ಪಿಸಿ-ಸಶಕ್ತ ಕಲಿಕೆ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಭವಿಷ್ಯವನ್ನು ಪರಿವರ್ತಿಸುತ್ತಿದೆ


ಶಿಕ್ಷಣವು ವ್ಯವಸ್ಥಿತ ಸುಧಾರಣೆಗೆ ಒಳಗಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ, ಮುಂದಿನ ವರ್ಷಗಳಲ್ಲಿ ಪಿಸಿ ಕಲಿಕೆಯು ಶಿಕ್ಷಣದ ಚುಕ್ಕಾಣಿ ಹಿಡಿಯಲಿದೆ.

ಕಂಪ್ಯೂಟರ್  ವಿಜ್ಞಾನ ಶಿಕ್ಷಣವನ್ನು ದೇಶದಲ್ಲಿ 1963 ರಲ್ಲಿ ಪರಿಚಯಿಸುವುದರೊಂದಿಗೆ ಭಾರತದಲ್ಲಿ ಪಿಸಿ ಶಿಕ್ಷಣದ ದೀರ್ಘಕಾಲದ ಇತಿಹಾಸವಿದೆ.1 ಅಂದಿನಿಂದ, ಅಧಿಕ ವೇಗದ ಅಂತರ್ಜಾಲದ ವ್ಯಾಪಕ ವಿಸ್ತರಣೆಯಿಂದಾಗಿ ದೇಶಾದ್ಯಂತ ಆನ್ ಲೈನ್ ಕಲಿಕೆಯನ್ನು ಕೈಗೆತ್ತಿಕೊಳ್ಳಲಾಗಿದೆ, ಜನವರಿ 2020 ರಂತೆ ಭಾರತ ಸುಮಾರು 688 ದಶಲಕ್ಷ ಸಕ್ರಿಯ ಡಿಜಿಟಲ್ ಬಳಕೆದಾರರನ್ನು ಹೊಂದಿದೆ.2 

ಇಂದು, ಭಾರತವು ಇ-ಕಲಿಕೆಯ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, 2021ರ ವೇಳೆಗೆ 9.5 ದಶಲಕ್ಷ ಬಳಕೆದಾರರಿರುತ್ತಾರೆ ಮತ್ತು ಇದು 1.96 ಶತಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆಯಾಗಲಿದೆ ಎಂದು ಅಂದಾಜಿಸಲಾಗಿದೆ. 3

 

ಪಿಸಿ-ಸಶಕ್ತ ಶಿಕ್ಷಣ ಎಂದರೇನು?

 

ಪಿಸಿ ಶಿಕ್ಷಣವು ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಬಳಸಿಕೊಳ್ಳುವ ಮೂಲಕ ಪರಿಕಲ್ಪನೆಗಳನ್ನು ಗ್ರಹಿಸಲು ಮತ್ತು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ, ಇದು ವಾಡಿಕೆಯ ಕಂಠಪಾಠದ ಕಲಿಕೆಯ ಹಳೆಯ ಶಿಕ್ಷಣ ವಿಧಾನಕ್ಕೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಶೈಕ್ಷಣಿಕ ಮತ್ತು ಮಾಹಿತಿಯುಕ್ತ ಕಲಿಕೆಯು ವಿದ್ಯಾರ್ಥಿಗಳಿಗೆ ವಿಷಯಗಳನ್ನು ನೆನಪಿನಲ್ಲಿ ಟ್ಟುಕೊಳ್ಳುವುದಕ್ಕೆ ಬದಲಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

 

 

ಇದಲ್ಲದೇ, ಪಿಸಿ ಗಳು ವಿದ್ಯಾರ್ಥಿಗಳಿಗೆ ಇವುಗಳಿಗೆ ಅವಕಾಶ ಕೊಡುತ್ತದೆ-

 

  • ಪ್ರಪಂಚದಾದ್ಯಂತದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ
  • ಸದ್ಯದ ಸಮಸ್ಯೆಗಳನ್ನು ಪರಿಹರಿಸಲು ಅನನ್ಯ ಮತ್ತು ನವೀನ ಮಾರ್ಗಗಳನ್ನು ಹುಡುಕುವುದು
  • ಅವರಿಗೆ ಸೂಕ್ತವಾದ ವಿಧಾನದಲ್ಲಿ ಕಲಿಯುವುದು ಅದು ಶ್ರವ್ಯ(ಆಡಿಯೋ), ದೃಶ್ಯ, ಪಠ್ಯ ಅಥವಾ ಗ್ರಾಫಿಕ್ ಆಗಿರಬಹುದು
  • ಯೋಜನೆಗಳಲ್ಲಿ ಕೆಲಸ ಮಾಡುವಾಗ ಸಹಯೋಗ ಮತ್ತು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಗೆಳೆಯರಿಂದ ಕಲಿಯುವುದು
  • ಸೂಕ್ತ ಸಮಯದಲ್ಲಿ, ಅವರವರ ಮನೆಗಳಲ್ಲಿದ್ದೇ ಕಲಿಯುವ ಅವಕಾಶ
  • ಅಂಕಗಳನ್ನು ಗಳಿಸಲು ಒಂದು ಪರಿಕಲ್ಪನೆಯನ್ನು ಕಂಠಪಾಠ ಮಾಡುವುದರ ಬದಲಿಗೆ, ಸ್ಥಳದಲ್ಲೇ ಅನುಮಾನಗಳನ್ನು ಪರಿಹರಿಸಿಕೊಳ್ಳುವುದು
  • ಪ್ರಪಂಚದಾದ್ಯಂತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸುದ್ದಿಗಳ ಬಗ್ಗೆ ಇತ್ತೀಚಿನ ವಿದ್ಯಮಾನಗಳನ್ನು ತಿಳಿದುಕೊಳ್ಳುವುದು

 

ಒಂದು ದೇಶವಾಗಿ, ಪಿಸಿ-ಸಶಕ್ತ ಕಲಿಕೆಯಲ್ಲಿ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ, ಆದರೂ, ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ. 2019 ರ ಎರಡನೇ ತ್ರೈಮಾಸಿಕದಲ್ಲಿ 3.4 ದಶಲಕ್ಷ ಪಿಸಿ ಘಟಕಗಳನ್ನು ರವಾನಿಸಲಾಗಿದ್ದರೂ, ದೇಶದಲ್ಲಿ ಪಿಸಿ ಯ ಒಟ್ಟಾರೆ ವಿಸ್ತರಣೆ ಇನ್ನೂ 10% ಕ್ಕಿಂತ ಕಡಿಮೆಯಿದೆ.4

 

ಇದಕ್ಕೆ ನಮ್ಮ ಪರಿಹಾರವೇನು?

ಡೆಲ್ ಆರಂಭ್ - ಪೋಷಕರು, ಶಿಕ್ಷಕರು ಮತ್ತು ಮಕ್ಕಳು ಡಿಜಿಟಲ್ ಇಂಡಿಯಾಕ್ಕೆ ಯಶಸ್ವಿಯಾಗಿ ಪರಿವರ್ತನೆಗೊಳ್ಳಲು ಉತ್ತಮ ಕಲಿಕೆಗಾಗಿ ಪಿಸಿಯನ್ನು ಹೇಗೆ ಬಳಸಬೇಕೆಂಬ ಜ್ಞಾನದಿಂದ ಅವರನ್ನು ಸಜ್ಜುಗೊಳಿಸುವ ಮೂಲಕ ಸಹಾಯ ಮಾಡುವ ಪ್ಯಾನ್-ಇಂಡಿಯಾ ಪಿಸಿ ಫಾರ್ ಎಜುಕೇಶನ್&zwjನಿಂದ ಒಂದು ಆರಂಭ. ನಮ್ಮ ಡೆಲ್ ಚಾಂಪ್ಸ್ ಶಾಲಾ ಸಂಪರ್ಕ ಕಾರ್ಯಕ್ರಮದ ಮೂಲಕ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಅವರ ಆಲೋಚನಾ ವಿಧಾನದಂತೆ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು ನಾವು ಈಗಾಗಲೇ ಸುಮಾರು 1.5 ದಶಲಕ್ಷ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದ್ದೇವೆ. 

ಈಗಾಗಲೇ 4,793 ಶಾಲೆಗಳು ಇದರ ಪ್ರಯೋಜನ ಪಡೆದಿವೆ, 91,351 ಶಿಕ್ಷಕರು ತರಬೇತಿ ಮತ್ತು ಪ್ರಮಾಣ ಪತ್ರ ಪಡೆದಿದ್ದಾರೆ ಮತ್ತು 1,29,362 ತಾಯಂದಿರು ತರಬೇತಿ ಪಡೆದಿದ್ದಾರೆ. ಇದರೊಂದಿಗೆ, ನಾವು ದೇಶದೊಳಗೆ ಭವಿಷ್ಯದ ಸಿದ್ಧವಾಗಿರುವಂತೆ ಶಿಕ್ಷಣ ಕ್ಷೇತ್ರವನ್ನು ಸಕ್ರಿಯಗೊಳಿಸಲು ಪಿಸಿ ವಿಸ್ತರಣೆಯನ್ನು ಹೆಚ್ಚಿಸುವತ್ತ ಕಾರ್ಯಪ್ರವೃತ್ತರಾಗಿದ್ದೇವೆ.