ಮುಂದಿನ ಯಶಸ್ವಿ ಅವಧಿಗೆ ತಯಾರಾಗಲು ಆನ್‌ಲೈನ್ ಕಲಿಕೆಗೆ ಸಲಹೆಗಳು

ಪ್ರಪಂಚವು ಆನ್ ಲೈನ್ ಕಲಿಕೆಯೊಂದಿಗೆ ಹೋರಾಡುತ್ತಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯ ಮತ್ತು ಅಧ್ಯಯನದ ನಡುವೆ ಸಮತೋಲನ ಸಾಧಿಸಲು ಹೆಣಗಾಡುತ್ತಿದ್ದಾರೆ. ತರಗತಿ ಮತ್ತು ಮನೆಯ ಪರಿಸರ ಒಂದನ್ನೊಂದು ನಡುವಿನ ಅತಿಕ್ರಮಣವು ವಿದ್ಯಾರ್ಥಿಗಳಿಗೆ ಸವಾಲಾಗಿರುತ್ತದೆ ಏಕೆಂದರೆ ಮನೆಯನ್ನು ತರಗತಿಯನ್ನಾಗಿ ಮಾಡಿದಾಗ ಆಲಸ್ಯಕ್ಕೆ  ಹೆಚ್ಚು ಅವಕಾಶವಿಲ್ಲ. ನೀವು ತರಗತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನೀವು ಬಳಸಬಹುದಾದ ಕೆಲವು ತಂತ್ರಗಳು ಇಲ್ಲಿವೆ.

ಚಿತ್ತ ಚಾಂಚಲ್ಯಗಳನ್ನು ಕಡಿಮೆ ಮಾಡಿ:

ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸಲು, ನಿಮ್ಮ ಗಮನ ಬೇರೆಡೆ ಹರಿಯುವುದನ್ನು ಕಡಿಮೆ ಮಾಡಿ ಮತ್ತು ನಿಮ್ಮ ಆಟಗಳಿಂದ ದೂರವಿರಿ. ಶಿಕ್ಷಕರಿಗೆ ಗಮನ ಕೊಡಿ ಮತ್ತು ನಿಮ್ಮ ವೀಡಿಯೊವನ್ನು ಆನ್ ಮಾಡಿ ಇಡಿ. ಸಹಪಾಠಿಗಳನ್ನು ಇದೇ ರೀತಿ ಮಾಡಲು ಪ್ರೋತ್ಸಾಹಿಸುವುದರಿಂದ ಒಂದು  ಅನುಕೂಲಕರ ಕಲಿಕೆಯ ವಾತಾವರಣದಲ್ಲಿ ಪರಸ್ಪರ ಸಂವಹನ ನಡೆಸಲು ಸಹಾಯವಾಗುತ್ತದೆ.

ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳಿ:

ತರಗತಿಯ ನಂತರ ಯಾವುದೇ ಅನುಮಾನಗಳನ್ನು ನಿವಾರಿಸಲು ಶಿಕ್ಷಕರಿಗೆ ಪ್ರಶ್ನೆಗಳು ಮತ್ತು ಇಮೇಲ್ ಗಳನ್ನು ಬರೆಯಿರಿ. ತರಗತಿಯನ್ನು ಆಲಿಸುವಾಗ ಟಿಪ್ಪಣಿಗಳನ್ನು ಮಾಡುವುದು ಉಪನ್ಯಾಸದ ಉದ್ದಕ್ಕೂ ಗಮನಹರಿಸಲು ನಿಮಗೆ ಸಹಾಯ ಮಾಡುತ್ತದೆ.

ಮಗ್ನರಾಗಿ:

ತರಗತಿಯಲ್ಲಿ ನಿಮಗೆ ತಿಳಿದಿರುವುದನ್ನು ಮನಸ್ಸು ಬಿಚ್ಚಿ ಮಾತನಾಡಲು ನಾಚಿಕೆಪಡಬೇಡಿ. ತರಗತಿಗಳಲ್ಲಿ ತೊಡಗಿಸಿಕೊಂಡು  ಸಂವಾದಾತ್ಮಕವಾಗಿದ್ದರೆ ಅದು ನಿಮಗೆ  ಆಸಕ್ತಿಯನ್ನುಂಟುಮಾಡುತ್ತದೆ ಮತ್ತು ತರಗತಿ ವಿನೋದದಿಂದ ಕೂಡಿದ್ದು ಹೆಚ್ಚು ಫಲಪ್ರದವಾಗಿಸುತ್ತದೆ. ಹಾಸಿಗೆಯ ಮೇಲಿದ್ದರೆ ಮೆದುಳು  ವಿಶ್ರಾಂತಿ ಪಡೆಯಲು ಬಯಸುವುದರಿಂದ ಹಾಸಿಗೆ ಮೇಲೆ ಕುಳಿತುಕೊಳ್ಳಬೇಡಿ. ಆನ್ ಲೈನ್ ತರಗತಿಗಳ ಸಮಯದಲ್ಲಿ ಹಾಸಿಗೆಯಿಂದ ದೂರವಿದ್ದು ಬೆನ್ನು ನೇರವಾಗಿರುವ ಭಂಗಿಯಲ್ಲಿ ಒಂದು ಅಧ್ಯಯನ ಮೇಜಿನ ಎದುರು ಕುಳಿತುಕೊಳ್ಳುವುದರಿಂದ ಅದು ನೀವು ಉಪನ್ಯಾಸದ ಉದ್ದಕ್ಕೂ ಫಲಪ್ರದವಾಗಿ ಮತ್ತು ಕ್ರಿಯಾಶೀಲರಾಗಿರುವುದನ್ನು ಖಚಿತಪಡಿಸುತ್ತದೆ.

ಮೊಬೈಲ್ ಫೋನ್ ಅನ್ನು ತ್ಯಜಿಸಿ:

ಮೊಬೈಲ್ ಫೋನ್ ಗಳನ್ನು ವಿರಾಮದ ಸಾಧನಗಳಾಗಿ ಬಳಸಲಾಗುತ್ತದೆ ಮತ್ತು ನೀವು ಆನ್ ಲೈನ್ ತರಗತಿಗಳಲ್ಲಿ ನಿಮ್ಮ ಫೋನ್ ನಲ್ಲಿದ್ದರೆ ಆಲಸ್ಯಕ್ಕೊಳಗಾಗುವುದು ಸುಲಭ. ಪಿಸಿ ಅಥವಾ ಲ್ಯಾಪ್ ಟಾಪ್ ನಲ್ಲಿ ತರಗತಿಗಳಿಗೆ ಹಾಜರಾಗಿ, ಇದರಿಂದ ನೀವು ಪೆನ್ ಮತ್ತು ಪೇಪರ್ ಗಾಗಿ ಹುಡುಕದೇ ನೋಟ್ಸ್ ಮಾಡುವುದನ್ನು ಮುಂದುವರಿಸಬಹುದು. ಡೆಲ್ ನಿಂದ ಮನೆಯಿಂದಲೇ ಹೊಂದಾಣಿಕೆಯಿಂದ ಕೂಡಿದ ಕಲಿಕೆಯನ್ನು ಆನಂದಿಸಿ.

ಪರಿಣಾಮಕಾರಿ ತರಗತಿಯ ವಾತಾವರಣಕ್ಕಾಗಿ ಈ ತಂತ್ರಗಳನ್ನು ಅಳವಡಿಸಿ. ಮನೆ ಮತ್ತು ತರಗತಿಯ ನಡುವಿನ ಸ್ಪಷ್ಟವಾದ ಪ್ರತ್ಯೇಕತೆಯು ನಿಮಗೆ ಪರಿಣಾಮಕಾರಿಯಾಗಿ ವಿಶ್ರಾಂತಿ ಪಡೆಯಲು ಕೂಡಾ ಸಹಾಯ ಮಾಡುತ್ತದೆ. ಇನ್ನಷ್ಟು ತಿಳಿಯಲು ನಮ್ಮ ವೆಬ್ ಬಿನಾರ್ ಗೆ ಸೇರಿ:

https://www.dellaarambh.com/webinars/