ಈ ಮುಂದಿನ ಹಂತಗಳನ್ನು ಅನುಸರಿಸುವ ಮೂಲಕ ಅಂತರ್ಜಾಲದಲ್ಲಿ ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಿ

 

 

ತಮ್ಮ ಖುಷಿಯ ಮೂಲವಾಗಿರುವ ತಮ್ಮ ಮಕ್ಕಳನ್ನು ಪ್ರತಿಯೊಬ್ಬ ಪಾಲಕರೂ ವಾಸ್ತವಿಕ ಹಾಗೂ ಮಿಥ್ಯಾ ಜಗತ್ತು, ಎರಡರಲ್ಲಿಯೂ ಸುರಕ್ಷಿತವಾಗಿ ಹಾಗೂ ಆರೋಗ್ಯಪೂರ್ಣವಾಗಿ ಇರಿಸಬಯಸುತ್ತಾರೆ. ಆದರೆ ನಾವೂ ಸಹ ಬಿಡುವಿಲ್ಲದ ಜೀವನದಲ್ಲಿ ವ್ಯಸ್ತರಾಗಿರುವುದರಿಂದ ಆ ಪುಟ್ಟ ಮಕ್ಕಳ ಮೇಲೆ ನಿರಂತರವಾಗಿ ನಿಗಾ ವಹಿಸಿ ಅವರನ್ನು ಉಸ್ತುವಾರಿ ಮಾಡುವುದು ಕಷ್ಟಕರವಾದ ಕೆಲಸವಾಗಿರುತ್ತದೆ, ಅಪ್-ಟು-ಡೇಟ್ ಆಗಿರುವ ಹಾಗೂ ವಾಸ್ತವಾಂಶಗಳನ್ನು ಹೊಂದಿರುವ ಜ್ಞಾನದೊಂದಿಗೆ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳುವುದು ನೆಮ್ಮದಿಯನ್ನು ಹೊಂದುವ ಅತ್ಯುತ್ತಮವಾದ ವಿಧಾನವಾಗಿರುತ್ತದೆ. ಈ ಹಂತಗಳನ್ನು ಅನುಸರಿಸುವ ಮೂಲಕ, ಸುರಕ್ಷಿತವಾಗಿದ್ದುಕೊಂಡೇ ಪರ್ಸನಲ್ ಕಂಪ್ಯೂಟರ್ ಒಂದನ್ನು ಬಳಸುತ್ತಾ ನಿಮ್ಮ ಮಗುವು ಬದುಕಲು ಕಲಿಯುವುದನ್ನು ವೀಕ್ಷಿಸಿ.

 

1. ಮೊದಲಿನಿಂದ ಆರಂಭಿಸಿ

ಮೊದಲಿಗೆ ಇದು ಸಮಯ ವ್ಯಯಿಸುವಂಥದ್ದು ಎನಿಸಬಹುದಾದರೂ, ಅಂತಿಮ ಫಲಿತಾಂಶವನ್ನು ಪರಿಗಣಿಸುವುದಾದಲ್ಲಿ ಮಾಡತಕ್ಕುದಾಗಿರುತ್ತದೆ. ಮೊದಲು ಮಾಡಬೇಕಾದವುಗಳನ್ನು ಮೊದಲು ಮಾಡಿ, ನಿಮ್ಮ ಮಗುವು ತನ್ನ ವಯಸ್ಸಿಗೆ ಸೂಕ್ತವಲ್ಲದ ವೆಬ್ ಸೈಟ್ ಗಳನ್ನು ತಲುಪದಂತೆ ನಿಮ್ಮ ಪರ್ಸನಲ್ ಕಂಪ್ಯೂಟರ್ ಗೆ ಬಹು ಸಂಖ್ಯೆಯ ಬಳಕೆದಾರರನ್ನು ಸೆಟ್ ಮಾಡಿ. ನಂತರ, ನಿಮ್ಮ ಬ್ರೌಜರ್ ಸೆಟಿಂಗ್ಸ್ ಗೆ ಹೋಗಿ, ಸೂಕ್ತ ವಯಸ್ಸಿನ ಫಿಲ್ಟರ್ ಸೇರಿಸಿ. ಕೊನೆಯದಾಗಿ, ಹೆಚ್ಚು ವೇಗದ ಪ್ರವೇಶಕ್ಕಾಗಿ ಮತ್ತು ನಿಮ್ಮ ಮಗುವು ಮುಖ್ಯವಾಗಿ ಪಿಸಿ-ಕಲಿಕಾ ಸಂಪನ್ಮೂಲ ವೆಬ್ ಸೈಟ್ ಗಳಿಗಷ್ಟೇ ಹೋಗುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅವುಗಳನ್ನು ಬುಕ್ ಮಾರ್ಕ್ ಮಾಡಿ. ಅಂತರ್ಜಾಲವನ್ನು ಎಕ್ಸ್ ಪ್ಲೋರ್ ಮಾಡುವಾಗ, ಮಗುವಿನೊಂದಿಗೆ ನೀವು ಕುಳಿತುಕೊಳ್ಳಬಹುದು ಅಥವಾ ನಿಮ್ಮ ಮಗುವಿನ ಸ್ಕ್ರೀನ್ ಮೇಲೆ ಏನು ನಡೆಯುತ್ತಿದೆ ಎಂಬುದನ್ನು ಒಂದು ಅಂತರದಿಂದ ನೀವು ಗಮನಿಸುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು.

 

2. ವೇಳಾಪಟ್ಟಿ ತಯಾರಿಸಿ

ಇದು ನಿಮ್ಮ ಮಗುವಿಗಾಗಿ ಕೆಲಸ ಮಾಡೇ ಮಾಡುವ ಒಂದು ಖಾತರಿಯುಕ್ತವಾದ ಉತ್ಪಾದಕ ತಂತ್ರವಾಗಿದೆ. ನೀವು ಮಾಡಬೇಕಾದುದಿಷ್ಟೇ, ವಿನೋದ ಹಾಗೂ ಕಲಿಕೆಗಾಗಿ ಸಮಯವನ್ನು ನಿರ್ದಿಷ್ಟಪಡಿಸಿ, ಇದರಿಂದ ನಿಮ್ಮ ಮಗುವು ಯಾವಾಗ ಏನು ಮಾಡುತ್ತಿದೆ ಎಂಬುದು ನಿಮಗೆ ತಿಳಿದುಬರುತ್ತದೆ. ಸಾಯಂಕಾಲ 4 ರಿಂದ 6 ಗಣಿತವನ್ನು ಅಭ್ಯಸಿಸುವ ಸಮಯವಾಗಿದ್ದಲ್ಲಿ, ನೀವು ಅಷ್ಟೇನೂ ತೊಡಗಿಕೊಳ್ಳಬೇಕಿರುವುದಿಲ್ಲ. ಅದೇ, ಸಾಯಂಕಾಲ 6 ರಿಂದ 6.30 ರ ಸಮಯವು ಯೂಟ್ಯೂಬ್ ವೀಕ್ಷಣೆಯ ಸಮಯವಾಗಿದ್ದಲ್ಲಿ, ನಿಮ್ಮ ಮಗುವಿನ ಪರ್ಸನಲ್ ಕಂಪ್ಯೂಟರ್ ನಿಂದ  ನೀವು ಕನಿಷ್ಟ ಕಣ್ಣಳತೆ ದೂರದಲ್ಲಿದ್ದಲ್ಲಿ, ನೀವು ಕೊಂಚ ನಿರಾಳವಾಗಿರುತ್ತೀರಿ. ಸುತ್ತಮುತ್ತಲೂ ನೀವು ಇಲ್ಲದಿರುವಂಥ ಸಮಯದಲ್ಲಿ, ನಿಮ್ಮ ಪರವಾಗಿ ಅವಲೋಕಿಸುವುದಕ್ಕಾಗಿ ನಿಮ್ಮ ಮಗುವಿನ ಹಿರಿಯ ಸೋದರ-ಸೋದರಿಯರನ್ನು ನೀವು ಕೇಳಿಕೊಳ್ಳಬಹುದು. 

 

3. ಜೊತೆಗೆ ಕುಳಿತುಕೊಳ್ಳಿ

ಇದು, ಪ್ರತಿಯೊಬ್ಬ ಪಾಲಕರೂ ನಿಗದಿತ ಆಧಾರದಲ್ಲಿ ಮಾಡಲೇಬೇಕಾದಂಥ ಕೆಲಸವಾಗಿರುತ್ತದೆ. ನೀವು ನೀಡುತ್ತಿರುವ ಗಮನವನ್ನು ನಿಮ್ಮ ಮಕ್ಕಳು ಆನಂದಿಸುವುದಷ್ಟೇ ಅಲ್ಲದೇ, ಅವರೊಟ್ಟಿಗೆ ನೀವೂ ಸಹ ಅಲ್ಪ-ಸ್ವಲ್ಪ ವಿಷಯಗಳನ್ನು ತಿಳಿದುಕೊಳ್ಳಬಹುದು. ಒಂದು ಕೌಟುಂಬಿಕ ಘಟಕವಾಗಿ ಗೇಮ್ ಗಳನ್ನು ಒಟ್ಟಿಗೆ ಆಟವಾಡುವುದರಿಂದ ಹಿಡಿದು ಆನ್ ಲೈನ್ ನಲ್ಲಿ ಲೇಖನಗಳನ್ನು ಓದುವವರೆಗೆ, ನೀವು ಮಾಡಬಹುದಾದ ಪರ್ಸನಲ್ ಕಂಪ್ಯೂಟರ್ ಸಂಬಂಧಿತ ಅನೇಕ ಚಟುವಟಿಕೆಗಳು ಇವೆ. ಪರ್ಸನಲ್ ಕಂಪ್ಯೂಟರ್ ಸಂಪನ್ಮೂಲಗಳನ್ನು ಒಟ್ಟಿಗೆ ಅನ್ವೇಷಿಸುವ ಮೂಲಕ, ಯಾವುದು ಹೊಸದು ಹಾಗೂ ನಿಮ್ಮ ಮಗುವಿಗೆ ಯಾವುದು ಉತ್ತಮ ಎಂಬುದು ನಿಮಗೆ ತಿಳಿದುಬರುತ್ತದೆ.

 

ಯೂಟ್ಯೂಬ್ ನಿಮ್ಮ ಮಗುವಿನ ನೆಚ್ಚಿನ ವೆಬ್ ಸೈಟ್ ಆಗಿದೆಯೇ? ಹಾಗಿದ್ದಲ್ಲಿ, ಕಲಿಕಯನ್ನು ಮೋಜುಭರಿತವಾಗಿಸಲು ಅದರ ಎಲ್ಲ ಶೈಕ್ಷಣಿಕ ವಿಡಿಯೋಗಳ ಸದುಪಯೋಗವನ್ನು ಮಾಡಿಕೊಳ್ಳಿ:

https://www.dellaarambh.com/kannada/post/this-is-how-you-can-make-youtube-safe-for-your-little-ones

 

ಹ್ಯಾಪಿ ಲರ್ನಿಂಗ್!