ತರಗತಿಯಲ್ಲಿ ಪ್ರತಿ ದಿನ “ನಾವೀನ್ಯತೆ” ಯನ್ನು ತರುವುದು ಸಾಧ್ಯವಿದೆ – ಹೇಗೆ, ಇಲ್ಲಿದೆ ನೋಡಿ

 

ವಿದ್ಯಾರ್ಥಿಯ ಗಮನವನ್ನು ಬಹಳ ಹೊತ್ತಿನವರೆಗೆ ಹಿಡಿದಿರಿಸಿಕೊಂಡು, ಅವರು ತರಗತಿಯಿಂದ ತೆರಳಿದ ನಂತರವೂ ದೀರ್ಘ ಕಾಲದವರೆಗೆ ಅವರ ನೆನಪಿನಲ್ಲುಳಿಯುವಂತೆ ಪರಿಕಲ್ಪನೆಗಳನ್ನು ವಿವರಿಸುವುದು ಶಿಕ್ಷಕರು ಎದುರಿಸುವ ಅತ್ಯಂತ ದೊಡ್ಡ ಸವಾಲಾಗಿದೆ. ತರಗತಿಗಳನ್ನು ಕಿಡಿಯಾಡುವ ಕುತೂಹಲ ಹಾಗೂ ಕಲ್ಪನೆಗಳ ಸ್ಥಳವನ್ನಾಗಿ ಮಾಡುವ ಮೂಲಕ ಈ ಅಡೆತಡೆಯನ್ನು ನಿವಾರಿಸಲು ಪಿಸಿಗಳು ನೆರವಾಗಬಲ್ಲವು.

ತರಗತಿಯಲ್ಲಿ ಪ್ರತಿ ದಿನ “ನಾವೀನ್ಯತೆ” ಯನ್ನು ನೀವು ಹೇಗೆ ತರಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

1. ವರ್ಚ್ಯುವಲ್ ರಿಯಾಲಿಟಿ

ವರ್ಚ್ಯುವಲ್ ರಿಯಾಲಿಟಿಯು ವ್ಯವಹರಿಸಲು ಸಂಪೂರ್ಣವಾಗಿ ಹೊಸದಾದ ಪ್ರಪಂಚವೊಂದನ್ನು ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸುತ್ತದೆ. ಇದು ದೂರದ ಕನಸು ಎಂಬಂತೆ ತೋರಿದರೂ ಸಹ, ಇಂಟರಾಕ್ಟಿವ್ ಕಲಿಕೆಗೆ ಸಂಪೂರ್ಣವಾಗಿ ಹೊಸ ಅರ್ಥವನ್ನು ಒದಗಿಸುವ Google Cardboard, Poly ಮತ್ತು Blocks ಗಳಂಥ ಸುಲಭವಾದ ಪ್ರವೇಶಾವಕಾಶವನ್ನು ಹೊಂದಿರುವ ಸಾಧನಗಳೊಂದಿಗೆ ಅದು ಹಿಂದೆಂದಿಗಿಂತಲೂ ಹೆಚ್ಚು ಹತ್ತಿರವಾಗಿರುತ್ತದೆ. ನಿಮ್ಮ ಪಾಠಗಳಲ್ಲಿ Virtual Field Trip ಗಳನ್ನು ಅಳವಡಿಸಿಕೊಳ್ಳುವ ಮೂಲಕ ತರಗತಿಯಲ್ಲಿ ವಿಆರ್ನ ಅತ್ಯುತ್ತಮ ಅನ್ವಕತೆಯನ್ನು ಸಾಧಿಸಬಹುದು. ಅದು ಆರ್ಕಟಿಕ್ ಪ್ರದೇಶವಾಗಿರಲಿ ಅಥವಾ ಥಾರ್ ಮರುಭೂಮಿಯಾಗಿರಲಿ, ತಮ್ಮ ತರಗತಿಯಲ್ಲಿಯೇ ಕುಳಿತು ವಿಶ್ವದ ಅದ್ಭುತಗಳನ್ನು ಕೆಲವೇ ಕೆಲವು ಕ್ಲಿಕ್ಗಳೊಂದಿಗೆ ನಿಮ್ಮ ವಿದ್ಯಾರ್ಥಿಗಳು ಅನುಭವಿಸಬಲ್ಲವರಾಗುತ್ತಾರೆ!

2. ಆಗ್ಮೆಂಟೆಡ್ ರಿಯಾಲಿಟಿ

ವರ್ಚ್ಯುವಲ್ ರಿಯಾಲಿಟಿಯ ಹತ್ತಿರದ ಸಂಬಂಧಿಯಾಗಿರುವ ಆಗ್ಮೆಂಟೆಡ್ ರಿಯಾಲಿಟಿಯು ವಿದ್ಯಾರ್ಥಿಯ ವಾಸ್ತವಿಕ ಜಗತ್ತಿನ ನೋಟವನ್ನು ಹೆಚ್ಚಿಸುತ್ತದೆ ಅಥವಾ ವರ್ಧಿಸುತ್ತದೆ. ನಿಮ್ಮ ತರಗತಿಗಾಗಿ ನೀವು ಇದನ್ನು ಸೂಕ್ತವಾಗಿಸುವಂಥ ಹಲವಾರು ಮಾರ್ಗಗಳಿವೆ, ಅವುಗಳಲ್ಲೊಂದು ಸ್ಕ್ಯಾವೆಂಜರ್ ಹಂಟ್. ವಿದ್ಯಾರ್ಥಿಗಳಿಗೆ ಪಠ್ಯ ಅಥವಾ ಚಿತ್ರಗಳ ರೂಪದಲ್ಲಿ ಸುಳಿಹುಗಳನ್ನು ನೀಡಲು ನಿಮ್ಮ ಶಾಲೆಯ ಸುತ್ತಮುತ್ತ QR ಕೋಡ್ಗಳನ್ನು ಇರಿಸಿ. ಮನಸ್ಸನ್ನು ಅಪಹರಿಸುವ ಈ ತಂತ್ರಜ್ಞಾನವು ನಿಮ್ಮ ವಿದ್ಯಾರ್ಥಿಗಳನ್ನು ಸಮ್ಮೋಹನಗೊಳಿಸಿ, ಕಲಿಕೆಯನ್ನು ಅವರಿಗೆ ಆಕರ್ಷಣೀಯವನ್ನಾಗಿಸುತ್ತದೆ ಹಾಗೂ ಸೀಮೆಗಳಿಲ್ಲದ ತರಗತಿಯೊಂದನ್ನು ನಿಜವಾಗಿಯೂ ಸೃಷ್ಟಿಸಲು ನಿಮ್ಮನ್ನು ಅನುಮತಿಸುತ್ತದೆ.

3. ಕೋಡಿಂಗ್

ಎಲ್ಲಾ ಟೆಕ್-ವಿಷಯಗಳ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಕಂಪ್ಯೂಟರ್ ವಿಜ್ಞಾನದ ಜ್ಞಾನವು ಅತ್ಯಂತ ಅವಶ್ಯಕವಾಗಿಬಿಟ್ಟಿದೆ. ಕೋಡಿಂಗ್ ಎಂಬುದು ಬಹುಪಾಲು ತಾಂತ್ರಿಕತೆಗಳ ನಿರ್ಮಾಣ ಘಟಕವಾಗಿದೆ. ಹೇಗೆ ಕೋಡ್ ಮಾಡುವುದು ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಅನಂತ ಸಾಧ್ಯತೆಗಳ ಬಾಗಿಲನ್ನು ತೆರೆಯುತ್ತದೆ. www.code.org ಅಥವಾ www.codecademy.com ಗಳಂಥ ವೆಬ್ಸೈಟ್ಗಳಲ್ಲಿನ ಸಂಪನ್ಮೂಲಗಳು ವರ್ಷದುದ್ದಕ್ಕೂ ಲಭ್ಯವಿದ್ದು, ನಿಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಡಿಪಾಯವನ್ನು ಒದಗಿಸುತ್ತವೆ. JavaScript ಮತ್ತು C++ ಗಳು ವಿದ್ಯಾರ್ಥಿಗಳು ಆರಂಭಿಸಬಹುದಾದ ಕೆಲವು ಆರಂಭ-ಸ್ನೇಹೀ ಲಾಂಗ್ವೇಜ್ಗಳಾಗಿವೆ.

ನವ-ಯುಗದ ತಾಂತ್ರಿಕತೆಗಳಿಗೆ ತೆರೆದುಕೊಳ್ಳುವಿಕೆಯು ಕ್ರಾಂತಿಕಾರಕ ವಿಚಾರಗಳಿಗೆ ದಾರಿಯನ್ನು ಮಾಡಿಕೊಡುತ್ತದೆ. ಪಿಸಿ-ಎನೇಬಲ್ಡ್ ಸಾಧನಗಳು ಅಥವಾ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಿಕೆಯು ತರಗತಿಯಲ್ಲಿ ನಾವೀನ್ಯತೆಯನ್ನು ತರುವೆಡೆಗಿನ ಖಚಿತ ಹೆಜ್ಜೆಯನ್ನು ಗುರುತಿಸುತ್ತದೆ. ಮತ್ತಿನ್ನೂ ಏನು ಬೇಕು, ಡಿಜಿಟಲ್ ಕಲಿಕೆಯ ಸಂಸ್ಕೃತಿಯು ನಿತ್ಯಕ್ರಮವನ್ನು ಬದಲಿಸುತ್ತದೆ ಹಾಗೂ ನಿಮ್ಮ ವಿದ್ಯಾರ್ಥಿಗಳನ್ನು ಪ್ರೇರೇಪಿತರನ್ನಾಗಿ ಇರಿಸುವಲ್ಲಿನ ಹಲವಾರು ಮಾರ್ಗಗಳಲ್ಲಿ ಒಂದಾಗಿದೆ.