ಮೊತ್ತ ಮೊದಲನೇಯದಾಗಿ, ಶಿಕ್ಷಕ ವೃತ್ತಿಯ ನಿಮ್ಮ ಮೊದಲನೇ ಕೆಲಸಕ್ಕಾಗಿ ಅಭಿನಂದನೆಗಳು! ನೀವು ಸಹಾಯಕ ಶಿಕ್ಷಕರಾಗಿರಬಹುದು, ಪರ್ಯಾಯ ಶಿಕ್ಷಕರಾಗಿರಬಹುದು ಅಥವಾ ಹಿರಿಯ ಶಿಕ್ಷಕರೊಬ್ಬರನ್ನು ಮೀರಿಸಿರಬಹುದು – ಹೇಗಿದ್ದರೂ ಸರಿ, ನಿಮ್ಮ ಬೋಧನಾ ವೃತ್ತಿಜೀವನಕ್ಕೆ ಇದು ಒಂದು ಅದ್ಭುತ ಕ್ಷಣವಾಗಿದೆ. ಸ್ಟೇಶನರಿ, ಪಠ್ಯಪುಸ್ತಕಗಳು ಮತ್ತು ಕೋರ್ಸ್ ಸಾಮಗ್ರಿಗಳನ್ನು ಬದಿಗೊತ್ತಿ, ಪಿಸಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ:
1. ಪಾಠವನ್ನು ಯೋಜಿಸುವುದರಲ್ಲಿ ವೃತ್ತಿಪರರಾಗುವುದು
ಮುಂಚಿತವಾಗಿ ಯೋಜನೆ ಮಾಡುವುದು ಮತ್ತು ವರ್ಗದಲ್ಲಿ ಎದುರಾಗಬಹುದಾದ ಯಾವುದೇ ವಿಷಯಕ್ಕೇ ಆಗಲಿ ತಯಾರಿ ನಡೆಸುವುದು, ಒಬ್ಬ ಉತ್ತಮ ಶಿಕ್ಷಕನನ್ನು – ಹೆಚ್ಚು ಉತ್ತಮನನ್ನಾಗಿಸುತ್ತದೆ. ಒಂದು ನಿಶ್ಚಿತ ಯೋಜನೆಯನ್ನು ನೀವು ಹೊಂದಿರುವಾಗ, ಪ್ರಗತಿಯ ಹಿಂದೆ ಹೋಗುವುದು ಮತ್ತು ಸೂಕ್ತವಾದ ಸಂಪನ್ಮೂಲಗಳನ್ನು ಸಿದ್ಧವಾಗಿರಿಸಿಕೊಳ್ಳುವುದು ಸುಲಭವಾಗುತ್ತದೆ. ಪಾಠವನ್ನು ಯೋಜಿಸಲು ಟೆಂಪ್ಲೇಟ್ಗಳು ಮತ್ತು ಕಲ್ಪನೆಗಳಿಗಾಗಿ ಎಜ್ಯುಕೇಶನ್ ವರ್ಲ್ಡ್ ಮತ್ತು ಟೀಚರ್ ಗಳಂತಹ ವೆಬ್ಸೈಟ್ಗಳು ಉತ್ತಮ ಮೂಲವಾಗಿವೆ.
2. ವರ್ಗದಲ್ಲಿನ ಐಸ್ ಬ್ರೇಕರ್ಗಳನ್ನು ಹುಡುಕಿ
ಶಿಕ್ಷಕರೊಬ್ಬರೇ ಮಾತನಾಡುವ ತರಗತಿಯ ಕಲ್ಪನೆಯು ಈಗ ಹಳತಾಗಿದೆ. ನಿಮ್ಮ ವಿದ್ಯಾರ್ಥಿಗಳು ಹೆಚ್ಚು ಹುರುಪಿನವರಾದಂತೆ, ನೀವು ಹೇಳುತ್ತಿರುವ ಪ್ರತಿಯೊಂದೂ ವಿಷಯವೂ ಅವರ ಮನಸ್ಸಿನಲ್ಲಿ ಹೆಚ್ಚು ನೋಂದಾಯಿತವಾಗುವ ಸಾಧ್ಯತೆ ಇರುತ್ತದೆ – ಇದು ಮುಖ್ಯವಾಗಿ ದ್ವಿಮುಖ ಮಾರ್ಗದ ಸಂಭಾಷಣೆಯನ್ನು ಹೊಂದಿರುವಾಗ ಸಾಧ್ಯವಾಗುತ್ತದೆ. ನಿಮ್ಮ ವಿದ್ಯಾರ್ಥಿಗಳು ಪ್ರತಿ ಬಾರಿಯೂ ಎದುರುನೋಡುತ್ತಿರುವ ಪಾಠಗಳಿಗಾಗಿ ಐಸ್ ಬ್ರೇಕರ್ಗಳೊಂದಿಗೆ ಸಂವಾದವನ್ನು ಪ್ರಾರಂಭಿಸಿ.
3. ವಿದ್ಯಾರ್ಥಿಗಳು ವಾಸ್ತವವಾಗಿಯೂ ಎದುರುನೋಡುವ ಮನೆಗೆಲಸವನ್ನು ನೀಡಿ
ಪ್ರಾಜೆಕ್ಟ್ಗಳು, ಗ್ರುಪ್ ಅಸೈನ್ಮೆಂಟ್ಗಳು, ವಿಜ್ಞಾನದ ಪ್ರಯೋಗಗಳು ಮತ್ತು ಕ್ಷೇತ್ರ ಪ್ರವಾಸಗಳು ಇವೆಲ್ಲವುಗಳಲ್ಲಿ ಇರುವ ಸಾಮಾನ್ಯ ಅಂಶ ಯಾವುದು?
ಅವೆಲ್ಲವುಗಳೂ ಪ್ರಾಯೋಗಿಕ ಮನೆಗೆಲಸದ ವಿಚಾರಗಳು. ಇವುಗಳಿಗೆ ಸಂಬಂಧಿಸಿದ ಅತ್ಯುತ್ತಮ ವಿಚಾರವೆಂದರೆ ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳೂ ಅವುಗಳತ್ತ ಹೆಚ್ಚು ಉತ್ಸಾಹವನ್ನು ತೋರಿಸುತ್ತಾರೆ ಮತ್ತು ಇದು, ವಿಷಯಗಳನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.
4. ನಿಮ್ಮ ವಿದ್ಯಾರ್ಥಿಗಳನ್ನು ಆನ್ಲೈನ್ನಲ್ಲಿ ಅಸೆಸ್ ಮಾಡಿ
ಪರೀಕ್ಷೆಗಳು ಯಾವಾಗಲೂ ಪೆನ್ ಮತ್ತು ಪೇಪರ್ ವ್ಯವಹಾರವನ್ನು ಹೊಂದಿರುತ್ತವೆ. ಇದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿರುತ್ತದೆ ಮತ್ತು ಒಂದು ಕ್ರಮವಾಗಿ ಮುಂದುವರಿಯುತ್ತದೆ. ಆದರೆ, Google Classroom [1] ನಂತಹ ಸಾಧನಗಳ ಸಹಾಯದಿಂದ ಮೌಲ್ಯಮಾಪನ ಮಾಡುವಲ್ಲಿ ಒಂದು ಪಿಸಿ ಸಹಾಯ ಮಾಡಬಹುದು. ಕಲಿಕೆಯ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುವ ಜೊತೆಯಲ್ಲಿಯೇ ವಿದ್ಯಾರ್ಥಿಗಳಿಗೆ ನೀವು ತಕ್ಷಣದ ಫೀಡ್ಬ್ಯಾಕ್ ನೀಡಬಹುದು ಮತ್ತು ಪರೀಕ್ಷೆಯ ಆವರ್ತನವನ್ನು ಕೂಡ ಹೆಚ್ಚಿಸಬಹುದು ಎನ್ನುವುದೇ ಇದರ ವೈಶಿಷ್ಯತೆ.
5. ಇತ್ತೀಚಿನ ಬೋಧನಾ ಪ್ರವೃತ್ತಿಗಳ ಬಗ್ಗೆ ಅಪ್ಡೇಟ್ ಆಗಿ ಇರಿ
ವಿಚಾರಗಳು, ಸಲಹೆಗಳು ಮತ್ತು ಬೆಂಬಲಗಳನ್ನು ಹಂಚಿಕೊಳ್ಳುವಂತೆ ಪರಸ್ಪರ ಸಂಪರ್ಕದಲ್ಲಿರಲು ಹಿರಿಯ ಮತ್ತು ಹೊಸ ಶಿಕ್ಷಕರು ಇಬ್ಬರನ್ನೂ ಸಶಕ್ತಗೊಳಿಸುತ್ತಾ, ಟೀಚರ್ಸ್ ಆಫ್ ಇಂಡಿಯಾ, ಎಜುಟೋಪಿಯಾ ಕಮ್ಯುನಿಟಿ, ಮೈಕ್ರೊಸಾಫ್ಟ್ ಎಜುಕೇಟರ್ ಕಮ್ಯುನಿಟಿಗಳಂಥ ಸಮುದಾಯಗಳ ನೆರವು ಕೇವಲ ಒಂದು ಕ್ಲಿಕ್ ದೂರದಲ್ಲಿರುತ್ತದೆ. ಒಂದು ದಿನದಲ್ಲಿ ಓದುವುದಕ್ಕಾಗಿ ವ್ಯಯಿಸುವ ಕೆಲವು ನಿಮಿಷಗಳ ಸಮಯವೂ ಸಹ ಬೋಧನಾ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ನಿಮ್ಮನ್ನು ನೀವು ಅಪ್-ಟು-ಡೇಟ್ ಆಗಿ ಇರಿಸಿಕೊಳ್ಳಲು ನೆರವಾಗುತ್ತದೆ.
ಒಬ್ಬ ಉತ್ತಮ ಮತ್ತು ಅತ್ಯುತ್ತಮ ಶಿಕ್ಷಕನ ನಡುವಿನ ವ್ಯತ್ಯಾಸವೆಂದರೆ ಕಲಿಕೆಯೊಂದಿಗಿನ ವಿದ್ಯಾರ್ಥಿಗಳ ಸಂಬಂಧವನ್ನು ಉನ್ನತೀಕರಿಸಲು ಮಾಡುವ ಪ್ರಯತ್ನವಾಗಿದೆ. ಈ ಸಮಯದಲ್ಲಿ ನೀವು ಬಳಸುತ್ತಿರುವ ಪಿಸಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ನೀವು ಸಹ ಇದನ್ನು ಸಾಧಿಸಬಹುದು.
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.
ಹೈಬ್ರಿಡ್ Vs ಸಂಯೋಜಿತ ಕಲಿಕೆ
ಉದಯೋನ್ಮುಖ ಕಲಿಕಾರ್ಥಿಗಳ ಒಂದು ಗುಂಪನ್ನು ಅಭಿವೃದ್ಧಿಪಡಿಸಲು ಪರದೆಯ(ಸ್ಕ್ರೀನ್) ಮೂಲಕ ಶಿಕ್ಷಣದ ವ್ಯವಸ್ಥೆ
ವಿದ್ಯಾರ್ಥಿಗಳು ತಮ್ಮ ಕ್ಯಾಮೆರಾಗಳನ್ನು ಆನ್ ಮಾಡಿ ಇಡಲು ಪ್ರೋತ್ಸಾಹಿಸುವ ತಂತ್ರಗಳು
ತಂತ್ರಜ್ಞಾನವು ಏಳು ವಿಧಾನಗಳಿಂದ ಶಿಕ್ಷಕರ ಬೋಧನಾ ತಂತ್ರಗಳನ್ನು ಸುಧಾರಣೆಗೊಳಿಸಿದೆ
ದೂರ ಶಿಕ್ಷಣ – ಮಕ್ಕಳು ಕೇಂದ್ರೀಕರಿಸಲು ಮತ್ತು ತೊಡಗಿಸಿಕೊಳ್ಳಲು ಸಹಾಯ ಮಾಡುವ 8 ಟಿಪ್ಗಳು.