ಮಕ್ಕಳಿಗೆ ನೆರವಾಗಲು ಪಾಲಕರು ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿರಬೇಕು ಎಂಬುದು ನನ್ನ ಭಾವನೆ

 

 

ಏಕ್ತಾ ಶಾರವರು ಇಬ್ಬರು ಮಕ್ಕಳ ತಾಯಿಯಾಗಿದ್ದು, Life of a Mother ಮೂಲಕ ಪದಗಳ ಮುಖಾಂತರ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದಾರೆ.

1) ಶಿಕ್ಷಣಕ್ಕಾಗಿ ಪಿಸಿ – ಇದರಿಂದ ಭಾರತೀಯ ವಿದ್ಯಾರ್ಥಿಗಳು ಹೇಗೆ ಪ್ರಯೋಜನ ಹೊಂದಬಹುದು?

ಶಿಕ್ಷಣಕ್ಕಾಗಿ ಪಿಸಿ ಎಂಬುದು ಜೀವನರೇಖೆಯಾಗಿಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಮತ್ತು ತಂತ್ರಜ್ಞಾನವು ಜ್ಞಾನವನ್ನು ಹೇಗೆ ನೀಡುತ್ತಲಿದೆ ಎಂಬುದರಲ್ಲಿ ತೀವ್ರ ಬದಲಾವಣೆಗಳನ್ನು ನಾನು ನೋಡಿದ್ದೇನೆ. ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣವು ಪ್ರಭಾವಕ್ಕೊಳಗಾಗಬಹುದಾದ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ, ಆನ್ಲೈನ್ ಕಲಿಸುವಿಕೆ ಹೊಸ ಹಂತವನ್ನು ಪ್ರವೇಶಿಸಿದೆ. ಆಡಿಯೊ-ವಿಶ್ಯುವಲ್ ಮಾಧ್ಯಮದ ಮೂಲಕ ಪರಿಕಲ್ಪನೆಗಳನ್ನು ಕಲಿಯುವುದು ಯಾವಾಗಲೂ ಹೆಚ್ಚು ಉತ್ತಮ ಸ್ಮರಣೆ ಮೌಲ್ಯವನ್ನು ಹಾಗೂ ಸ್ಪಷ್ಟ ಅರ್ಥೈಸಿಕೊಳ್ಳುವಿಕೆಯನ್ನು ಹೊಂದಿರುತ್ತದೆ.

ನನ್ನ ಮಕ್ಕಳಿಗೆ ಎಜುಕೇಶನಲ್ ವಿಡಿಯೋಗಳೊಂದಿಗೆ ಕಲಿಸುವಾಗ ಈ ವ್ಯತ್ಯಾಸವನ್ನು ನಾನು ನೋಡುತ್ತೇನೆ. ಕಲಿಸುವಿಕೆಯು ಆಗ ಒಂದು ಸುಲಭ ಹಾಗೂ ಮೋಜಿನ ವಿಧಾನವಾಗಿಬಿಡುತ್ತದೆ.

2) ನಿಮ್ಮನ್ನು ನೀವು ಒಬ್ಬ ಡಿಜಿಟಲ್ ಪೇರೆಂಟಿಂಗ್ ಪ್ರೊ ಆಗಿ ಪರಿಗಣಿಸುತ್ತೀರಾ?

ಹೌದು, ಪರಿಗಣಿಸುತ್ತೇನೆ, ಏಕೆಂದರೆ ಇದರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಮಕ್ಕಳಿಗೆ ನೆರವಾಗಲು ಪಾಲಕರು ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿರಬೇಕು ಎಂಬುದು ನನ್ನ ಭಾವನೆ. ತಂತ್ರಜ್ಞಾನವು ನಮ್ಮ ಜೀವನಗಳನ್ನು ನಿಸ್ಸಂಶಯವಾಗಿ ಹೆಚ್ಚು ಸುಲಭಗೊಳಿಸಿದೆಯಾದರೂ, ಸಂಪೂರ್ಣವಾಗಿ ಕಡೆಗಣಿಸಲಾಗದಂಥ ಇನ್ನೊಂದು ಪಾರ್ಶ್ವವನ್ನು ಅದು ಹೊಂದಿದೆ. ವಾಸ್ತವಾಂಶಗಳು ನನಗೆ ತಿಳಿದಿದ್ದಲ್ಲಿ ಮಾತ್ರ ನನ್ನ ಮಕ್ಕಳನ್ನು ನಾನು ಎಚ್ಚರಿಸಬಹುದು. ಇಂಟರನೆಟ್ ಅನ್ನು ಜಾಣತನದಿಂದ ಹೇಗೆ ಬಳಸುವುದು ಎಂಬುದು ನಿಮಗೆ ತಿಳಿಯದ ಹೊರತು ಅದು ಸುರಕ್ಷಿತವಲ್ಲ. ಮಕ್ಕಳಿಗೆ ಇಂಟರ್ನೆಟ್ ಪ್ರವೇಶಾವಕಾಶವನ್ನು ಒದಗಿಸುವುದಕ್ಕೂ ಮೊದಲು ಪಾಲಕರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು.

3) ನಿಮ್ಮ ಮಕ್ಕಳಿಗೆ ಕಲಿಕೆಯನ್ನು ಒಂದು ಮೋಜಿನ ಚಟುವಟಿಕೆಯನ್ನಾಗಿಸಲು ನೀವೇನು ಮಾಡುತ್ತಿರುವಿರಿ?

ಪ್ರಾಮಾಣಿಕವಾಗಿ, ಕೆಲವೊಮ್ಮೆ ಅವರೇ ನನಗಿಂತ ಹೆಚ್ಚು ತಿಳಿದುಕೊಂಡಿರುತ್ತಾರಾದರೂ, ಅವರಿಗೆ ಸೀಮಿತ ರೇಖೆಗಳಲ್ಲಿ ಉತ್ತರಿಸದಿರುವಂತೆ ನಾನು ನೋಡಿಕೊಳ್ಳುತ್ತೇನೆ. ಬಹುತೇಕವಾಗಿ, ನನ್ನ ಅನುಭವವನ್ನು ಹೆಚ್ಚು ಆಸಕ್ತಿದಾಯಕವನ್ನಾಗಿಸಲು ಅದನ್ನು ಒಂದು ಕತೆಯ ರೂಪದಲ್ಲಿ ನಾನು ಸೇರಿಸುತ್ತೇನೆ. ಕಲಿಕೆಗಾಗಿ ಅಥವಾ ಅವರು ವೀಕ್ಷಿಸಬಯಸುವ ಯಾವುದಕ್ಕೇ ಆಗಲಿ ಚಿಕ್ಕ ಸ್ಕ್ರೀನ್ ಅನ್ನು ಅವರು ಬಳಸುವುದನ್ನು ನಾನು ತಪ್ಪಿಸುತ್ತೇನೆ ಎಂಬುದು ಇನ್ನೂ ಒಂದು ಪ್ರಮುಖವಾದ ವಿಷಯವಾಗಿದೆ. ವೀಕ್ಷಿಸುವುದಕ್ಕಾಗಿ ಸೂಕ್ತ ಅಂತರ ಹಾಗೂ ಸರಿಯಾದ ಭಂಗಿಯೊಂದಿಗೆ ನಾನು ಒಂದೋ ಡೆಸ್ಕ್ಟಾಪ್ ಬಳಸುತ್ತೇನೆ ಇಲ್ಲವೇ ಲ್ಯಾಪ್ಟಾಪ್ ಬಳಸುತ್ತೇನೆ.

4) ನಿಮ್ಮ ಬ್ಲಾಗ್ “ಲೈಫ್ ಆಫ್ ಎ ಮದರ್” ಹಲವಾರು ವಿಷಯಗಳನ್ನು ಸ್ಪರ್ಷಿಸುತ್ತದೆ – ಪ್ರತಿಯೊಬ್ಬ ಪಾಲಕರೂ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯ ಯಾವುದು?

Perfect ಎಂಬ ಪದವು ತುಂಬಾ ಅಪಾಯಕಾರಿಯಾಗಿದ್ದು, ಜೀವನದ ಮೇಲೆ ಅನಪೇಕ್ಷಿತ ಒತ್ತಡವನ್ನು ಸೃಷ್ಟಿಸಬಲ್ಲದು. ಪರಿಪೂರ್ಣತೆ ಹಾಗೂ ಅಪರಿಪೂರ್ಣತೆಗಳ ಮಿಶ್ರಣದೊಂದಿಗೆ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿರುವ ಪ್ರತಿಯೊಂದೂ ಮಗುವು ಭಿನ್ನವಾಗಿರುತ್ತದೆ. ನಾವು ಅವರನ್ನು ಹೋಲಿಕೆ ಮಾಡುವುದು ಬೇಡ. ಒಪ್ಪಿಕೊಳ್ಳುವುದು ಇಲ್ಲಿ ಪ್ರಮುಖವಾಗುತ್ತದೆ, ನಿಮ್ಮದೇ ಆದ ನಿರೀಕ್ಷೆಗಳಿಗೆ ತಕ್ಕಂತೆ ಅವರನ್ನು ರೂಪಿಸಲು ಪ್ರಯತ್ನಿಸಬೇಡಿ! ತಮ್ಮ ಪಾಲಕರೊಂದಿಗೆ ಯಾವುದೇ ಭಯವಿಲ್ಲದೇ ಪ್ರತಿಯೊಂದನ್ನೂ ಹಂಚಿಕೊಳ್ಳಲು ಮಕ್ಕಳು ಮುಕ್ತರಾಗಿರಬೇಕು. ತಪ್ಪುಗಳನ್ನು ಮಾಡುವುದು ಜೀವನದ ಭಾಗ, ಜೀವನದಲ್ಲಿ ಸಕಾರಾತ್ಮಕವಾಗಿದ್ದುಕೊಂಡು ಮುಂದೆ ಹೋಗಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು.