ಪಿಸಿ ಪ್ರೊ ಸರಣಿಗಳು: ನಿಮ್ಮ ಮಂಡನೆಗಳನ್ನು ಎದ್ದು ಕಾಣುವಂತೆ ಹೇಗೆ ಮಾಡಬಹುದು!

 
 

‘ಒಂದು ಚಿತ್ರ ಸಾವಿರ ಮಾತನ್ನು ಹೇಳುತ್ತದೆ’ ಎಂಬ ಹಳೆಯ ಗಾದೆ ಮಾತಿನಂತೆ

ನಮ್ಮ ಕಣ್ಣಿಗೆ ಕಾಣುವುದು ನಮ್ಮ ಮೇಳೆ ಗಾಢವಾದ ಪರಿಣಾಮ ಬೀರುತ್ತದೆ- ಅದಕ್ಕಾಗಿಯೇ ಸೂಕ್ತವಾದ ಚಿತ್ರಗಳನ್ನು ಹೊಂದಿದ, ಸರಿಯಾಗಿ-ಪರಿಶೀಲನೆಗೊಂಡ ಮಂಡನೆಯು ನಿಮ್ಮ ಬೋಧನೆಯನ್ನು ಮುಂದಿನ ಹಂತಕ್ಕೆ ಒಯ್ಯುತ್ತದೆ.

ಚಿತ್ರಗಳಿಗೆ ಕತ್ತರಿ:

ಇದು ಬೇಡವಾದ ಭಾಗಗಳನ್ನು ತೆಗೆದುಹಾಕಿ, ಚಿತ್ರದ ಸಂಬಂಧಿತ ಭಾಗದ ಮೇಲೆ ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.

ಹೇಗೆ:

 • ಒಂದು ಮಂಡನೆಯನ್ನು ತೆರೆಯಿರಿ
 • ಮೆನುವಿನಲ್ಲಿ ಇನ್&zwjಸರ್ಟ್&zwjನ್ನು ಆಯ್ಕೆ ಮಾಡಿ
 • ಕೆಳಗೆ ಚಿತ್ರಕ್ಕೆ ಸರಿಯಿರಿ
 • ಅಪ್&zwjಲೋಡ್ ಫ್ರಾಮ್ ಕಂಪ್ಯೂಟರ್ ಆಯ್ಕೆ ಮಾಡಿ
 • ಚಿತ್ರವನ್ನು ಆಯ್ಕೆ ಮಾಡಿ ಮತ್ತು ಓಪನ್ ಕ್ಲಿಕ್ ಮಾಡಿ
 • ಚಿತ್ರವನ್ನು ಕತ್ತರಿಸಲು, ಅದರ ಮೇಲೆ ಎರಡುಬಾರಿ ಕ್ಲಿಕ್ ಮಾಡಿ ನಿಮಗೆ ಅಗತ್ಯವಿರುವ ಆಕಾರಕ್ಕೆ ಬ್ಲ್ಯಾಕ್ ಟ್ಯಾಬ್&zwjಗಳನ್ನು ಡ್ರ್ಯಾಗ್ ಮಾಡಿ

 

 

ಚಿತ್ರ ಗುರುತಿಸುವಿಕೆ:

ಇದು ಪವರ್ ಪಾಯಿಂಟ್&zwjನ ಒಂದು ಮುಖ್ಯ ಲಕ್ಷಣವಾಗಿದೆ. ಚಿತ್ರ ಗುರುತಿಸುವಿಕೆ (ಕಾಲ್&zwjಔಟ್&zwjನಲ್ಲಿ) ಯಲ್ಲಿ, ಚಿತ್ರದ ಒಂದು ನಿರ್ದಿಷ್ಟ ಭಾಗದ ಮೇಲೆ ಗಮನ ಸೆಳೆಯಲು ನೀವು ಒಂದು ಆಕಾರವನ್ನು ಕತ್ತರಿಸುತ್ತೀರಿ.

ಹೇಗೆ:

 • ತಿದ್ದುಪಡಿ (ಎಡಿಟ್) ಮಾಡಬೇಕಾಗಿರುವ ಚಿತ್ರವನ್ನು ಕಾಪಿ ಪೇಸ್ಟ್ ಮಾಡಿ
 • ಅದನ್ನು ಇನ್ನೊಂದು ಚಿತ್ರದ ಮೇಲೆ ಇರಿಸಿ
 • ಇನ್&zwjಸರ್ಟ್ ಟ್ಯಾಬ್&zwjನಿಂದ ಆಕಾರಗಳನ್ನು (ಶೇಪ್ಸ್) ಆಯ್ಕೆ ಮಾಡಿ
 • ಬೇಕಾದ ಆಕಾರವನ್ನು ಆಯ್ಕೆ ಮಾಡಿ
 • ಫಾರ್ಮ್ಯಾಟಿಗೆ ಹೋಗಿ ಮತ್ತು ಫಾರ್ಮ್ಯಾಟ್ ಆಪ್&zwjಶನ್ಸ್&zwjಗೆ ಕೆಳಗೆ ಸರಿಯಿರಿ
 • ಫಾರ್ಮ್ಯಾಟ್ ಆಯ್ಕೆಯಲ್ಲಿ ಸೈಜ಼ & ಪೊಸಿಷನ್ ಬಾಕ್ಸ್&zwjನ್ನು ಕ್ಲಿಕ್ ಮಾಡಿ
 • ಒಂದು ಸೂಕ್ತವಾದ ಆಕಾರವನ್ನು ರಚಿಸಲು ಅಗಲ ಮತ್ತು ಎತ್ತರಗಳು ಸಮವಾಗಿರಬೇಕು.
 • ಮೂಲ ಚಿತ್ರದಲ್ಲಿರುವ ಫಾರ್ಮ್ಯಾಟ್ ಆಯ್ಕೆಗೆ ಹೋಗಿ ಪ್ರಖರತೆಯನ್ನು ತಗ್ಗಿಸಿ. ಇದು ಮೂಲ ಚಿತ್ರದ ವಿರುದ್ಧ ಕಾಲ್&zwjಔಟ್ ಎದ್ದುಕಾಣುವಂತಿರಲು ನೆರವಾಗುತ್ತದೆ

 

ಚಿತ್ರದ ಮೇಲೆ ಚಿತ್ರ (ಇಮೇಜ್ ಓವರ್ ಲೇ):

ಒಂದು ಪಠ್ಯವು ಓದಲು ಕಠಿಣವಾಗಿರಬಹುದು ಮತ್ತು ಒಂದು ದಟ್ಟ ಚಿತ್ರದ ಮಧ್ಯದಲ್ಲಿ ಸುಲಭವಾಗಿ ಕಳೆದುಹೋಗಬಹುದು. ಚಿತ್ರದ ಮೇಲಿರುವ ಚಿತ್ರ (ಇಮೇಜ್ ಓವರ್ ಲೇ) ಪಠ್ಯವನ್ನು ಓದಲು ನೆರವಾಗುತ್ತದೆ. ಇದು ಮೂಲ ಚಿತ್ರದ ಮೇಲೆ ಅರೆಪಾರದರ್ಶಕ ಆಕಾರದ ಸೇರ್ಪಡೆಯನ್ನು ಒಳಗೊಂಡಿರುತ್ತದೆ, ಇದು ಪಠ್ಯ ಮತ್ತು ಚಿತ್ರ ಎರಡೂ ಕಾಣಿಸುವಂತೆ ಗಾಢವಾಗಿರುತ್ತದೆ.

ಹೇಗೆ:

 • ಇನ್&zwjಸರ್ಟ್ ಮೆನು ಬಾರ್ ನ ಶೇಪ್&zwjನ್ನು ಆಯ್ಕೆ ಮಾಡಿ
 • ಅಂಚುಗಳನ್ನು ಹಿಡಿದು ನಿಮ್ಮ ಚಿತ್ರಕ್ಕೆ ಹೊಂದಿಕೆಯಾಗುವಂತೆ ಅವನ್ನು ಎಳೆಯಿರಿ
 • ಮೆನು ಬಾರ್ ನಲ್ಲಿನ ಫಿಲ್ ಕಲರ್ ಗೆ ಹೋಗಿ
 • ಬಟನ್&zwjನಲ್ಲಿ ಕಸ್ಟಮ್ ನ್ನು ಕ್ಲಿಕ್ ಮಾಡಿ
 • ಪಾರದರ್ಶಕತೆಗಾಗಿ ಒಂದು ಚಿಕ್ಕ ವಿಂಡೋ ತೆರೆದುಕೊಳ್ಳುತ್ತದೆ
 • ಅದು ಪೂರ್ಣವಾಗಿ ಪಾರದರ್ಶಕವಾಗುವವರೆಗೂ ಪಾರದರ್ಶಕತೆಯನ್ನು ತಗ್ಗಿಸಿ. ಪಠ್ಯವನ್ನು ಓದುವಷ್ಟು ಹಾಗೂ ಚಿತ್ರವು ಸ್ಪಷ್ಠವಾಗಿ ಕಾಣುವಷ್ಟು ಅದು ಗಾಢವಾಗಿರಬೇಕಾಗುತ್ತದೆ

 

ನಿಮ್ಮ ಬಳಿಯಲ್ಲಿರುವ ಈ ಕೌಶಲ್ಯಗಳ ಸಹಾಯದಿಂದ, ನಿಮ್ಮ ಮಂಡನೆಗಳಿಗೆ ಎಲ್ಲರೂ ಗಮನವನ್ನು ನೀಡುತ್ತಾರೆ. ನಿಮಗೆ ಇನ್ನೂ ಉತ್ತಮವಾದದ್ದು ಬೇಕೆಂದಿದ್ದರೆ, ಇಲ್ಲಿದೆ ತರಗತಿಯ ಮಂಡನೆಯ ಕೌಶಲ್ಯಗಳ ಪುನರಾಭ್ಯಾಸದ ಐದು ಹಾದಿಗಳು