ಸ್ಕ್ರ್ಯಾಬಲ್ ಆಡುವುದು ಇಷ್ಟವೇ? ಈ ಸಲಹೆಗಳೊಂದಿಗೆ ನಿಮ್ಮ ಆಟದ ಕೌಶಲ್ಯವನ್ನು ವರ್ಧಿಸಿಕೊಳ್ಳಿ!

 

ಸ್ಕ್ಯಾಬಲ್ ಆಟವನ್ನು ಆಡುವುದು ಒಂದು ವಿಷಯವಾದರೆ, ಆ ಆಟವನ್ನು ಗೆಲ್ಲುವುದು ಬೇರೊಂದು ವಿಷಯ. ಸ್ಕ್ರ್ಯಾಬಲ್ ಆಟವೆಂಬುದು ನಿಮ್ಮ ಶಬ್ಧಭಂಢಾರವನ್ನು ಕೆದಕುವುದಷ್ಟೇ ಆಗಿರದೇ ನಿಮ್ಮ ಕೌಶಲ್ಯ, ಕಾರ್ಯತಂತ್ರ ಹಾಗೂ ಪ್ರತಿಯೊಂದು ಬಾರಿಯೂ ಪದಗಳ ಸೂಕ್ತ ಆಯ್ಕೆಯನ್ನು ಆಯ್ದುಕೊಳ್ಳುವಿಕೆ ಮುಂತಾದ ಹೆಚ್ಚಿನ ಸಂಗತಿಗಳನ್ನು ಒಳಗೊಂಡಿರುತ್ತದೆ.

ನಿಮ್ಮ ಆಟದ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕೇ? ಮುಂದಕ್ಕೆ ಓದಿ...

 

“ish” ಪದಗಳೊಂದಿಗೆ ಆಟವಾಡಿಮತ್ತು, ಬಂಪರ್ ಸ್ಕೋರ್ ಪಡೆಯಿರಿ!

ಬಂಪರ್ ಸ್ಕೋರ್ ಗಳಿಸಬೇಕೇ! ಹಾಗಿದ್ದಲ್ಲಿ, ಪದವೊಂದರ ನಂತರ “ish” ಅನ್ನು ಸೇರಿಸುವಿಕೆಯು, ಬಂಪರ್ ಸ್ಕೋರ್ ಗಳಿಸುವ ಅತ್ಯಂತ ಸುಲಭವಾದ ವಿಧಾನಗಳಲ್ಲಿ ಒಂದಾಗಿರುತ್ತದೆ. ಉದಾಹರಣೆಗಾಗಿ, child ಎಂಬುದು childish, warm ಎಂಬುದು warmish, sheep ಎಂಬುದು sheepish ಮುಂತಾಗಿ ಆಗುತ್ತದೆ.

 

ನಿಮ್ಮ ಅತ್ಯುತ್ತಮ ನಡೆಗಳನ್ನು ಚಲಾಯಿಸಿ ಆರಂಭದಿಂದಲೇ

ಸಾಮಾನ್ಯವಾಗಿ, ನಮ್ಮ ಪ್ರತಿಸ್ಪರ್ಧಿಗಳು ಅಂಕಗಳನ್ನು ಸೆಳೆದುಕೊಂಡುಬಿಟ್ಟಾರೆಂಬ ಭಯದಿಂದ ನಮ್ಮ ಅತ್ಯುತ್ತಮ ಪದ ಸಂಯೋಜನೆಗಳನ್ನು ಕೊನೆಯಲ್ಲಿ ಬಳಸುವುದಕ್ಕಾಗಿ ನಾವು ಉಳಿಸಿ ಇಟ್ಟುಕೊಳ್ಳುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರತಿ ಪದದೊಂದಿಗೆ ಹೆಚ್ಚು ಅಂಕಗಳನ್ನು ಗಳಿಸುವುದಕ್ಕಾಗಿ ನಿಮ್ಮ ಅತ್ಯುತ್ತಮ ನಡೆಗಳನ್ನು ಆರಂಭದಿಂದಲೇ ಹಾಗೂ ನಿರಂತರವಾಗಿ ಚಲಾಯಿಸುವುದು ಹೆಚ್ಚು ಉತ್ತಮವಾಗಿರುತ್ತದೆ.

 

ಬೆಂಜಮಿನ್ಆಟವಾಡಿಅದು ಕೇವಲ ಹೆಸರಷ್ಟೇ ಅಲ್ಲ!

Brick ಪದವು airbrick ಆಗುತ್ತದೆ

Jump ಪದವು outjump ಆಗುತ್ತದೆ

Away ಪದವು flyaway ಆಗುತ್ತದೆ

ಮೂಲಭೂತವಾಗಿ, ಫಲಕದ ಮೇಲೆ ಈಗಾಗಲೇ ಇರುವ ಐದು ಅಕ್ಷರಗಳ ಪದವೊಂದನ್ನು ಸೃಷ್ಟಿಸಲು ಮೂರು ಅಕ್ಷರಗಳ ವಿಸ್ತರಣೆಯನ್ನು ನೀವು ಸೇರಿಸುತ್ತೀರಿ.

 

ಮೂರು ಅಕ್ಷರಗಳ ಪದಗಳನ್ನು ಬಳಸಿಕೊಂಡು ಆಟವಾಡಿದೊಡ್ಡ ಪದಗಳನ್ನು ಅತಿಯಾಗಿ ನೆಚ್ಚಿಕೊಳ್ಳಬೇಡಿ

ಕೆಲವೊಮ್ಮೆ, ದೊಡ್ಡ ಪದಗಳನ್ನು ಹೊರ ಹಾಕುವುದರೆಡೆಗೆ ನಾವು ಎಷ್ಟು ಉತ್ಸಾಹವನ್ನು ತೋರುತ್ತೇವೆಂದರೆ, ಮೂರು-ಅಕ್ಷರಗಳ ಪದಗಳ ಶಕ್ತಿಯನ್ನು ನಾವು ಕಡೆಗಣಿಸಿಬಿಡುತ್ತೇವೆ. ನಿರ್ದಿಷ್ಟವಾಗಿ ಎರಡು ಅಥವಾ ಮೂರು ಅಕ್ಷರಗಳ ಚೌಕದ ಮೇಲೆ ಶಕ್ತಿ ಚೌಕವನ್ನು ಪಡೆಯುವ ಮೂಲಕ, ಅಧಿಕ ಅಂಕ ಗಳಿಕೆಯ ಚೌಕಗಳನ್ನು ಸೂಕ್ತಗೊಳಿಸಲು ಮೂರು-ಅಕ್ಷರಗಳ ಪದವನ್ನು ಬಳಸುವಿಕೆಯು ಉಪಯುಕ್ತ ವಿಧಾನವಾಗಿರುತ್ತದೆ

 

ನಿಮ್ಮ “E” ಮತ್ತು “S” ಗಳನ್ನು ಸರಿಯಾಗಿ ಬಳಸಿಕೊಂಡು ಆಟವಾಡಿ

ಪ್ರತಿಯೊಂದು ಸಮೂಹವು ಕೇವಲ ನಾಲ್ಕು “s” ಮತ್ತು “e” ಗಳನ್ನು ಹೊಂದಿರುವುದರಿಂದ, ನಿಮ್ಮ “s” ಮತ್ತು “e” ಗಳನ್ನು ನೀವು ಎಚ್ಚರಿಕೆಯಿಂದ ಚಲಾಯಿಸಬೇಕಾಗುತ್ತದೆ. ಅನೇಕ ಪದಗಳು s ಮತ್ತು e ಗಳನ್ನು ಜೊತೆಯಾಗಿ ಹೊಂದಿರುವುದರಿಂದ, ನೀವು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ಈಗ ಮೂಲಭೂತ ವಿಷಯಗಳನ್ನು ನೀವು ತಿಳಿದುಕೊಂಡಿರುವುದರಿಂದ – ನಿಮ್ಮ ಪರ್ಸನಲ್ ಕಂಪ್ಯೂಟರ್ ನಲ್ಲಿ ಈ ಮುಂದಿನ ಸ್ಕ್ರ್ಯಾಬಲ್ ಆಟಗಳನ್ನು ಆಡಲು ಸಿದ್ಧರಾಗಿ:

Funky Potato (ಫಂಕಿ ಪೊಟ್ಯಾಟೊ)

Scrabble Sprint (ಸ್ಕ್ರ್ಯಾಬಲ್ ಸ್ಪ್ರಿಂಟ್)

Lexulous (ಲೆಕ್ಸೊಲಸ್)

ಇನ್ನೂ ಹೆಚ್ಚಿನ ಆಟಗಳನ್ನು ಆಡುತ್ತಲೇ, ನಿಮ್ಮ ಟೈಪಿಂಗ್ ಅನ್ನೂ ಪರಿಪೂರ್ಣಗೊಳಿಸಿಕೊಳ್ಳುವ ಮನಸ್ಸಾಗಿದೆಯೇ? ನಿಮ್ಮ ಟೈಪಿಂಗ್ ಸ್ವತಃ ಮಾತನಾಡುವಂತೆ ಮಾಡಲು ಈ ಲಿಸ್ಟ್ ನಿಮ್ಮ ಆರಂಭಿಕ ಹಂತವಾಗಿರುತ್ತದೆ!