ಯೋಜನೆಯ ಪರಿಣಾಮ

ಭಾರತದಲ್ಲಿ ಪಿಸಿ ಅಳವಡಿಸಿಕೊಳ್ಳುವಿಕೆಯ ಸಮಸ್ಯೆಯನ್ನು ಪರಿಹರಿಸಲು ಮತ್ತು ನಿಭಾಯಿಸಲು ನಾವು ಡೆಲ್ ಆರಂಭ್ ನ್ನು ಪ್ರಾರಂಭಿಸಿದ್ದೇವೆ. ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ಪೋಷಕರು, ಶಿಕ್ಷಕರು ಮತ್ತು ಮಕ್ಕಳಿಗೆ ಕಲಿಕೆಯನ್ನು ಹೆಚ್ಚಿಸಲು ಆರಂಭ್ ಎಂಬ ಪ್ಯಾನ್-ಇಂಡಿಯಾ ಪಿಸಿ ಫಾರ್ ಎಜುಕೇಶನ್/ವಿದ್ಯಾಭ್ಯಾಸಕ್ಕಾಗಿ ವೈಯುಕ್ತಿಕ ಕಂಪ್ಯೂಟರ್ ಎಂಬ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.  ಭಾರತದಾದ್ಯಂತದ ಪಿಸಿಗಳಿಗೆ ಸಂಬಂಧಪಟ್ಟಂತಹ ಗ್ರಹಿಕೆ, ಬಳಕೆ ಹಾಗೂ ಕಂಪ್ಯೂಟರ್ ಶಿಕ್ಷಣದಲ್ಲಿ ಕ್ರಾಂತಿ ತರುವ ಗುರಿಯನ್ನು ನಾವು ಹೊಂದಿದ್ದೇವೆ.

 

 

ಪರಿಣಾಮದ ಮಾಪನ

ಶಿಕ್ಷಕರು ಮತ್ತು ಪ್ರಾಂಶುಪಾಲರಲ್ಲಿ ಹೆಚ್ಚಿನ ಪ್ರಸ್ತುತತೆ ಮತ್ತು ಪಿಸಿ ಅಪೇಕ್ಷಣೀಯತೆಯನ್ನು ಈ ಪ್ರೋಗ್ರಾಂ ಹೆಚ್ಚಿಸುತ್ತದೆಯೇ ಎಂದು ಕಂಟರ್ ವರದಿಯ ಮೂಲಕ ನಾವು ಅಳೆದು ನೋಡಿದೆವು. ತರಬೇತಿಗೆ ಹಾಜರಾದ ಪರೀಕ್ಷಾ ಗುಂಪು ಮತ್ತು ತರಬೇತಿಗೆ ಕರೆಯಲ್ಪಡದ ನಿಯಂತ್ರಿತ ಗುಂಪಿನೊಂದಿಗೆ ನಾವು ರಚನಾತ್ಮಕ ಸಂದರ್ಶನಗಳನ್ನು ನಡೆಸಿದ್ದೇವೆ.

ಅಪ್ಲಿಕೇಶನ್ ಅನುಸಾರದ ಬಳಕೆಯನ್ನು ಸಹ ನಾವು ಗಣನೆಗೆ ತೆಗೆದುಕೊಂಡಿದ್ದೇವೆ, 100% ಶಿಕ್ಷಕರು ಸ್ಮಾರ್ಟ್ ಫೋನ್ ಹೊಂದಿದ್ದಾರೆ, ಮತ್ತು 66% ಶಾಲೆಗಳು ಸ್ಮಾರ್ಟ್ ಕ್ಲಾಸ್ ಸೌಲಭ್ಯ ಮತ್ತು ಸರಾಸರಿ 15 ಪಿಸಿಗಳನ್ನು ಹೊಂದಿವೆ.

 

 

ತರಬೇತಿ

10 ರಲ್ಲಿ 8 ಶಿಕ್ಷಕರು ನೀಡಿರುವ ವಿಷಯವನ್ನು ಸರಳ, ರಚನಾತ್ಮಕ, ಪರಿಣಾಮಕಾರಿ ಮತ್ತು ಸ್ಪಷ್ಟವಾಗಿದೆಯೆಂದು ಕಂಡುಕೊಂಡಿದ್ದಾರೆ. 10 ರಲ್ಲಿ 8 ಶಿಕ್ಷಕರು ಆನ್ ಲೈನ್ ತರಬೇತಿಯೊಂದಿಗೆ ಆರಾಮವಾಗಿದ್ದರು ಮತ್ತು ತರಬೇತಿಯ ಆವರ್ತನವು ಪ್ರತಿ 3 ತಿಂಗಳವರೆಗೆ ಹೋಗಬೇಕೆಂದು ಅವರು ಬಯಸಿದ್ದರು.

 

 

ಗ್ರಹಿಕೆಯಲ್ಲಿ ಬದಲಾವಣೆ

ಪಿಸಿಗಳ ಕುರಿತಾದ ಧೋರಣೆ ಗಮನಾರ್ಹವಾಗಿ ಸುಧಾರಿಸಿದೆ, ಶಿಕ್ಷಕರು ಈಗ ಕಂಪ್ಯೂಟರ್ ಮತ್ತು ಸ್ಮಾರ್ಟ್ ಬೋರ್ಡ್ ಗಳನ್ನು ಸ್ವಯಂ ಕಲಿಕೆಗಾಗಿ ಮತ್ತು ವರ್ಗ ಪಾಠಗಳನ್ನು ಸಿದ್ಧಪಡಿಸಿಕೊಳ್ಳಲು ಬಳಸುತ್ತಿದ್ದಾರೆ.

ಶಿಕ್ಷಣದಲ್ಲಿ ಪಿಸಿಗಳು ಸಕಾರಾತ್ಮಕ ಪಾತ್ರ ವಹಿಸುತ್ತವೆ ಎಂದು ತರಬೇತಿ ಪಡೆದ 92% ಶಿಕ್ಷಕರು ಭಾವಿಸುತ್ತಾರೆ, 68% ತರಬೇತಿ ಪಡೆದ ಶಿಕ್ಷಕರು ಕಂಪ್ಯೂಟರ್ ಗಳಲ್ಲಿ  ಪ್ರವೀಣರಾಗಿದ್ದಾರೆ. ನಿಯಂತ್ರಿತ ಗುಂಪಿನ 83% ಜನರು ಪಿಸಿಗಳು ಪ್ರಸ್ತುತವೆಂದು ಕಂಡುಕೊಂಡಿದ್ದಾರೆ.

 

 

ತರಬೇತಿಯ ಪರಿಣಾಮ

ಅಧ್ಯಯನ ಸಾಮಗ್ರಿಗಳನ್ನು ತಯಾರಿಸಲು, ಉದಾಹರಣೆಗಳನ್ನು ಮತ್ತು ಎವಿಗಳ ಮೂಲಕ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಮತ್ತು ದೂರಸ್ಥ ಸಹಯೋಗಕ್ಕಾಗಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಈಗ ಶಿಕ್ಷಕರು ಸ್ವತಂತ್ರವಾಗಿ ಪಿಸಿಗಳನ್ನು ಬಳಸುವ ಆಸಕ್ತಿ ಹೊಂದಿದ್ದಾರೆ, ಈ ಬೆಳವಣಿಗೆ ಸಣ್ಣ ನಗರಗಳಲ್ಲಿ ತರಬೇತಿ ಪಡೆದ ಶಿಕ್ಷಕರಲ್ಲಿ ಹೆಚ್ಚಾಗಿದೆ.

ಪಿಸಿಗಳ ಬಳಕೆಯು ವಿಷಯ ಪಾಠ ಯೋಜನೆಗಳನ್ನು ತಯಾರಿಸಲು, ಕಾರ್ಯಯೋಜನೆ/ಅಸೈನ್ಮೆಂಟುಗಳನ್ನು ನೀಡಲು, ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸ್ಮಾರ್ಟ್ ಬೋರ್ಡ್ ಗಳನ್ನು ಬಳಸುವಂತಹ ವೈವಿಧ್ಯಮಯ ಅನುಕೂಲ ಹೊಂದಿದೆ. ಆರಂಭದಲ್ಲಿ ನಕಾರಾತ್ಮಕ ಧೋರಣೆ ಹೊಂದಿದ್ದ ಶಿಕ್ಷಕರೂ ಈಗ ಕಂಪ್ಯೂಟರ್ ನೊಂದಿಗೆ ಹೆಚ್ಚು ಪರಿಣತರಾಗಿದ್ದಾರೆ.

 

 

ಪಿಸಿ- ಕೇಂದ್ರಿತ ಭವಿಷ್ಯ

ಶಿಕ್ಷಕರು ಸ್ವತಂತ್ರವಾಗಿ ಪಿಸಿಯನ್ನು ಬಳಸಲು ಪ್ರಾರಂಭಿಸಿದ್ದಾರೆ (37%), ಸ್ಮಾರ್ಟ್ ತರಗತಿಗಳ ಅವಧಿಯಲ್ಲಿ 100% ಹಾಜರಾತಿ ಇರುತ್ತದೆ ಎಂದು ಶಿಕ್ಷಕರು ನಂಬಿದ್ದಾರೆ.

ಶೈಕ್ಷಣಿಕ ರಂಗದಲ್ಲಿ ಸಮಗ್ರ ಬದಲಾವಣೆಯೊಂದಿಗೆ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರ ವ್ಯಾಪಕ ಸ್ವೀಕಾರದೊಂದಿಗೆ, ಮುಂಬರುವ ಸಮಯದಲ್ಲಿ ನಾವು ಬದಲಾವಣೆಯ ಅಭಿಯಾನದತ್ತ  ಕಾತುರದಿಂದ ನೋಡುತ್ತಿದ್ದೇವೆ.