ಪರೀಕ್ಷೆಗಳ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ

 

ಪರೀಕ್ಷೆಗಳ ಬಗ್ಗೆ ನೀವು ಭಯವನ್ನು ಹೊಂದಿದ್ದಲ್ಲಿ, ನೀವು ಒತ್ತಡಕ್ಕೊಳಗಾಗಬಹುದು. ಒತ್ತಡವು ನಿಮ್ಮ ಫಲಿತಾಂಶಗಳನ್ನು ಬಾಧಿಸುವ ಮೊದಲು, ಉತ್ತಮ ಅಂಕಗಳನ್ನು ಗಳಿಸಿ, ಅಧ್ಯಯನ ಪ್ರಕ್ರಿಯೆಯನ್ನು ನಿಜವಾಗಿಯೂ ಆನಂದಿಸಲು ಒತ್ತಡ-ರಹಿತ ಎಕ್ಸ್ಪ್ರೆಸ್ ಬಸ್ ಅನ್ನು ಆರಿಸಿಕೊಳ್ಳಿ. ಒಂದು ಪಿಸಿ ನಿಮಗೆ ಹೇಗೆ ನೆರವಾಗಬಲ್ಲದು ಎಂಬುದನ್ನು ಇಲ್ಲಿ ನೀಡಲಾಗಿದೆ:

1. ಪ್ರತಿಯೊಂದಕ್ಕೂ ಟೈಮಿಂಗ್ ಪ್ರಮುಖವಾಗಿದೆ

ಪರೀಕ್ಷೆಯ ಒಂದು ದಿನ ಮೊದಲು ಇನ್ನೂ ಅನುಮಾನಗಳನ್ನು ಹೊಂದಿರುವುದಕ್ಕಿಂತ ಕೆಟ್ಟದ್ದು ಇನ್ನೇನಿಲ್ಲ, ಆದ್ದರಿಂದ, ನಿಮ್ಮ ಮೊದಲ ಪರೀಕ್ಷೆಗೆ ಕನಿಷ್ಠ ಒಂದು ತಿಂಗಳು ಮೊದಲು ಅಧ್ಯಯನವನ್ನು ಪ್ರಾರಂಭಿಸುವುದು ಪ್ರಯೋಜನಕಾರಿಯಾಗಿರುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದನ್ನೂ ಒಳಗೊಂಡಂತೆ, ಹೆಚ್ಚು ಹೆಚ್ಚು ಪರಿಷ್ಕರಣೆಗಳನ್ನು ನೀವು ಮಾಡಿದಂತೆ ಪರೀಕ್ಷೆಯ ದಿನದಂದು ನೀವು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ.

2. ಯೋಜಿಸುವಿಕೆಯ ಶಕ್ತಿ

ಯೋಜಕರಾಗಿರುವುದು ಎಲ್ಲರಿಗೂ ಅಷ್ಟೊಂದು ಸಹಜವಾಗಿ ಬರುವುದಿಲ್ಲ ಮತ್ತು ಆರಂಭದಲ್ಲಿ ಬಹಳ ಹೆದರಿಕೆಯನ್ನುಂಟು ಮಾಡುವಂತೆ ತೋರುತ್ತದೆ. ಆದರೆ, Google Calendar ನಂತಹ ಸಾಧನದೊಂದಿಗೆ, ನಾವು ಚಲಿಸಬೇಕಿರುವ ದಿಕ್ಕಿನೆಡೆಗೆ ಒಂದು ಸ್ಪಷ್ಟತೆಯನ್ನು ಹೊಂದುವುದು, ಒಂದು ಅಧ್ಯಾಯವನ್ನು ಪೂರ್ಣಗೊಳಿಸಲು ನಿಖರವಾಗಿ ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು, ಕಠಿಣ ವಿಷಯಗಳಿಗೆ ಆದ್ಯತೆ ನೀಡುವುದು ಮತ್ತು ವಿರಾಮಗಳನ್ನು ತೆಗೆದುಕೊಳ್ಳಲೂ ಸಹ ಸಾಧ್ಯವಾಗುತ್ತದೆ!

3. ವಿರಾಮ ತೆಗೆದುಕೊಳ್ಳುವುದೂ ಸಹ ಉತ್ತಮವಾಗಬಲ್ಲದು

ವಿಶ್ರಾಂತಿ ತೆಗೆದುಕೊಳ್ಳದೆ ಇಡಿ ದಿನ ತಡೆಯಿಲ್ಲದೇ ಅಧ್ಯಯನ ಮಾಡುವುದನ್ನು ಊಹಿಸಿಕೊಳ್ಳಿ. ಒಂದೋ ಅಧ್ಯಯನವನ್ನು ಮುಂದುವರೆಸಲು ನೀವು ತುಂಬಾ ದಣಿದಿರುತ್ತೀರಿ ಹಾಗೂ ಬೇಸರಗೊಂಡಿರುತ್ತೀರಿ ಅಥವಾ ಅವೆರಡನ್ನೂ ಅನುಭವಿಸುತ್ತೀರಿ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು, ನೀವು ಒಂದು ಗಂಟೆ ಅಧ್ಯಯನದ ಮೇಲೆ ಕೇಂದ್ರೀಕರಿಸಿ, ಸುಮಾರು ಹದಿನೈದು ನಿಮಿಷಗಳು ಆಟಗಳನ್ನು ಆಡುವಂತೆ ಸ್ಪ್ರಿಂಟ್ಗಳ ರೀತಿಯಲ್ಲಿ ಅಧ್ಯಯನ ಮಾಡುವುದನ್ನು ಪರಿಗಣಿಸಿ.

4. ಮಾತನಾಡಿಕೊಳ್ಳಿ

ಸಮಸ್ಯೆಯನ್ನು ಹಂಚಿಕೊಂಡರೆ ಸಮಸ್ಯೆ ಅರ್ಧವಾಗುತ್ತದೆ. ಸಾಮಾಜಿಕ ಮಾಧ್ಯಮ ನೆಟ್ವರ್ಕ್ಗಳಲ್ಲಿ ಮಕ್ಕಳು ತಮ್ಮದೇ ಆದ ಗ್ರುಪ್ಗಳನ್ನು ರಚಿಸಿಕೊಳ್ಳಬಹುದು ಅಥವಾ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಮತ್ತು ಒತ್ತಡಯುಕ್ತ ಯೋಚನೆಗಳನ್ನು ಹೊರಹಾಕಲು ಸಹಪಾಠಿಗಳು ಮತ್ತು ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡುವ ಸಲುವಾಗಿ WikiSpace Classroom ಗೆ (ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮದೇ ಆದ ವಿಷಯಗಳನ್ನು ಸೇರಿಸಬಹುದಾದ ವೆಬ್ಸೈಟ್) ಸೇರಿಕೊಳ್ಳಬಹುದು.

5. ತಿಳಿಯಾಗಿರುವ ಮನಸ್ಸು ಕೇಂದ್ರೀಕೃತವಾಗಿರುವ ಮನಸ್ಸಿಗೆ ಸಮನಾಗಿರುತ್ತದೆ

ನಾವು ಒತ್ತಡಕ್ಕೀಡಾದಾಗ, ನಾವು ಅತಿಯಾಗಿ ಆಲೋಚಿಸುತ್ತೇವೆ ಮತ್ತು ನಮ್ಮಷ್ಟಕ್ಕೆ ನಾವೇ ಗೊಂದಲಕ್ಕೊಳಗಾಗುತ್ತೇವೆ. ಓರ್ವ ವ್ಯಕ್ತಿಯ ತಲೆಯಲ್ಲಿನ ಆಲೋಚನೆಗಳನ್ನು ಮೈಂಡ್ ಮ್ಯಾಪಿಂಗ್ ಎಂಬುದು ದೃಶ್ಯಾತ್ಮಕವಾಗಿ ಆಯೋಜಿಸುತ್ತದೆ ಮತ್ತು ಸಂಕೀರ್ಣವಾದ ವಿಷಯಗಳನ್ನು ಚಿಕ್ಕ, ಅರ್ಥೈಸಿಕೊಳ್ಳಬಹುದಾದ ತುಣುಕುಗಳಾಗಿ ಪರಿಪೂರ್ಣವಾಗಿ ವಿಘಟಿಸುತ್ತಾ ಉಪಯುಕ್ತ ವಿಚಾರಗಳಾಗಿ ಅವುಗಳನ್ನು ಪರಿವರ್ತಿಸಲು ನೆರವಾಗುತ್ತದೆ.
ತೀವ್ರವಾದ ಪರೀಕ್ಷಾ ಅವಧಿಯಲ್ಲಿ ಒತ್ತಡವನ್ನು ಕಡಿಮೆ ಮಾಡಲು ನೆರವಾಗುವುದಷ್ಟೇ ಅಲ್ಲದೇ, ಒಂದು ಪಿಸಿ ವರ್ಷಾದ್ಯಂತ ಉಪಯೋಗಕ್ಕೆ ಬರುತ್ತದೆ. ಪ್ರಾಜೆಕ್ಟ್ ರಿಸರ್ಚ್ನಿಂದ ಹಿಡಿದು ಪ್ರಬಂಧದ ಬರವಣಿಗೆಯವರೆಗೆ, ನಿಮ್ಮ ಪ್ರಾಜೆಕ್ಟ್ಗಳಲ್ಲಿ 10/10 ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತಾ, ಕಲಿಕೆಯು ಹೆಚ್ಚು ವಿನೋದಮಯ ಮತ್ತು ಆಸಕ್ತಿದಾಯಕವಾಗಿರುವಂತಹ ಜಗತ್ತಿಗೆ ಪಿಸಿ ನಿಮ್ಮ ಕಿಟಕಿಯಾಗಿರುತ್ತದೆ.