ಪಿಸಿ ಪ್ರೊ ಸರಣಿ: ಕೃತಿಚೌರ್ಯದ ವಿರುದ್ಧ ನಿಲುವು ತೆಗೆದುಕೊಳ್ಳಿ ಈ # ವಿಶ್ವ ವಿದ್ಯಾರ್ಥಿ ದಿನದಂದು (ವರ್ಲ್ಡ್ ಸ್ಟೂಡೆಂಟ್ಸ್ ಡೇ)

 

ಜನ್ ಜೆಡ್ ಅಥವಾ ಮಿಲೇನಿಯಲ್ ಎಂದೆನಿಸಿಕೊಳ್ಳುವ ಮಜಾವು ಶಾಲೆಯಲ್ಲಿ ಕಂಪ್ಯೂಟರ್ ಗಳು ಇರುವುದರಿಂದ ಸಿಗುತ್ತದೆ.  ನೀವು ಉತ್ತಮವಾದ, ಸುದೃಢವಾದ ಪಿಸಿಯನ್ನು ಹೊಂದಿರುವಾಗ (ನೀವು ಸರಿಯಾದದನ್ನು ಆಯ್ಕೆ ಮಾಡಿದ್ದೀರಿ ಎಂದು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ) ಮಾಹಿತಿಯು ನಿಮ್ಮ ಬೆರಳ ತುದಿಯಲ್ಲಿರುತ್ತದೆ, ಅದರ ಒಂದು ಕೆಟ್ಟ ಅಂಶವೆಂದರೆ ಅದು ಕೃತಿಚೌರ್ಯ. ಇದು ಈ ಕೆಳಗಿನವುಗಳನ್ನು ಉತ್ತೇಜಿಸುವುದರಿಂದ ಇದು ತುಂಬಾ ಅನೈತಿಕವೆನ್ನಿಸಿಕೊಳ್ಳುತ್ತದೆ:

ಆಲೋಚನೆಗಳ ಲೂಟಿ: ಮೂಲಭೂತವಾಗಿ ನೀವು ಇನ್ನೊಬ್ಬರ ಆಲೋಚನೆಗಳು ಮತ್ತು ಕೆಲಸವನ್ನು ಕದಿಯುತ್ತಿರುವುದರಿಂದ ಇದು ವಿದ್ಯಾರ್ಥಿಗಳ ನಡವಳಿಕೆ ಸಂಹಿತೆಯ ಉಲ್ಲಂಘನೆಗೆ ಕಾರಣವಾಗುತ್ತದೆ.

ಪೀರ್ ಅಗೌರವ: ನೀವು ಇನ್ನೊಬ್ಬ ವಿದ್ಯಾರ್ಥಿಯ ಮನೆಕೆಲಸವನ್ನು ಅವರ ಸಮ್ಮತಿಯಿಲ್ಲದೇ ನಕಲಿ ಮಾಡಲು ಮುಂದಾದರೆ, ಆಗ ನಿಮ್ಮೊಂದಿಗೆ ಉತ್ತರಗಳನ್ನು ಹಂಚಿಕೊಳ್ಳುವ ಅಪಾಯಕ್ಕೆ ನೀವು ಅವರನ್ನು ಒಡ್ಡಿದಂತಾಗಬಹುದು. ಮೂಲತಃ ಇದು ಯಾರ ಕೆಲಸ ಎಂಬುದರ ಬಗ್ಗೆ ಶಿಕ್ಷಕರಿಗೆ ತಿಳಿದಿರುವುದಿಲ್ಲ ಮತ್ತು ಒಂದು ವೇಳೆ ಸತ್ಯ ಹೊರಬಂದರೂ, ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಬಿಟ್ಟುಬಿಟ್ಟರೂ, ಮೋಸಗಾರನೆಂಬ ನಿಮ್ಮ ಹೆಸರು ಶಾಲೆಯಲ್ಲಿ ಹರಡಬಹುದು!

ಇದು ಅಧ್ಯಯನದ ಉದ್ದೇಶವನ್ನೇ ತೆಗೆದು ಬಿಡುತ್ತದೆ: ಶಾಲೆಯಲ್ಲಿ ಲೇಖನಗಳು ಮತ್ತು ಅಭ್ಯಾಸಗಳನ್ನು ಬರೆಯುವ ಉದ್ದೇಶವೆಂದರೆ ನೀವು ವಿಮರ್ಶಾತ್ಮಕ ಚಿಂತನೆ ಮತ್ತು ತಾರ್ಕಿಕ ವಿಚಾರಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂಬುದಕ್ಕಾಗಿ. ನೀವು ಕೃತಿಚೌರ್ಯ ಮಾಡಿದರೆ, ಈ ಶೈಕ್ಷಣಿಕ ಉದ್ದೇಶವನ್ನೇ ನೀವು ಕೊನೆಗೊಳಿಸಿದಂತಾಗುತ್ತದೆ.

ಪಿಸಿಯನ್ನು ಬಳಸಿಕೊಂಡು ನೀವು ಕೃತಿಚೌರ್ಯವನ್ನು ಹೇಗೆ ತಡೆಯಬಹುದು?

ಉದ್ದೇಶಿತ ಅರ್ಥವನ್ನು ಗ್ರಹಿಸಿ: ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ವಿಕಿಪೀಡಿಯಾ ಮತ್ತು ಗೂಗಲ್ ಸ್ಕಾಲರ್ ನಂತಹ ಮೂಲಗಳಿಂದ ನೀವು ಕಂಡುಕೊಂಡ ಮಾಹಿತಿಯನ್ನು ಕುರುಡಾಗಿ ನಕಲು ಮಾಡಬೇಡಿ. ಬದಲಾಗಿ, ಕೃತಿಚೌರ್ಯವನ್ನು ತಪ್ಪಿಸಲು ನೀವು ಅದನ್ನು ನಿಮ್ಮ ಸ್ವಂತ ಪದಗಳಲ್ಲಿ ಮರು-ರಚನೆ ಮಾಡಬಹುದು.

ಅದನ್ನು ಉಲ್ಲೇಖಿಸಿ: ಪಠ್ಯವನ್ನು ಮತ್ತೊಂದು ಮೂಲದಿಂದ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸಲು ಉಲ್ಲೇಖಗಳನ್ನು ಬಳಸಿ. ನೀವು ಅದನ್ನು ತೆಗೆದುಕೊಂಡ ಜಾಗದಲ್ಲಿರುವಂತೆಯೇ ಯಥಾವತ್ತಾಗಿ ಉಲ್ಲೇಖಗಳು ಇರಬೇಕಾಗುತ್ತದೆ.

ಸರಿಯಾಗಿ ಉಲ್ಲೇಖಿಸಿ: ಮೂಲದಿಂದ ನೇರವಾಗಿ ತೆಗೆದುಕೊಂಡ ಯಾವುದೇ ಪದ ಅಥವಾ ಆಲೋಚನೆಗಳನ್ನು ಉಲ್ಲೇಖಿಸಬೇಕಾಗುತ್ತದೆ. ಪರೀಕ್ಷೆಯನ್ನು ನಡೆಸಿದ ನಂತರ ನೀವು ಸಂಗ್ರಹಿಸಿದ ತೀರ್ಮಾನವನ್ನು ಉಲ್ಲೇಖಿಸಬಾರದು. ಇದಲ್ಲದೆ, ಸತ್ಯವಿಷಯಗಳು ಅಥವಾ ಸಾಮಾನ್ಯ ಜ್ಞಾನವನ್ನು ಉಲ್ಲೇಖಿಸುವ ಅಗತ್ಯವಿಲ್ಲ.

ಸೂಚನೆ: Ctrl+Shift+Plus ನಿಮ್ಮ ಶಾರ್ಟ್&zwjಕಟ್ ಆಗಿದೆ.

ಉಲ್ಲೇಖ: ಉಲ್ಲೇಖವನ್ನು ಒದಗಿಸುವುದು ಕೃತಿಚೌರ್ಯ ತಪ್ಪಿಸುವ ಮುಖ್ಯ ಮಾರ್ಗವಾಗಿದೆ. ನಿಮ್ಮ ಲೇಖನದ ಕೊನೆಯಲ್ಲಿ ಉಲ್ಲೇಖಿಸಲಾದ ಕೃತಿಗಳ ಉಲ್ಲೇಖ ಪುಟ ಅಥವಾ ಪುಟವನ್ನು ಬಳಸಿ.

ಕೃತಿಚೌರ್ಯದಿಂದ ನಿಮ್ಮನ್ನು ತಡೆಯುವ ಪಿಸಿ ಸಂಪನ್ಮೂಲಗಳು:

  1. https://www.duplichecker.com/
  2. https://www.grammarly.com/plagiarism-checker

  3. https://www.quetext.com/

ಮೊದ ಮೊದಲಿಗೆ ಇದು ಸ್ವಲ್ಪ ಕಷ್ಟವೆಂದು ಕಂಡರೂ ನಂತರ ಒಮ್ಮೆ ಕೃತಿಚೌರ್ಯವನ್ನು ತಪ್ಪಿಸುವ ಅಭ್ಯಾಸವನ್ನು ನೀವು ಬೆಳೆಸಿಕೊಂಡರೆ ಅದು ನಿಮಗೆ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಲು ಸಹಾಯ ಮಾಡುತ್ತದೆ. ಆದ್ದರಿಂದ, ಕೃತಿಚೌರ್ಯಕ್ಕೆ ಬೇಡ ಎಂದು ಮತ್ತು ಸ್ವಂತಿಕೆಗೆ ಹೌದು ಎಂದು ಹೇಳಿ!