ಭಾರತದ ಅತ್ಯುತ್ತಮ ಇ-ಶಿಕ್ಷಕರ ಬಗ್ಗೆ ಹೆಚ್ಚಿನದನ್ನು ತಿಳಿಯಿರಿ!

2007ರಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂರವರು ಕುಮಾರಿ ರಶ್ಮಿ ಕಠೂರಿಯಾ ಅವರನ್ನು ದೇಶದ ಅತ್ಯುತ್ತಮ ಇ-ಶಿಕ್ಷಕರು ಎಂಬ ಗೌರವವನ್ನು ಪ್ರದಾನ ಮಾಡಿದರು, ಇವರು ಜೀವನ ಪಯಣದಲ್ಲಿ ಒಬ್ಬ ಸಾಮಾನ್ಯ ಶಿಕ್ಷಕಿಯಿಂದ ದೇಶದಲ್ಲಿಯೇ ಅತ್ಯುತ್ತಮ ಇ-ಶಿಕ್ಷಕಿಯಾದ ಪಯಣದ ಬಗ್ಗೆ ಮಾತನಾಡುತ್ತಿದ್ದರು.

2000ನೇ ಇಸವಿಯಲ್ಲಿ, ಅವರು ತನ್ನ ಶಾಲೆಯಲ್ಲಿ ಗಣಿತದ ಪ್ರಯೋಗಾಲಯವನ್ನು ವ್ಯವಸ್ಥೆಗೊಳಿಸಿದರು ಇದು ವಿದ್ಯಾರ್ಥಿಗಳು ಸ್ಥಿರವಾದ ವಸ್ತುಗಳನ್ನು ಉಪಯೋಗಿಸಿಕೊಂಡು ಗಣಿತದ ಪರಿಕಲ್ಪನೆಗಳೊಂದಿಗೆ ನೋಡುವ ಮತ್ತು ಪ್ರಯೋಗ ಮಾಡುವಲ್ಲಿ ಸಹಾಯ ಮಾಡುತ್ತಿತ್ತು. ಆಕೆ ಈ ಪ್ರಯೋಗಾಲಯಕ್ಕೆ 500ಕ್ಕೂ ಹೆಚ್ಚು ಸಮೃದ್ಧ ಸಂಪನ್ಮೂಲಗಳು, ಯೋಜನೆಯ ಆಲೋಚನೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಬ್ಲಾಗ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಇತರೆ ಶಿಕ್ಷಕರಿಗೆ ಒದಗಿಸಿದ್ದರು. ಆಕೆಯ ವಿಷಯಗಳನ್ನು ವಿದ್ಯಾರ್ಥಿ-ಸ್ನೇಹಿಯಾಗಿ ಇಂಟರ್‌ನೆಟ್‌ನಲ್ಲಿ ಲಬ್ಯವಾಗುವಂತೆ ಮಾಡಲಾಗಿದೆ, ಇದರ ಜೊತೆಯಲ್ಲಿ ಆಕೆ 2010ರಲ್ಲಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿಯವರಿಂದ ರಾಷ್ಟ್ರೀಯ ಐಸಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಈ ಕೆಳಗೆ ಕುಮಾರಿ ಕಠೂರಿಯಾ ರವರೊಂದಿಗೆ ನಮ್ಮ ಮಾತುಕತೆಯನ್ನು ನೀಡಲಾಗಿದೆ!

ನೀವು ತರಗತಿಯಲ್ಲಿ ತಂತ್ರಜ್ಞಾನವನ್ನು ಎಷ್ಟು ಸಮಯದಿಂದ ಉಪಯೋಗಿಸುತ್ತಿರುವಿರಿ?

ನಾನು ಕಳೆದ 12 ವರ್ಷಗಳಿಂದ ಕಲಿಸುವಿಕೆಯಲ್ಲಿ ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದೇನೆ. ನಾನು ಮೊದಲು ಬ್ಲಾಗ್‌ಗಳೊಂದಿಗೆ ಪ್ರಾರಂಭಿಸಿದೆ ಮತ್ತು ನಾನು ನನ್ನ ಬ್ಲಾಗ್‌ನ ಲಿಂಕ್ ಅನ್ನು ನನ್ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದೆ. ವಿಷಯಗಳ ಬಗ್ಗೆ ನನ್ನ ಎಲ್ಲಾ ಸಂಶೋಧನೆಗಳನ್ನು ಆನ್‌ಲೈನ್‌ನಲ್ಲಿ ಹಾಕಿದೆ, ಇದರಿಂದಾಗಿ ಮಕ್ಕಳು ಆ ವಿಷಯಗಳ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದರು. ನಾನು ವಿಕಿ ತರಗತಿಯನ್ನು ಪ್ರಾರಂಭಿಸಿದೆನು ಮತ್ತು ನಾನು ವಿದ್ಯಾರ್ಥಿಗಳಿಂದ ಮತ್ತು ಇತರೆ ಸಿಬ್ಬಂದಿಯವರಿಂದ ಅತ್ಯುತ್ತಮವಾದ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆನು.

ನಿಮಗೆ ಉಪಯುಕ್ತ ಎಂದು ಕಂಡುಬಂದಿರುವ ಕೆಲವು ತಾಂತ್ರಿಕ-ಉಪಕರಣಗಳ ಕೆಲವು ಉದಾಹರಣೆಗಳನ್ನು ನೀವು ನಮಗೆ ನೀಡಬಲ್ಲಿರಾ?

ನಾನು ಗಣಿತವನ್ನು ಕಲಿಸಲು ತಾಂತ್ರಿಕ-ಉಪಕರಣಗಳನ್ನು ಉಪಯೋಗಿಸಲು ಪ್ರಾರಂಭಿಸಿದೆ. ನಾನು ರೇಖಾ ಗಣಿತ ಮತ್ತು ಬೀಜ ಗಣಿತವನ್ನು ಕಲಿಸಲು ಜಿಯೋಜಿಬ್ರಾ ಉಅಪಯೋಗಿಸಿದ್ದೇನೆ, ಈ ಉಪಕರಣವು ನಾನು ತರಗತಿಯಲ್ಲಿ ಹೇಳಿಕೊಡುವ ಬಹುತೇಕ ಪ್ರತಿಯೊಂದು ವಿಷಯಗಳನ್ನು ಒಳಗೊಂಡಿತ್ತು. ನಾನು ಗ್ರಾಫ್‌ಗಳನ್ನು ಪ್ಲಾಟ್ ಮಾಡಲು ಇನ್ನೂ ಎರಡು ಹೆಚ್ಚುವರಿ ಉಪಕರಣಗಳನ್ನು ಉಪಯೋಗಿಸಿದೆನು, ಪಾಠ ಮಾಡುವಾಗ ಗ್ರಾಫ್‌ಗಳನ್ನು ಪ್ಲಾಟ್ ಮಾಡುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಪಾಠಗಳ ಸಂಖ್ಯೆಗಳನ್ನು ಸೀಮಿತಗೊಳಿಸಲಾಗಿದೆ.

ಈ ಕೋರ್ಸಿನ ಅವಧಿಯಲ್ಲಿ ನಾನು ಮಕ್ಕಳಿಗೆ ಅಭ್ಯಾಸ ಮಾಡಲು ಸಂಪನ್ಮೂಲಗಳನ್ನು ಒದಗಿಸಿದರೆ ಅದು ಬಹಳ ಒಳ್ಳೆಯದು ಎಂದು ನಾನು ಅರ್ಥ ಮಾಡಿಕೊಂಡೆನು, ಇದರಿಂದ ನಾನು ಸಂಪನ್ಮೂಲಗಳನ್ನು ರಚಿಸಲು ಪ್ರಾರಂಭಿಸಿದೆನು. ನಾನು ರಚಿಸಿರುವ ಕಲಿಕೆಯ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಿಸಿ rashmikathuria.webs.comದಲ್ಲಿ ಹಾಕಿರುವೆನು ನೀವು ಅದರಲ್ಲಿ ಪರಿಶೀಲಿಸಬಹುದಾಗಿದೆ.

ತಂತ್ರಜ್ಞಾನವು ನಿಮಗೆ ಅತ್ಯಂತ ಪ್ರಮುಖವಾಗಿ ಸಹಾಯ ಮಾಡಿರುವ ವಿಷಯ ಯಾವುದು?

ಪರೀಕ್ಷೆಗಳ ಪರಿಶೀಲನೆಯು ಸಾಕಷ್ಟು ಪ್ರಮಾಣದಲ್ಲಿ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ವಿಷಯಗಳ ಸಂಶೋಧನೆಗೆ ಸ್ವಲ್ಪ ಸಮಯವನ್ನು ಮಾತ್ರ ಉಳಿಸುತ್ತದೆ ನಾನು ಶಾಲೆಯಲ್ಲಿ ಪಾಠ ಮಾಡುವುದೂ ಇರುತ್ತಿತ್ತು. ಆದುದರಿಂದ ನಾನು ಎಂಸಿಕ್ಯೂ ಪರೀಕ್ಷೆಗಳನ್ನು ವಿನ್ಯಾಸಗೊಳಿಸಲು ಗೂಗಲ್ ಫಾರ್ಮ್‌ಗಳನ್ನು ಉಪಯೋಗಿಸಲು ಪ್ರಾರಂಭಿಸಿದೆನು ಮತ್ತು ಅವುಗಳು ಎಂಸಿಕ್ಯೂಗಳಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ಸಲ್ಲಿಸುತ್ತಿದ್ದಂತೆಯೇ ಗೂಗಲ್ ಫಾರ್ಮ್ ಅವುಗಳನ್ನು ಆಟೋಮ್ಯಾಟಿಕ್ ಆಗಿ ಪರಿಶೀಲಿಸುತ್ತದೆ. ಇದು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ ಎಂಬುದಕ್ಕೆ ತಕ್ಷಣದ ಪ್ರತಿಕ್ರಿಯೆಗಳನ್ನು ಪಡೆಯಲು ಸಹಾಯಕವಾಯಿತು ಮತ್ತು ನಾನು ಸಾಕಷ್ಟು ಸಮಯವನ್ನು ಉಳಿಸಿಕೊಂಡೆನು ಇದು ನನಗೆ ಬದ್ಧತೆಯಿಂದ ಕಲಿಸಲು ಸಾಧ್ಯ ಮಾಡಿಕೊಟ್ಟಿತು.

ತರಗತಿಯ ಶಿಕ್ಷಣದಲ್ಲಿ ನಿಮ್ಮ ಇತ್ತೀಚಿನ ತಾಂತ್ರಿಕ ಪ್ರಯೋಗ ಯಾವುದು?

ತಂತ್ರಜ್ಞಾನವು ನನಗೆ ನನ್ನ ಪಾಠಗಳನ್ನು ಉತ್ತಮವಾಗಿ ಯೋಜಿಸಲು ಮತ್ತು ನನ್ನ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲು ನನಗೆ ಸಹಾಯ ಮಾಡಿದೆ. ನಾನು ವಿವಿಧ ತರಗತಿಗಳಿಗಾಗಿ ವಾಟ್ಸ್-ಅಪ್ ಗುಂಪುಗಳನ್ನು ಕೂಡ ಪ್ರಾರಂಭಿಸಿದ್ದೇನೆ, ಇದರಿಂದ ತರಗತಿಯಲ್ಲಿನ ಆಗು ಹೋಗುಗಳ ಬಗ್ಗೆ ನಿಖರವಾಗಿ ಅವರು ತಿಳಿದುಕೊಳ್ಳಬಹುದಾಗಿದೆ ಜೊತೆಗೆ ನಾನು ಅವರೊಂದಿಗೆ ಸಾಮಾಜಿಕ ಜಾಲತಾಣವೊಂದರಲ್ಲಿ ನಿರಂತರ ಸಂಪರ್ಕದಲ್ಲಿ ಇರಬಹುದಾಗಿದೆ. ಪ್ರತಿಯೊಂದು ತರಗತಿಯು ಪ್ರತ್ಯೇಕವಾದ ಗೂಗಲ್ ಡಾಕ್ಯುಮೆಂಟ್ ಹೊಂದಿದ್ದು ಅದರಲ್ಲಿ ಅವರು ತಮ್ಮ ವಿಚಾರಣೆಗಳನ್ನು ಸಲ್ಲಿಸಬಹುದಾಗಿದೆ, ಇದು ಅವರ ಸಮಸ್ಯೆಗಳನ್ನು ಮುಂದಿನ ಪಾಠದ ತರಗತಿಯವರೆಗೆ ಕಾಯದೇ ತಕ್ಷಣವೇ ಪರಿಹಾರ ಮಾಡಲು ನನಗೆ ಅನುವು ಮಾಡಿಕೊಡುತ್ತದೆ!

ಹೊಸ ಯುಗದ ಶಿಕ್ಷಕರಿಗೆ ನಿಮ್ಮ ಸಲಹೆ / ಸೂಚನೆಗಳೇನು?

ತರಗತಿ ಕೋಣೆಯಲ್ಲಿ ತಂತ್ರಜ್ಞಾನವನ್ನು ಬಳಸುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ ಮತ್ತು ಇದು ನಾವೆಲ್ಲರೂ ಒಂದು ದೊಡ್ಡ ಪರಿಣಾಮಕಾರಿ ತರಗತಿ ಕೋಣೆಯನ್ನು ನಿರ್ಮಿಸಲು ಉಪಯೋಗಿಸುವಂತಹ ಸಮಯವಾಗಿದೆ.