ಪಿಸಿಗಳು ಇಂದು ಕಲಿಕೆಯ ಅವಿಭಾಜ್ಯ ಅಂಗವಾಗಿವೆ

 

ಪರ್ಮಿಂದರ್ ಶರ್ಮಾರವರು ಒಬ್ಬ ಲೇಖಕರು, ಬ್ಲಾಗರ್ ಹಾಗೂ ಬ್ಯಾಂಕ್ ಅಧಿಕಾರಿಯಾಗಿದ್ದು, ಇಬ್ಬರು ಸುಂದರ ಮಕ್ಕಳನ್ನು ಹೊಂದಿದ್ದಾರೆ.

1) “ಶಿಕ್ಷಣಕ್ಕಾಗಿ ಪಿಸಿ” ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶಿಕ್ಷಣದಲ್ಲಿ ಪಿಸಿಯನ್ನು ತೊಡಗಿಸಿಕೊಳ್ಳುವಿಕೆಯು ನಾವು ಕಡೆಗಣಿಸಲಾರದಂಥ ವಿಷಯವಾಗಿದೆ. ಮಕ್ಕಳ ಸೃಜನಾತ್ಮಕತೆಗೆ ಇದು ಸಾಕಷ್ಟು ಅವಕಾಶಗಳನ್ನು ತೆರೆಯುವುದಷ್ಟೇ ಅಲ್ಲದೇ, ಡಿಜಿಟೆಕ್ನ ಅತ್ಯಂತ ಪ್ರಮುಖ ವಿಷಯಗಳಲ್ಲಿ ಮುಂದಿರಲು ಅವರಿಗೆ ನೆರವಾಗುತ್ತದೆ.

ಅದು ಪಿಸಿ ಮೂಲಕ ಅಸೈನ್ಮೆಂಟ್ಗಳನ್ನು ಮಾಡುವುದಾಗಿರಬಹುದು ಅಥವಾ ಸ್ಮಾರ್ಟ್ ಕ್ಲಾಸ್ಗಳಾಗಿರಬಹುದು ಅಥವಾ ಹೋಮ್ವರ್ಕ್ ಆ್ಯಪ್ಗಳಾಗಿರಬಹುದು, ಇಂದು ಪಿಸಿಗಳು ಕೇವಲ ಮತ್ತೊಂದು ಶೈಕ್ಷಣಿಕ ವಿಷಯವಾಗಿರದೇ, ಕಲಿಕೆಯ ಅವಿಭಾಜ್ಯ ಅಂಗಗಳಾಗಿವೆ.

2) ನಿಮ್ಮ ಮಗುವು ಭವಿಷ್ಯಕ್ಕೆ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಒಬ್ಬ ಪಾಲಕರಾಗಿ ನೀವು ಏನು ಮಾಡಬಲ್ಲಿರಿ?

ಮಗುವಿಕೆ ಎಲ್ಲ ಮೂಲಭೂತ ಅಗತ್ಯತೆಗಳನ್ನು ಒದಗಿಸುವುದು ಪಾಲಕರ ಜವಾಬ್ದಾರಿಯಾಗಿದ್ದಾಗಲೂ, ವಿಶ್ವವನ್ನು ಮತ್ತು ಅದರ ಸವಾಲುಗಳನ್ನು ಎದುರಿಸಲು ಮಗುವನ್ನು ಸನ್ನದ್ಧಗೊಳಿಸುವುದು ಅವರ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಮಗುವನ್ನು ನಾಳೆಗೆ ಸನ್ನದ್ಧವಾಗಿಸಲು ಇಂದು ತಂತ್ರಜ್ಞಾನವು ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ, ಮಗುವನ್ನು ತಂತ್ರಜ್ಞಾನಕ್ಕೆ ಸಾಕಷ್ಟು ತೆರೆದುಕೊಳ್ಳುವಂತೆ ಮಾಡುವುದು ಬಹಳ ಪ್ರಮುಖವಾಗುತ್ತದೆ.

“ಮಕ್ಕಳು ಗ್ಯಾಜೆಟ್ಗಳಿಗೆ ದಾಸರಾಗುವಿಕೆಯನ್ನು ಬಿಡಿಸುವ ಬಗ್ಗೆ ನಾವು ಮಾತನಾಡುತ್ತಿರುವಾಗ, ತಂತ್ರಜ್ಞಾನದ ಸರಿಯಾದ ಬಳಕೆಯ ಬಗ್ಗೆ ನಾವು ಉಲ್ಲೇಖಿಸುತ್ತಿರುತ್ತೇವೆಯೇ ಹೊರತು ತಂತ್ರಜ್ಞಾನದ ಗೀಳನ್ನು ಬಿಡಿಸುವುದರ ಬಗ್ಗೆ ಅಲ್ಲ ಎಂಬುದನ್ನು ನಾವು ಮರೆಯಬಾರದು.”

ಜಗತ್ತಿನಲ್ಲಿನ ಇತ್ತೀಚಿನ ಬೆಳವಣಿಗೆಗಳೊಂದಿಗೆ ಮಗುವು ಹೆಚ್ಚು ಸನ್ನದ್ಧವಾಗಿರುವಷ್ಟೂ, ಅದರ ಶೈಕ್ಷಣಿಕ ಉದ್ದೇಶಕ್ಕೆ ಹೆಚ್ಚು ಉತ್ತಮವಾಗಿರುತ್ತದೆ.

3) ನಿಮ್ಮ ಮಕ್ಕಳನ್ನು ನೀವು ಆನ್ಲೈನ್ನಲ್ಲಿ ಹೇಗೆ ಸುರಕ್ಷಿತವಾಗಿ ಇರಿಸುತ್ತೀರಿ?

ಸೈಬರ್ ಜಗತ್ತು, ವಾಸ್ತವಿಕ ಜಗತ್ತು ಇದ್ದ ಹಾಗೇ ಅಪಾಯಗಳಿಂದ ಕೂಡಿಯೇ ಇರುತ್ತದೆ, ಹಾಗೂ ಅಪಾಯಗಳು ಭೌತಿಕವಾಗಿ ಗೋಚರಿಸುವುದಿಲ್ಲವಾದ್ದರಿಂದ ಅದಕ್ಕಿಂತಲೂ ಹೆಚ್ಚು ಬೆದರಿಕೆಯನ್ನೊಡ್ಡುವುದಾಗಿರುತ್ತದೆ. ಮಕ್ಕಳನ್ನು ಈ ಜಗತ್ತಿಗೆ ಒಡ್ಡುವುದು ಎಷ್ಟು ಪ್ರಮುಖವಾಗಿದೆಯೋ, ಅಲ್ಲಿ ಅವರನ್ನು ಸುರಕ್ಷಿತವಾಗಿ ಇರಿಸುವುದೂ ಸಹ ಅಷ್ಟೇ ಪ್ರಮುಖವಾಗಿರುತ್ತದೆ.

“ಇದು ನಮ್ಮ ಮಕ್ಕಳಿಗೆ ನಾವು ರಸ್ತೆಯನ್ನು ದಾಟಲು ಕಲಿಸುವುದಕ್ಕೆ ಸಮನಾಗಿದೆ. ನಾವು ಅವರಿಗೆ ಎಲ್ಲ ಟ್ರಾಫಿಕ್ ರೂಲ್ಸ್ ಹೇಳಿಕೊಡುತ್ತೇವೆ, ಅವರು ರಸ್ತೆ ದಾಟಲು ಸುರಕ್ಷಿತ ಪ್ರದೇಶವು ಝೀಬ್ರಾ ಕ್ರಾಸಿಂಗ್, ಫುಟ್ಪಾಥ್, ಮುಂತಾಗಿ ಹೇಳಿಕೊಡುತ್ತೇವೆ ಮತ್ತು ಅವುಗಳನ್ನು ಅವರು ಅನುಸರಿಸಿದಾಗ ಅವರನ್ನು ಹುರಿದುಂಬಿಸುತ್ತೇವೆ.”

ತಮ್ಮ ಸೈಬರ್ ಹಕ್ಕುಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವಂತೆ ಮಾಡಲು ಸೈಬರ್ ಅಪರಾಧದ ಕತೆಗಳನ್ನು ನಾವು ಹಂಚಿಕೊಳ್ಳಬೇಕು. ಅಪಾಯದಿಂದ ರಕ್ಷಣೆ ಒದಗಿಸಲು, ಅವರ ಸೈಬರ್ ಚಟುವಟಿಕೆಗಳನ್ನು ನಾವು ನಿಕಟವಾಗಿ ಮಾರ್ಗದರ್ಶನ ಮಾಡಬೇಕು ಹಾಗೂ ಅದಕ್ಕಾಗಿ ಒದಗಿಸಲಾದ ಸೂಕ್ತ ಪರಿಹಾರೋಪಾಯಗಳನ್ನು ಇನ್ಸ್ಟಾಲ್ ಮಾಡಬೇಕು.

4) ಹೊರಡುವ ಮೊದಲು, ನಮಗೆ ನಿಮ್ಮ ಇತ್ತೀಚಿನ ಪುಸ್ತಕದ ಬಗ್ಗೆ ತಿಳಿಸಿ.

ನನ್ನ ಇತ್ತೀಚಿನ ಪುಸ್ತಕ – ಫ್ರಾಮ್ ಮಂಕೀಯಿಂಗ್ ಟು ಪೇರೆಂಟಿಂಗ್, ಸಂಬಂಧಗಳು ಹಾಗೂ ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಇದು ನಿಮಗೆ, ನಿಮ್ಮ ಸಂಗಾತಿಗೆ, ನಿಮ್ಮ ಅತ್ತೆ-ಮಾವಂದಿರು ಹಾಗೂ ಶಿಕ್ಷಕರಿಗೆ ಸೂಕ್ತ ಮಾನ್ಯತೆಯನ್ನು ನೀಡುವ, ಪೇರೆಂಟಿಂಗ್ನ ಒಂದು ಸಮಗ್ರ ವಿಧಾನವಾಗಿದೆ. ಇಂದಿನ ಪಾಲಕರಿಗೆ, ಶೈಕ್ಷಣಿಕ ಸಮಸ್ಯೆಗಳು, ಬೆದರಿಸುವುದು, ಕ್ರೋಧ, ಅತಿಯಾದ ಚಟುವಟಿಕೆ ಮುಂತಾದವುಗಳಂಥ ದೈನಂದಿನ ಅಗತ್ಯಗಳಿಗೆ ಪರಿಹಾರೋಪಾಯಗಳನ್ನು ಇದು ಒದಗಿಸುತ್ತದೆ.