ನನ್ನ ಮಗಳು ಅಲ್ಫಾಬೆಟ್ಗಳನ್ನು ಕಲಿಯಲು ಪಿಸಿಯನ್ನು ಬಳಸುತ್ತಾಳೆ

 

 

ಸ್ನೇಹಾ ಜೈನ್ರವರು https://blogsikka.com ನಲ್ಲಿ ಮಲ್ಟಿಟಾಸ್ಕಿಂಗ್ ಮಾಮ್ ಬ್ಲಾಗರ್ ಆಗಿದ್ದಾರೆ. ಅವರು 12 ವರ್ಷಗಳ ಕಾಲ ಸೂಕ್ಷ್ಮಜೀವಶಾಸ್ತ್ರಜ್ಞರಾಗಿ ಕೆಲಸ ಮಾಡಿದ್ದು, ಸಂಶೋಧನೆಯನ್ನೂ ಸಹ ಮಾಡಿದ್ದಾರೆ. ಅವರು ಒಬ್ಬ ಸಮರ್ಪಿತ ಟೆಕ್ ಲವರ್ ಆಗಿದ್ದು18 ವರ್ಷಗಳಿಂದ ಪಿಸಿಯನ್ನು ಬಳಸುತ್ತಿದ್ದಾರೆ.

1) ಶಿಕ್ಷಣಕ್ಕಾಗಿ ಪಿಸಿಯನ್ನು ಬಳಸುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಹೊಸ ವಿಷಯಗಳನ್ನು ಕಲಿಯಲು ಪಿಸಿಯು ಒಂದು ಅದ್ಭುತವಾದ ಹಾಗೂ ಇಂಟರಾಕ್ಟಿವ್ ಆದ ವಿಧಾನವಾಗಿದೆ. ಹೆಚ್ಚು ವೇಗವಾಗಿ ಬೆಳೆಯಲು ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ವಿಷಯಗಳನ್ನು ಕಲಿಯಲು ಅವುಗಳು ನಮಗೆ ನೆರವಾಗುತ್ತವೆ. ಒಬ್ಬ ಪಾಲಕರ ಮೇಲ್ವಿಚಾರಣೆಯಡಿ ಸೀಮಿತ ಅವಧಿಗೆ ಪಿಸಿಯನ್ನು ಬಳಸುವುದನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.

2) ಶಿಕ್ಷಣದ ಭವಿಷ್ಯವು, ಒಬ್ಬ ಪಾಲಕರಾಗಿ ನಿಮಗೆ ಹೇಗೆ ಕಾಣಿಸುತ್ತದೆ?

ಒಂದು ನಾಣ್ಯಕ್ಕೆ ಯಾವಾಗಲೂ ಎರಡು ಮುಖಗಳಿರುತ್ತವೆ. ಮಕ್ಕಳು ಕಲಿಯಲಿರುವ ವಿಧಾನವು ವಿಭಿನ್ನ ಹಾಗೂ ಇಂಟರಾಕ್ಟಿವ್ ಆಗಿರುತ್ತದೆ ಮತ್ತು ಅಂತಿಮವಾಗಿ ವರ್ಚ್ಯುವಲ್ ಕಲಿಕೆಯು ಹೆಚ್ಚುತ್ತದೆ ಎಂಬುದನ್ನು ನಾನು ನೋಡುತ್ತೇನೆ. ಆದರೆ ಇಂದಿನ ಪೀಳಿಗೆಯು ಎಷ್ಟೊಂದು ವೇಗವಾಗಿದೆ ಎಂದರೆ ಅವರು ಪ್ರತಿಯೊಂದನ್ನೂ ಶೀಘ್ರವಾಗಿ ಕಲಿಯಬಯಸುತ್ತಾರೆ ಮತ್ತು ಇದನ್ನು ಪಿಸಿ ಹಾಗೂ ಇಂಟರ್ನೆಟ್ ಬಳಸಿಕೊಂಡು ಮಾತ್ರ ಸಾಧಿಸಬಹುದಾಗಿದೆ.

3. ನಿಮ್ಮ ಕಂದನ ಶಿಕ್ಷಣಕ್ಕೆ ಪಿಸಿಯನ್ನು ನೀವು ಹೇಗೆ ಬಳಸುತ್ತೀರಿ?

ನನ್ನ ಮಗಳು ಅಲ್ಫಾಬೆಟ್, ಹೊಸ ರೈಮ್ಗಳು ಮತ್ತು ಪ್ರಾಣಿಗಳು, ಬಣ್ಣಗಳಂಥ ವಿಷಯಗಳನ್ನು ಮತ್ತು ಇನ್ನೂ ಹಲವಾರು ವಿಷಯಗಳನ್ನು ಕಲಿಯಲು ಪಿಸಿಯನ್ನು ಬಳಸುತ್ತಾಳೆ.

ಪಿಸಿ ಯುಗದ ಮುಂಚಿನದ್ದಕ್ಕೆ ಹೋಲಿಸಿದಲ್ಲಿ ಈಗ ಶಿಕ್ಷಣವು ಹೆಚ್ಚು ಸುಲಭವಾಗಿದೆ ಎಂದು ನನಗನ್ನಿಸುತ್ತದೆ. ಕ್ರಾಫ್ಟ್ ಅನ್ನು ಅವಳಿಗೆ ಕಲಿಸಲು ನಾನು ಲೈವ್ ವಿಡಿಯೋಗಳನ್ನು ಬಳಸಿಕೊಳ್ಳುತ್ತೇನೆ, ಜೀವನದ ತತ್ವಗಳು ಹಾಗೂ ನಿಯಮಗಳನ್ನು ವಿಡಿಯೋಗಳು ಹಾಗೂ ಎನಿಮೇಶನ್ಗಳನ್ನು ಬಳಸಿಕೊಂಡು ಕಲಿಸುತ್ತೇನೆ. ಕಾಲಾಂತರದಲ್ಲಿ ಅವಳು ಅದರ ವ್ಯಸನಿಯಾಗಿಬಿಡುತ್ತಾಳೆ ಎಂಬುದು ನನಗೆ ಗೊತ್ತಿದೆ, ಆದರೆ ಅದಕ್ಕೆ ನಾನು ಒಂದು ಮಿತಿಯನ್ನು ಹಾಕಿದ್ದೇನೆ. ಅದನ್ನು ಕಾರ್ಯದಕ್ಷತೆಯಿಂದ ಬಳಸುವಂತೆ ಹಾಗೂ ಮಿತಿ ಮೀರಿ ಬಳಸದಿರುವಂತೆ ನಾನು ನೋಡಿಕೊಳ್ಳುತ್ತೇನೆ. ಮೂಲಭೂತವಾಗಿ, ಮನೆಗೆ ಪಿಸಿಯೊಂದು ಬೇಕೇ ಬೇಕು, ಏಕೆಂದರೆ ನನ್ನ ಮಗಳಿಗೆ ನಾನು ಪೇಂಟ್ ಮತ್ತು ಶಬ್ದಕೋಶವನ್ನು ಬಳಸುವುದನ್ನು ಹೇಳಿಕೊಡುತ್ತೇನೆ, ಇವುಗಳಿಂದ ಅವಳು ಪೇಂಟಿಂಗ್ ಮಾಡುವುದನ್ನು ಕಲಿಯುತ್ತಾಳೆ ಹಾಗೂ ವರ್ಡ್ನಲ್ಲಿ ಹೊಸ ಶಬ್ದಗಳನ್ನು ಬರೆಯುವುದನ್ನು ಕಲಿಯುತ್ತಾಳೆ. ಇದಷ್ಟೇ ಅಲ್ಲ, ಅವಳಿಗಾಗಿ ವರ್ಕ್ಶೀಟ್ಗಳನ್ನು ಮಾಡಲು, ಹೋಮ್ವರ್ಕ್ ರೂಪದಲ್ಲಿ ಬರುವ ಸ್ಟಡಿ ಮಟೀರಿಯಲ್ ಅನ್ನು ಡೌನ್ಲೋಡ್ ಮಾಡಲು ಪಿಸಿಯು ನನಗೆ ನೆರವಾಗುತ್ತದೆ. ಅವಳಿಗೆ ಕಲರಿಂಗ್ ಮಾಡುವುದಕ್ಕಾಗಿ ನೀಡಲು ಸಾಕಷ್ಟು ಖಾಲಿ ಚಿತ್ರಗಳನ್ನು ಪಡೆದುಕೊಳ್ಳಲು ಪಿಸಿಯು ನನಗೆ ನೆರವಾಗುತ್ತದೆ. ಚಿತ್ರ ಬರೆಯುವುದು ಹೇಗೆ, ಕ್ರಾಫ್ಟ್ ಮತ್ತು ಡಿಜೈನ್ ಮಾಡುವುದು ಹೇಗೆ ಎಂಬುದನ್ನು ಅವಳು ಕಲಿಯುತ್ತಾಳೆ. ಇದಷ್ಟೇ ಅಲ್ಲದೇ, ನನ್ನ ಪಿಸಿಯಲ್ಲಿ ನಾನು ಸಾಕಷ್ಟು ಎಜುಕೇಶನಲ್ ಸಿಡಿಗಳನ್ನೂ ಸಹ ಪ್ಲೇ ಮಾಡುತ್ತೇನೆ, ಇದರಿಂದ ಅವಳು ಪರಿಕಲ್ಪನೆಗಳನ್ನು ವಾಸ್ತವಿಕ ದೃಶ್ಯೀಕರಿಸಿಕೊಳ್ಳುವಿಕೆಯೊಂದಿಗೆ ಅರ್ಥ ಮಾಡಿಕೊಳ್ಳುತ್ತಾಳೆ.