ಈಗ ಕ್ಲಾಸ್ರೂಮ್ಗಳನ್ನು ಇ-ಬುಕ್ಗಳೊಂದಿಗೆ ರೂಪಾಂತರಗೊಳಿಸುವ ಸಮಯ

 

ಮೋಜು
ಕಲಿಕೆ
ಎರಡೂ ಜೊತೆ ಜೊತೆಯಾಗಿ ಸಾಗಬಲ್ಲವೇ?
ಖಂಡಿತ ಸಾಗಬಲ್ಲವು!
ಪಿಸಿಯೊಂದರೊಂದಿಗೆ ಮತ್ತು ಅದರ ತಿಳುವಳಿಕೆಯೊಂದಿಗೆ ನೀವು ಸನ್ನದ್ಧರಾಗಿರುವಾಗ, ತರಗತಿಕೋಣೆಯಲ್ಲಿ ಕಂಪ್ಯೂಟರ್ ಬಳಕೆಯ ಅತ್ಯಂತ ಹೆಚ್ಚು ಪ್ರಯೋಜನಗಳನ್ನು ಪಡೆಯುವುದರಿಂದ ನಿಮ್ಮನ್ನು ತಡೆಯುವಂಥದ್ದು ಏನೂ ಇರಲಾರದು!
ಶಿಕ್ಷಣದಲ್ಲಿ ಪಿಸಿಯೊಂದನ್ನು ಅಳವಡಿಸಿಕೊಳ್ಳುವಿಕೆಯ ಅತ್ಯಂತ ಪ್ರಧಾನ ಭಾಗಗಳಲ್ಲೊಂದು ಇ-ಬುಕ್ ಗಳಾಗಿದ್ದು, ನೀವು ಹೆಚ್ಚು ಉತ್ತಮವಾಗಿ ಕಲಿಸಲು ಅವುಗಳ ಹೇಗೆ ನೆರವಾಗಬಹುದು ಎಂಬ ಬಗೆಗಿನ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:


1. ನಿಮ್ಮ ವಿದ್ಯಾರ್ಥಿಗಳು ಈಗ ಎಲ್ಲಿಯಾದರೂ, ಯಾವಾಗಲಾದರೂ ಸ್ಟಡಿ ಮಾಡಬಹುದು

ಇ-ಬುಕ್ ಗಳು ಪೋರ್ಟೇಬಲ್ ಮತ್ತು ಲೈಟ್ ಆಗಿದ್ದು, ತಮ್ಮೊಂದಿಗೆ ತೆಗೆದುಕೊಂಡು ಹೋಗುವುದನ್ನು ಸುಲಭವಾಗಿಸುತ್ತವೆ. ಅಲ್ಲದೇ ಬಹಳಷ್ಟು ಸ್ಥಳಾವಕಾಶವನ್ನೂ ಸಹ ಅದು ತೆಗೆದುಕೊಳ್ಳದಿರುವುದರಿಂದ, ಹಲವಾರು ಪಠ್ಯಪುಸ್ತಕಗಳನ್ನು ಹೊರುವುದಕ್ಕಿಂತ ಇವುಗಳನ್ನು ನಿರ್ವಹಿಸುವುದು ಹೆಚ್ಚು ಸುಲಭವೂ ಆಗಿರುತ್ತದೆ. ಓರ್ವ ವಿದ್ಯಾರ್ಥಿ ತನ್ನದೇ ಆದ ಗತಿಯಲ್ಲಿ ಮತ್ತು ಅನುಕೂಲಕರ ವಲಯದಲ್ಲಿ ತನಗೆ ಬೇಕಾದಷ್ಟು ಸಮಯ ಅಭ್ಯಸಿಸಲು ಮತ್ತಿನ್ನೂ ಏನು ಬೇಕು?

2. 24*7 ಪ್ರವೇಶಾವಕಾಶದ ಲಭ್ಯತೆ

ಇ-ಬುಕ್ ಅನ್ನು ಓದಲು ಯಾವಾಗಲೂ ಇಂಟರ್ನೆಟ್ ಬೇಕಾಗುವುದಿಲ್ಲ. ನಿಮ್ಮ ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಂಡು, ಇಂಟರ್ನೆಟ್ ಇಲ್ಲದೆಯೂ ಸಹ ಅಭ್ಯಸಿಸಲು ಅವರನ್ನು ಅನುಮತಿಸುತ್ತಾ ಆಫ್ಲೈನ್ ನಲ್ಲಿ ಬ್ರೌಜ್ ಮಾಡಬಹುದು. ಅಲ್ಲದೇ, ಈ ರೀತಿಯಲ್ಲಿ ಯಾವುದೇ ಚಿತ್ತಚಾಂಚಲ್ಯಗಳೂ ಸಹ ಇರುವುದಿಲ್ಲ!

 

3. ಫ್ಲೆಕ್ಸಿಬಲ್ ಆಗಿರುವ ವೈಶಿಷ್ಟ್ಯತೆಗಳು

ಇ-ಬುಕ್ ಗಳು ಬಳಸಲು ಸುಲಭವಾಗಿರುತ್ತವೆ – ಏಕೆಂದರೆ:

  • ಸರ್ಚ್ ಮಾಡಬಹುದಾದ ಪಠ್ಯ

  • ಪಠ್ಯ ಪುಸ್ತಕವೊಂದರಲ್ಲಿ ಪುಟದ ಸಂಖ್ಯೆಯನ್ನು ಟೈಪ್ ಮಾಡುವ ಮೂಲಕ ನೇವಿಗೇಶನ್ ಮಾಡಬಹುದು

  • ಮುಂದಿನ ಉಲ್ಲೇಖಕ್ಕಾಗಿ ಬುಕ್ ಮಾರ್ಕ್ ಮಾಡಬಹುದು

  • ವೀಕ್ಷಿಸುವಾಗ ನೀವು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಬಹುದು

 

4. ಎಜುಟೇನ್ ಮೆಂಟ್! ಎಜುಟೇನ್ ಮೆಂಟ್! ಎಜುಟೇನ್ ಮೆಂಟ್!

ಪರಿಕಲ್ಪನೆಗಳನ್ನು ಗ್ರಹಿಸಿಕೊಂಡು, ದೀರ್ಘಕಾಲ ನೆನಪಿಟ್ಟುಕೊಳ್ಳುವಲ್ಲಿ ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗುವ ಪ್ರೆಜೆಂಟೇಶನ್ ಗಳು ಮತ್ತು ವಿಡಿಯೋಗಳಂಥ ಇಂಟರ&zwj್ಯಾಕ್ಟಿವ್ ಮಾಧ್ಯಮಗಳನ್ನು ಓಪನ್ ಮಾಡುವಂಥ, ಇ-ಬುಕ್ ಗಳಲ್ಲಿನ ಲಿಂಕ್ ಗಳ ಮೇಲೆ ನೀವು ಕ್ಲಿಕ್ ಮಾಡಬಹುದು.

 

5 ಪ್ರಿಂಟಿಂಗ್ ವೆಚ್ಚಗಳ ಉಳಿತಾಯ

ಇ-ಬುಕ್ ಗಳು ಪರಿಸರ-ಸ್ನೇಹಿಯಾಗಿದ್ದು, ಪ್ರಿಂಟಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತವೆ, ಈ ಮೂಲಕ ಪ್ರಿಂಟಿಂಗ್ ವೆಚ್ಚಗಳನ್ನು ಉಳಿತಾಯ ಮಾಡುತ್ತವೆ.

 

6. ರಿಯಲ್ ಟೈಮ್ ಅಪ್ಡೇಟ್ ಗಳು

ಇ-ಬುಕ್ ಒಂದರಲ್ಲಿ ನಿಮ್ಮ ಕಂಟೆಂಟ್ ಅನ್ನು ದೈನಂದಿನ ಆಧಾರದಲ್ಲಿ ನೀವು ಅಪ್ಡೇಟ್ ಮಾಡಬಹುದು. ವಿದ್ಯಾರ್ಥಿಗಳಿಗೆ ಇತ್ತೀಚಿನ ಕಲಿಕಾ ಸಾಮಗ್ರಿಯನ್ನು ಒದಗಿಸುತ್ತಾ ಅಪ್-ಟು-ಡೇಟ್ ಆದ ಮಾಹಿತಿಯನ್ನು ಶಿಕ್ಷಕರು ಯಾವಾಗಲೂ ಸೇರ್ಪಡೆ ಮಾಡಬಹುದು. ಮರುಮುದ್ರಣದ ವೆಚ್ಚಗಳು ಹಾಗೂ ಆ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಸಮಯವನ್ನು ಇದು ಉಳಿಸುತ್ತದೆ.

 

7. ಕಣ್ಣುಗಳಿಗೆ ಆರಾಮದಾಯಕ

ದಿನದ ಸಮಯಕ್ಕೆ ಅನುಗುಣವಾಗಿ ಹಾಗೂ ತಮ್ಮ ಆದ್ಯತೆಗಳ ಮೇಲೆ ಅವಲಂಬಿತವಾಗಿ ಸ್ಕ್ರೀನ್ ನ ಬ್ರೈಟ್ ನೆಸ್ ಅನ್ನು ವಿದ್ಯಾರ್ಥಿಗಳು ಹೊಂದಾಣಿಕೆ ಮಾಡಬಹುದು. ತಮ್ಮ ಕಣ್ಣುಗಳಿಗೆ ದಣಿವಾಗದಂತೆ ಪಠ್ಯದ ಫಾಂಟ್ ಗಳನ್ನೂ ಸಹ ವಿದ್ಯಾರ್ಥಿಗಳು ಬದಲಾಯಿಸಬಹುದು.

 

ಸಮೀಪದ ಭವಿಷ್ಯದಲ್ಲಿ ಕಲಿಕಾ ಅನುಭವವನ್ನು ರೂಪಾಂತರಗೊಳಿಸಲು ಇ-ಬುಕ್ ಗಳು ಈಗಾಗಲೇ ಸಜ್ಜಾಗಿವೆ - ಅದು, ಓರ್ವ ಶಿಕ್ಷಕರಾಗಿ ಬೆಳೆಯಲು ನಿಮಗೆ ನೆರವಾಗುವುದಕ್ಕಾಗಿಯೇ ಪಿಸಿಗಳಿಂದ ಸಶಕ್ತಗೊಳಿಸಲ್ಪಟ್ಟ ಒಂದು ಹೊಸ ರೀತಿಯ ಶಿಕ್ಷಣವಾಗಿರುತ್ತದೆ!