕೆಯನ್ನು ಸಶಕ್ತಗೊಳಿಸಿಕೊಳ್ಳುತ್ತಾ, ಅವರು ತಮ್ಮದೇ ಆದ ಅಂತಿಮ ಪರಿಹಾರದೊಂದಿಗೆ ಹೊರಬರಲಿ.

ಹಂತ 4 – ಪ್ರಸ್ತುತಪಡಿಸುವ ಸುತ್ತನ್ನು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಫ್ಯಾನ್ಸಿ ಆಗಿರುವಂತೆ ಮಾಡಿ

ದಿನದ ಕೊನೆಯಲ್ಲಿ ಪ್ರಸ್ತುತಪಡಿಸುವ ಸುತ್ತನ್ನು ಇಟ್ಟುಕೊಳ್ಳಿ, ತಮ್ಮ ಪರಿಶ್ರಮಕ್ಕಾಗಿ ವಿದ್ಯಾರ್ಥಿಗಳು ಪುರಸ್ಕೃತ (ಮತ್ತು ಸ್ಫೂರ್ತಿ ಹೊಂದಿದ) ಭಾವನೆಯನ್ನು ಅನುಭವಿಸುವಂತೆ ಅದರಲ್ಲಿ ಪ್ರತಿಫಲವನ್ನೂ ಒಳಗೊಂಡಂತೆ ಸಂಭ್ರಮಾಚರಣೆಯ ಅಂಶವೂ ಇರಲಿ. ಪ್ರತಿಫಲ ಎಂದರೆ ಶಾಲೆ ಬಿಟ್ಟ ನಂತರ ಕಂಪ್ಯೂಟರ್ ಲ್ಯಾಬ್ ನಲ್ಲಿ ಒಂದು ಗಂಟೆಯ ಗೇಮ್ ಆಡುವುದರಿಂದ ಹಿಡಿದು ಉಚಿತ ಫೀಲ್ಡ್ ಟ್ರಿಪ್ ವರೆಗೆ ಇನ್ನೇನಾದರೂ ಆಗಿರಬಹುದು.

ಕಲಿಕೆ ಮತ್ತು ನಾವೀನ್ಯತೆಗಳು ಜೊತೆಯಲ್ಲಿಯೇ ಸಾಗುತ್ತವೆ, ಆ ದಿನವು ವಿಭಿನ್ನವಾಗಿದ್ದು ಎಂದಿನ ಶಾಲಾ ದಿನಕ್ಕಿಂತ ಹೆಚ್ಚು ರಂಜನೀಯವಾಗಿದ್ದುದರಿಂದಾಗಿ ನಿಮ್ಮ ವಿದ್ಯಾರ್ಥಿಗಳು ಸಾಕಷ್ಟು ಮೋಜನ್ನು ಅನುಭವಿಸುವುದಷ್ಟೇ ಅಲ್ಲದೇ, ತಮ್ಮ ಭವಿಷ್ಯದ ಭವಿತವ್ಯವಾಗಬಹುದಾದ ಅನುರಾಗವನ್ನು ಅನ್ವೇಷಿಸುವಲ್ಲಿ ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಇರಿಸಲೂ ಸಹ ಆರಂಭಿಸುತ್ತಾರೆ.
ಸೂಚನೆ: ಸಂಪೂರ್ಣ ದಿನವನ್ನು ಆಯೋಜಿಸುವುದು ಸ್ವಲ್ಪ ಕಷ್ಟಕರವೆಂದು ಸಾಬೀತಾಗುವಲ್ಲಿ, ಕೊನೆಯ ಪಿರಿಯಡ್ ಅನ್ನು ನಾವೀನ್ಯತಾ ಸಮಯವಾಗಿ ಪರಿವರ್ತಿಸಿ.