ಕಲೆ ಎಂದರೆ ಇಷ್ಟವೇ? ಈ ಮನ ತಣಿಸುವ ಪರ್ಸನಲ್ ಕಂಪ್ಯೂಟರ್ ಸಂಪನ್ಮೂಲಗಳನ್ನು ಪ್ರಯತ್ನಿಸಿ ನೋಡಿ!

 

“ಪ್ರತಿಯೊಂದು ಮಗುವೂ ಒಂದು ಕಲಾವಿದನಾಗಿರುತ್ತದೆ. ಮಗುವು ಬೆಳೆದು ದೊಡ್ಡವನಾದಾಗಲೂ ಕಲಾವಿದನಾಗಿ ಉಳಿಯುವುದು ಹೇಗೆ ಎಂಬುದೇ ಸಮಸ್ಯೆ.”

- ಪ್ಯಾಬ್ಲೊ ಪಿಕಾಸೊ

 

ನಿಮ್ಮ ಸೃಜನಾತ್ಮಕತೆ ಹಾಗೂ ಕಲ್ಪನಾ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಲು ಆರ್ಟ್ ಪ್ರಾಜೆಕ್ಟ್ ಗಳು ಒಂದು ಶ್ರೇಷ್ಠವಾದ ಮಾರ್ಗವಾಗಿರುತ್ತವೆ. ಅತ್ಯುತ್ತಮವಾದ ಡಿಜಿಟಲ್ ಆರ್ಟ್ ಟೂಲ್ ಅನ್ನು ಆಯ್ಕೆ ಮಾಡಲು ನಿಮಗೆ ನೆರವಾಗುವುದಕ್ಕಾಗಿ, ಪರ್ಸನಲ್ ಕಂಪ್ಯೂಟರ್ ಒಂದರಲ್ಲಿನ ಅತ್ಯುತ್ತಮ ಡ್ರಾಯಿಂಗ್ ಪ್ರೋಗ್ರಾಮ್ ಗಳ ಪಟ್ಟಿಯೊಂದನ್ನು ಇಲ್ಲಿ ನೀಡಲಾಗಿದೆ. 

ನಿಮ್ಮ ಅತ್ಯುತ್ತಮವಾದ ಡಿಜಿಟಲ್ ಆರ್ಟ್ ಅನ್ನು ಮಾಡಲು ಸಜ್ಜುಗೊಂಡು, ಸಿದ್ಧರಾಗಿ!

 

ಆಟೊಡೆಸ್ಕ್ ಸ್ಕೆಚ್ ಬುಕ್

ಬಹಳ ಸಮಯದಿಂದಲೂ, ಪರ್ಸನಲ್ ಕಂಪ್ಯೂಟರ್ ಒಂದರಲ್ಲಿನ ಅತ್ಯುತ್ತಮ ಡ್ರಾಯಿಂಗ್ ಪ್ರೋಗ್ರಾಮ್ ಗಳಲ್ಲಿ ಆಟೊಡೆಸ್ಕ್ ಸ್ಕೆಚ್ ಬುಕ್ ಸಹ ಒಂದಾಗಿದೆ. ನಿಮ್ಮ ಕಲಾಕೃತಿಯನ್ನು ನೀವು ವಾಸ್ತವಿಕವಾಗಿ ರಚಿಸುತ್ತಿರುವಾಗ ನಿಮ್ಮ ಮಾರ್ಗದಿಂದ ಮರೆಯಾಗುವ ಅದರ ಕನಿಷ್ಟತಮ ಯೂಜರ್ ಇಂಟರ್ ಫೇಸ್ ಸ್ಕೆಚ್ ಬುಕ್ ನ ಅತ್ಯುತ್ತಮ ವೈಶಿಷ್ಟ್ಯತೆಗಳಲ್ಲಿ ಒಂದಾಗಿದೆ.

 

ಕೃತ

ಕಲೆ ಎಂದರೆ ನಿಮಗಿಷ್ಟವೇ? ಕಲಾಕೃತಿಯ ರಚಿಸುವಿಕೆಯಲ್ಲಿ ತೊಡಗಿಕೊಂಡಿರುವ ಓರ್ವ ವಿನ್ಯಾಸಗಾರನಿಗೆ ಅಗತ್ಯವಾಗುವ ಎಲ್ಲ ವೃತ್ತಿಪರ ಸಾಧನಗಳನ್ನು ಒಳಗೊಂಡಿರುವ ಅತ್ಯುತ್ತಮ ಡ್ರಾಯಿಂಗ್ ಪ್ರೋಗ್ರಾಮ್ ಗಳಲ್ಲಿ ಒಂದಾಗಿರುವ ಕೃತದ ನೆರವಿನೊಂದಿಗೆ ನಿಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಿ.

 

ಇಂಕ್ ಸ್ಕೇಪ್

ಇಂಕ್ ಸ್ಕೇಪ್ ಎಂಬುದು ರಚನಾಕಾರರಿಗಾಗಿನ ಒಂದು ಶಕ್ತಿಶಾಲಿಯಾದ ಡ್ರಾಯಿಂಗ್ ಪ್ರೋಗ್ರಾಮ್ ಆಗಿದೆ. ಕಾಲ್ಪನಿಕ ವೆಕ್ಟರ್ ಒಂದನ್ನು ರಚಿಸಬಯಸುವವರು ನೀವಾಗಿದ್ದಲ್ಲಿ, ಇಂಕ್ ಸ್ಕೇಪ್ ಎಂಬುದು ನೀವು ಬಳಸಬೇಕಾದ ಅಪ್ಲಿಕೇಶನ್ ಆಗಿರುತ್ತದೆ. ಆಬ್ಜೆಕ್ಟ್ ಕ್ರಿಯೇಶನ್, ಆಬ್ಜೆಕ್ಟ್ ಮ್ಯಾನಿಪ್ಯುಲೇಶನ್, ಕಲರ್ ಸೆಲೆಕ್ಟರ್, ನೋಡ್ ಎಡಿಟಿಂಗ್ ಮತ್ತು ಇನ್ನೂ ಮುಂತಾದವುಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯತೆಗಳನ್ನು ಈ ಸಾಧನವು ಒದಗಿಸುತ್ತದೆ.

 

ಪೇಂಟ್ 3ಡಿ

ನೀವು ಈಗಷ್ಟೇ ಪ್ರಾರಂಭಿಸುವವರಾಗಿದ್ದು, ಡಿಜಿಟಲ್ ಡ್ರಾಯಿಂಗ್ ಆಯ್ಕೆಯನ್ನು ಮಾಡಿಕೊಳ್ಳಬಯಸಿದಲ್ಲಿ, ವಿಂಡೋಸ್ ಸಾಧನಗಳಲ್ಲಿ ಪ್ರಿ-ಇನ್ ಸ್ಟಾಲ್ಡ್ ಆಗಿ ಬರುವ, ಮೈಕ್ರೊಸಾಫ್ಟ್ ನ ಪೇಂಟ್ 3ಡಿ ಒಂದು ಅದ್ಭುತವಾದ ಆಯ್ಕೆಯಾಗಿರುತ್ತದೆ. ನಿಮ್ಮೊಳಗಿರುವ ಸೃಜನಾತ್ಮಕತೆಯನ್ನು ಅನ್ವೇಷಿಸಿ, ಅದನ್ನು ಹೊರತರುವಲ್ಲಿ ನಿಮಗೆ ನೆರವಾಗುವ ಅಗಣಿತ ಸಂಖ್ಯೆಯ ಬೇರೆ ಬೇರೆ ಬ್ರಶ್ ಗಳು ಹಾಗೂ ಸಾಧನಗಳನ್ನು ಇದು ಒದಗಿಸುತ್ತದೆ!

 

ಫೈರ್ ಅಲ್ಪಾಕಾ

ಒಂದು ಹಗುರವಾದ ಸಾಧನ ಹಾಗೂ ಮೂಲ ವೈಶಿಷ್ಟ್ಯತೆಗಳ ಪರಿಪೂರ್ಣ ಸಂಯೋಜನೆಯನ್ನು ಈ ಸಾಧನವು ಪ್ರತಿನಿಧಿಸುತ್ತದೆ. ಇದು 10 ಭಾಷೆಗಳಲ್ಲಿ ಲಭ್ಯವಿದ್ದು, ವಿಂಡೋಸ್ ನೊಂದಿಗೆ ಕಾಂಪ್ಯಾಟಿಬಲ್ ಆಗಿದೆ. ಕಲೆಗೆ ಸಂಬಂಧಿಸಿದ ಎಲ್ಲ ವಿಷಯಗಳ ನಿಮ್ಮ ಆರಂಭಿಕ-ಹಂತದ ತಿಳುವಳಿಕೆಯನ್ನು ವರ್ಧಿಸುತ್ತಾ, ನಿದರ್ಶನವೊಂದನ್ನು ಸುಲಭವಾಗಿ ಚಿತ್ರಿಸಲು ನಿಮ್ಮನ್ನು ಅನುಮತಿಸುವ ಇದು ಒಂದು ಸರಳವಾದ ಸಾಧನವಾಗಿದೆ.

 

ನಾವೀನ್ಯಪೂರ್ಣವಾದ ಹಾಗೂ ಉತ್ಪಾದಕ ಕಲಾಕೃತಿಯೊಂದನ್ನು ರಚಿಸುವುದಲ್ಲದೇ, ಒಟ್ಟಾರೆಯಾಗಿ ಓರ್ವ ಉತ್ಪಾದಕ ವಿದ್ಯಾರ್ಥಿಯಾಗಿರುವುದೂ ಸಹ ಅವಶ್ಯವಾಗಿರುತ್ತದೆ. ನಿಮ್ಮ ಶಾಲಾ ಶೈಕ್ಷಣಿಕ ಸಾಮಗ್ರಿ, ಮನೆಗೆಲಸಗಳು, ಪಠ್ಯೇತರ ಚಟುವಟಿಕೆಗಳನ್ನು ಸಮತೋಲನ ಮಾಡಲು ಸಮರ್ಥನಾಗುವುದು ಒಂದು ಕಾರ್ಯವೇ ಆದರೂ, ಸೂಕ್ತ ಸಾಧನಗಳನ್ನು ನೀವು ಹೊಂದಿದ್ದಲ್ಲಿ, ಉತ್ಪಾದಕರಾಗಿರುವುದು ತುಂಬಾ ಸರಳವಾಗಿಬಿಡುತ್ತದೆ!