ಶಿಕ್ಷಣಕ್ಕಾಗಿ ಪಿ.ಸಿ. : ತಂತ್ರಜ್ಞಾನದೊಂದಿಗೆ ಉತ್ತಮ ಜೀವಶಾಸ್ತ್ರವನ್ನು ಕಲಿಸಿ

 

ಜೀವಶಾಸ್ತ್ರವು,ವಿಜ್ಞಾನ ಅಧ್ಯಯನದಲ್ಲಿ ಅತ್ಯಗತ್ಯ ಅಂಶವಾಗಿದೆ ಮತ್ತು ಜೀನ್ ಗಳಿಗೆ ಸಂಬಂಧಿಸಿದ, ಪರಿಸರ ವಿಜ್ಞಾನ ಮತ್ತು ಆರೋಗ್ಯ ನಂತಹ ಹೇರಳವಾದ ವಿಷಯಗಳನ್ನು ಒಳಗೊಂಡಿದೆ. ಈ ವಿಷಯವು ಯಾವುದೇ ವಿದ್ಯಾರ್ಥಿಗೆ ತೀವ್ರ ಆಸಕ್ತಿಯ ಸಾಮರ್ಥ್ಯವನ್ನು ತಂದು ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ, ಪೌಷ್ಟಿಕತೆ ಮತ್ತು ಆರೋಗ್ಯದಂತಹ ಅಧಿಕ ವೃತ್ತಿ ಕ್ಷೇತ್ರದಲ್ಲಿ ಅಡಿಗಲ್ಲನ್ನು ಸ್ಥಾಪಿಸಿದೆ. ಇದರಲ್ಲಿ ಸಾಕಷ್ಟು ಕಲಿಯುವ ವಿಷಯ ಲಭ್ಯವಿದ್ದರೂ ಸಹ, ಸಪ್ಪೆಯ ಅಡಕಗಳು ಮತ್ತು ಬೋಧನೆಯ ಶೈಲಿ ವಿಧಾನದಿಂದಾಗಿ ವಿದ್ಯಾರ್ಥಿಗಳು ಆಗಾಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ಒಬ್ಬ ಶಿಕ್ಷಕರಾಗಿ, ವಿದ್ಯಾರ್ಥಿಗಳು ತರಗತಿಯಲ್ಲಿ ಆಸಕ್ತಿಪೂರ್ಣವಾಗಿ ಕಲಿಯಲು ಸಾಕಷ್ಟು ಮಾರ್ಗಗಳಿವೆ. [1] ಟೂಲ್ಸ್ ಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಅಳವಡಿಸಿಕೊಂಡು ಕಲಿಸುವುದರ ಮೂಲಕ ದೀರ್ಘ ಕಾಲದವರೆಗೆ ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಸೆಳೆದು ಅವರನ್ನು ನಿರತರಾಗಿರಿಸಬಹುದು. [2]

 

1. ಇಂಟರ್ ಆಕ್ಟಿವ್ ಬಯೋಲಜಿ

ಇಂಟರ್ ಆಕ್ಟಿವ್ ಬಯೋಲಜಿ ಇತರೆ ವಿಷಯದಂತೆ ಕಲಿಸುವ ಸಂಪನ್ಮೂಲಗಳಲ್ಲಿ ಒಂದು. ವೆಬ್ ಸೈಟ್ ನಲ್ಲಿ ವೀಡಿಯೋ ಅನ್ನು ಪ್ರದರ್ಶಿಸುವುದರಿಂದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಬೋಧಿಸಿದ್ದನ್ನು ನೇರವಾಗಿ ವೀಕ್ಷಿಸುವ ಸಂದರ್ಭವನ್ನು ಒದಗಿಸುತ್ತದೆ. ಪ್ರತಿಯೊಂದು ವೀಡಿಯೊ ಲಿಂಕ್ಸ್ ನೊಂದಿಗೆ ಸಂಕ್ಷಿಪ್ತವಾಗಿ ಮುಖ್ಯವಾಗಿ ಓದುವ ಸಾಮಗ್ರಿಯನ್ನು ಮತ್ತು ಉತ್ತಮ ಭಾಗದೊಂದಿಗೆ ಕೂಡಿರುತ್ತದೆ. ಪ್ರತಿಯೊಂದು ವೀಡಿಯೋ ನಲ್ಲಿ ಲೆಸ್ಲಿ ಸಾಮ್ಯುಲ್, ಜೀವಶಾಸ್ತ್ರದ ಕ್ಷೇತ್ರದಲ್ಲಿ ಪ್ರಕಾಶಿತ ಸಂಶೋಧಕರು ಅವರಿಂದ ಕಲಿಸಲಾದ ನಿಜವಾದ ಪಾಠವನ್ನು ವೀಕ್ಷಿಸಬಹುದು.

 

2. ಸೆರೆನ್ ಡಿಪ್ ಸ್ಟುಡಿಯೋ

ಮನರಂಜನೆಯ ಸಮಯದಲ್ಲಿ ಅರಿವನ್ನು ಪರೀಕ್ಷಿಸಲು ಗೇಮ್ ಗಳು. ಉತ್ಕೃಷ್ಟ ಸಾಧನವಾಗಿರುತ್ತದೆ. ಇವು ಸ್ಪರ್ಧಾತ್ಮಕ ಅಂಶವನ್ನು ತರಗತಿ ಕೊಠಡಿಯಲ್ಲಿ ತಂದು ಉತ್ಸಾಹವನ್ನು ಸೃಷ್ಟಿಸುತ್ತದೆ. ಪ್ರತಿಯೊಂದು ವಿಷಯವು ಗೇಮ್ ನೊಂದಿಗೆ ಸೆರೆನ್ ಡಿಪ್ ಸ್ಟುಡಿಯೋ ದಲ್ಲಿ ಒಳಗೊಂಡು ವಿದ್ಯಾರ್ಥಿಗಳು ತಾವು ಕಲಿತದ್ದನ್ನು ಯಾವುದೇ ಒತ್ತಡ ತರುವ ಪರೀಕ್ಷೆಯಂತೆ ಇರದೇ ಸರಳವಾಗಿ ಕಲಿಯಬಹುದಾಗಿದೆ. ಇದಲ್ಲದೇ,ಪ್ರಭಾವಯುಕ್ತವಾಗಿ ಕಲಿಸುವುದಕ್ಕೆ ವೆಬ್ ಸೈಟ್ ನಲ್ಲಿ ಅನುದೇಶಯುಕ್ತ ಸಲಹೆಗಳು, ಪೂರ್ವಸಿದ್ಧತೆ ಮತ್ತು ಅನುಸರಿಸುವ ಚಟುವಟಿಕೆಗಳು ಒಳಗೊಂಡಿವೆ.

 

3. ಬಯೋಲಜಿ ಕಾರ್ನರ್

ತರಗತಿಯಲ್ಲಿಯಾವುದೇ ಸಣ್ಣ ಗ್ರೂಪ್ ಚಟುವಟಿಕೆ ಇರಬಹುದು, ಅಥವಾ ಗೊಂದಲಯುಕ್ತ ವಿಷಯವನ್ನು ಪರೀಕ್ಷಿಸಲು ಅಥವಾ ಗೃಹ ಕಾರ್ಯ ಚಟುವಟಿಕೆ ಇರಬಹುದು, ವಿದ್ಯಾರ್ಥಿಗಳು ಜೀವ ಶಾಸ್ತ್ರದಲ್ಲಿ ಆಸಕ್ತಿ ಹೊಂದಲು ಶಿಕ್ಷಕರಿಗೆ ಸತತವಾಗಿ ವರ್ಕ್ ಶೀಟ್ ಗಳ ಪೂರೈಕೆಯ ಅಗತ್ಯವಿರುತ್ತದೆ. ಬಯೋಲಜಿ ಕಾರ್ನರ್ ಒಂದು ಸಂಪನ್ಮೂಲ,ಇದರಲ್ಲಿ ಶರೀರ ವಿಜ್ಞಾನದಿಂದ ಪರಿಸರ ವಿಜ್ಞಾನದವರೆಗಿನ ವಿಭಿನ್ನ ವಿಷಯದಲ್ಲಿ ವರ್ಕ್ ಶೀಟ್ ಗಳೊಂದಿಗೆ ಪಡೆಯಬಹುದು. ಈ ವೆಬ್ ಸೈಟ್ &ldquoಸುಲಭಯುಕ್ತ ವಿಜ್ಞಾನ ವಿಧಾನ&rdquo ಭಾಗದಲ್ಲಿ ಪಾಠದ ಯೋಜನೆಯೊಂದಿಗೆ ಹೆಜ್ಜೆ ಹೆಜ್ಜೆಗೂ ಪ್ರಯೋಗದ ಮಾರ್ಗದರ್ಶನಗಳನ್ನು ಕೂಡ ಒದಗಿಸುತ್ತದೆ.

ಟೂಲ್ಸ್ ಗಳು ಶಿಕ್ಷಕರುಗಳಿಗೆ ತರಗತಿಕೋಣೆಯನ್ನು ಸಕ್ರಿಯವಾಗಿ ಇರಿಸಲು ನೆರವಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಉತ್ತೇಜನ ಮತ್ತು ಮಾಹಿತಿಯನ್ನು ಪಡೆಯುವುದರಿಂದ, ವಿದ್ಯಾರ್ಥಿಗಳು ಮಾಹಿತಿಯನ್ನು ಮಾತ್ರ ಗ್ರಹಿಸಿಕೊಳ್ಳುವುದರ ಬದಲು ಕಲಿಯುವ ಪ್ರಕ್ರಿಯೆಯಲ್ಲಿ ತಾವು ಸಕ್ರಿಯವಾಗಿ ಭಾಗವಹಿಸುತ್ತಿರುದನ್ನು ಕಂಡುಕೊಳ್ಳುತ್ತಾರೆ.

ಜೀವಶಾಸ್ತ್ರ, ನಿಮ್ಮ ವಿದ್ಯಾರ್ಥಿಯ ಇಷ್ಟವಾದ ವಿಷಯ ಕೂಡ ಆಗಬಹುದು!