ಶಿಕ್ಷಕರು ನೋಡಲೇಬೇಕಾದ 8 ಟೆಡ್ ಟಾಕ್ಗಳು

 

ಸದಾ ನಿರತರಾಗಿರುವ ಶಿಕ್ಷಕರಾದ ನೀವು, ತರಗತಿಯನ್ನು ಉತ್ಸಾಹಗೊಳಿಸಲು ಅವಶ್ಯಕವಾಗಿ ಬೇಕಾದ ಸ್ವಲ್ಪ ಪ್ರೇರೇಪಣೆಗಾಗಿ 15 ನಿಮಿಷಗಳವರೆಗೆ ಸಮಯವನ್ನು ವ್ಯಯಿಸಬಹುದು. ಮತ್ತು ಹಾಗೇ ಮಾಡಲು ಜಾಗತಿಕವಾಗಿ ಪ್ರಸಿದ್ಧರಾದ ಪರಿಣಿತ ಭಾಷಣಕಾರರ ಟೆಡ್ ಟಾಕ್ ಅನ್ನು ಕೇಳುವುದಕ್ಕಿಂತ ಮತ್ತಿನ್ಯಾವುದು ಉತ್ತಮ ಮಾರ್ಗವಿದ್ದೀತು.

1. ಶಿಕ್ಷಕರಿಗೆ ವಾಸ್ತವಿಕ ಫೀಡ್ಬ್ಯಾಕ್ನ ಅವಶ್ಯಕತೆ ಇರುತ್ತದೆ

10 ನಿಮಿಷಗಳ ಈ ಭಾಷಣದಲ್ಲಿ, ಹಲವಾರು ಯಶೋಗಾಥೆಗಳನ್ನು ಮುಖ್ಯಾಂಶೀಕರಿಸುವ ಮೂಲಕ ಹೊಸ ಮತ್ತು ಅನುಭವಿ ಶಿಕ್ಷಕರು, ಇಬ್ಬರಿಗೂ ಫೀಡ್ಬ್ಯಾಕ್ ಅನ್ನು ಪಡೆಯುವುದರ ಪ್ರಾಮುಖ್ಯತೆಯನ್ನು ಬಿಲ್ ಗೇಟ್ಸ್ರವರು ಸ್ಥಾಪಿಸುತ್ತಾರೆ. [1]

2. ವಿಜ್ಞಾನ ವಿಷಯದ ಶಿಕ್ಷಕರೇ – ಅದನ್ನು ಮೋಜುಭರಿತವನ್ನಾಗಿಸಿ

ಕತೆ ಹೇಳುವುದು ಮತ್ತು ಪರಿಕಲ್ಪನೆಗಳನ್ನು ಸುಲಭವಾದ ಮತ್ತು ಅರ್ಥೈಸಿಕೊಳ್ಳಬಹುದಾದ ತುಣುಕುಗಳನ್ನಾಗಿ ಮಾಡುವುದು ವಿದ್ಯಾರ್ಥಿಗಳನ್ನು ವಿಜ್ಞಾನದ ಪಿರಿಯಡ್ಗಾಗಿ ಹೇಗೆ ಕಾತರದಿಂದ ಕಾಯುವಂತೆ ಮಾಡುತ್ತದೆ ಎಂಬುದನ್ನು ವಿಜ್ಞಾನದ ಶಿಕ್ಷಕರು ಮತ್ತು ಯೂಟ್ಯೂಬರ್ ಆಗಿರುವ ಟೈಲರ್ ಡೆವಿಟ್ರವರು ವಿವರಿಸುತ್ತಾರೆ. [2]

3. ಜಾದೂವನ್ನು ಹೇಗೆ ಸೃಷ್ಟಿಸುವುದು ಎಂಬುದನ್ನು ಶಿಕ್ಷಕರಿಗೆ ಕಲಿಸಿ

ಶಿಕ್ಷಕರಿಗೆ ಸ್ವಲ್ಪ ಅಸಾಂಪ್ರದಾಯಿಕವೆನ್ನಿಸಬಹುದಾದರೂ, ತರಗತಿಯ ಚೈತನ್ಯವನ್ನು ಜೀವಂತವಾಗಿರಿಸಲು ಜೀವನದ ಇತರ ನಡೆಗಳ ಜನರಿಂದ, ವಿಶೇಷವಾಗಿ ಸಾಧಕರಿಂದ ಶಿಕ್ಷಕರು ಕಲಿಯಲೇಬೇಕಾದ ಮಾನ್ಯವಾದ ಒಂದು ಅಂಶವನ್ನು ಶಿಕ್ಷಕರಾದ ಕ್ರಿಸ್ಟೋಫರ್ ಎಂಡಿನ್ರವರು ಮುಂದಿರಿಸುತ್ತಾರೆ. [3]

4. ಪ್ರತಿಯೊಂದು ಮಗುವಿಗೂ ಒಬ್ಬ ಚಾಂಪಿಯನ್ ಬೇಕಾಗುತ್ತಾರೆ

ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ಸಂಪರ್ಕವನ್ನು ನಿರ್ಮಿಸಿಕೊಳ್ಳುವುದು ಅಧ್ಯಯನ ಮಾಡಲು ಅವರ ಪ್ರೇರೇಪಣಾ ಮಟ್ಟದಲ್ಲಿ ಮತ್ತು ತರಗತಿಯಲ್ಲಿನ ಉತ್ಸಾಹದಲ್ಲಿ ಹೇಗೆ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬ ಬಗ್ಗೆ 40 ಕ್ಕೂ ಹೆಚ್ಚು ವರ್ಷಗಳ ಕಾಲ ಶಿಕ್ಷಕರಾಗಿರುವ ರೀಟಾ ಪಿಯರ್ಸನ್ರವರು ಮಾತನಾಡುತ್ತಾರೆ. [4]

5. ಶಿಕ್ಷಣವನ್ನು ಮರುಸಂಶೋಧಿಸಲು ವಿಡಿಯೋ ಬಳಸಿ

ಶಿಕ್ಷಣ ನವ್ಯೋದ್ಯಮಿಯಾಗಿ ಬದಲಾಗಿರುವ ಹೆಜ್ ಫಂಡ್ ವಿಶ್ಲೇಷಕರಾದ ಸಾಲ್ ಖಾನ್ರವರು ವಿದ್ಯಾರ್ಥಿಗಳಿಗೆ ಮನೆಯಲ್ಲಿ ನೋಡಲು ಮತ್ತು ಶಿಕ್ಷಕರ ನೆರವಿನೊಂದಿಗೆ ತರಗತಿಯಲ್ಲಿ ಹೋಂವರ್ಕ್ ಮಾಡಲು ನೀಡುವುದಕ್ಕಾಗಿ ವಿಡಿಯೋ ಉಪನ್ಯಾಸಗಳನ್ನು ತಯಾರಿಸುತ್ತಾರೆ. [5]

6. ತರಗತಿಯಲ್ಲಿ ಸ್ಪಾರ್ಕ್ ಲರ್ನಿಂಗ್ಗಾಗಿ ಮೂರು ನಿಯಮಗಳು

ವಿಷಯವನ್ನು ಹೆಚ್ಚು ಉತ್ತಮವಾಗಿ ನೆನಪಿಟ್ಟುಕೊಳ್ಳಲು ನೆರವಾಗುವ, ತರಗತಿಯಲ್ಲಿ ಸಂವಾದಗಳ ಕಿಡಿಯನ್ನು ಹೊತ್ತಿಸುವ ವಿದ್ಯಾರ್ಥಿಗಳ ಪ್ರಶ್ನೆಗಳು ಹೇಗೆ ಒಬ್ಬ ಶಿಕ್ಷಕರ ಅತಿ ದೊಡ್ಡ ಸಾಧನವಾಗಿರಬೇಕು ಎಂಬುದನ್ನು ರಸಾಯನ ಶಾಸ್ತ್ರದ ಶಿಕ್ಷಕರಾಗಿರುವ ರಾಮ್ಸೇ ಮುಸಲ್ಲಂರವರು ವಿವರಿಸುತ್ತಾರೆ. [6]

7. ಕಂಪ್ಯೂಟರ್ನೊಂದಿಗೆ ಗಣಿತವನ್ನುಕಲಿಸುವುದು

ಮಕ್ಕಳ ಭವಿಷ್ಯಕ್ಕೆ ಅತ್ಯಾವಶ್ಯಕವಾಗಿ ಬೇಕಾದ - ಸಿದ್ಧಾಂತವನ್ನು ವಾಸ್ತವ ಜೀವನದ ಸಮಸ್ಯೆಗಳೊಂದಿಗೆ ತಳುಕು ಹಾಕುವುದನ್ನು ಮಕ್ಕಳು ಕಲಿಯುವಂತೆ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಮೂಲಕ ಗಣಿತವನ್ನು ಕಲಿಸುವ ತಮ್ಮ ಮೂಲಭೂತ ವಿಚಾರವನ್ನು ಗಣಿತಜ್ಞರಾದ ಕೊನ್ರಾಡ್ ವೊಲ್ಫ್ರಾಮ್ರವರು ಪ್ರಸ್ತುತಪಡಿಸುತ್ತಾರೆ. [7]

8. ತರಗತಿಯಲ್ಲಿಯೇ ಮಾಡಬಹುದಾದ ಸುಲಭವಾದ DIY ಪ್ರಾಜೆಕ್ಟ್ಗಳು

ಸಿದ್ಧಾಂತವನ್ನು ಸೃಜನಾತ್ಮಕ ಕ್ರಿಯೆಯಾಗಿ ಒಗ್ಗೂಡಿಸುವುದನ್ನು ಸ್ವಲ್ಪ ಮೋಜಿನೊಂದಿಗೆ ವಿದ್ಯಾರ್ಥಿಗಳು ನೋಡಲು ಅನುವಾಗುವಂತೆ ಕಡಿಮೆ ವೆಚ್ಚದ ಮತ್ತು ಮಾಡಲು ಸುಲಭವಾದ ವಿಜ್ಞಾನದ ಪ್ರಾಜೆಕ್ಟ್ಗಳಿಗೆ ವಿಚಾರಗಳನ್ನು ತಂತ್ರಜ್ಞಾನ ಪರಿಣಿತರಾದ ಫಾನ್ ಕಿರವರು ನೀಡುತ್ತಾರೆ. [8]

PC ಮತ್ತು ಕೆಲವು ಉಚಿತ ಕಲಿಸುವ ಸಾಧನಗಳೊಂದಿಗೆ ಸನ್ನದ್ಧರಾಗಿ, ನೀವೀಗ ಸಂಪೂರ್ಣವಾಗಿ ಸಿದ್ಧರಾಗಿದ್ದೀರಿ!