ನಿಮ್ಮ ಮಗು ಇ-ಕಲಿಕೆಗೆ ಹೊಂದಿಕೊಳ್ಳಲು ನೀವು ಹೇಗೆ ಸಹಾಯ ಮಾಡಬಹುದು

 

ಕಲಿಕೆಯಲ್ಲಿ ಉಂಟಾಗಿರುವ ಪ್ರಸ್ತುತ ಪರಿವರ್ತನೆಯಿಂದಾಗಿ, ಪೋಷಕರೂ ಸಹಾ ಇ-ಕಲಿಕೆಯ ಬಗ್ಗೆ ಪರಿಚಯ ಹೊಂದಿರಬೇಕಾಗುತ್ತದೆ. ಶೈಕ್ಷಣಿಕ ಮತ್ತು ಸಂವಾದಾತ್ಮಕ ಪಿಸಿ ಕಲಿಕೆಯ ಮೂಲಕ ನೀವು ನಿಮ್ಮ ಮಗುವಿನ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದು ತಕ್ಕ ಸಮಯ.

 

ನಿಮ್ಮ ಮಕ್ಕಳ ಆನ್ ಲೈನ್ ತರಗತಿಗಳನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂದು ನೀವು ಕಲಿತುಕೊಳ್ಳುವ ಮೊದಲು, ನಾವು ತೊಡೆದುಹಾಕಲು ಬಯಸುವ ಇ-ಲರ್ನಿಂಗ್ ಕುರಿತಾದ ಕೆಲವು ತಪ್ಪು ಕಲ್ಪನೆಗಳು ಇಲ್ಲಿವೆ ನೋಡಿ.

 

-ಇದೊಂದು ಪರಿಣಾಮಕಾರಿಯಾದ ಬೋಧನಾ ವಿಧಾನವಲ್ಲ

ವಿದ್ಯಾರ್ಥಿಗಳಿಗೆ ಕಲಿಸಲು ಶಿಕ್ಷಕರಿಗೆ ಸಹಾಯ ಮಾಡಲು ತಂತ್ರಜ್ಞಾನವು ಮಾಧ್ಯಮದಂತೆ ಕಾರ್ಯವೆಸಗುತ್ತದೆ. ಶಿಕ್ಷಕರ ಪರಿಣತಿ ಹಾಗೇ ಇರುತ್ತದೆ.

 

- ಇದು ಪ್ರಭಾವ ಬೀರುವುದಿಲ್ಲ

ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳಲು ಅಧಿಕ ಪರಿಣಾಮ ಬೀರುವ ಇನ್ನೂ ಹಲವಾರು ಸಾಧನಗಳನ್ನು ಶಿಕ್ಷಕರು ತಮ್ಮ ಬಳಿ ಹೊಂದಿದ್ದಾರೆ.

 

-ಇದು ಸಂವಾದಾತ್ಮಕವಾಗಿರುವುದಿಲ್ಲ

ಅಸ್ಸೆಸ್&zwjಮೆಂಟುಗಳು, ಆನ್ ಲೈನ್ ರಸಪ್ರಶ್ನೆಗಳು, ಸಮೀಕ್ಷೆಗಳು, ಆಡಿಯೊಗಳು ಮತ್ತು ವೀಡಿಯೊಗಳ ಮೂಲಕ ಆನ್ ಲೈನ್ ಕಲಿಕೆ ಎನ್ನುವುದು ವ್ಯಕ್ತಿಗತ ಕಲಿಕೆಗಿಂತ ಹೆಚ್ಚಲ್ಲದಿದ್ದರೂ, ಅಷ್ಟೇ ಪ್ರಮಾಣದಲ್ಲಿ ತೊಡಗಿಕೊಳ್ಳುವಂತಹದ್ದಾಗಿದ್ದು ಮತ್ತು ಸಂವಾದಾತ್ಮಕವಾಗಿರುತ್ತದೆ.

 

ಕಲಿಕೆಯ ಪ್ರಕ್ರಿಯೆಯಲ್ಲಿ ಉಂಟಾಗಿರುವ ಅಂತರವನ್ನು ತುಂಬಲು ಮತ್ತು ನಿಮ್ಮ ಮಗುವಿನ ಶಿಕ್ಷಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನೀವೊಬ್ಬ ಪೋಷಕರಾಗಿ ಏನೇನು ಮಾಡಬಹುದು:

  • ಗೊತ್ತುಪಡಿಸಿದ ಅಧ್ಯಯನ ಪ್ರದೇಶವನ್ನು ಹೊಂದಿಸಲು ನಿಮ್ಮ ಮಗುವಿಗೆ ಸಹಾಯ ಮಾಡಿ
  • ನಿಮ್ಮ ಮಗು ಶಾಲೆಯ ಸಮಯದಲ್ಲಿ ಮಾಡಿದ ಅದೇ ವೇಳಾಪಟ್ಟಿಯನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ
  • ನಿಮ್ಮ ವೇಳಾಪಟ್ಟಿಯನ್ನು ಹೊಂದಿಸಿ ಇದರಿಂದ ನೀವು ವಿರಾಮದ ಸಮಯದಲ್ಲಿ ಅವರೊಂದಿಗೆ ಸಮಯ ಕಳೆಯಬಹುದು
  • ಅಸ್ಸೆಸ್&zwjಮೆಂಟುಗಳು ಮತ್ತು ಮನೆಕೆಲಸಗಳನ್ನು ಮುದ್ರಿಸುವ ಮೂಲಕ ಅವರ ಪರದೆಯ ಸಮಯವನ್ನು ಮಿತಿಗೊಳಿಸಿ
  • ನಿಮ್ಮ ಮಗು ಅಸ್ಸೆಸ್&zwjಮೆಂಟುಗಳನ್ನು ಪೂರ್ಣಗೊಳಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಇತರ ಪೋಷಕರು ಮತ್ತು ಅಧ್ಯಾಪಕರೊಂದಿಗೆ

 

ಡೆಲ್ ಫಾರ್ ಎಜ್ಯುಕೇಷನ್/ಶಿಕ್ಷಣಕ್ಕಾಗಿ ಡೆಲ್ ಮೂಲಕ, ಮನೆಯಲ್ಲಿ ಆದರ್ಶ ಆನ್ ಲೈನ್ ಕಲಿಕೆಯ ವಾತಾವರಣವನ್ನು ತರಲು ನಿಮಗೆ ನೆರವು ನೀಡಲು ನಾವು ವೆಬಿನಾರ್ ಗಳನ್ನು ಪ್ರಾರಂಭಿಸಿದ್ದೇವೆ. ಆನ್ ಲೈನ್ ಕಲಿಕೆ, ಸಾಮಾಜಿಕ-ಭಾವನಾತ್ಮಕ ಕೌಶಲ್ಯಗಳ ಅಭಿವೃದ್ದಿ,  ಕಲಿಕೆಯ ಸ್ಥಳವನ್ನು ರಚಿಸುವುದು, ಶಿಕ್ಷಕರು ಮತ್ತು ಶಾಲೆಗಳೊಂದಿಗೆ ಭಾಗೀದಾರಿಕೆ ಮತ್ತು ಮನೆ ಕಲಿಕೆಯನ್ನು ಉತ್ತಮಪಡಿಸುವಲ್ಲಿ ಅಗತ್ಯವಿರುವ ನಿಮ್ಮ ಪಾತ್ರದ ಬಗ್ಗೆ ನೀವು ಕಲಿತುಕೊಳ್ಳಬಹುದು.

 

ನಾವು ಸೇರಿಕೊಂಡು, ನಾವು ಶಿಕ್ಷಣದ ಹೊಸ ಅಲೆಗೆ ಹೊಂದಿಕೊಂಡು ಕಲಿಕೆಯ ಭವಿಷ್ಯವನ್ನು ತೆರೆದ ತೋಳುಗಳಿಂದ ಸ್ವೀಕರಿಸೋಣ. ಅದು ಇಲ್ಲಿ ಕ್ಲಿಕ್ ಮಾಡುವಷ್ಟು ಸರಳ ವಿಧಾನವಾಗಿದೆ.  (https://www.dellaarambh.com/webinars/)