ಇಂದಿನ ದಿನಗಳಲ್ಲಿ ಮತ್ತು ಯುಗದಲ್ಲಿ ಭೂಗೋಳ ಶಾಸ್ತ್ರವನ್ನು ಪರಿಣಾಮಕಾರಿಯಾಗಿ ಕಲಿಸಲು, ಅದರಲ್ಲಿಯೂ ಜಾಗತೀಕರಣ ಮತ್ತು ವಿಶ್ವದ ಆರ್ಥಿಕತೆಯ ಮೇಲೆ ಹೆಚ್ಚು ಗಮನವನ್ನು ಹರಿಸುತ್ತಿರುವ ಈ ದಿನಗಳಲ್ಲಿ ಇದು ಅತ್ಯವಶ್ಯಕವಾಗಿದೆ. ಇಂದಿನ ಮಕ್ಕಳೇ ಮುಂದಿನ ಮುಖಂಡರು ಮತ್ತು ವಿಶ್ವದ ಘಟನೆಗಳನ್ನು ಅವಲೋಕಿಸಲು ಮತ್ತು ದೃಢವಾದ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಸಮರ್ಥರಾಗಿಸಲು ಇದು ಅತ್ಯಂತ ಮುಖ್ಯವಾಗಿದೆ.
ದುರದೃಷ್ಟವಶಾತ್, ಹೆಚ್ಚಿನ ವಿದ್ಯಾರ್ಥಿಗಳು ಭೂಗೋಳ ಶಾಸ್ತ್ರವನ್ನು ಕಲಿಯುವಲ್ಲಿ ಆಯಾಸ ಮತ್ತು ಶ್ರಮ ಪಡುತ್ತಾರೆ. ವಿಷಯದಲ್ಲಿ ಅವರಿಗೆ ಆಸಕ್ತಿಯನ್ನು ಮೂಡಿಸಲು ಭೂಗೋಳ ಶಾಸ್ತ್ರ ಶಿಕ್ಷಕರು ಪಠ್ಯ ಪುಸ್ತಕದ ಹೊರಗಿನ ಸಲಕರಣೆಗಳನ್ನು ಮತ್ತು ವಿಧಾನಗಳನ್ನು ಉಪಯೋಗಿಸಿಕೊಳ್ಳಬೇಕು.
ವಿಶ್ವದ ರಾಜಧಾನಿಗಳನ್ನು ಕಲಿಯುವುದು ಗಣಿತದ ಗುಣಾಕಾರದ ಕೋಷ್ಟಕಗಳನ್ನು ಕಲಿಯುವಷ್ಟೇ ಬೇಸರವನ್ನು ತರಿಸುತ್ತದೆ. ಫ್ರೀ ರೈಸ್ ಎನ್ನುವುದು ಲಾಭದಾಯಕವಲ್ಲದ ವೆಬ್ಸೈಟ್ ಆಗಿದೆ ಇದನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯು ಹೊಂದಿದೆ. ಈ ವೆಬ್ಸೈಟ್ ಸೃಜನಾತ್ಮಕ ಆಟಗಳನ್ನು ಒದಗಿಸುತ್ತದೆ ಇದು ವಿದ್ಯಾರ್ಥಿಗಳಿಗೆ ವಿಶ್ವದ ರಾಜಧಾನಿಗಳ ಮತ್ತು ಧ್ವಜಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿಯೊಂದು ಸರಿಯಾದ ಉತ್ತರಕ್ಕೆ 1 ಕಾಳು ಆಹಾರವನ್ನು ಪ್ರಪಂಚದ ಅತೀ ಬಡವರಿಗೆ ನೀಡಲಾಗುತ್ತದೆ. ನೀವು ಈ ಪ್ರಯತ್ನದ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೆ ತಿಳಿಸಿರಿ ಅವರಿಗೆ ಭಾಗವಹಿಸಲು ಮತ್ತು ಭೂಗೋಳ ಶಾಸ್ತ್ರವನ್ನು ಕಲಿಯಲು ಉತ್ತೇಜಿಸಿರಿ. ಇಲ್ಲಿ ಎಲ್ಲವೂ ಗೆಲುವೇ!
ಭೂಗೋಳ ಶಾಸ್ತ್ರವನ್ನು ಕಲಿಸುವಾಗ ನೀವು ನಿಮ್ಮ ವಿದ್ಯಾರ್ಥಿಗಳಿಗೆ ದೇಶಗಳ, ರಾಜ್ಯಗಳ, ನಗರಗಳ ಮತ್ತು ಪ್ರಾಂತ್ಯಗಳ ಬಗ್ಗೆ ಕಲಿಸುವಿರಿ. ನಿಮ್ಮ ವಿದ್ಯಾರ್ಥಿಗಳಿಗೆ ಅವುಗಳ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಕಲಿಸಲು ನೀವು ಅವರಿಗೆ ಪ್ರವಾಸೋದ್ಯಮದ ಪ್ರೆಸೆಂಟೇಶನ್ ಮಾಡಬೇಕೆಂದು ಅವರಿಗೆ ತಿಳಿಸಬಹುದು. ಈ ಚಟುವಟಿಕೆಯಲ್ಲಿ, ವಿದ್ಯಾರ್ಥಿಗಳಿಗೆ ವಿಶ್ವದ ಒಂದು ಪ್ರದೇಶವನ್ನು (ದೇಶ, ಖಂಡ, ನಗರ ಇತ್ಯಾದಿ) ಸಂಶೋಧನೆಗೆ ನೀಡಲಾಗುತ್ತದೆ. ಅವರು ಅದಕ್ಕಾಗಿ ಅವರಿಗೆ ನೀಡಲಾಗಿರುವ ಪ್ರದೇಶದ ಒಂದು ಪ್ರೆಸೆಂಟೇಶನ್, ಪೋಸ್ಟರ್ ಅಥವಾ ಬ್ರೌಚರ್ ಅನ್ನು ತಾವು ಕಲಿತಿರುವುದನ್ನು ಪ್ರದರ್ಶನ ಮಾಡಲು ವಿನ್ಯಾಸವನ್ನು ರಚಿಸಬೇಕು.
ಇದು ಶಿಕ್ಷಕರಿಗೆ ನಿಜವಾದ ಗೇಮ್ ಚೇಂಜರ್ ಆಗಿದೆ. ಇದನ್ನು ಸಾಮಾನ್ಯವಾಗಿ ಗೂಗಲ್ ಮ್ಯಾಪ್ ಅನ್ನು ಉಪಯೋಗಿಸಿ ಮಾಡಬಹುದಾಗಿದೆ, ಆದರೂ ಕೆಲವೇ ಶಿಕ್ಷಕರು ಮಾತ್ರ ಈ ಅತ್ಯದ್ಭುತವಾದ ಸಾಧ್ಯತೆಗಳ ಲಭ್ಯತೆಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ನೀವು ಪ್ರವಾಸಗಳನ್ನು ರಚಿಸಿಕೊಳ್ಳಬಹುದು ಮತ್ತು ನೀವು ಮಾರ್ಗಗಳನ್ನು ಕಂಡುಕೊಳ್ಳಬಹುದು ಹಾಗೂ ವಿವಿಧ ರೀತಿಯ ಭೂಪಟಗಳನ್ನು ನೀವು ಹೋಲಿಕೆ ಮಾಡಬಹುದು – ಇವೆಲ್ಲವನ್ನು ಒಂದೇ ಪ್ಲಾಟ್ಫಾರ್ಮ್ನಲ್ಲಿ ಮಾಡಬಹುದಾಗಿದೆ.
ಗೂಗಲ್ ಅರ್ಥ್ ಖಂಡಗಳನ್ನು, ದೇಶಗಳನ್ನು , ನಗರಗಳನ್ನು ಮತ್ತು ಸಾಗರಗಳನ್ನು ಕಂಡುಹಿಡಿಯಲು ಅತ್ಯುತ್ತಮವಾದ ಸಲಕರಣೆಯಾಗಿದೆ. ಗೂಗಲ್ ಅರ್ಥ್ ಅನ್ನು ಉಪಯೋಗಿಸುವುದು ಎಂದರೆ ಒಂದರ್ಥದಲ್ಲಿ ವಿಶ್ವದ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸುವುದಾಗಿದೆ. ನಂತರದಲ್ಲಿ ವಿದ್ಯಾರ್ಥಿಗಳು ಹೌದು ಅಥವಾ ಅಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು. ಹೌದು ಎಂದು ಉತ್ತರ ಬರುವ ಪ್ರತಿಯೊಂದು ಪ್ರಶ್ನೆಗೆ ನೀವು ಅದನ್ನು ಅವಲೋಕಿಸಲು ಸ್ವಲ್ಪ ಮಟ್ಟಿಗೆ ಝೂಮ್ ಔಟ್ ಮಾಡಬೇಕಾಗುತ್ತದೆ.
ನೀವು ಭೂಗೋಳ ಶಾಸ್ತ್ರವನ್ನು ಕಲಿಸಲು ಬೇರೆ ಯಾವುದಾದರೂ ಸಲಕರಣೆಯನ್ನು ಉಪಯೋಗಿಸಿರುವಿರಾ? #DellAarambh ಉಪಯೋಗಿಸಿ ಟ್ವಿಟ್ ಮಾಡಿ ಮತ್ತು ನಮಗೆ ತಿಳಿಯಪಡಿಸಿ!
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.
ಹೈಬ್ರಿಡ್ Vs ಸಂಯೋಜಿತ ಕಲಿಕೆ
ಉದಯೋನ್ಮುಖ ಕಲಿಕಾರ್ಥಿಗಳ ಒಂದು ಗುಂಪನ್ನು ಅಭಿವೃದ್ಧಿಪಡಿಸಲು ಪರದೆಯ(ಸ್ಕ್ರೀನ್) ಮೂಲಕ ಶಿಕ್ಷಣದ ವ್ಯವಸ್ಥೆ
ವಿದ್ಯಾರ್ಥಿಗಳು ತಮ್ಮ ಕ್ಯಾಮೆರಾಗಳನ್ನು ಆನ್ ಮಾಡಿ ಇಡಲು ಪ್ರೋತ್ಸಾಹಿಸುವ ತಂತ್ರಗಳು
ತಂತ್ರಜ್ಞಾನವು ಏಳು ವಿಧಾನಗಳಿಂದ ಶಿಕ್ಷಕರ ಬೋಧನಾ ತಂತ್ರಗಳನ್ನು ಸುಧಾರಣೆಗೊಳಿಸಿದೆ
ದೂರ ಶಿಕ್ಷಣ – ಮಕ್ಕಳು ಕೇಂದ್ರೀಕರಿಸಲು ಮತ್ತು ತೊಡಗಿಸಿಕೊಳ್ಳಲು ಸಹಾಯ ಮಾಡುವ 8 ಟಿಪ್ಗಳು.