ಶಿಕ್ಷಣಕ್ಕೆ ಪಿಸಿ: ಇತಿಹಾಸ ತಂತ್ರಜ್ಞಾನದೊಂದಿಗೆ ಅತ್ಯುತ್ತಮವಾಗಿ ಕಲಿಸಿರಿ

 

ಇತಿಹಾಸವನ್ನು ಕಲಿಸುವುದು ನಿಜವಾಗಿಯೂ ಸವಾಲಿನಿಂದ ಕೂಡಿರುತ್ತದೆ; ವೈಜ್ಞಾನಿಕ ಪರಿಕಲ್ಪನೆಗಳನ್ನು ಮತ್ತು ಗಣಿತದ ಆಲ್ಗೋರಿದಮ್‌ಗಳನ್ನು ಸಮರ್ಪಕವಾದ ಸಲಕರಣೆಗಳಿಂದ ವಿವರಿಸಬಹುದಾಗಿದೆ, ಆದರೆ ನೀವು ಇತಿಹಾಸವನ್ನು ತಲ್ಲೀನರಾಗಿರುವಂತೆ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಹೇಗೆ ಕಲಿಸುತ್ತೀರಿ?

ಸಾಂಪ್ರದಾಯಿಕವಾಗಿ, ಇತಿಹಾಸ ಎಂದರೆ ಯಾವಾಗಲೂ ದಿನಾಂಕಗಳನ್ನು ಮತ್ತು ಪ್ರಮುಖ ಘಟನೆಗಳನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದಾಗಿದೆ. ಆದರೆ ಅದು ಇನ್ನೂ ಹೆಚ್ಚಿನದಾಗಿರುತ್ತದೆ. ಸಮರ್ಪಕವಾದ ಸಲಕರಣೆಗಳು ಮತ್ತು ತಂತ್ರಜ್ಞಾನದ ಅತ್ಯುತ್ತಮ ಬಳಕೆಯಿಂದ ವಿದ್ಯಾರ್ಥಿಗಳಿಗೆ ಇತಿಹಾಸವು ಆಕರ್ಷಣೀಯ ವಿಷಯವಾಗಿರುತ್ತದೆ; ತರಗತಿಯ ಕೋಣೆಯಲ್ಲಿ ಅವರನ್ನು ಕಲ್ಪನೆಯನ್ನು ಸೆರೆಹಿಡಿಯುತ್ತದೆ ಮತ್ತು ತಲ್ಲೀನರಾರುವಂತೆ ಮಾಡುತ್ತದೆ.

ಈ ಕೆಳಕಂಡವುಗಳು ಇತಿಹಾಸವನ್ನು ಉತ್ತಮವಾಗಿ ಕಲಿಸಲು ಉಪಯೋಗಿಸುವ ಸಲಕರಣೆಗಳು ಮತ್ತು ವೆಬ್‌ಸೈಟ್‌ಗಳಾಗಿವೆ.

1. ಹೋರಾಟ ಮಾಡಿ – ವಿಡಿಯೋಗಳನ್ನು ಬಳಸಿ ಇತಿಹಾಸವನ್ನು ಮರುಸೃಷ್ಟಿ ಮಾಡಿ

ಮಕ್ಕಳು ಪುಸ್ತಕಗಳಲ್ಲಿ ಓದುವುದಕ್ಕಿಂತಲೂ ಹೆಚ್ಚಾಗಿ ಮತ್ತು ವಿಷಯಗಳನ್ನು ಮಾಡುವ ಮತ್ತು ನೋಡುವ ಮೂಲಕ ಹೆಚ್ಚಿನದನ್ನು ಕಲಿಯುತ್ತಾರೆ. ಇತಿಹಾಸದ ತರಗತಿಯಲ್ಲಿ ಯುದ್ಧಗಳ ಬಗ್ಗೆ ಓದುವುದರ ಬದಲಾಗಿ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಮರುಸೃಷ್ಟಿ ಮಾಡಿ. ವಿದ್ಯಾರ್ಥಿಗಳು ನಂತರದಲ್ಲಿ ಯುದ್ಧದ ವಿವಿಧ ಭಾಗಗಳನ್ನು ಹೈಲೈಟ್ ಮಾಡುವ ಮೂಲಕ ವಿಡಿಯೋದಲ್ಲಿ ನಿರ್ದೇಶಕರ ಪ್ರತಿಕ್ರಿಯೆಗಳನ್ನು ಸೇರಿಸಬಹುದು. ಶಿಕ್ಷಕರು ಆ ಡಿವಿಡಿಯನ್ನು ಇಟ್ಟುಕೊಳ್ಳಬಹುದು ಮತ್ತು ಅದನ್ನು ಮುಂದಿನ ವರ್ಷವೂ ತೋರಿಸಬಹುದು. ವಿದ್ಯಾರ್ಥಿಗಳೂ ಸಹ ಪ್ರತಿ ವರ್ಷ ಹೊಸ ಯುದ್ಧ ಅಥವಾ ಘಟನೆಯ ಸಿನಿಮಾ ಮಾಡಬಹುದು.

2. “ಫ್ರೆಂಡಿಂಗ್” ಗಾಂಧಿ

ಶಿಕ್ಷಕರು ಇತಿಹಾಸದಲ್ಲಿನ ಅತ್ಯಂತ ಪ್ರಮುಖ ಜನರ ಜೀವನವನ್ನು ರಚಿಸಲು ಫೇಸ್‌ಬುಕ್‌ ಉಪಯೋಗಿಸಿಕೊಳ್ಳಬಹುದು ಮತ್ತು ವಿದ್ಯಾರ್ಥಿಗಳಿಗೆ ಅವುಗಳ ಸ್ನೇಹಿತರಾಗಲು ಕೇಳಿಕೊಳ್ಳಿ. ಮಕ್ಕಳಿಗೆ ಸಾಮಾನ್ಯವಾಗಿ ಐತಿಹಾಸಿಕ ಮಾಹಾಪುರುಷರ ಕಥನವು, ಅದರಲ್ಲೂ ವಿಶೇಷವಾಗಿ ಪಠ್ಯಪುಸ್ತಕದಲ್ಲಿರುವುದನ್ನು ಕೇವಲ ಓದಿದಾಗ ಬೋರಾಗಿರುತ್ತದೆ. ಆದಾಗ್ಯೂ, ಈ ಮಾಹಾಪುರುಷರ ವ್ಯಕ್ತಿತ್ವಗಳನ್ನು ಸೃಜನಶೀಲತೆಯೊಂದಿಗೆ ಹೆಚ್ಚು ನೈಜವಾಗಿರುವಂತೆಯೂ ಮಕ್ಕಳಿಗೆ ಇತಿಹಾಸದ ಘಟನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸುಲಭ ಸಾಧ್ಯಗೊಳಿಸುತ್ತದೆ.   

ರಾಷ್ಟ್ರಪಿತರೊಂದಿಗೆ ಸ್ನೇಹಿತರಾಗುವುದನ್ನು ಊಹಿಸಿಕೊಳ್ಳಿರಿ!

3. ವಿಕಿ ತರಗತಿಕೋಣೆಗಳು

ನೀವು ನಿಮ್ಮ ವಿದ್ಯಾರ್ಥಿಗಳು ಆಧುನಿಕ, ಸುಲಭವಾಗಿ ಉಪಯೋಗಿಸಬಹುದಾದ ಪರಿಸರಗಳಲ್ಲಿ ಇತಿಹಾಸವನ್ನು ಕಲಿಯಲು ಉತ್ಸಾಹಭರಿತರನ್ನಾಗಿ ಮಾಡಬಹುದು. ವಿದ್ಯಾರ್ಥಿಗಳು ಒಂದು ಐತಿಹಾಸಿಕ ಘಟನೆಯ ವಿಕಿಯನ್ನು ರಚಿಸಲು ತಿಳಿಸಿ. ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ / ವಿದ್ಯಾರ್ಥಿಗಳ ಗುಂಪಿಗೆ ಒಂದು ಘಟನೆಯ ಭಾಗವೊಂದರ ಸಂಕ್ಷೇಪವನ್ನು ರಚಿಸಲು ತಿಳಿಸಿರಿ. ಉದಾಹರಣೆಗೆ, ಎರಡನೇ ಮಹಾಯುದ್ಧದಲ್ಲಿ ಜಪಾನಿಯರು ಹವಾಯಿ ಮೇಲೆ ಆಕ್ರಮಣ ನಡೆಸಿರುವುದು, ಇನ್ನೊಂದು ಗುಂಪು ಘಟನೆಯ ಇನ್ನೊಂದು ಭಾಗದ ಮೇಲೆ ಕೆಲಸ ಮಾಡಲು ತಿಳಿಸಿ. ಮತ್ತು ಈ ಎಲ್ಲಾ ವಿಭಿನ್ನ ಭಾಗಗಳನ್ನು ಸೇರಿಸಿದಾಗ ಸಂಪೂರ್ಣ ನೋಟ ಅರಿವಾಗುತ್ತದೆ, ನಿಮ್ಮ ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿರುವುದನ್ನು ನೀವು ಕಾಣುವಿರಿ!

4. ನ್ಯಾಶನಲ್ ಜಿಯಾಗ್ರಫಿಯಿಂದ ಸೃಜನಶೀಲ ಭೂಪಟಗಳು

ಸೃಜನಶೀಲ ಭೂಪಟ ಎಂದರೆ ಇದೊಂದು ವೆಬ್ ಆಧಾರಿತವಾದ ಭೂಪಟವಾಗಿದ್ದು, ಇದು ಪ್ರದೇಶದ ಗುರುತುಗಳಲ್ಲಿ ಕ್ಲಿಕ್ ಮಾಡಬಹುದಾದದ್ದಾಗಿರುತ್ತದೆ. ಕ್ಲಿಕ್ ಮಾಡಿದಾಗ ಈ ಗುರುತುಗಳು ಸ್ಥಳಕ್ಕೆ ಸಂಬಂಧಿಸಿದ ಪಠ್ಯ, ಚಿತ್ರಗಳು, ವಿಡಿಯೋಗಳು ಇವುಗಳ ಜೊತೆಯಲ್ಲಿ ಬಾಹ್ಯ ಸೈಟ್‌ಗಳಿಗೆ ಇರುವ ಲಿಂಕ್‌ಗಳೊಂದಿಗೆ ಮಾಹಿತಿಯ ಬಕ್ಸ್ ಅನ್ನು ತೋರಿಸುತ್ತವೆ. ಶಿಕ್ಷಕರು ಒಂದು ನಿರ್ದಿಷ್ಟ ನಗರ ಅಥವಾ ದೇಶದ ಮೇಲೆ ಆಧಾರಿತವಾದ ಐತಿಹಾಸಿಕ ಘಟನೆಯನ್ನು ಕಲಿಸಿದ ನಂತರ ಸೃಜನಶೀಲ ಭೂಪಟಗಳನ್ನು ವಿದ್ಯಾರ್ಥಿಗಳು ರಚಿಸುವಂತೆ ಮಾಡಬಹುದಾಗಿದೆ. ಒಂದು ಸರಳವಾದ ಚಟುವಟಿಕೆ; ಇದು ಅವರು ಪಾಠವನ್ನು ಅರ್ಥಮಾಡಿಕೊಳ್ಳುದನ್ನು ಗಟ್ಟಿಗೊಳಿಸಲು ಮತ್ತು ಘಟನೆಗಳು ಹೇಗೆ ನಡೆದವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ತಂತ್ರಜ್ಞಾನವು ಶಿಕ್ಷಕರಿಗೆ ವಿವಿಧ ಬಗೆಯ ಕಲಿಕೆಯನ್ನು ಕಂಡುಕೊಳ್ಳಲು ಪರಿಣಾಮಕಾರಿಯಾದ ಮಾರ್ಗಗಳನ್ನು ಒದಗಿಸುತ್ತದೆ ಮತ್ತು ಬಹು ವಿಧಾನಗಳ ಮೂಲಕ ವಿದ್ಯಾರ್ಥಿ ಅರ್ಥಮಾಡಿಕೊಂಡಿರುವುದನ್ನು ಅಳೆಯಲು ಸಹಾಯ ಮಾಡುತ್ತದೆ. ಇತಿಹಾಸವನ್ನು ಕಲಿಸಲು ಈ ವಿಧಾನಗಳನ್ನು ಅನುಸರಿಸಿ ಮತ್ತು ಇದು ಶೀಘ್ರದಲ್ಲಿಯೇ ಅವರ ಅಚ್ಚುಮೆಚ್ಚಿನ ವಿಷಯವಾಗಲಿದೆ. #DellAarambh ಬಳಸಿ ಟ್ವೀಟ್ ಮಾಡಿರಿ ಮತ್ತು ನಿಮ್ಮ ಅನುಭವವನ್ನು ನಮಗೆ ತಿಳಿಸಿರಿ!