ತಂತ್ರಜ್ಞಾನ-ನಿಪುಣವಾಗಿರುವ ಮಗುವೊಂದನ್ನು ಬೆಳೆಸುವುದು ಹೇಗೆ?

“ಐಟಿ + ಐಟಿ = ಐಟಿ

ಇಂಡಿಯನ್ ಟ್ಯಾಲೆಂಟ್ + ಇನ್ಫಾರ್ಮೇಶನ್ ಟೆಕ್ನಾಲಜಿ = ಇಂಡಿಯಾ ಟುಮಾರೋ”

-ನರೇಂದ್ರ ಮೋದಿ

 

ಇಂದಿನ ಕಾಲಮಾನದಲ್ಲಿ, ಸಾಮಾಜಿಕ ಜಗತ್ತು ತಂತ್ರಜ್ಞಾನದ ಮೂಲಕ ಹೆಚ್ಚಿನ ಮಟ್ಟಿಗೆ ಹಾಗೂ ವೈಯಕ್ತಿಕ ವರ್ತನೆಯ ಮೂಲಕ ಕಡಿಮೆ ಮಟ್ಟಿಗೆ ವ್ಯಾಖ್ಯಾನಿಸಲ್ಪಡುತ್ತದೆ. ತಂತ್ರಜ್ಞಾನದ ಮಾರ್ಗಗಳಿಗೆ ಬಹುತೇಕ ಮಕ್ಕಳು ಸ್ಮಾರ್ಟ್, ಆಬ್ಸರ್ವಂಟ್ ಹಾಗೂ ಅಡಾಪ್ಟಿವ್ ಆಗಿದ್ದಾರೆ.

ತಂತ್ರಜ್ಞಾನವು ಪರಿಣಾಮಕಾರಿಯಾಗಿ ಹಾಗೂ ಅದರ ಅತ್ಯುತ್ತಮ ರೀತಿಯಲ್ಲಿ ಬಳಸಲ್ಪಡುವುದನ್ನು ಖಚಿತಪಡಿಸಿಕೊಳ್ಳಲು, ಸಮತೋಲಿತ ತಂತ್ರಜ್ಞಾನ-ನೈಪುಣ್ಯತೆಯನ್ನು ಹೊಂದಿರುವ ಮಗುವನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಕೆಲವು ಅಂಶಗಳನ್ನು ಪಾಲಕರು ಗಮನದಲ್ಲಿಟ್ಟುಕೊಳ್ಳಬೇಕು.

  • ತಾಂತ್ರಿಕ-ಸಂಬಂಧಿತ ಚರ್ಚೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ – ತಾಂತ್ರಿಕ ಅನುಕೂಲತೆಗಳ ಬಗ್ಗೆ ನಿಮ್ಮ ಮಗುವಿನೊಂದಿಗೆ ಮುಕ್ತವಾಗಿ ಚರ್ಚೆಗಳಲ್ಲಿ ತೊಡಗಿಕೊಳ್ಳಿ. ಪರ್ಸನಲ್ ಕಂಪ್ಯೂಟರ್ ಗಳೆಡೆಗೆ ಆರೋಗ್ಯಕರ ಹೊರನೋಟವನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿ, ಆನ್ಲೈನ್ ನಲ್ಲಿ, ಮತ್ತು ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವಾಗ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಅವರಲ್ಲಿ ಜವಾಬ್ದಾರಿಯ ಸಂವೇದನೆಯನ್ನು ಮೂಡಿಸಲು ಅದರ ಸಾಧಕ ಮತ್ತು ಬಾಧಕಗಳನ್ನು ಚರ್ಚಿಸಿ.

  • ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಪಾಲ್ಗೊಳ್ಳುವಿಕೆ – ಭಾರತವು 5 ರಿಂದ 24 ವರ್ಷಗಳ ವಯೋಮಿತಿಯಲ್ಲಿ ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳ ಅಗಾಧತೆಯನ್ನು ಪ್ರತಿನಿಧಿಸುತ್ತದೆ (ಐಬಿಇಎಫ್.ಆರ್ಗ್- ಜುಲೈ 2019). ತಮ್ಮ ಉನ್ನತ ಶಿಕ್ಷಣದಿಂದ ತಾಂತ್ರಿಕವಾಗಿ ಅತ್ಯಂತ ವರ್ಧಿತವಾದ ಅನುಭವಗಳನ್ನು ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಾರೆ. ಪ್ರವಾಹದೋಪಾದಿಯ ವಿಷಯಸಾಮಗ್ರಿ, ಶೈಕ್ಷಣಿಕ ವಿಡಿಯೋಗಳು, ವಾಸ್ತವಿಕ-ಸಮಯದ ಶಿಕ್ಷಣಗಳು ಸುಲಭವಾಗಿ ಲಭ್ಯವಿದ್ದು, ಸಂಪೂರ್ಣವಾಗಿ ಹೊಸದಾದ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಾಂತರಗೊಳಿಸಿವೆ. ಮೊದಲು ಓರ್ವ ವಿದ್ಯಾರ್ಥಿಯು ಪ್ರತಿ ವಿಷಯಕ್ಕೆ, ಬೇರೆ ಬೇರೆ ಶಿಕ್ಷಕರ ಬಳಿಗೆ ಪ್ರಯಾಣಿಸಬೇಕಿತ್ತು ಆದರೆ ವಾಸ್ತವಿಕ-ಸಮಯದ ಶಿಕ್ಷಣದ ಮೂಲಕ ಒಂದೇ ಸ್ಥಳದಲ್ಲಿಯೇ ಇದ್ದುಕೊಂಡು, ಅಗ್ರ-ಶ್ರೇಣಿಯ ಕೋಚಿಂಗ್ ಅನ್ನು ಪಡೆದುಕೊಳ್ಳುವ ಅನುಕೂಲತೆಯನ್ನು ಅವರು ಈಗ ಹೊಂದಿದ್ದಾರೆ.

  • ತಂತ್ರಜ್ಞಾನವನ್ನು ಓರ್ವ ಸಂಗಾತಿಯಾಗಿ ಪರಿಗಣಿಸುತ್ತಾ –ಅತ್ಯುತ್ತಮ ಹಿತಾಸಕ್ತಿಯಲ್ಲಿ ಬಳಸಿದಾಗ, ತಂತ್ರಜ್ಞಾನ-ನಿಪುಣ ಮಗುವೊಂದಕ್ಕೆ, ಅದರ ಗ್ಯಾಜೆಟ್ಟೇ ಒಂದು ಸಂಗಾತಿಯಾಗಿರುತ್ತದೆ. ಅದರ ಪ್ರಯೋಜನಗಳು ಅಗಾಧವಾಗಿರುತ್ತವೆ. ಒಂದು ಪರ್ಸನಲ್ ಕಂಪ್ಯೂಟರ್ ಬರೀ ಒಂದು ಯಂತ್ರವಷ್ಟೇ ಆಗಿರದೇ, ಕಲಿಯುವ ಒಂದು ಮಾಧ್ಯಮವಾಗಿರುತ್ತದೆ, ಮನರಂಜನೆಯ ಕಾರ್ಖಾನೆಯಾಗಿರುತ್ತದೆ, ಮಹಾನ್ ಕತೆಗಾರವಾಗಿರುತ್ತದೆ ಮತ್ತು ಇನ್ನೂ ಬಹಳಷ್ಟು ಆಗಿರುತ್ತದೆ!

  • ಸಮತೋಲನವನ್ನು ಸಾಧಿಸಿ – ತಂತ್ರಜ್ಞಾನದ ಮೇಲೆ ದೀರ್ಘಕಾಲಿಕ ಅವಲಂಬನೆಯು ಅದರದ್ದೇ ಆದ ಪ್ರತಿಕೂಲ ಪರಿಣಾಮಗಳನ್ನು ಹೊಂದಿರಬಲ್ಲದು. ಎಲ್ಲ ಮಾಹಿತಿಯೂ ಪ್ರಾಮಾಣಿಕವಾದ ಹಿನ್ನೆಲೆಯನ್ನೇ ಹೊಂದಿರಲಿಕ್ಕಿಲ್ಲವಾದರೂ ಮಗುವೊಂದಕ್ಕೆ ಗೂಗಲ್ ಎಂಬುದು ತೂರಲಾರದ ಜ್ಞಾನದ ಸಾಧನವಾಗಿ ತೋರಬಹುದು. ಮಗುವೊಂದು ತನ್ನ ಪಾಲಕರ ವರ್ತನೆಯನ್ನು ಅಳವಡಿಸಕೊಳ್ಳತೊಡಗುತ್ತದೆ. ಹಾಗಾಗಿ ಸಮತೋಲನವನ್ನು ಸಾಧಿಸಿ, ನಿಮ್ಮ ಮಕ್ಕಳೊಂದಿಗೆ ವೈಯಕ್ತಿಕವಾಗಿ ಸಮಯವನ್ನು ವ್ಯಯಿಸುವುದನ್ನು ಖಚಿತಪಡಿಸಿಕೊಳ್ಳಿ.

ಪರ್ಸನಲ್ ಕಂಪ್ಯೂಟರ್ ಗಳು ಇಂದು ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ ಎಂಬುದನ್ನು ನೆನಪಿಡಿ – ಓರ್ವ ಪಾಲಕರಾಗಿ, ಬೆಳೆಯಲು ಮಕ್ಕಳಿಗೆ ನೆರವಾಗಲು ಸೂಕ್ತವಾದ ಪರ್ಸನಲ್ ಕಂಪ್ಯೂಟರ್ ಅನ್ನು ಆಯ್ಕೆ ಮಾಡುವ ಮೂಲಕ ಆರಂಭಿಸುತ್ತಾ, ಬದಲಾವಣೆಯನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ ಹಾಗೂ ಅದರ ಭಾಗವಾಗಬೇಕಾಗುತ್ತದೆ.