ಶಿಕ್ಷಣಕ್ಕಾಗಿ ಪಿ.ಸಿ. : ತಂತ್ರಜ್ಞಾನದೊಂದಿಗೆ ಉತ್ತಮ ಭೌತಶಾಸ್ತ್ರವನ್ನು ಕಲಿಸಿ

ಫಿಸಿಕ್ಸ್ ಆನ್ ಲೈನ್ ಗಾಗಿ ಹುಡುಕಿ

ನೀವು – ಭೌತಶಾಸ್ತ್ರ ಪ್ರಶ್ನೆಗಳನ್ನು&rdquo ಅತ್ಯಧಿಕವಾಗಿ ಹುಡುಕಾಡುವ ಪ್ರಶ್ನೆಗಳಲ್ಲಿ ಒಂದಾಗಿದ್ದು,ವಿಷಯವನ್ನು ತಿಳಿದುಕೊಳ್ಳಲು ಮತ್ತು ಆಳವಾಗಿ ಅರಿತುಕೊಳ್ಳಲು ಬೇಡಿಕೆ ಕಂಡುಬರುತ್ತದೆ. ಆದ್ದರಿಂದ, ಒಬ್ಬ ಶಿಕ್ಷಕರಾಗಿ ನೀವು ಪಿ.ಸಿ. ಯನ್ನು ಬಳಸಿಕೊಂಡು ಭೌತಶಾಸ್ತ್ರವನ್ನು ಉತ್ತಮವಾಗಿ ಕಲಿಸಲು ಏನು ಮಾಡುವಿರಿ?

 

1. ಭೌತಶಾಸ್ತ್ರ ತರಗತಿಕೊಠಡಿ

ಮುಖ್ಯವಾಗಿಪಾಠ್ಯಕ್ರಮದೊಂದಿಗೆ ಟೂಲ್ ಕಿಟ್ ಯೋಜನೆಗಳು, ಸಿಮುಲೇಷನ್ಸ್, ಚಟುವಟಿಕೆ ವಿಚಾರಗಳು, ಮತ್ತಷ್ಟು ಓದುವುದು, ವರ್ಕ್ ಶೀಟ್ ಗಳು ಮತ್ತು ಕ್ವಿಜ್ ಗಳು,ಎಲ್ಲವೂ ಭೌತಶಾಸ್ತ್ರ ಶಿಕ್ಷಕರಿಗೆ ಭೌತಶಾಸ್ತ್ರ ತರಗತಿ ಕೊಠಡಿಯಲ್ಲಿ ಆವಶ್ಯಕ. ಪ್ರತಿಯೊಂದು ಪಾಠಕ್ಕೆ ಸಂಪನ್ಮೂಲದೊಂದಿಗೆ ನಿಗದಿತ ಯೊಜನೆಯು ತ್ವರಿತವಾಗಿ ವೀಕ್ಷಿಸಲು / ಅರಿಯುವುದರ ಜೊತೆಗೆ ಸಮಯದ ಉಳಿತಾಯ ಮತ್ತು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಉತ್ಸಾಹದಿಂದ ಇರಿಸುತ್ತದೆ.

 

2. ಪಿ ಎಚ್ ಇ ಟಿ ಸಿಮುಲೇಶನ್ಸ್

ಸಿಮುಲೇಶನ್ಸ್, ತರಗತಿಯಲ್ಲಿ ಪ್ರಸ್ತುತಪಡಿಸಲು ಅತ್ಯುತ್ತಮವಾಗಿದ್ದು ವಿದ್ಯಾರ್ಥಿಗಳು ಸಿದ್ಧಾಂತಗಳು ಜೀವನದಲ್ಲಿ ಬರುವುದನ್ನು ಅರಿತು ಮತ್ತು ಅದನ್ನು ದೈನಂದಿನ ವಿಷಯಕ್ಕೆ ಸಂಬಂಧಿಸುತ್ತಾರೆ. ಪಿ ಎಚ್ ಇ ಟಿವಿಭಿನ್ನ ವಿಷಯದಲ್ಲಿ ಸಿಮುಲೇಶನ್ಸ್ ನ್ನು ಹೊಂದಿದ್ದು ಮತ್ತು ಎಲ್ಲಾ ವಯಸ್ಕರಿಗೆ ಕಲಿಯುವ ಮಟ್ಟವನ್ನು ಒದಗಿಸುತ್ತದೆ. ಹೆಚ್ಚಾಗಿ, ಆನ್ ಲೈನ್ ಸಿಮುಲೇಶನ್ ತರಗತಿಯ ಉಪಯೋಗಕ್ಕಾಗಿ ಡೌನ್ ಲೋಡ್ ಮಾಡಲು ಲಭ್ಯವಿರುತ್ತದೆ ಮತ್ತು ಇದು ಪಾಠವನ್ನು ಕಲಿಸುವಾಗ ಲೋಡಿಂಗ್ ಸಮಯವನ್ನು ಉಳಿಸುತ್ತದೆ.

 

3. ಫಿಸಿಕ್ಸ್ ಸೆಂಟ್ರಲ್

ಕಥೆಗಳು,ಯಾವುದಾದರೂ ಹೊಸತನ್ನು ಕಲಿಯುವುದಕ್ಕೆ ಅತ್ಯಂತ ಆನಂದಕರ ಮಾರ್ಗಗಳಲ್ಲಿ ಒಂದು ಮತ್ತು ಜೀವನದಲ್ಲಿ ಸಂಕೀರ್ಣ ಸಿದ್ಡಾಂತಗಳು ಬರುವುದನ್ನು ಕಾಣಬಹುದು. ಇವು ಸೂಪರ್ ಹೀರೋ ಕಾಮಿಕ್ಸ್ ಆಗಿ ಇದ್ದರೆ ಮತ್ತಷ್ಟು ಉತ್ತಮವಾಗಿರುತ್ತದೆ. ಫಿಸಿಕ್ಸ್ ಸೆಂಟ್ರಲ್ಸ್ ಕ್ವೆಸ್ಟ್ ಸೀರಿಸ್ ಶಿಕ್ಷಕರುಗಳಲ್ಲಿ ಇಷ್ಟಕರವಾಗಿದ್ದು ಇದು ಸೈದ್ಧಾಂತಿಕ ಅರಿವನ್ನು ಮನರಂಜಕ ರೀತಿಯಲ್ಲಿ ವಿವರಿಸಿ ದೀರ್ಘ ಕಾಲದವರೆಗೆ ಸಿದ್ಧಾಂತಗಳು ವಿದ್ಯಾರ್ಥಿಗಳ ಮನದಲ್ಲಿ ಉಳಿಯಲು ನೆರವಾಗುತ್ತದೆ.

 

4. ನಾಸಾ ಸ್ಪೇಸ್ ಪ್ಲೇಸ್

ನಿಮ್ಮ ವಿದ್ಯಾರ್ಥಿಗಳು ತಾವು ದೊಡ್ಡವರಾದ ಮೇಲೆ ಏನಾಗಲು ಇಷ್ಟಪಡುತ್ತಾರೆ ಎಂದು ಪ್ರಶ್ನಿಸಿ. ಬಹಳಷ್ಟು ಸಾಮಾನ್ಯ ಉತ್ತರ ಗಗನಯಾತ್ರಿ ಎಂಬುದಾಗಿರುತ್ತದೆ. ತಿಳಿದಿರುವಂತೆ, ಆಕಾಶದಲ್ಲಿ ಸಾಕಷ್ಟು ಆಕರ್ಷಣೆ ಇದ್ದು,ಐ ಎಸ್ ಆರ್ ಒ ನ ಸಾಧನೆಗಳು ಈಗಲೂ ಮನೆಮಾತಾಗಿದೆ. ನಾಸಾ ಸ್ಪೇಸ್ ಪ್ಲೇಸ್ಬಳಿ ಬೇಸಿಕ್ ಕಾಂಪೊನೆಂಟ್ಸ್ ನೊಂದಿಗೆ ಸರಳಗೊಳಿಸಲು ವೀಡಿಯೋಗಳು ಮತ್ತು ಪ್ರಯೋಗಗಳು ಇದೆ. ಇಲ್ಲದಿದ್ದರೆ ಸಿದ್ಧಾಂತಗಳನ್ನು ಅರಿತುಕೊಳ್ಳಲು ಕಷ್ಟಕರ.

ಭೌತಶಾಸ್ತ್ರ ಒಂದು ವಿಸ್ತೃತ ವಿಷಯವಾಗಿಇದ್ದು ಹೆಚ್ಚಿನ ಆಸಕ್ತ ವಿದ್ಯಾರ್ಥಿಗಳಿಗೆ ಗುರಿಯಾಗಿದ್ದು ಮತ್ತು ಮತ್ತಷ್ಟು ಪ್ರಶ್ನೆಗಳೊಂದಿಗೆ ಹೊರಬರುತ್ತದೆ. ಒಬ್ಬ ಶಿಕ್ಷಕರಾಗಿ,ನೀವು ಬಹಳಷ್ಟು ಉಪಯೋಗಿಸಬಲ್ಲ ದೆಂದರೆ ಪಾಠದ ಯೋಜನೆ ಸಂಶೋಧನೆಯಿಂದ ಹಿಡಿದು ನಿಜವಾಗಿ ತರಗತಿಯಲ್ಲಿ ಸಿದ್ಧಾಂತವನ್ನು ಕಲಿಸುವುದು ಪಿ.ಸಿ. ಯಲ್ಲಿ ಲಭಿಸಬೇಕು.[1] ಶಾಲೆಗಳಲ್ಲಿ ಭೌತಶಾಸ್ತ್ರದ ನೂತನ ಶೈಲಿಯ ಅಭಿರುಚಿಯನ್ನು ನಾವೆಲ್ಲರೂ ಆರಂಭಿಸೋಣ. ಇದೊಂದು ಪಿ.ಸಿ.ಯ ಕೊಡುಗೆ!